CONNECT WITH US  

ನಲವತ್ತಾಯ್ತಾ? ಏಳು ಎಕ್ಸರ್‌ಸೈಜ್‌ಗೆ ಹೊತ್ತಾಯ್ತು!

ನನಗೀಗ 40 ವರ್ಷ. ಹೆಚ್ಚುಕಮ್ಮಿ ಫಿಟ್‌ ಆಗಿಯೇ ಇದ್ದೇನೆ, ಜೊತೆಗೆ ಆರೋಗ್ಯವೂ ಚೆನ್ನಾಗಿದೆ. ಬೆಳಿಗ್ಗೆ ಮತ್ತು ಸಂಜೆ ಅರ್ಧರ್ಧ ಗಂಟೆಯಷ್ಟಾದರೂ ವಾಕಿಂಗ್‌ ಮಾಡುತ್ತೇನೆ. ವಾರಕ್ಕೆರಡು ಸಲ ಸ್ವಿಮ್ಮಿಂಗ್‌ ಮಾಡುತ್ತೇನೆ. ಹೆಚ್ಚುಕಮ್ಮಿ
45 ನಿಮಿಷದಷ್ಟಾದರೂ ಈಜುತ್ತೇನೆ. ಆದರೆ ಇತ್ತೀಚೆಗೆ ನನ್ನ ಹೆಂಡತಿಯ ಸಂಬಂಧಿಯೊಬ್ಬರು ತೀರಾ ಚಿಕ್ಕ ವಯಸ್ಸಿಗೇ ತೀರಿಕೊಂಡರು, ಕಾರಣ ಹೃದಯಾಘಾತ.

ಅದನ್ನು ನೋಡಿಬಂದಮೇಲೆ ನನಗೂ ಹೃದಯಾಘಾತ ಆಗಬಹುದು ಅನ್ನುವ ಭಯ ಹೆಚ್ಚಿಬಿಟ್ಟಿದೆ. ನನ್ನ ಆರೋಗ್ಯ
ಹದಗೆಡಬಹುದು, ನನ್ನ ಎಕ್ಸರ್‌ಸೈಜ್‌ ಜಾಸ್ತಿ ಇಲ್ಲವೇನೋ ಅಂತೆಲ್ಲಾ ಅವಳಿಗೆ ಆತಂಕ ಶುರುವಿಟ್ಟುಕೊಂಡಿದೆ. ನನ್ನ
ಎತ್ತರಕ್ಕೆ ತಕ್ಕ ತೂಕ ಇದೆಯಾದರೂ ಅವಳಿಗೆ ಏನೋ ಸಮಸ್ಯೆ ಆಗಬಹುದು ಅನ್ನುವ ಆತಂಕ. ಈಗ ನಾನೇನು ಎಕ್ಸರ್‌ಸೈಜ್‌ ಅಥವಾ ಫಿಟೆ°ಸ್‌ ಕಾಪಾಡಿಕೊಂಡಿದ್ದೀನೋ, ಅದು ಸಾಕಾ, ಸಾಲದಾ? ದಯವಿಟ್ಟು ತಿಳಿಸಿ.
-ರಾಜಶೇಖರ ರಾವ್‌, ಸಿದ್ಧಾಪುರ

 ನಿಮಗೆ ಅಭಿನಂದನೆ ಹೇಳಬೇಕು, ನೀವು ಕಾರ್ಡಿಯೋ ಎಕ್ಸರ್‌ಸೈಜ್‌ಅನ್ನು ತುಂಬ ಸರಿಯಾಗಿ ಮಾಡುತ್ತಿದ್ದೀರಿ. ಈ ವಯಸ್ಸಲ್ಲಿ ನೀವು ಮಾಡುವ ಈ ಎಕ್ಸರ್‌ಸೈಜ್‌ ನಿಮ್ಮನ್ನು ಕಾಪಾಡುತ್ತದೆ. ಆದರೆ ಏರೋಬಿಕ್‌ ವಕೌìಟ್‌ ಇದೆಯಲ್ಲ, ಅದು ನಿಮ್ಮ ಹೃದಯದ ಸ್ನಾಯುವನ್ನು ಬಲಿಷ್ಠಗೊಳಿಸುವುದಲ್ಲದೇ ಹೃದಯ ಮತ್ತು ಶ್ವಾಸಕೋಶದ ಕೆಲಸವನ್ನು ಸಕ್ರಿಯಗೊಳಿಸುತ್ತದೆ. ನೀವು ಮಾಡುವ ಎಕ್ಸರ್‌ಸೈಜ್‌ನ ಮೊದಲಿನ ವಾರ್ಮಪ್‌ ಮತ್ತು ಕೂಲಿಂಗ್‌ ಸ್ವಲ್ಪ ಸರಿ ಆಗುತ್ತಿದೆಯಾ ಅಂತ ಪರೀಕ್ಷಿಸಿಕೊಳ್ಳಿ. ಹಾಗೇ ನಿಮ್ಮ ಹೃದಯ ಬಡಿತ ಆರೋಗ್ಯಕರ ಸಂಖ್ಯೆಯಲ್ಲಿದೆಯಾ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ. ನೀವು ಕಾರ್ಡಿಯೋ ಎಕ್ಸರ್‌ಸೈಜ್‌ ಮಾಡುವಾಗ- ಅಂದರೆ ಓಟ ಅಥವಾ ವಾಕಿಂಗ್‌ ಅಥವಾ ಈಜುವಾಗ- ಉಸಿರಾಟಕ್ಕೇನಾದರೂ ತೊಂದರೆ, ಎದೆಯಲ್ಲಿ ಸಿಕ್ಕಿಕೊಂಡ ಭಾವ ಇದ್ದರೆ ನಿಮ್ಮ ಎಕ್ಸರ್‌ಸೈಜ್‌ನ ಅವಧಿ
ಕಮ್ಮಿ ಮಾಡಿಕೊಳ್ಳಿ. ಆಗ ಇಂಥ ಎಕ್ಸರ್‌ಸೈಜ್‌ ಕಮ್ಮಿ ಮಾಡಿ ಯೋಗ, ಸ್ಟ್ರೆಚ್ಚಿಂಗ್‌ಅನ್ನು ದಿನಕ್ಕೆ ಹತ್ತು ನಿಮಿಷಗಳಷ್ಟಾದರೂ ಮಾಡಿನೋಡಿ. ವಾರಕ್ಕೆ 2 ಸಲ, ತಲಾ 20 ನಿಮಿಷದಷ್ಟು ನಿಮ್ಮ ಮಾಂಸಖಂಡಗಳಿಗೆ ಎಕ್ಸರ್‌ಸೈಜ್‌ ಒದಗಿಸಿ. ಹಾಗೇ ನಿಮ್ಮ ಡಯಟ್‌ ಕೂಡ ನಿಮ್ಮ ಹೃದಯದ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ನೀವು ಉಣ್ಣುವ ಊಟದ ಬಗ್ಗೆಯೂ ಎಚ್ಚರ, ಗಮನ ಇರಲಿ. ಪ್ರತಿ 2 ಗಂಟೆಗೊಮ್ಮೆ ಏನನ್ನಾದರೂ ಲಘು ಆಹಾರ ತಿನ್ನುತ್ತಾ ಬನ್ನಿ.
ಊಟದ ಸಮಯ ತಪ್ಪಿಸಿಕೊಳ್ಳಬೇಡಿ. ನಾನು ಯಾವಾಗಲೂ ಹೇಳುವಂತೆ ಮನೆ ಊಟವನ್ನೇ ಹೆಚ್ಚು ಸೇವಿಸಿ. ಜಂಕ್‌ ಫ‌ುಡ್‌, ಫಾಸ್ಟ್‌ ಫ‌ುಡ್‌, ರಿಫೈನ್‌x ಆಯಿಲ್‌ನಿಂª ಮಾಡಿದ ಆಹಾರ ಸೇವನೆ ಬೇಡ. ಕುಡಿತ ಬಿಡಿ, ಹೊಗೆ ಸೇವನೆಯೂ ಬೇಡ. ಕರಿದ ತಿಂಡಿಗಳ ಸೇವನೆ ಕಮ್ಮಿ ಮಾಡಿ, ಪ್ರಾಣಾಯಾಮ ರೂಢಿಸಿಕೊಳ್ಳಿ, ನಿಮ್ಮ ಉಸಿರಾಟವನ್ನು ನಿಯಂತ್ರಿಸುವಂಥ ಯೋಗ ಆಸನಗಳನ್ನು ರೂಢಿಸಿಕೊಳ್ಳಿ. ಆದಷ್ಟು ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿರಲಿ, ಯಾವುದಕ್ಕೂ ಉದ್ವೇಗಕ್ಕೊಳಗಾಗಬೇಡಿ.
ಆರೋಗ್ಯ ನಿಮ್ಮ ಜೊತೆಗಿರುತ್ತದೆ, ನೆಮ್ಮದಿಯಾಗಿರಿ.


Trending videos

Back to Top