CONNECT WITH US  

ಪುಟ್ಟಗೌರಿ ಅಳುಮುಂಜಿ ಅಲ್ಲ!

ಈಕೆ ಪುಟ್ಟಗೌರಿ. ನಿಜ ಹೆಸರು ರಂಜಿನಿ. ಸದ್ಯಕ್ಕೀಗ "ರಾಜ ಹಂಸ' ಸಿನಿಮಾ ನಾಯಕಿ. "ಪಕ್ಕಾ ಪ್ರಾಕ್ಟಿಕಲ್‌ ಹುಡ್ಗಿ ನಾನು. ಪುಟ್ಟಗೌರಿ ಥರ ಅಳುಮುಂಜಿ ಅಲ್ವೇ ಅಲ್ಲ' ಅಂತ ಮೆಲುದನಿಯಲ್ಲಿ ಉಸುರುವ ಈಕೆಗೀಗ 23. "ವಯಸ್ಸು ಇಲ್ಲೇ ನಿಲ್ಲಲಿ. ಜಾಸ್ತಿ ಆಗೋದೇ ಬೇಡ' ಅಂತ ಪುಟ್ಟ ಹುಡ್ಗಿ ಹಾಗೆ ಹೇಳ್ಳೋ ಗೌರಿಗೆ ಕ್ಯೂಟಾಗಿ ಸುಳ್‌ ಹೇಳ್ಳೋದೂ ಗೊತ್ತು! ಬೆಂಗಳೂರಲ್ಲೇ ಹುಟ್ಟಿ ಬೆಳೆದವರು. ಎಂಬಿಎ ಮುಗಿಸಿದ್ದಾರೆ. ಸಿನಿಮಾ ಸೀರಿಯಲ್‌ಗಿಂತನೂ ಓದಿ ಕಲಿತಿದ್ದರ ಬಗ್ಗೆ ಹೆಚ್ಚು ವಿಶ್ವಾಸ ಅಂತಾರೆ. ಮುಂದೆ ಪಿಎಚ್‌ಡಿ ಮಾಡ್ಬೇಕು ಅಂತ ಆಸೆ ಇದೆ. ಸೆಲೆಬ್ರಿಟಿ ಕಟ್ಟೆಯಲ್ಲಿ ಕೂತ ಪುಟ್ಟ ಗೌರಿ ಸುಖ ದುಃಖ ಹಂಚೊRಂಡಿದ್ದಾರೆ!
*
"ಕೆಲವು ದಿನಗಳ ಹಿಂದೆ ನಮ್ಮ ಮಹೇಶಂಗೆ ಕಣ್ಣು ಸಮಸ್ಯೆ ಬಂದು ಹಾಸ್ಪಿಟಲ್‌ನಲ್ಲಿ ಶೂಟಿಂಗ್‌ ಇತ್ತು. ನಡುವೆ ಬ್ರೇಕ್‌ ಇತ್ತು. ಒಬುÛ ಹೆಂಗಸು ಬಂದು ಪಕ್ಕ ನಿಂತಳು, "ನಿನ್ನ ಗಂಡಂಗೆ ಆದ ಥರನೇ ನನ್ನ ಗಂಡಂಗೂ ಕಣ್ಣು ಹೋಗಿಬಿಟ್ಟಿದೆ ಕಣಮ್ಮ, ನಿನ್ನ ಲೈಫ್ ನೋಡಿದ್ರೆ ನಂಗೆ ನನ್ನ ಲೈಫೇ ನೆನಪಾಗುತ್ತೆ ..' ಹೀಗೆ ಮಾತಾಡ್ತಿದ್ದಾರೆ. ನಾನೂ, ಸರಿಹೋಗುತ್ತೆ, ಹುಷಾರಾಗ್ತಾರೆ ಅಂತೆಲ್ಲ ಸಮಾಧಾನ ಮಾಡ್ತಿದ್ದೀನಿ. ಅಲ್ಲಿಂದ ಆಚೆ ಬಂದ್ಮೇಲೆ ಅನಿಸ್ತು, ಅರೆ, ನಾನ್ಯಾಕೆ ಕ್ಯಾರೆಕ್ಟರೇ ನಾನು ಅನ್ನುವ ಹಾಗೆ ಮಾತನಾಡಿದೆ ಅಂತ'

.. ಇದು ಪುಟ್ಟಗೌರಿ ಎಫೆಕ್ಟ್. ಪ್ರೇಕ್ಷಕರು ಮಾತ್ರವಲ್ಲ, ಪಾತ್ರ ಮಾಡಿದವರನ್ನೂ ಆಕೆ ಆವರಿಸಿಬಿಟ್ಟಿದ್ದಾಳೆ. ಮೊದ ಮೊದಲ ದಿನಗಳಲ್ಲಿ ಆತಂಕ ಇತ್ತು. ಮುದ್ದಾಗಿ ಮಾತನಾಡುತ್ತಿದ್ದ ಧಾರಾವಾಹಿ ಶೀರ್ಷಿಕೆಗೆ ಅನ್ವರ್ಥದಂತಿದ್ದ ಪುಟ್ಟ ಗೌರಿ ಹೋಗಿ ದೊಡ್ಡ ಗೌರಿ ಬಂದಾಗ ಜನ ಒಪ್ಕೊಳ್ತಾರೋ ಇಲ್ವೋ ಅಂತ. ಈ ಸೀರಿಯಲ್‌ ಮೂರು ತಿಂಗಳಿಗೇ ನಿಂತುಬಿಟ್ರೆ ಏನ್ಮಾಡೋದು ಎಂಬ ಆತಂಕದಲ್ಲೇ ಎಂಬಿಎ ಕಲಿಯಲು ಹೊರಟಿದ್ದು ರಂಜಿನಿ ಪ್ರಾಕ್ಟಿಕಲ್‌ ಮೆಂಟಾಲಿಟಿಗೆ ಸಾಕ್ಷಿ.

ಮುಂದೆ ಸೀರಿಯಲ್‌ ಟಿಆರ್‌ಪಿ ಏರ್ತಾನೇ ಹೋಯ್ತು ಅನ್ನೋದು ಎಲ್ಲಿರಿಗೂ ಗೊತ್ತಿರೋ ವಿಷ್ಯ. ಆದ್ರೆ ಅಳುಮುಂಜಿ ಪುಟ್ಟಗೌರಿಗೂ ವರ್ಷಕ್ಕೊಮ್ಮೆ ಅಳುವ ರಂಜಿನಿ ಸ್ವಭಾವಕ್ಕೂ ಡಿಫ‌ರೆನ್ಸ್‌ ಬಹಳ ಇದೆ. ಕೆಲವೊಂದು ಸನ್ನಿವೇಶದಲ್ಲಿ ಮಾತ್ರ ಅಂತರ ಮರೆತೇಹೋಗುತ್ತೆ. 

ದೊಡ್ಡ ಆ್ಯಕ್ಟರ್‌ ಆಗ್ಬೇಕು ಅಂತ ಕನಸು ಕಾಣುವ ಮುಗ್ಧಬಾಲಕಿ ತಾನಾಗಿರಲಿಲ್ಲ ಅನ್ನುತ್ತಾರೆ ರಜನಿ. ಮೂರು ವರ್ಷಕ್ಕೇ ಸ್ಟೇಜ್‌ ಮೇಲೆ ಹತ್ತಿ ಚೆಂದದ ಹಾಡು ಹೇಳಿದ್ದ ಪೋರಿಗೆ ನಟಿಸುತ್ತಲೇ ನಟನೆಯಲ್ಲಿ ಆಸಕ್ತಿ ಹೆಚ್ಚಾಯಿತು. ಈಗಂತೂ ಪುಟ್‌ ಪುಟ್ಟ ಮಕ್ಕಳೇ ಮೊದಲು ರಜನಿಯನ್ನು ಗುರುತು ಹಿಡಿಯೋದು. ಎಲ್ಲಾದರೂ ಕಣ್ಣಿಗೆ ಬಿದ್ರೆ ಸಾಕು, ಓಡೋಡಿ ಬಂದು ಮಾತಾಡಿಸ್ತಾರೆ. ಶೂಟಿಂಗ್‌ ಒತ್ತಡ. ಹೊಸಬ್ರು ಎಷ್ಟು ಮಾತಾಡಿದ್ರೂ ಕ್ಲೋಸ್‌ ಆಗಲ್ಲ, ಹಳೆ ಫ್ರೆಂಡ್ಸ್‌ ಜೊತೆ ಮಾತಾಡ್ಲಿಕ್ಕೆ ಟೈಮೇ ಇಲ್ಲ. ಹಾಗಾಗಿ ಸದ್ಯ ಮೌನವೇ ಆಭರಣ ಅಂದೊRಂಡಿದ್ದಾರೆ ರಂಜಿನಿ.
**
ಪುಟ್‌ಪುಟ್‌ ವಿಚಾರ, ಮತ್ತೂಂದು ಗುಟ್ಟು!
ರೀಸೆಂಟಾಗಿ ಹೀಗ್‌ ಸುಳ್ಳು ಹೇಳಿದ್ದೆ - ಸಿನಿಮಾದ ಒನ್‌ ಲೈನ್‌ ಹೇಳಿದ್ರು.ಇಷ್ಟ ಆಗ್ಲಿಲ್ಲ. "ಕತೆ ಅದ್ಭುತವಾಗಿದೆ. ಆದರೆ ಡೇಟ್ಸ್‌ ಪ್ರಾಬ್ಲೆಂ, ಬೇರೆ ಪ್ರಾಜೆಕ್ಟ್ ಒಪ್ಕೊಂಡು ಬಿಟ್ಟಿದ್ದೀನಿ, ಮತ್ತೆ ಕಮಿಟ್‌ ಆಗೋದು ಕಷ್ಟ ಅಂದೆ. 
ಸಿಟ್ಟು ಬಂದ್ರೆ - ಸೈಲೆಂಟು. ರೇಗಿದ್ರೆ, ವಸ್ತುಗಳನ್ನು ಒಡುª ಹಾಕಿದ್ರೆ ನಮ್ಗೆà ಲಾಸ್‌ ಅಲ್ವಾ?

ಕೊನೆತನಕ ಇದೇ ವಯಸ್ಸಿರಲಿ ಅಂದ್ರೆ - ಈಗಿನ ವಯಸ್ಸೇ ಇರಲಿ. ಮುಂದೆ ಹೋದ್ರೆ ಮದ್ವೆ, ಜವಾಬ್ದಾರಿ ಶುರುವಾಗುತ್ತೆ. ಹಿಂದೆ ಬಂದ್ರೂ ಅಂಥ ಮಜಾ ಇಲ್ಲ. ಈಗಿನ 23 ವರ್ಷ ಹೀಗೇ ಇರಲಿ ಕೊನೇತನ್ಕ.
ಕೀ ಬಂಚ್‌ನಲ್ಲಿ ಕಡಿಮೆ ಬಳಸೋ ಕೀ - ಕೀ ಬಳಸೋದೆ ಕಡಿಮೆ. ವಾರ್ಡ್‌ರೋಬ್‌, ಡ್ರಾಯರ್‌ ಯಾವೂª ಲಾಕ್‌ ಆಗಿರಲ್ಲ. 

ಯಾರಿಗೂ ಹೇಳದ ಗುಟ್ಟು - ಒಬ್ಬೊಬ್ಳೆà ಮಾತಾಡ್ತೀನಿ!
*
ಫ‌ುಡ್‌ ಟೈಂ
ಮನೆ ಊಟ - ಶೂಟಿಂಗ್‌ ಶೂಟಿಂಗ್‌ ಶೂಟಿಂಗ್‌, ಮನೆ ಊಟ ಅಂದರೆ ಹಾತೊರೆಯುವ ಹಾಗಾಗಿದೆ. ಮೊದಲು, ಇದು ಚೆನ್ನಾಗಿಲ್ಲ. ಅದು ಸರಿಯಿಲ್ಲ ಅಂತ ಕೊಬ್ಬು ಹೊಡೀತಿದ್ದೆ. ಈಗ ಮನೆಊಟ ಏನು ಕೊಟ್ಟರೂ ತಿಂತೀನಿ.
ಲೈಫ್ಲಾಂಗ್‌ ತಿನ್ನಬಹುದಾದ ಫ‌ುಡ್‌ - ನಂಗೆ ಯಾವ ಫ‌ುಡ್‌ ಬಗ್ಗೆಯೂ ಅವರ್ಶನ್‌ ಇಲ್ಲ. ಆದರೆ ಲೈಫ್ಲಾಂಗ್‌ ಒಂದೇ ಫ‌ುಡ್‌ ತಿನ್ಬೇಕು ಅಂದರೆ ವಾಕರಿಕೆ ಬಂದೇ ಬರುತ್ತೆ.

ಕ್ರೆಯಾನ್‌, ಕಡ್ಡಿ ತಿಂದ ನೆನಪು - ತಿಂದಿರಬಹುದು, ಈಗ ನೆನಪಾಗ್ತಾ ಇಲ್ಲ. ಆದರೆ ಉಗುರು ಕಚ್ಚೋ ಅಭ್ಯಾಸ ಮೊನ್ನೆ ಮೊನ್ನೆವರೆಗೂ ಇತ್ತು. ಈಗ ಕಷ್ಟಪಟ್ಟು ಕಂಟ್ರೋಲ್‌ ಮಾಡಿದ್ದೀನಿ. ಉಗುರು ಕಚ್ಚಿ ಕಚ್ಚಿ ಸ್ಕ್ರೀನ್‌ನಲ್ಲಿ ಉಗುರು ಕೆಟ್ಟದಾಗಿ ಕಾಣಬಾರದಲ್ಲ ಅಂತ. 

ಬೇಜಾರಿಂದ ಮೇಲೆತ್ತೋ ಫ‌ುಡ್‌ - ಮ್ಯಾಗಿ. ಸೋಮಾರಿತನಕ್ಕೂ, ಬೇಜಾರಿಗೂ ..
ಮೆಮೊರೆಬಲ್‌ ಸನ್ನಿವೇಶ - ನೇಪಾಳ ಟೂರ್‌ಗೆ ಫ್ಯಾಮಿಲಿ ಸಮೇತ ಹೊರಟಿದ್ವಿ. ನಡುವೆ ಏನೋ ಸಮಸ್ಯೆ ಆಗಿ ಭಾರತದಲ್ಲಿ ನಮ್ಮ ವೆಹಿಕಲ್‌ ಇಟ್ಟು ಒಂಚೂರು ದೂರ ನಡೆದು ನೇಪಾಳ ತಲುಪಬೇಕಿತ್ತು. ಹಾಗೆ ಹೋಗುವಾಗ ಒಂದು ಊರು ಸಿಕ್ಕಿತು. ಅದು ಕುಗ್ರಾಮ.  ಆ ಕಡೆ ಭಾರತಕ್ಕೂ ಸೇರಲ್ಲ, ಈ ಕಡೆ ನೇಪಾಳಕ್ಕೂ ಬೇಕಿಲ್ಲದ ಊರದು. ಅಲ್ಲಿ ಚಿಕ್ಕ ಪೆಟ್ಟಿ ಅಂಗಡಿ. ಅಲ್ಲಿ ಟೀ ಕುಡಿದ್ವಿ. ಆತನಿಗೆ ಕನ್ನಡ, ಕರ್ನಾಟಕ ಒಂದೂ ಗೊತ್ತಿರಲಿಲ್ಲ. ಆದರೆ ಬೆಂಗಳೂರು ಅಂದ ಕೂಡಲೇ ಅವರಿಗೆ ಗೊತ್ತಾಯ್ತು, ಆ ಚಹಾ ಕೂಡ ಡಿಫ‌ರೆಂಟ್‌ ಆಗಿತ್ತು. ಇದೊಂದು ಸಿಹಿ ನೆನಪು. 

ಹೊಸ ಹೊಸ ಪಾತ್ರಗಳು, ಹೊಸ ಕಲಿಕೆ ಅಂದರೆ ಮೊದಲಿಂದಲೇ ಉತ್ಸಾಹ. ಹಿಂದೆ ಸೀರಿಯಲ್‌ಗೋಸ್ಕರ ಹಾರ್ಸ್‌ ರೈಡಿಂಗ್‌ ಕಲಿತಿದ್ದೆ. ಹೊಸ ಸಿನಿಮಾ "ರಾಜಹಂಸ' ದಲ್ಲಿ ಬಿ.ಸಿ ಪಾಟೀಲ್‌ ಮಗಳ ಪಾತ್ರ. ಹಳ್ಳಿಯಲ್ಲಿ ಹುಟ್ಟಿ ಬೆಳೆದರೂ ಜೀಪ್‌, ಬುಲೆಟ್‌ ಓಡೊÕà ಚಟುವಟಿಕೆಯ ಹುಡುಗಿ. ಭಿನ್ನವಾಗಿದೆ.  ಮುಂಬರುವ ಸಿನಿಮಾಗಳಲ್ಲೂ ಹೀಗೆ ಕಲಿಕೆಗೆ ಅವಕಾಶ ಇರಬೇಕು. ಕಂಗನಾ, ದೀಪಿಕಾ ಥರ ವ್ಯಕ್ತಿತ್ವ ಇರುವ ಪಾತ್ರಗಳನ್ನು ಮಾಡಬೇಕು. ಗ್ಲಾಮರ್‌ ಜೊತೆಗೆ ಅಭಿನಯಕ್ಕೂ ಮಹತ್ವ ಇರಬೇಕು. ಆರ್ಟ್‌ ಸಿನಿಮಾಗಳಲ್ಲಿ ಅಭಿನಯಿಸಬೇಕು .. ಹೀಗೆಲ್ಲ ಯೋಚನೆಗಳಿವೆ. 
- ರಂಜಿನಿ ರಾಘವನ್‌, ನಟಿ

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top