CONNECT WITH US  

ನೀ ನಡೆದರೆ ಸೊಗಸು

ಪ್ರಾರಂಭದಲ್ಲಿ ವ್ಯಾಯಾಮ ಮಾಡಲು ಉತ್ಸಾಹದಿಂದ ಇದ್ದ ಮನಸು ದಿನಕಳೆದಂತೆ ಅದರಿಂದ ತಪ್ಪಿಸಿಕೊಳ್ಳಲು ಕಾರಣಗಳನು ಹುಡುಕಲಾರಂಬಿಸುತ್ತದೆ. ಮತ್ತು ಕೆಲವರಿಗೆ ಈ ವ್ಯಾಯಾಮದಿಂದ ಬಯಸಿದಂಥ ಪ್ರತಿಫ‌ಲಗಳು ಕಾಣದೇ ವ್ಯಾಯಾಮ ಮಾಡುವುದನ್ನು ಕೈಬಿಟ್ಟು ಬಿಡುತ್ತಾರೆ. ಆದರೆ ಎಲ್ಲರೂ ಹೀಗೆ ಇರುತ್ತಾರೆ ಎಂದು ಹೇಳಲಾಗುವುದಿಲ್ಲ.

ಇದ್ದಕ್ಕಿದ್ದಂತೆ ಶೂ ಕಟ್ಟಿ, ಟ್ರಾ Âಕ್‌ ಪ್ಯಾಂಟ್‌ ಹಾಕಿಕೊಂಡು ಜಾಗಿಂಗ್‌ ಆರಂಭಿಸುವುದು, ಜಿಮ್‌ನಲ್ಲಿ ಗಂಟಾನುಗಟ್ಟಲೇ ಬೆವರು ಹರಿಸುವುದನ್ನು ಯಾರು ಬೇಕಾದರೂ ಶುರು ಮಾಡಬಲ್ಲರು. ಆದರೆ ಅದನ್ನೇ ಒಂದು ಹವ್ಯಾಸವಾಗಿಸಿಕೊಂಡು ದಿನನಿತ್ಯ ಮಾಡುವವರು ಮಾತ್ರ ಕೆಲವು ಜನ ಮಾತ್ರ. ಪ್ರಾರಂಭದಲ್ಲಿ ವ್ಯಾಯಾಮ ಮಾಡಲು ಉತ್ಸಾಹದಿಂದ ಇದ್ದ ಮನಸು ದಿನಕಳೆದಂತೆ ಅದರಿಂದ ತಪ್ಪಿಸಿಕೊಳ್ಳಲು ಕಾರಣಗಳನು ಹುಡುಕಲಾರಂಬಿಸುತ್ತದೆ. ಮತ್ತು ಕೆಲವರಿಗೆ ಈ ವ್ಯಾಯಾಮದಿಂದ ಬಯಸಿದಂಥ ಪ್ರತಿಫ‌ಲಗಳು ಕಾಣದೇ ವ್ಯಾಯಾಮ ಮಾಡುವುದನ್ನು ಕೈಬಿಟ್ಟು ಬಿಡುತ್ತಾರೆ. ಆದರೆ ಎಲ್ಲರೂ ಹೀಗೆ ಇರುತ್ತಾರೆ ಎಂದು ಹೇಳಲಾಗುವುದಿಲ್ಲ. ಅವರವರ ಕೆಲಸಗಳ ಮಧ್ಯೆಯೂ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಲು ಬಯಸುತ್ತಿರುತ್ತಾರೆ. ಒಬ್ಬೊಬ್ಬರು ಒಂದೊಂದು ಕಾರಣಗಳಿಗಾಗಿ ವ್ಯಾಯಾಮವನ್ನು ಅವಲಂಬಿಸಿರುತ್ತಾರೆ.

ಯಾವ ಕಾರಣಕ್ಕೆ ವ್ಯಾಯಾಮ ಮಾಡುತ್ತಾರೆ?
l ಫಿಟ್‌ನೆಸ್‌ l ಸೌಂದರ್ಯ l ಶಕ್ತಿವರ್ಧನೆ l ಉತ್ಸಾಹ l  ಜೀವನದ ಒಂದು ಭಾಗದಂತೆ l ನಿದ್ರಾಹೀನತೆ ತಡೆಗೆ l ಖನ್ನತೆ ಹೋಗಲಾಡಿಸಲು l ತೂಕ ನಿರ್ವಹಣೆ

-ಈ ಮೇಲ್ಕಂಡ ಕಾರಣಗಳನ್ನು ತಿಳಿದುಕೊಂಡ ಮೇಲೆ, ನೀವು ಯಾವ ಕಾರಣಕ್ಕಾಗಿ ವ್ಯಾಯಾಮ ಮಾಡಬೇಕು ಎಂದು ತೀರ್ಮಾನಿಸಿ ಮತ್ತು ಅದರಂತೆ ವ್ಯಾಯಾಮ ಮಾಡುತ್ತಾ ಹೋಗಿ.

ವ್ಯಾಯಾಮ ಹವ್ಯಾಸವಾಗಿಸಲು ಟಿಪ್ಸ್‌

- ನೀವು ಮಾಡುವ ವ್ಯಾಯಾಮದಲ್ಲಿ ವೈವಿಧ್ಯತೆಗಳನ್ನು ಅಳವಡಿಸಿಕೊಳ್ಳಿ. ಉದಾಹರಣೆಗೆ ಓಡುವುದು, ನಡೆಯುವುದು, ಸ್ವಿಮ್‌ ಮಾಡುವುದು, ಏರೋಬಿಕ್ಸ್‌, ಸ್ಟ್ರೆಚಿಂಗ್‌ ವ್ಯಾಯಾಮಗಳನ್ನುಮಾಡಿ.

- ನಿಮ್ಮ ಸ್ನೇಹಿತರಿಗಾಗಿ ಇಲ್ಲ ಅಮ್ಮನಿಗಾಗಿ, ಪ್ರಿಯತಮನಿಗಾಗಿ ವ್ಯಾಯಾಮ ಮಾಡಿಯೇ ಮಾಡುತ್ತೇನೆ ಎಂದು ಕಮಿಟ್‌ ಆಗಿ. ಹೀಗೆ ಮಾಡಿದಾಗ ವ್ಯಾಯಾಮವನ್ನು ನಮಗಲ್ಲದಿದ್ದರೂ ಅವರಿಗಾಗಿ ಮಾಡಬೇಕು ಎಂಬ ಯೋಚನೆ ಬರುತ್ತದೆ.

- ವ್ಯಾಯಾಮ ಮಾಡಬೇಕೋ, ಮಾಡಬಾರದೋ ಎಂದು ಯೋಚಿಸಿ ನಿಮ್ಮೊಳಗೆ ಚೌಕಾಶಿ ಮಾಡುವುದನ್ನು ಬಿಡಿ. ಹೇಗೆಂದರೆ, ಏನೇ ಕೆಲಸವಿದ್ದರೂ ಬೆಳಿಗ್ಗೆ ಎದ್ದತಕ್ಷಣ ನಿಮ್ಮ ಹಲ್ಲುಜ್ಜುವಂತೆ, ವ್ಯಾಯಾಮವನ್ನು ಮಾಡಿ.  ನಿಮ್ಮ ಮನೆಯವರೆಲ್ಲರಿಗೂ ನೀವು ವ್ಯಾಯಾಮ ಮಾಡಲೇಬೇಕು ಎಂಬುದನ್ನು ಅರ್ಥಮಾಡಿಸಿ. ಆಗ ಅವರು ಆ ವಿಚಾರದಲ್ಲಿ ತೊಂದರೆ ಕೊಡುವುದು ತಪ್ಪುತ್ತದೆ.

- ವ್ಯಾಯಾಮವನ್ನು ಬೆಳಗ್ಗಿನ ವೇಳೆಗೆ ನಿಗದಿ ಮಾಡಿಟ್ಟುಕೊಳ್ಳಿ. ಇಲ್ಲದಿದ್ದರೇ ಬೇರೆ ಸಮಯದಲ್ಲಿ ನಿಮ್ಮ ಕೆಲಸಗಳು ನಿಮ್ಮ ವ್ಯಾಯಾಮವನ್ನು ತಿಂದು ಹಾಕಬಹುದು. ಕಷ್ಟಪಟ್ಟು ವ್ಯಾಯಾಮವನು ಹವ್ಯಾಸವಾಗಿಸಿಕೊಂಡುಬಿಟ್ಟರೆ, ಆನಂತರ ನಿಮಗೆ ಬಿಪಿ, ಶುಗರ್‌ ಎಲ್ಲವನ್ನು ದೂರವಿಡಬಹುದು. ದಿನವಿಡಿ ಉಲ್ಲಸಿತರಾಗಿ, ಆರೋಗ್ಯವಂತರಾಗಿ ಜೀವನ ಸಾಗಿಸಬಹುದು.

Trending videos

Back to Top