ಲಿಪ್‌ಸ್ಟಿಕ್‌ ಚೆಲುವಿನ ಕಾಲ…ಚೆಂದುಟಿಗೆ ಚಿತ್ತಾರ

Team Udayavani, Jul 12, 2017, 10:48 AM IST

SUP-4.jpg

ಲಿಪ್‌ಸ್ಟಿಕ್‌ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್‌ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು.

ಮಹಿಳೆಯರು ಅಲಂಕಾರ ಪ್ರಿಯರು. ಮಹಿಳೆಯರ ಅಲಂಕಾರದ ವಸ್ತುಗಳ ಪಟ್ಟಿ ಮಾಡಹೊರಟರೆ ಲಿಪ್‌ಸ್ಟಿಕ್‌ಗೆ ಮರುಮಾತಿಲ್ಲದೆ ಮೊದಲ ಸ್ಥಾನ ಕೊಡಬೇಕಾಗುತ್ತದೆ. ಯಾವುದೇ ಸಭೆ ಸಮಾರಂಭಗಳಿರಲಿ, ಇಲ್ಲವೇ ಪೇಟೆಗೆ ಶಾಪಿಂಗ್‌ ಮಾಡಲು ಹೋಗುವಾಗಲೇ ಆಗಲಿ, ಲಿಪ್‌ಸ್ಟಿಕ್‌ ಹಚ್ಚದೆ ಮನೆಯ ಹೊಸ್ತಿಲು ದಾಟದ ಮಹಿಳೆಯರೂ ಇ¨ªಾರೆ. ತಾರೆಯರಂತೂ ಲಿಪ್‌ಸ್ಟಿಕ್‌ ಇಲ್ಲದೆ ಕ್ಯಾಮೆರಾ ಮುಂದೆ ಬರೋದೇ ಇಲ್ಲ. ನೆನಪಿರಲಿ: ಲಿಪ್‌ಸ್ಟಿಕ್‌ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್‌ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು. ತಮ್ಮ ಮುಖ ಚೆನ್ನಾಗಿಲ್ಲ ಎಂದು ಕೊರಗುವ ಮಹಿಲೆಯರಿಗೆ ಒಂದು ಕಿವಿಮಾತು. ತುಟಿಯ ಆಕಾರವನ್ನು ಬದಲಾಯಿಸಲಾಗದಿದ್ದರೂ ಉಪಾಯದಿಂದ ತಿದ್ದಿ ತೀಡಿ, ಆಕಾರಕ್ಕೆ ಹೊಂದುವ ಬಣ್ಣ ಹಚ್ಚಿ ತುಟಿಗಳು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇನ್ನು ತುಟಿ ತುಂಬಾ ದಪ್ಪಗಿದೆಯೆಂದೋ, ತೆಳುವಾಯಿತೆಂದೋ ಚಿಂತೆ ಬೇಡ. ಅದಕ್ಕೂ ಪರಿಹಾರವಿದೆ. ಲಿಪ್‌ ಲೈನರ್‌ (ತುಟಿಯ ಪೆನ್ಸಿಲ…) ಬಹೋಪಯೋಗಿ. ತುಟಿಯ ಸುತ್ತಲೂ ಲಿಪ್‌ ಲೈನರ್‌ ಬಳಸುವುದರಿಂದ ತುಟಿಗೆ ಹಚ್ಚಿದ ಬಣ್ಣ ಸೋರಿ ಮುಖದ ಮೇಲೆ ಬೀಳದಂತಿರಲು ನೆರವಾಗುವುದಲ್ಲದೆ, ತುಟಿಯ ಆಕಾರವನ್ನೂ ಲಿಪ್‌ ಲೈನರ್‌ನ ಸಹಾಯದಿಂದ ತಿದ್ದಿ ತೀಡಬಹುದು.

ದಪ್ಪ ತುಟಿ: ಮುಖದಲ್ಲಿ ತುಟಿಗಳೇ ಅತಿ ದಪ್ಪವಾಗಿ ಎದ್ದು ಕಾಣುವಂತಿದ್ದರೆ, ಲಿಪ್‌ ಲೈನರ್‌ನಿಂದ ತುಟಿಯ ಒಳಭಾಗಕ್ಕೆ ಗೆರೆ ಎಳೆದು, ಮ್ಯಾಟ… (ತುಸು ಮಂಕಾದ) ಅಥವಾ ಕ್ರೀಮಿ ಲಿಪ್‌ಸ್ಟಿಕ್ಕನ್ನು ಹಚ್ಚಿ. ಕಣ್ಣು ಮತ್ತು ಕೆನ್ನೆಗಳೇ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದರೆ ತುಟಿಗಳು ಹೆಚ್ಚು ಎದ್ದು ಕಾಣುವುದಿಲ್ಲ. ಅತೀ ಗಾಢ ಬಣ್ಣ ಮತ್ತು ಅತೀ ತಿಳಿ ಬಣ್ಣದ ಲಿಪ್‌ಸ್ಟಿಕ್ಕನ್ನು ದೂರವಿರಿಸಬೇಕು. ಅವು ತುಟಿಗಳನ್ನು ಇನ್ನೂ ದಪ್ಪವಾಗಿ ಕಾಣುವಂತೆ ಮಾಡುತ್ತವೆ. ಮರೂನ್‌, ಕಾಪರ್‌, ಪಿಂಕ್‌ ಮತ್ತು ಬ್ರೌನ್‌ ಸೂಕ್ತ ಬಣ್ಣ. ತುಟಿಯಂಚಿಗೆ ಸೂಕ್ಷ್ಮವಾಗಿ ಫೌಂಡೇಶನ್‌ ಹಚ್ಚುವುದರಿಂದಲೂ ತುಟಿಗಳು ಕೊಂಚ ಕಿರಿದಾಗಿ ಕಾಣುವಂತೆ ಮಾಡಬಹುದು.

ತೆಳು ತುಟಿ: ಲಿಪ್‌ ಲೈನರ್‌ನಿಂದ ತುಟಿಯಂಚಿನ ಹೊರಭಾಗದಲ್ಲಿ ಗೆರೆ ಬರೆದಾಗ ತುಟಿಯು ಸ್ವಲ್ಪ ಅಗಲವಾದಂತೆ ಕಾಣುವುದು. ಪೀಚ್‌, ಬೀಜ್‌, ಲೈಟ… ಬ್ರಾಂಝ್, ಮೆಟಾಲಿಕ್‌, ಪಿಂಕ್‌ ಬಣ್ಣಗಳು ಸೂಕ್ತ. ಕಡು ಕೆಂಪು, ನೇರಳೆ ಬಣ್ಣಗಳು ಬೇಡವೇ ಬೇಡ. ಇವುಗಳಿಂದ ತುಟಿಗಳು ಇನ್ನೂ ತೆಳುವಾದಂತೆ ಕಾಣಿಸುತ್ತವೆ. ತುಟಿಗಳಿಗೆ ಹವಳದ ಹೊಳಪು ಕೊಟ್ಟರೆ ತುಟಿಗಳು ಉಬ್ಬಿದಂತೆಯೂ ಮತ್ತು ತುಸು ದೊಡªದಾಗಿಯೂ ಕಾಣುತ್ತವೆ.

ಚಿಕ್ಕ ತುಟಿಗಳು: ಚಿಕ್ಕ ತುಟಿಗಳಿದ್ದವರು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತಾರೆ. ಇವರಿಗೆ ಹೆಚ್ಚಿನ ಲಿಪ್‌ಸ್ಟಿಕ್‌ ಮೇಕ್‌ಓವರ್‌ ಕೂಡ ಬೇಕಾಗಿಲ್ಲ. ತುಟಿಗಳು ಸದಾ ಹೊಳೆಯುವಂತೆ ನೋಡಿಕೊಂಡು, ಗಾಢ ಬಣ್ಣದ ಲಿಪ್‌ಸ್ಟಿಕ್‌ನಿಂದ ದೂರವಿದ್ದರೆ ಸಾಕು. ಇವು ತುಟಿಗಳನ್ನು ಇನ್ನೂ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

ದಪ್ಪ ಮೇಲ್ತುಟಿ: ಮೇಲ್ತುಟಿ ದಪ್ಪಗಾಗಿ, ಕೆಳ ತುಟಿಗಳು ತೆಳುವಾಗಿರುವ ಉದಾಹರಣೆಗಳು ಭಾರತೀಯರಲ್ಲಿ ಅಧಿಕ. ಮೊದಲು ಲಿಪ್‌ಲೈನರ್‌ನಿಂದ ತುಟಿಗಳನ್ನು ತಿದ್ದಬೇಕು, ಮೇಲು¤ಟಿಗೆ ಗಾಢವಾಗಿ, ಕೆಳ ತುಟಿಗೆ ತುಸು ಲೈಟಾಗಿ ಲಿಪ್‌ಸ್ಟಿಕ್‌ ಹಚ್ಚಿದರೆ ಈ ತೊಂದರೆ ಎದ್ದು ಕಾಣಿಸುವುದಿಲ್ಲ.

ದಪ್ಪ ಕೆಳತುಟಿ: ಇವೇ ಸುಂದರವಾದ ತುಟಿಗಳು. ಮೇಕಪ್‌ ಮಾಡುವಾಗ ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಎರಡು ತುಟಿಗಳಿಗೂ ಒಂದೇ ತರಹ ಲಿಪ್‌ಸ್ಟಿಕ್‌ ಹಚ್ಚಿದರೆ ಸಾಕು.
                                     
ಮುಖವು ವಯಸ್ಸಾದಂತಿದ್ದರೆ: ಆದಷ್ಟು ಸಹಜ ಬಣ್ಣದ ಕ್ರೀಮ್‌ ಲಿಪ್‌ಸ್ಟಿಕ್ಕನ್ನು ಉಪಯೋಗಿಸಿದಾಗ ತುಟಿಯಲ್ಲಿರುವ ನೆರಿಗೆಗಳು ಲಿಪ್‌ಸ್ಟಿಕ್ಕಿನ ಹಿಂದೆ ಅಡಗಿಕೊಳ್ಳುತ್ತವೆ.

ಗೀತಾ ಕುಂದಾಪುರ

ಟಾಪ್ ನ್ಯೂಸ್

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.