CONNECT WITH US  

ಫಿಟ್ಟಾಗಿರು ಸುಬ್ಬಲಕ್ಷ್ಮೀ! ಈ ವಯಸಲ್ಲಿ ವ್ಯಾಯಾಮ ಮಾಮೂಲು

ಚಕ್ರದಂತೆ ಓಡುತ್ತಿರುವ ಈ ಕಾಲದಲ್ಲಿ ನಮ್ಮ ಆರೋಗ್ಯ ಕಾಪಾಡಲೆಂದು ಇರುವ ಕೊನೆಯ ಅಸ್ತ್ರವೊಂದೆ ಅದು ವ್ಯಾಯಾಮ. ಯಾರಲ್ಲಿಯೂ ಧಾರಾಳವಾಗಿ ವ್ಯಾಯಾಮ ಮಾಡುವಷ್ಟು ಸಮಯವಿಲ್ಲ. ಹಾಗಾಗಿ ವ್ಯಾಯಾಮ ಮಾಡಲು ಒಂದು ಸಮಯ, ಅದಕ್ಕಾಗಿ ಒಂದು ಜಾಗ, ಅದಕ್ಕೊಂದಿಷ್ಟು ಖಾಸಗಿತನವನ್ನು ಹುಡುಕುವುದಕ್ಕಿಂತ ನಮಗೆ ಸಿಕ್ಕ ಸಮಯದಲ್ಲೇ ಏನಾದರೂ ಮಾಡಬಹುದು. 

ಹೀಗೆ ಮಾಡುವುದು ಏನು ವ್ಯಾಯಾಮ ಮಾಡದಿರುವುದಕ್ಕಿಂತ ಉತ್ತಮ ಸ್ಥಿತಿ. ವರ್ಕ್‌ ಔಟ್‌ ಮಾಡುವುದು ನಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಬಲ್ಲದು. ಈ ಮೂಲಕ ದೇಹ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. 

ಕತ್ತಿಗೆ ಸಂಬಂಧಿಸಿದಂತ ವ್ಯಾಯಾಮಗಳು ಕತ್ತು ಯಾವಾಗಲೂ ಹೆಚ್ಚು ಬಳಕೆಯಾಗುವುದರಿಂದ ವಿಪರೀತ ನೋವು ಮತ್ತು ಒತ್ತಡಕ್ಕೆ ಒಳಗಾಗುತ್ತದೆ. ಹಾಗಾಗೀ ಕತ್ತಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಹೆಚ್ಚಾಗಿ ಮಾಡಬೇಕು. ನಿಮ್ಮ ಕೈಯನ್ನು ಹಣೆಯ ಬಲಬದಿಯ ಮೇಲೆ ಇಟ್ಟು ಹಣೆಯನ್ನು ಕೆಲವು ಸೆಕೆಂಡುಗಳವರೆಗೆ ಬಲವಾಗಿ ಒತ್ತಿ . ಪುನಃ ಇದೆ ರೀತಿ ಇನ್ನೊಂದು ಕೈಯಿಂದ  ಹಣೆಯ ಮತ್ತೂಂದು ಬದಿಯನ್ನು ಒತ್ತಿರಿ.

ನೀರು ವ್ಯಾಯಾಮದ ಒಂದು ಭಾಗ 
ದಿನದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯುತ್ತಲೇ ಇರಿ. ನೀರು ಕ್ಯಾಲೋರಿ ಬರ್ನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಫೀಸ್‌ನಲ್ಲಿ ಇಲ್ಲವೆ ಮಾಲ್‌ಗ‌ಳಿಗೆ ಹೋದಾಗ ಎಲಿವೇಟರ್‌ ಇದ್ದರೆ ಅದನ್ನು ಬಳಸದೆ ಮೆಟ್ಟಿಲುಗಳನ್ನೆ ಹತ್ತಿಹೋಗಿ . ಏಕೆಂದರೆ ನೀವು ಮೇಲೆ ಹೋಗಲು ಮೆಟ್ಟಿಲು ಬಳಸಿದರೆ ನೀವು ಎಲಿವೇಟರ್‌ನಲ್ಲಿ ಹೋಗುವುದಕ್ಕಿಂತ ಏಳುವರೆಪಟ್ಟು ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಇದರಿಂದ ನೀವು ತೆಳ್ಳಗೂ ಮತ್ತು ಆರೋಗ್ಯವಂತರಾಗಿಯೂ ಇರುತ್ತೀರಿ  ಆತಂಕಭರಿತರಾಗಿರುವುದು ಒತ್ತಡಕ್ಕೆ ಕಾರಣವಾಗುತ್ತದೆ. ಅದಕ್ಕೆ ನೀವು ಮೂಗಿನ ಒಂದು ಬದಿಯನ್ನು ಮುಚ್ಚಿ ಒಂದು ಮೂಗಿನ ಹೊಳ್ಳೆಯಿಂದ ಕೆಲ ಹೊತ್ತಿನವರೆಗೂ ಉಸಿರಾಟ ಮಾಡಿ ಆತಂಕ ದೂರವಾಗಿ ಮನಸು ಪ್ರಶಾಂತವಾಗುತ್ತದೆ.

ಉಸಿರಾಟದ ಮೂಲಕ ವ್ಯಾಯಾಮ ನಿಮ್ಮ ಹೊಟ್ಟೆಯ ಉಸಿರನ್ನು ಒಳಕ್ಕೆ ಎಳೆದುಕೊಳ್ಳಿ ಕೆಲವು ಸೆಕೆಂಡುಗಳವರೆಗೆ ಹಾಗೆ ಹಿಡಿದಿಟ್ಟುಕೊಂಡಿರಿ ನಂತರ ಉಸಿರು ಬಿಡಿ. ಇದೆ ರೀತಿ ಸಮಯ ಸಿಕ್ಕಾಗಲೆಲ್ಲಾ ಮಾಡುತ್ತಲೇ ಇರಿ. ಪೋನ್‌ನಲ್ಲಿ ಮಾತಾಡುವಾಗಲೆಲ್ಲಾ ನಡೆದಾಡುತ್ತಾ ಮಾತನಾಡಿ ಇದು ಕೂಡ ನಿಮ್ಮ ಗಮನಕ್ಕೆ ಬಾರದಂತೆ ನಿಮ್ಮ ದೇಹದ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಲೇ ಇರುತ್ತದೆ. ಇನ್ನು ಕಛೇರಿಯಲ್ಲಿ ಕೆಲಸ ಮಾಡುವವರು ತಮ್ಮ ಪ್ರಾಜೆಕ್‌ rಗಳ ಬಗ್ಗೆ ಚರ್ಚೆ ಮಾಡುವವರು ಕುಳಿತು ಚರ್ಚಿಸುವ ಬದಲಿಗೆ ಓಡಾಡುತ್ತ ಮಾತನಾಡಿದರೆ ದೇಹಕ್ಕೆ ಒಳ್ಳೆಯ ವ್ಯಾಯಾಮವಾಗುತ್ತದೆ. ನೀವು ಟೆನÒನ್‌ ಮಾಡಿಕೊಂಡರೆ ನಿಮ್ಮ ಶಕ್ತಿ ಕುಂದುತ್ತದೆ, ಅದಕ್ಕಾಗಿ ಅದರಿಂದ ಮುಕ್ತಿ ಹೊಂದಲು ವ್ಯಾಯಮ ಮಾಡಿ. ನಿಮ್ಮ ದೇಹದ ಸ್ನಾಯುಗಳನೆಲ್ಲಾ ಕೆಲವು ಸೆಕೆಂಡುಗಳವರೆಗೂ ಬಿಗಿಯಾಗಿ ಹಿಡಿದುಕೊಂಡು ನಂತರ ಬಿಡಿ. ಇದೆ ರೀತಿ ಮುಖದಿಂದ ಹಿಡಿದು ಕಾಲಿನವರೆಗೂ ಮಾಡಿ. ಈ ರೀತಿ ಮಾಡುವುದರಿಂದ ಸ್ನಾಯುಗಳು ಸಡಿಲವಾಗಿ ಒತ್ತಡ ನಿವಾರಣೆಯಗುತ್ತದೆ.

Trending videos

Back to Top