ಕುಕಿಂಗ್‌ point:  ಚೌತಿಗೆ ಸ್ಪೆಷಲ್‌ ಉಂಡೆಗಳು


Team Udayavani, Aug 9, 2017, 2:10 PM IST

09-AVALU-6.jpg

ತಂಬಿಟ್ಟಿನ ಉಂಡೆ

ಬೇಕಾಗುವ ಸಾಮಗ್ರಿ: ಹುರಿಗಡಲೆ ಹಿಟ್ಟು-3 ಕಪ್‌, ಒಣಕೊಬ್ಬರಿ ತುರಿ-1 ಕಪ್‌, ತುರಿದ ಬೆಲ್ಲ-2 ಕಪ್‌, ಎಳ್ಳು ಪುಡಿ-6 ಚಮಚ, ಗಸಗಸೆ ಪುಡಿ-4 ಚಮಚ, ಏಲಕ್ಕಿ ಪುಡಿ-1 ಚಮಚ ತುಪ್ಪ-1 ಕಪ್‌

ಮಾಡುವ ವಿಧಾನ:
ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿಗಳನ್ನು ಸ್ವಲ್ಪ ಬಿಸಿ ಮಾಡಿರಿಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಬೆಲ್ಲ ಸೇರಿಸಿ ಕಲಕುತ್ತಾ ಕರಗಿಸಿ. ಬೆಲ್ಲ ಕರಗಿದ ನಂತರ, ಹುರಿಗಡಲೆ ಹಿಟ್ಟು, ಒಣಕೊಬ್ಬರಿ ತುರಿ, ಎಳ್ಳು ಪುಡಿ, ಗಸಗಸೆ ಪುಡಿ ಹಾಗೂ ಏಲಕ್ಕಿ ಪುಡಿಗಳನ್ನು ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಪಂಚಮಿಯ ನ್ಯೆವೇದ್ಯಕ್ಕೆ ತಂಬಿಟ್ಟಿನ ಉಂಡೆ ರೆಡಿ. ಅಗತ್ಯವೆೆನಿಸಿದರೆ ಇನ್ನೂ ಸ್ವಲ್ಪ ತುಪ್ಪ ಸೇರಿಸಬಹುದು. 

ಗೋಡಂಬಿ-ಒಣ ಕೊಬ್ಬರಿ ಉಂಡೆ 

ಬೇಕಾಗುವ ಸಾಮಗ್ರಿ:  ಗೋಡಂಬಿ ತುಂಡುಗಳು-3 ಕಪ್‌, ಒಣಕೊಬ್ಬರಿ ತುರಿ-2 ಕಪ್‌, ಹುರಿಗಡಲೆ ಪುಡಿ-1 ಕಪ್‌, ಏಲಕ್ಕಿ ಪುಡಿ-1 ಚಮಚ, ಬಿಳಿ ಎಳ್ಳಿನ ಪುಡಿ-3 ಚಮಚ ತುಪ್ಪ-1 ಕಪ್‌, ಬೆಲ್ಲ-2 ಕಪ್‌, ಜಾಕಾಯಿ ಪುಡಿ-1/2 ಚಮಚ

ಮಾಡುವ ವಿಧಾನ:
ಗೋಡಂಬಿ ತುಂಡುಗಳನ್ನು ತರಿತರಿಯಾಗಿ ಪುಡಿ ವಡಿ, ಸ್ವಲ್ಪ ತುಪ್ಪ ಹಾಕಿ ಹುರಿದಿರಿಸಿ. ಬಾಣಲೆ ಕಾಯಲಿರಿಸಿ, ಬೆಲ್ಲ ಹಾಕಿ, ಕಾಲು ಕಪ್‌ ನೀರು ಸೇರಿಸಿ ಎಳೆ ಪಾಕ ತಯಾರಿಸಿ. (ಒಂದು ಹನಿ ಪಾಕವನ್ನು ನೀರಿನ ಪಾತ್ರೆಗೆ ಹಾಕಿದರೆ ಅದು ಕರಗದೆ, ಗಟ್ಟಿಯಾಗಿ ಮಣಿಯಂತಿರಬೇಕು) ಬೆಲ್ಲದ ಪಾಕಕ್ಕೆ, ಮಿಕ್ಕೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಚನ್ನಾಗಿ ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕಟ್ಟಿದರೆ, ಗೋಡಂಬಿ-ಒಣಕೊಬ್ಬರಿ ಉಂಡೆ ತಯಾರು. 

ಕಡಲೇಬೇಳೆ ಉಂಡೆ

ಬೇಕಾಗುವ ಸಾಮಗ್ರಿ: ಕಡಲೇಬೇಳೆ-2 ಕಪ್‌, ಒಣಕೊಬ್ಬರಿ-1 ಕಪ್‌, ಗೋದಿ ಹಿಟ್ಟು-1 ಕಪ್‌, ಸಕ್ಕರೆ-1 ಕಪ್‌, ಕೇಸರಿ ಬಣ್ಣ-1/4 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ-8-10, ತುಪ್ಪದಲ್ಲಿ ಹುರಿದ ಗೋಡಂಬಿ-8-10, ಏÇಕ್ಕಿ ಪುಡಿ-1/2 ಚಮಚ, ಜೇನುತುಪ್ಪ-3 ಚಮಚ, ತುಪ್ಪ-1 ಕಪ್‌

ಮಾಡುವ ವಿಧಾನ:
ಗೋದಿ ಹಿಟ್ಟು ಹಾಗೂ ಕಡಲೇಬೇಳೆಗಳನ್ನು ಸ್ವಲ್ಪ ತುಪ್ಪ ಸೇರಿಸಿ, ಬೇರೆಬೇರೆಯಾಗಿ ಪರಿಮಳ ಬರುವವರೆಗೆ ಹುರಿದಿರಿಸಿ. ಹುರಿದಿರಿಸಿದ ಕಡಲೇಬೇಳೆಯನ್ನು ತರಿತರಿಯಾಗಿ ಪುಡಿ ಮಾಡಿಡಿ. ಕೇಸರಿ ಬಣ್ಣವನ್ನು ಕಾಲು ಕಪ್‌ ಹಾಲಿನಲ್ಲಿ ಕರಗಿಸಿಡಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಕ್ಕರೆ ಕರಗಿಸಿ. ಸಕ್ಕರೆ ಪಾಕಕ್ಕೆ, ಮಿಕ್ಕೆಲ್ಲಾ ಸಾಮಾನುಗಳನ್ನು ಹಾಕಿ, ಚೆನ್ನಾಗಿ ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಕಟ್ಟಿದರೆ, ಸ್ವಾದಿಷ್ಟವಾದ ಕಡಲೇಬೇಳೆ ಉಂಡೆ ರೆಡಿ. 

ಅವಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿ:
ದಪ್ಪ ಅವಲಕ್ಕಿ -2 ಕಪ್‌, ತುರಿದ ಬೆಲ್ಲ -3/4 ಕಪ್‌, ಹುರಿದ ಗೋದಿ ಹಿಟ್ಟು-1/2 ಕಪ್‌, ತೆಂಗಿನಕಾಯಿ ತುರಿ-1/2 ಕಪ್‌, ಹುರಿದ ಎಳ್ಳಿನ ಪುಡಿ-2 ಚಮಚ, ಹುರಿದ ಗಸಗಸೆ ಪುಡಿ-2 ಚಮಚ, ಹುರಿಗಡಲೆ ಪುಡಿ-3 ಚಮಚ, ಏಲಕ್ಕಿ ಪುಡಿ-1/2 ಚಮಚ, ಲವಂಗದ ಪುಡಿ-1/2 ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ-8-10, ಗೋಡಂಬಿ-8-10, ಕತ್ತರಿಸಿದ ಖರ್ಜೂರ-3 ಚಮಚ, ತುಪ್ಪ-3 ಚಮಚ, ಹಾಲು-1/2 ಕಪ್‌

ಮಾಡುವ ವಿಧಾನ:
ಅವಲಕ್ಕಿಯನ್ನು ಹುರಿದು ತಣಿಸಿ, ತರಿತರಿಯಾಗಿ ಪುಡಿ ಮಾಡಿರಿಸಿ. ಗೋದಿ ಹಿಟ್ಟು, ಗೋಡಂಬಿ, ದ್ರಾಕ್ಷಿ, ಖರ್ಜೂರಗಳನ್ನು ತುಪ್ಪದಲ್ಲಿ ಹುರಿದಿರಿಸಿ. ತುಪ್ಪ ಕಾಯಲಿರಿಸಿ, ಬೆಲ್ಲ ಸೇರಿಸಿ, ಕರಗಿಸಿ. ಬೆಲ್ಲ ಕರಗಿದ ನಂತರ, ಮಿಕ್ಕೆಲ್ಲಾ ಸಾಮಾನುಗಳನ್ನು ಹಾಕಿ ಚನ್ನಾಗಿ ಕಲಕಿ, ಒಲೆಯಿಂದ ಕೆಳಗಿರಿಸಿ. ಬಿಸಿ ಇರುವಾಗಲೇ, ಕ್ಯೆಗೆ ತುಪ್ಪ ಸವರಿಕೊಂಡು, ಇಲ್ಲವೇ ಸ್ವಲ್ಪ ಹಾಲು ಬೆರೆಸಿ,  
ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿದರೆ, ಅವಲಕ್ಕಿ ಉಂಡೆ ನೈವೇದ್ಯಕ್ಕೆ ರೆಡಿ.  

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.