CONNECT WITH US  

ಡಯಟ್‌ ಎಂಬ ತಪಸ್ಸು; ತಿನ್ನೋಕ್ಕೆ ಮನಸ್ಸು ಬೇಡ, ಬಿಡೋಕ್ಕೆ ಬೇಕು

ಎದುರಿಗೆ ಚಾಟ್ಸ್‌ ಇದ್ದರೆ, ಬೆಣ್ಣೆಯಲ್ಲದ್ದಿರೋ ಪರಾಟಾ ಇದ್ದರೆ, ಮನೆಯಲ್ಲಿ ಅಮ್ಮ ಕೈ ಅಡುಗೆ ಮಾಡಿ ಬಡಿಸುತ್ತಿದ್ದರೆ, ಯಾವುದೋ ರೆಸ್ಟೋರೆಂಟ್‌ನಲ್ಲಿ ಬುಫೆಯಲ್ಲಿ ಆಹಾರ ಕಂಡರೆ ನಮ್ಮ ತೂಕ, ಆ್ಯಸಿಡಿಟಿ, ಗ್ಯಾಸ್ಟ್ರಿಕ್‌ ಅನ್ನೋದೆಲ್ಲಾ ಮರೆತು ಹೋಗುತ್ತೇವೆ. ನಮ್ಮ ಡಯಟ್‌ ತಪಸ್ಸಿಗೆ ಭಂಗ ತರಿಸುವ ಇಂಥ ಪ್ರಲೋಭನೆಗಳಿಂದ ಪಾರಾಗುವುದು ಹೇಗೆ?

ಹಾಗಂತ ಡಯಟ್‌ ಅಂದಾಕ್ಷಣ ಉಪವಾಸ ಕೂರೋದಲ್ಲ, ಹೊಟ್ಟೆ ಕಾಯಿಸಿ ಉಪವಾಸ ಹಾಕಿದ್ರೆ ದೇಹ ನಿಮ್ಮ ಮಾತು ಕೇಳಿ, ನಾಳೆ ನೀವು ಕರೀನಾ ಕಪೂರ್‌ ಆಗೋದೂ ಇಲ್ಲ. ಡಯಟ್‌ ಅಂದೆರ ಊಟ ಮಾಡವುದೇ, ಆದರೆ ಎಷ್ಟು, ಯಾವಾಗ, ಎಲ್ಲಿ, ಯಾವ ಥರದ ದೇಹಪ್ರಕೃತಿಗೆ ಅನ್ನೋದನ್ನು ನೋಡಿಕೊಳ್ಳಬೇಕು. ನೀವು ಆಹಾರವನ್ನು ನಿಯಂತ್ರಿಸಬೇಕೆಂದರೆ ಒಂದೇ ಸಲ ಗಬಗಬನೆ ತಿನ್ನೋದನ್ನ 5ರಿಂದ 6 ಸಲ ತಿನ್ನುವುದನ್ನು ರೂಢಿಸಿಕೊಳ್ಳಿ. ಅದಷ್ಟೇ ಆಹಾರ ನಿಮ್ಮ ದೇಹಕ್ಕೆ ಸೇರುತ್ತದೆ, ಆದರೆ ಆ ಆರು ಊಟದ ಮಧ್ಯೆಯ ಗ್ಯಾಪ್‌ ನಿಮ್ಮ ದೇಹವನ್ನು ಆರೋಗ್ಯಗೊಳಿಸುತ್ತದೆ, ಸಣ್ಣಗಾಗಿಸುತ್ತದೆ. ಇದರಿಂದ ದೇಹದಚಯಾಪಚಯ ಕ್ರಿಯೆ ಚೆನ್ನಾಗಿ ಆಗುತ್ತದೆ, ಫ್ಯಾಟ್‌ ಬರ್ನ್ ಆಗುತ್ತದೆ, ನಿಮ್ಮ ದೇಹ ಮನಸ್ಸಿಗೂ ಲವಲವಿಕೆ ಬರುತ್ತದೆ.

ಪಥ್ಯ ಅಂದರೆ ಊಟ ಬಿಡೋದು ಅನ್ನೋದನ್ನ ಮೊದಲು ಮನಸ್ಸಿನಿಂದ ತೆಗೆದು ಹಾಕಿ. ಹೀಗೆ ಮಾಡಿದರೆ ನಿಮ್ಮ ದೇಹ ಖಾಯಿಲೆ ಬೀಳುತ್ತದೆ, ಮುಖ, ಮೈಯ ಕಾಂತಿ ಕ್ಷೀಣಿಸುತ್ತದೆ. ಅದರ ಬದಲು ಆರೋಗ್ಯವಂತ ಆಹಾರ, ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವ ಆಹಾರ, ಎಕ್ಸರ್‌ಸೈಜ್‌ಗಳನ್ನೆಲ್ಲಾ ಮಾಡೋದರಿಂದ ನೀವು ಕಳಕಳಿ ಆಗುತ್ತೀರಿ.

ಏನು ತಿನ್ನಬೇಕು?
ಆದಷ್ಟು ದಿನದಲ್ಲಿ ಹೆಚ್ಚೆಚ್ಚು ತರಕಾರಿ ಮತ್ತು ಹಣ್ಣು ಸೇವಿಸಿ. ಉಳಿದ ಊಟಗಳನ್ನೂ ಒಂದು ಮಿತಿಯಲ್ಲಿ ತಿನ್ನುತ್ತಿರಿ. ತರಕಾರಿ, ಹಣ್ಣುಗಳು ದೇಹದಲ್ಲಿರೋ ಟಾಕ್ಸಿನ್‌ ಅಂಶಗಳನ್ನು ತೆಗೆಯುತ್ತವೆ. ತರಕಾರಿ ತಿನ್ನೋದರಿಂದ ಕಣ್ಣು ಮತ್ತು ಹಲ್ಲಿನ ಆರೋಗ್ಯ ವೃದ್ಧಿ ಆಗುತ್ತದೆ. ಉಗುರು, ಕೂದಲುಗಳಿಗೂ ಇದರಿಂದ ಪ್ರೊಟಿನ್‌ ದೊರೆಯುತ್ತದೆ. ನೀರು ಜಾಸ್ತಿ ಕುಡೀರಿ, ಆರೋಗ್ಯವಂತ ಚರ್ಮ ನಿಮ್ಮದಾಗುತ್ತದೆ. ಕಾರೆ ಹಣ್ಣಿನ ಜ್ಯೂಸ್‌ ಕುಡೀರಿ, ದೇಹದಲ್ಲಿರೋ ಟಾಕ್ಸಿನ್‌ ಅಂಥ ಹೋಗಿ ಚರ್ಮಕ್ಕೆಕಾಂತಿ ಸಿಗುತ್ತದೆ. ಬಾದಾಮಿ ತಿನ್ನಿ, ಒಣದ್ರಾಕ್ಷಿ ತಿನ್ನಿ, ಪಿಸ್ತಾ ತಿನ್ನಿ. ಇವೆಲ್ಲಾ ಹೃದಯ ಮತ್ತು ಚರ್ಮಕ್ಕೆ ಒಳ್ಳೇದು, ಹೊರಗೆ ಹೋದಾಗ ಹಸಿವಾದರೆ ಹಾಲು, ಮಜ್ಜಿಗೆ ಕುಡೀರಿ, ಮೊಟ್ಟೆ ಇಷ್ಟ ಅಂತಾದರೆ ಆಮ್ಲೆಟ್‌ ಇತ್ಯಾದಿ ತಿನ್ನಿ.

*ವನಿತಾ ಅಶೋಕ್

Trending videos

Back to Top