CONNECT WITH US  

ಪ್ರಶ್ನೆ ಇರೋದು ಇಲ್ಲಿ .. ದಪ್ಪದ ಬೂತಕ್ಕೆ ಬಾಯ್‌ ಹೇಳಿ!

ಕನ್ನಡಿ ಮುಂದೆ ನಿಲ್ಲದಕ್ಕೆ ಭಯ. ತೂಕ ನೋಡೋ ಮೆಶಿನ್‌ ಕಂಡ್ರೆ ಕೀಳರಿಮೆ. ಸಾರ್ವಜನಿಕ ಜಾಗದಲ್ಲಿ ಓಡಾಡುವಾಗ ನೆಲ ನೋಡ್ಕೊಂಡೇ ಓಡಾಡೋದು ಜಾಸ್ತಿ. ಇಷ್ಟಕ್ಕೆಲ್ಲ ಕಾರಣ ಮತ್ತೇನಿಲ್ಲ, ದಪ್ಪದ ಬೂತ!

ನಾನು ಸಿಕ್ಕಾಪಟ್ಟೆ ದಪ್ಪ ಇದ್ದೀನಿ. ಫ್ಯಾಶನೇಬಲ್‌ ಡ್ರೆಸ್‌ ಹಾಕ್ಕೊಳಕ್ಕೇ ಆಗಲ್ಲ. ಪಕ್ಕದಲ್ಲೇ ಸಣ್ಣ ನಡುವಿನವಳು ಹಾದು ಹೋದರೆ ಕೀಳರಿಮೆ ಹೆಚ್ಚುತ್ತೆ. ವಾಕ್‌ ಮಾಡೋಣ, ಎಕ್ಸರ್‌ಸೈಜ್‌ ಮಾಡೋಣ ಅಂದ್ರೆ ಟೈಂ ಸಾಕಾಗಲ್ಲ .. ಇಂಥ ಮನಸ್ಥಿತಿ ನಿಮ್ಮದೂ ಆಗಿರಬಹುದು. ಬೇರೆ ದಾರಿಯೇ ಇಲ್ಲ. ಈ ಟಿಪ್ಸ್‌ ಫಾಲೋ ಮಾಡ್ಲೆà ಬೇಕು, ನಿಮ್ಮ ಜೀವನೋತ್ಸಾಹ ಹೆಚ್ಚಿಸಿಕೊಳ್ಳಲೇ ಬೇಕು.

1. ಬೆಳಗ್ಗೆ ಏಳ್ಳೋದು ನಿಮ್ಮ ಸಮಸ್ಯೆಯಾದರೆ .. ಅಲರಾಂನ್ನು ಆದಷ್ಟು ದೂರದಲ್ಲಿ ಇಡಿ. ಅಷ್ಟು ದೂರ ನಡೆದು ಹೋಗುವಾಗ ನಿದ್ದೆಯಿಂದ ಹೊರಬರೋದು ಸುಲಭ. ನಂತರ ರೆಡಿಯಾಗಿ.

2. ಬಿಸಿನೀರಿಗೆ ಸ್ವಲ್ಪ ಜೇನು ತುಪ್ಪ ಹಾಗೂ ನಿಂಬೆರಸ ಹಾಕಿ ಕುಡಿಯಿರಿ.

3. ಒಂದೊಂದು ದಿನ ಒಂದೊಂದು ಆ್ಯಕ್ಟಿವಿಟಿ - ಮೊದಲ ದಿನ ಮೂರು ಕಿಲೋ ಮೀಟರ್‌ನಷ್ಟು ರನ್ನಿಂಗ್‌ ಮಾಡಿ. ಮರುದಿನ ಮನೆಯಲ್ಲೇ ಎಕ್ಸರ್‌ಸೈಜ್‌ ಮಾಡಿ. ಮೂರು ಹಾಗೂ ನಾಲ್ಕನೇ ದಿನ ಸ್ವಿಮ್ಮಿಂಗ್‌ ಮಾಡಿ. ಐದನೇ ದಿನ ಏರೋಬಿಕ್ಸ್‌ ಥರದ ಆ್ಯಕ್ಟಿವಿಟಿ. ಹೀಗೆ ಇಡೀ ವಾರಕ್ಕೆ ಶೆಡ್ನೂಲ್‌ ಹಾಕಿಕೊಂಡು ಅದರಂತೆ ದೇಹಕ್ಕೆ ಎಕ್ಸ್‌ರ್‌ಸೈಜ್‌ ಸಿಗೋ ಹಾಗೆ ಮಾಡಿ. ಇದರಿಂದ ಬೋರ್‌ ಆಗಲ್ಲ, ಉತ್ಸಾಹ ಹೆಚ್ಚುತ್ತೆ. 

4. ಡಯೆಟ್‌ ಅಂತ ಒಮ್ಮಿಂದೊಮ್ಮೆಲೇ ಆಹಾರ ಪ್ರಮಾಣ ಕಡಿಮೆ ಮಾಡಬೇಡಿ. ಆದರೆ ಪ್ರಜ್ಞಾಪೂರ್ವಕವಾಗಿ ಕಡಿಮೆ ತಿನ್ನೋದನ್ನು ಅಭ್ಯಾಸ ಮಾಡಿಕೊಳ್ಳಿ. 

5. ಆಹಾರದಲ್ಲಿ ನಾರಿನ ಅಂಶ ಹೆಚ್ಚಿರುವ ಹಾಗೆ ನೋಡಿಕೊಳ್ಳಿ. ಪ್ರತಿ ದಿನ 25 ಗ್ರಾಂನಷ್ಟಾದರೂ ನಾರಿನಂಶ ದೇಹಕ್ಕೆ ಹೋಗಲೇಬೇಕು. ಚಾಟ್ಸ್‌, ಸ್ವೀಟ್‌ ಹೆಚ್ಚು ತಿಂದರೆ ಹೆಚ್ಚು ಎಕ್ಸರ್‌ಸೈಜ್‌ ಮಾಡಿ ಅಷ್ಟೇ ..
ಈ ಹದ ರೂಢಿಸಿಕೊಂಡರೆ ಉತ್ಸಾಹದಲ್ಲಿ ಬದುಕಬಹುದು, ಹೆಚ್ಚು ಖುಷಿಯಾಗಿ, ಆ್ಯಕ್ಟಿವ್‌ ಆಗಿ ಇರಬಹುದು. 

Trending videos

Back to Top