CONNECT WITH US  

ಬಟ್ಟಲುಗಣ್ಣಿನ ಚೆಲುವಿಯ ಗುಟ್ಟು

ನಿಮ್ಮದು ಬಟ್ಟಲು ಕಣ್ಣಾದರೆ ನೀವು ಪರಮಸುಂದರಿ. ನಿಮ್ಮ ಕಣ್ಣಿನ ಶೇಪ್‌ ಹೇಗೇ ಇರಲಿ, ಕಮಲದ ಕಣ್ಣಿನ ಹುಡುಗಿಯನ್ನಾಗಿ ಮಾಡುತ್ತೆ ಈ ಮೇಕಪ್‌. ಇದಕ್ಕೆ ಹೆಚ್ಚಿನ ಶ್ರಮ, ಖರ್ಚು ಏನಿಲ್ಲ. ಮಾಮೂಲಿ ಪ್ರಸಾದನ ಸಾಮಗ್ರಿಗಳೇ ಸಾಕು, ನಿಮ್ಮ ಕಣ್ಣುಗಳನ್ನು ಅರಳಿಸೋದಕ್ಕೆ. 

1. ಮುಖದ ಹಿತಮಿತ ಮೇಕಪ್‌ ಮೊದಲು ಪೂರೈಸಿಕೊಳ್ಳಿ. ನಂತರ ಕಣ್ಣಿನ ವಿಚಾರಕ್ಕೆ ಬನ್ನಿ. ಮೊದಲು ಮೇಲ್ರೆಪ್ಪೆಯ ಬುಡಕ್ಕೆ ಲೈನರ್‌ನಿಂದ ತೆಳುವಾದ ಕಪ್ಪುಗೆರೆ ಎಳೆಯಿರಿ. 

2. ಕೆಳಗೆ ಕಾಡಿಗೆ ಹಚ್ಚುವ ಜಾಗಕ್ಕೆ ಬಿಳಿ ಐ ಲೈನರ್‌ ಹಚ್ಚಿ. ಇದರಿಂದ ಕಣ್ಣು ಅಗಲವಾಗಿ ವಿಶಾಲವಾಗಿ ಕಾಣುತ್ತೆ. ಕಣ್ಣು ಇರುವುದಕ್ಕಿಂತ ಹೆಚ್ಚು ದೊಡ್ಡದಾಗಿರುವಂತೆ ಕಾಣುತ್ತದೆ. 

3.  ಐ ಲ್ಯಾಶಸ್‌ ಹಾಕ್ಕೊಳ್ಳಿ. ನೀಟಾಗಿ ಸೆಟ್‌ ಮಾಡ್ಕೊಳ್ಳಿ. 

4. ಈಗ ರೆಪ್ಪೆಗಳಿಗೆ ಮಸ್ಕರಾ ಹಚೊRಳ್ಳಿ. ಕಣೆÅಪ್ಪೆಗಳು ದಟ್ಟವಾಗಿ ಕಾಣುತ್ತವೆ. 

5. ಐ ಲ್ಯಾಶಸ್‌ನಲ್ಲಿ ಎಕ್ಸಟ್ರಾ ಅನಿಸಿದನ್ನು ಕಿತ್ತು ಹಾಕಿ, ನೀಟಾಗಿ ಸೆಟ್‌ ಮಾಡ್ಕೊಳ್ಳಿ. 

6. ಡಾರ್ಕ್‌ ಐ ಶ್ಯಾಡೋ ಪೌಡರ್‌ನ್ನು ಕಣ್ಣಪಾಪೆಗಳಿಗೆ ಹಚ್ಚಿ. ಎಲ್ಲೂ ಪ್ಯಾಚ್‌ಗಳು ಕಾಣದ ಹಾಗೆ ನೋಡ್ಕೊಳ್ಳಿ. 

Trending videos

Back to Top