ಹಿರಿಯಡಕ ಗೋಪಾಲರಾಯರಿಗೆ ಶತ “ಮಾನ’


Team Udayavani, Dec 30, 2018, 12:30 AM IST

91.jpg

ಎಲ್ಲಿಯ ಅಮೆರಿಕ? ಎಲ್ಲಿಯ ಹಿರಿಯಡಕ? ಅಮೆರಿಕದ ಯಕ್ಷಗಾನ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ ಕೀರ್ತಿ ಹಿರಿಯಡಕದ ಗೋಪಾಲ ರಾಯರದ್ದು. ಹಿರಿಯಡಕ ಗೋಪಾಲರಾಯರು ಎಂದ ಕೂಡಲೆ ತುಸು ನೀಳವಾದ ತಲೆಗೂದಲಿನ ವ್ಯಕ್ತಿಯೊಬ್ಬ ಮದ್ದಲೆ ನುಡಿತದಲ್ಲಿ ತಲ್ಲೀನನಾಗಿರುವ ಚಿತ್ರವೊಂದು ಕಣ್ಣೆದುರು ಸುಳಿಯುತ್ತದೆ. ಮದ್ದಲೆ ಬಿಟ್ಟರೆ ಬೇರೆ ಬದುಕಿಲ್ಲ ಎಂಬಂಥ ಸಮರ್ಪಣಾಭಾವದಲ್ಲಿ ಬದುಕಿದ ಕಲೋಪಾಸಕ ಗೋಪಾಲರಾಯರು. ಅವರದ್ದು ಯೋಗಿಯ ನಡೆ. ನೂರು ವರ್ಷದ ಈ “ಯುವಕ’ನಿಗೆ ಮದ್ದಲೆ ಈಗಲೂ ಬಾಗುತ್ತದೆ, ಅವರು ನುಡಿಸಿದಂತೆ ನುಡಿಯುತ್ತದೆ!

ಹಿರಿಯಡಕ ಗೋಪಾಲರಾಯರನ್ನು ನಾನು ಮೊದಲ ಬಾರಿ ನೋಡುವಾಗ ಅವರು ನಲ್ವತ್ತೈದು-ಐವತ್ತರ ತರುಣ! ಉಡುಪಿಯ ಯಕ್ಷಗಾನದ ಕೇಂದ್ರದಲ್ಲಿ ಹವ್ಯಾಸಿ ಕಲಾಸಕ್ತರಿಗಾಗಿ ರಾತ್ರಿ ತರಗತಿ ನಡೆಯುತ್ತಿತ್ತು. ಅದಕ್ಕೆ ನಾನು ಹಾಜರಾಗುತ್ತಿದ್ದೆ. ಆಗ ಹಿರಿಯಡಕ ಗೋಪಾಲ ರಾಯರು ಕೂಡ ಗುರುಗಳಾಗಿದ್ದರು. ತಿಂಗಳಿಗೆ ಒಂದು ರೂಪಾಯಿಯೊ ಒಂದೂವರೆ ರೂಪಾಯಿಯೊ ಶುಲ್ಕ. ಮುಂದೆ ಅಂದರೆ 1971ರಲ್ಲಿ ಹಗಲಿನ ತರಗತಿಗೆ ಸೇರಿ ಪೂರ್ಣಾವಧಿ ವಿದ್ಯಾರ್ಥಿಯಾಗಿ ಎರಡು ವರ್ಷಗಳ ತರಬೇತಿ ಮುಗಿಸಿದೆ. ನಮ್ಮ ಸೌಭಾಗ್ಯವೆಂದರೆ, ಆಗ ಕೇಂದ್ರದ ಗುರುಗಳಾಗಿದ್ದವರು ಬಡಗುತಿಟ್ಟಿನ ಮಹಾರಥರೆನಿಸಿಕೊಂಡ ಮಟಪಾಡಿ ವೀರಭದ್ರ ನಾಯಕರು, ನೀಲಾವರ ರಾಮಕೃಷ್ಣಯ್ಯರ‌ವರು ಮತ್ತು ಹಿರಿಯಡಕ ಗೋಪಾಲರಾಯರು. ಬಹುಶಃ ಬಡಗುತಿಟ್ಟಿನ ಯಕ್ಷಗಾನ ಪಾಠಕ್ಕೆ “ಲಕ್ಷಣ’ದ ರೂಪ ದೊರೆತದ್ದು ಇವರ ಕಾಲದಲ್ಲಿಯೇ.

ಉದಾಹರಣೆಗೆ ಹೇಳುತ್ತೇನೆ, ತಾತಾ ಕಡ್ತ$R  ತಾಕ್‌ಡ್‌  ತದ್ದಿನಕ… ಎಂಬುದು ಈ ಝಂಪೆ ತಾಳದ ಸಾಂಪ್ರದಾಯಿಕವಾದ ಎತ್ತುಗಡೆ ಕ್ರಮವಾದರೆ, ಧಿಂ ತೋಂ ಧಿಂ ತೊಂ ತಾಂ… ಹೊಸ ಪಾಠ ಕ್ರಮ. ಎರಡನೆಯದ್ದು ಕಲಿಕೆಗೆ ಸುಲಭವಾಗಿ ನಿಲುಕುವಂಥಾದ್ದು. ಮೇಳದ ಅನೌಪಚಾರಿಕ ಗುರುಕುಲದ ಮೂಲಕ ಸಾಗಿ ಬಂದಿದ್ದ ಪಾಠಕ್ರಮವನ್ನು ಹೊಸಕಾಲದ ಕಲಿಕೆಗೆ ಅನುಗೊಳಿಸಿದವರು ಈ ಮೂವರು ಗುರುಗಳು. ಆಗ ಬೋಧನಕ್ರಮಕ್ಕೆ ಸಂಬಂಧಿಸಿ ಮೂವರ ನಡುವೆ ಗಂಭೀರ ಚರ್ಚೆಗಳಾಗುತ್ತಿದ್ದವು. ಮಟಪಾಡಿ ವೀರಭದ್ರ ನಾಯಕರು, ಹಿರಿಯಡಕ ಗೋಪಾಲರಾಯರೂ ಕೆಲವೊಮ್ಮೆ ಜಗಳ ಮಾಡುತ್ತಿದ್ದರು. ಮಟಪಾಡಿ ವೀರಭದ್ರ ನಾಯಕರು ಹಿರಿಯಡಕ ಗೋಪಾಲರಾಯರಿಗೆ ಗುರು ಸಮಾನರು. ಹಾಗಾಗಿ, ಅದೊಂದು ಗುರು-ಶಿಷ್ಯ ಸಂವಾದವಾಗಿ ಹುಡುಗರಾದ ನಮ್ಮನ್ನು ಸೋಜಿಗ ಪಡಿಸುತ್ತಿತ್ತು. 

ಬಡಗುತಿಟ್ಟಿನ ಪೂರ್ವರಂಗದಲ್ಲಿರುವ ಚಂದಭಾಮಾ ಸ್ತ್ರೀವೇಷ ದ ರಾಧಾಲೋಲ ಬಾಲಗೋಪಾಲ… ಹಿರಿಯಡಕ ಗೋಪಾಲರಾಯರಿಗೆ ಪ್ರಿಯವಾದ ಪದ್ಯ. ಅದರಲ್ಲಿ ಮಲಗಲು ಅಂಬರ ಸೆಳೆದೊಯÌ ಸುಂದರ… ಎಂಬ ಸಾಲು ಬರುತ್ತದೆ. ಇಲ್ಲಿ ಅಂಬರ ಎಂದರೆ ಆಕಾಶವೊ ಬಟ್ಟೆಯೊ ಎಂಬ ಬಗ್ಗೆ ಗುರುಗಳ ನಡುವೆ ಅರ್ಥ ಜಿಜ್ಞಾಸೆ ನಡೆಯುತ್ತಿತ್ತು. ಹಿರಿಯಡಕ ಗೋಪಾಲರಾಯರು “ಆಕಾಶ’ ಎಂದು ಅಭಿನಯಿಸುತ್ತ ಕಲಿಸಿದರೆ, “ಹಾಗಲ್ಲ ಮಾರಾಯ, ಅದರರ್ಥ ವಸ್ತ್ರ’ ಎಂದು ಮಟಪಾಡಿ ವೀರಭದ್ರ ನಾಯಕರು ವಾದಿಸುತ್ತಿದ್ದರು. ಕಲೆ ಎಂಬುದು ಹಾಗೆಯೇ ಅಲ್ಲವೆ; ಅವರವರ ಭಾವಕ್ಕೆ ತಕ್ಕಂತೆ ಅದರವರ ಅರ್ಥ. ಆದರೆ, ಒಂದು ಪದವನ್ನು ಹಿಡಿದು ಅದರ ಅರ್ಥದ ಬಗ್ಗೆ ಅಂದಿನವರು ಎಷ್ಟೊಂದು ಆಳವಾಗಿ ಯೋಚಿಸುತ್ತಿದ್ದರೆಂಬುದಕ್ಕೆ ನಿದರ್ಶನವಾಗಿ ಮೇಲಿನ ಪ್ರಕರಣವನ್ನು ನೆನಪಿಸಿಕೊಂಡಿದ್ದೇನೆ. ಒಂದನೆಯ ತರಗತಿ ಕಲಿತ, ಓದು-ಬರೆಯಲು ಬಾರದ ನಾನು ಕನ್ನಡ ಮಾತನಾಡಲು ಕಲಿತದ್ದೇ ಇಂಥ ಹಿರಿಯರ ಸಂಪರ್ಕದಿಂದ. 

ಹಿರಿಯಡಕ ಗೋಪಾಲ ರಾಯರ ತರಗತಿ ಕಠಿಣ. ಆದರೆ, ಅವರು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದುದು ಕಡಿಮೆ. ನನಗೆ ಅವರ ಕೈಯಿಂದ ಪೆಟ್ಟು ತಿಂದ ನೆನಪಿಲ್ಲ. ಆದರೆ, ಮಟಪಾಡಿ ವೀರಭದ್ರ ನಾಯಕರು ಹೆಜ್ಜೆ ತಪ್ಪಿದರೆ ಬಿಲ್ಲಿನಲ್ಲಿ ಚಟಾಲ್ಲನೆ ಹೊಡೆಯುತ್ತಿದ್ದರು. ಹಾಗೊಮ್ಮೆ ವೀರಭದ್ರ ನಾಯಕರ ಪೆಟ್ಟು ತಿಂದು, ಯಕ್ಷಗಾನ ತರಗತಿಯೇ ಬೇಡವೆಂದು ಯಕ್ಷಗಾನ ಕೇಂದ್ರವನ್ನು ಬಿಟ್ಟು ಓಡಿ ಹೋಗಿದ್ದೆ. ಆಗ ಹಿರಿಯಡಕ ಗೋಪಾಲರಾಯರು ನನ್ನನ್ನು ಹುಡುಕಿಕೊಂಡು ನಾನು ಆಸರೆ ಪಡೆದಿದ್ದ ಮನೆಗೆ ಬಂದು, “ನೀನು ಕ್ಲಾಸಿಗೆ ಬಾ ಮಾರಾಯ. ನಿನ್ನಲ್ಲಿ ಕಲಿಯುವ ಆಸಕ್ತಿ ಇದೆ, ಪ್ರತಿಭೆಯೂ ಇದೆ’ ಎಂದು ಬಲವಂತವಾಗಿ ಕರೆದುಕೊಂಡು ಹೋದರು. ಇತ್ತೀಚೆಗೊಮ್ಮೆ ಸಭೆಯೊಂದರಲ್ಲಿ, “ನಾನು ಆವತ್ತು ಇವನನ್ನು ಮತ್ತೆ ಕೇಂದ್ರಕ್ಕೆ ಸೇರಿಸದೇ ಇರುತ್ತಿದ್ದರೆ ಇವನು ಇಷ್ಟು ದೊಡ್ಡ ಕಲಾವಿದ ಆಗುತ್ತಿರಲಿಲ್ಲ’ ಎಂದು ನನ್ನ ಬಗ್ಗೆ ವಾತ್ಸಲ್ಯದಿಂದ ಹೇಳಿದ್ದರು. ನಾನು ಇವತ್ತು ಯಕ್ಷಗಾನದಲ್ಲಿ ಕೊಂಚ ಹೆಸರು ಮಾಡಿದ್ದರೆ ಅದರಲ್ಲಿ ಹಿರಿಯಡಕ ಗೋಪಾಲರಾಯರ “ಗುರುತ್ವ’ದ ಕೊಡುಗೆ ದೊಡ್ಡದಿದೆ ಎಂದು ವಿನಮ್ರವಾಗಿ ಹೇಳುತ್ತೇನೆ. 

ಮದ್ದಲೆಗಾರರೆಂದು ಮನ್ನಣೆ ಪಡೆದರೂ ಹಿರಿಯಡಕ ಗೋಪಾಲರಾಯರು ಮುಮ್ಮೇಳ- ಹಿಮ್ಮೇಳಗಳ ಸರ್ವಸಂಗತಿಗಳನ್ನು ಅರಗಿಸಿಕೊಂಡವರು. ಈಗಿನ ಯಕ್ಷಗಾನ ಕೇಂದ್ರದ “ಸಮಗ್ರ’ ಪಾಠಕ್ರಮಕ್ಕೂ ಅಂದಿನ ಗುರುಗಳೇ ಆದರ್ಶ. “ಅಭಿವ್ಯಕ್ತಿ ಒಂದರಲ್ಲಿ, ಅನುಭವ ಎಲ್ಲದರಲ್ಲಿ’ ಎಂಬಂಥ ನಡೆಯಲ್ಲಿ ಹೆಜ್ಜೆಯಿಡಲು ಕಲಿಸಿದವರು ಹಿರಿಯಡಕ ಗೋಪಾಲರಾಯರಂಥ ಗುರುಗಳು. ಇಂದು ಬಡಗುತಿಟ್ಟಿನ ನಾಟ್ಯಕ್ರಮ ಕೌಶಲವನ್ನು ಕಳೆದುಕೊಳ್ಳುತ್ತಿದೆ. ವಿಷಮ ಲಯದಲ್ಲಿ ತಾಳಕ್ಕೆ ಹೊಂದಿಸುತ್ತಿದ್ದ ಕಲೆಗಾರಿಕೆ ಕ್ಷೀಣಿಸುತ್ತಿದೆ. 

ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಮಿ¤ಯವರ ಹೆಸರನ್ನು ನೀವೆಲ್ಲ ಕೇಳಿರಬಹುದು. ಅವರ ಶಿಷ್ಯ ಹಾರಾಡಿ ನಾರಾಯಣ ಗಾಣಿಗರ ಬಳಿಗೆ ಒಮ್ಮೆ ಸ್ತ್ರೀವೇಷದ ನಾಟ್ಯಕ್ರಮ ಕಲಿಯಲು ಹೋಗಿದ್ದೆ. ಅವರು ಏಕತಾಳದ ನಾಟ್ಯಕ್ರಮವನ್ನು ಕಲಿಸಿದ ಕ್ರಮ ಬೇರೆಯೇ. ಲೆಕ್ಕಾಚಾರ ಅಭಿನ್ನ, ಅಭಿವ್ಯಕ್ತಿ ಮಾತ್ರ ವಿಭಿನ್ನ. “ಈಗ ಆ ಸೊಗಸಿಲ್ಲ. ಹಳೆಯದ್ದು ಕಾಣೆಯಾಗಿದೆ’ ಎಂದು ಅವರು ವಿಷಾದದಿಂದ ನನ್ನಲ್ಲಿ ಹೇಳಿದರು. ನಾನು ಅವರು ಹೇಳಿಕೊಟ್ಟುದನ್ನು ಅಭ್ಯಾಸ ಮಾಡಿದೆ. ನಾನು ಕುಣಿಯಬಹುದು, ಅದಕ್ಕೆ ಅನುಗುಣವಾಗಿ ಮದ್ದಲೆ ನುಡಿಸುವವರು ಯಾರಿದ್ದಾರೆ? ನೇರವಾಗಿ ಗೋಪಾಲರಾಯರ ಬಳಿಗೆ ಹೋದೆ. ಅಷ್ಟು ಹೊತ್ತಿಗೆ ಅವರು ಯಕ್ಷಗಾನ ಕೇಂದ್ರವನ್ನು ತೊರೆದು ಸ್ವತಂತ್ರವಾಗಿ ತರಗತಿಗಳನ್ನು ನಡೆಸುತ್ತಿದ್ದರು. “ಇದೆಲ್ಲ ಮೊದಲು ಇತ್ತು ಮಾರಾಯ, ಈಗ ಇಲ್ಲ. ನೋಡ್ವಾ, ನೀನು ಕುಣಿ, ನಾನು ಬಾರಿಸುತ್ತೇನೆ’ ಎಂದರು. ನಾನು ಕುಣಿದೆ. ನನ್ನನ್ನು ಅಕ್ಷರಶಃ ಅವರೇ ಕುಣಿಸಿದರು. ಅವರ “ಪಟಾಂ’ ನುಡಿತ ಇದೆ ನೋಡಿ, ಅದು ಕಪಾಳಕ್ಕೆ ಬಾರಿಸಿದ ಹಾಗೆ! ಅಷ್ಟು ದೃಢ. ಇವತ್ತಿಗೂ ಅವರದ್ದು ಶುದ್ಧ ಸಾಂಪ್ರದಾಯಿಕ ಶೈಲಿಯ ಮದ್ದಲೆ. ಏರು ಮದ್ದಲೆಯನ್ನು ಜನಪ್ರಿಯಗೊಳಿಸಿದವರು ಅವರೇ. ತಬಲಾದ ಪ್ರೇರಣೆಯಿಂದ ರೂಪಿಸಿದ ಈ ಮದ್ದಲೆಯ, ಇಳಿಮದ್ದಲೆಯ ಘನತೆಯ ನಾದಕ್ಕೆ ಸರಿಸಮವಿಲ್ಲದಿರಬಹುದು, ಚೆಂಡೆಗೂ ಸೂಕ್ತ ಸಾಥಿಯಲ್ಲದಿರಬಹುದು. ಆದರೆ, ಸಾಂದರ್ಭಿಕವಾಗಿ ಇದನ್ನು ಬಳಸಿದರೆ ಪ್ರದರ್ಶನದ ಸೊಗಸು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಗೋಪಾಲರಾಯರ ಸೃಜನಶೀಲತೆಗೆ, ಪ್ರಯೋಗಶೀಲತೆಗೆ ಇದು ಸಾಕ್ಷಿ.

ಹಿರಿಯಡಕ ಗೋಪಾಲರಾಯರಿಗೆ ಶತಮಾನ; ಅವರೊಳಗಿನ ಕಲೆಗೂ ಶತಮಾನವೇ. ಎಂದರೆ, ಅವರು ಜ್ಞಾನಿಯಾಗಿಯೂ ವೃದ್ಧರು. ಒಂದು ಶತಮಾನದ ಯಕ್ಷಗಾನಕ್ಕೆ ಜೀವಂತ ದಾಖಲೆಯಾಗಿ ನಮ್ಮ ನಡುವೆ ಇರುವವರು. ಹಿರಿಯಡಕ ಗೋಪಾಲರಾಯರಿಂದಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ತೂಕ ಹೆಚ್ಚಿದೆ. ಅವರು ರಾಷ್ಟ್ರಮಟ್ಟದ ಕಲಾವಿದರ ಪಂಕ್ತಿಯಲ್ಲಿ ಅಲಂಕರಿಸಬೇಕಾದವರು ಎಂಬುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಆದರೆ, ಅವರ ಪ್ರತಿಭೆ-ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಕೆಲಸ ನಡೆಯಬೇಕಿದೆ.  ಹಿರಿಯಡಕ ಗೋಪಾಲರಾಯರು ರಾಷ್ಟ್ರಪ್ರಶಸ್ತಿಗೆ ಭಾಜನರಾಗುವ ಸುಸಂದರ್ಭವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನನ್ನದಾಗಲಿ.

ಬನ್ನಂಜೆ ಸಂಜೀವ ಸುವರ್ಣ

ಟಾಪ್ ನ್ಯೂಸ್

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.