CONNECT WITH US  

ವಾಕ್‌ ದೆನ್‌ ಟಾಕ್‌ ನಡುಗೆ ಎಂಬ ಆರೋಗ್ಯಕರ ಉಡುಗೆ

ಮನುಷ್ಯರ ಬಹುದೊಡ್ಡ ಶತ್ರುಗಳು ಈ ನಿರಾಸಕ್ತಿ, ಖನ್ನತೆ ಮತ್ತು ಬೇಸರ. ಈ ಮೂರು ವ್ಯಾಯಾಮ ಮಾಡುವವರನ್ನು ಆವರಿಸಿಕೊಂಡರಂತೂ ಅವರ ವ್ಯಾಯಾಮದ ಗತಿ ತಪ್ಪಿದಂತೆಯೇ. ಶಿಸ್ತಿನ ಸಿಪಾಯಿಯಂತೆ ವ್ಯಾಯಾಮ ಮಾಡಬೇಕು ಅಂದುಕೊಂಡರೂ, ಅಂಥವರನ್ನು ಒಮ್ಮೊಮ್ಮೆ ಈ ಬೇಸರ-ನಿರಾಸಕ್ತಿ ವ್ಯಾಯಾಮ ಮಾಡದಂತೆ ಮನಸು ಬದಲಾಯಿಸಿ
ಬಿಡುತ್ತದೆ. ಆದರೆ ಒಬ್ಬ ಫಿಟ್‌ನೆಸ್‌ ಎಕ್ಸ್‌ಫ‌ರ್ಟ್‌ ಆಗಿ ಇದನ್ನು ನೋಡಿದಾಗ ನನಗೆ ಅನ್ನಿಸುವುದು ನಮ್ಮ ವ್ಯಾಯಾಮಾದ ಆಯಾಮ ತಪ್ಪುವುದು ಏಕತಾನತೆಯಿಂದ. ಹೇಗಂತೀರಾ ದಿನ ಒಂದೇ ರಸ್ತೆಯಲ್ಲಿ ನಡೆಯುವುದು, ಒಂದೇ ಟ್ರೆಡ್‌ಮಿಲ್‌ ಬಳಕೆ ಮಾಡುವುದರಿಂದಾಗಿ ಏಕತಾನತೆ ಆವರಿಸಿಕೊಂಡುಬಿಡುತ್ತದೆ. ಅದಕ್ಕಾಗಿಯೇ ನೀವು ಈ
ಕೆಳಕಂಡ ವಾಕಿಂಗ್‌ ನಿಯಮಗಳನ್ನು ಅಳವಡಿಸಿಕೊಳ್ಳಿ ಅನ್‌ಬ್ರೇಕಬಲ್‌ ವಾಕರ್‌ ನೀವಾಗಿ. 

-ವಾಕ್‌ ಮಾಡಿದರೆ ನಮ್ಮ ಹೃದಯಬಡಿತ ಹೆಚ್ಚುವಂತಿರಬೇಕು. ಹೇಗಂತೀರಾ? ನಿಮ್ಮ ಟ್ರೆಡ್‌ಮಿಲ್‌ನಲ್ಲಿ ಪೆಡೋಮೀಟರ್‌ ಅಳವಡಿಸಿಕೊಂಡರೇ ಅದರಲ್ಲಿ ನೀವು ಹೆಚ್ಚು ವೇಗವಾಗಿ ವಾಕ್‌ ಮಾಡಿದಷ್ಟು ಅದರಲ್ಲಿ ಕಿಲೇಮೀಟರ್‌ ಏರುತ್ತಾ ಹೋಗುತ್ತದೆ.

-ಟ್ರೆಡ್‌ಮಿಲ್‌ ಏರಿ ಹಾಗೇ ಮ್ಯಾಗ್‌ಝಿನ್‌ ಓದುತ್ತಾ, ಸಾರಿಗೆ ಹಾಕಿದ ಒಗ್ಗರೆಣೆ ಬಗ್ಗೆ ಫೋನಿನಲ್ಲಿ ಹರಟುತ್ತಾ ಇಲ್ಲವೇ ನಿಮ್ಮ ಇಷ್ಟದ ಸಾಸ್‌ ಬಹು ಸೀರಿಯಲ್‌ ನೋಡುತ್ತಾ ವಾಕ್‌ ಮಾಡಿದರೆ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಅದರ ಬದಲಿಗೆ ನಿಮ್ಮ ವಾಕಿಂಗ್‌ ರಿಪಿಟೇಶನ್‌ ಮೇಲೆ ಗಮನವಿಡಿ. ವಾಕ್‌ ಮಾಡುತ್ತಾ ನಿಧಾನಕ್ಕೆ ನಡಿಗೆಯನ್ನು ವೇಗಗೊಳಿಸಿ.

-ವಾಕ್‌ ಮಾಡುವಾಗ ಸಂಗೀತ ಕೇಳುತ್ತಾ ವಾಕ್‌ ಮಾಡಿ. ಅದರಿಂದಾಗಿ ನಿಮ್ಮ ನಡಿಗೆಗೊಂದು ಲಯಬರುತ್ತದೆ ಮತ್ತು ಸಂಶೋಧನೆಗಳು ಕೂಡ ವಾಕ್‌ ಮಾಡುವಾಗ ಸಂಗೀತ ಕೇಳಿದರೆ ನಮ್ಮ ಮನಸು ಪ್ರಫ‌ುಲ್ಲವಾಗುತ್ತದೆ ಎಂಬುದನ್ನು ಸಾಬೀàತುಪಡಿಸಿವೆ.

-ವಾಕ್‌ ಮಾಡುತ್ತಾ ವಿದೇಶಿ ಭಾಷೆಗಳ ಟೇಪ್‌ ಕೇಳುವ ಅಭ್ಯಾಸ ಮಾಡಿಕೊಳ್ಳಿ. ವಾಕಿಂಗ್‌ ಜೊತೆಗೆ ಭಾಷೆಯನ್ನು
ಕಲಿತಂತಾಗುತ್ತದೆ.

-ಹಿಮ್ಮುಖ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಕೂಡ ದೇಹ ಆರೋಗ್ಯಕ್ಕೆ ಪೂರಕ.

-ಜಿಮ್‌ ಮಾಡುವವರು, ಟ್ರೆಡ್‌ಮಿಲ್‌ ವಾಕ್‌ ಮಾಡುವವರು ಕಡ್ಡಾಯವಾಗಿ ಟ್ರೇನರ್‌ ಫಿಕ್ಸ್‌ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ನಮಗೆ ಯಾರಾದರೂ ಪ್ರೇರಣೆ ಕೊಡುವವರು ಇದ್ದಾಗ ಮಾತ್ರವೇ ನಮ್ಮ ಶಕ್ತಿ ನಮಗೆ ಅರಿವಾಗುವುದು.


Trending videos

Back to Top