CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೆಲಸದ ನಡುವೆ ಕಂದ ಬಂದಾಗ...

ದುಡಿವ ಜಗತ್ತಿನಲ್ಲಿ ಹೆಣ್ಣು ಬಲು ಎತ್ತರದಲ್ಲಿ ನಿಲ್ಲುತ್ತಿದ್ದಾಳೆ. ಪುರುಷನಿಗೆ ಪ್ರತಿ ಹೆಜ್ಜೆಯಲ್ಲೂ ಅವಳು ಪೈಪೋಟಿ ಒಡ್ಡುತ್ತಿದ್ದಾಳೆ. ಹಲವು ಸಲ ಆತನನ್ನೇ ಮೀರಿಸುತ್ತಾಳೆ. ಅತ್ಯುನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾಳೆ. ಆದರೆ, ಆಕೆಯ ಈ ವೇಗದ ಕೆರಿಯರ್‌ ಬದುಕು ಕೊಂಚ ಬ್ರೇಕ್‌ ಹಾಕಿ ನಿಲ್ಲೋದು, ತುಸು ನಿಧಾನವಾಗಿ ಸಾಗುವುದು ಪ್ರಗ್ನೆನ್ಸಿ ಅವಧಿಯಲ್ಲಿ. ಉದ್ಯೋಗಿ ಮಹಿಳೆ ಗರ್ಭ ಧರಿಸಿದಾಗ, ಕೆಲಸದೊತ್ತಡವನ್ನು ನಿಭಾಯಿಸುವುದೂ ಒಂದು ಕಲೆ.

ಮೊದಲಿನಷ್ಟು ವೇಗದಲ್ಲಿ, ಏಕಾಗ್ರತೆ ವಹಿಸಿ, ಕೆಲಸ ಮಾಡುವುದು ಆ ವೇಳೆ ಕೊಂಚ ಕಷ್ಟವಾಗಬಹುದು. ಶರೀರ ಮತ್ತು ಮನಸ್ಸು ಮೊದಲಿನಂತೆ ಸ್ಪಂದಿಸದೇ ಹೋಗಬಹುದು. ಇವೆಲ್ಲ ಸವಾಲುಗಳನ್ನು ಮೆಟ್ಟುತ್ತಲೇ, ಕಚೇರಿಯಲ್ಲೂ ಆಕೆ ಸೈ ಎನಿಸಿಕೊಳ್ಳಲು ಹತ್ತಾರು ದಾರಿಗಳಿವೆ. ಗರ್ಭದಲ್ಲಿನ ಕಂದನ ಆರೋಗ್ಯದ ಕಡೆಯೂ ಗಮನ ಕೊಡುತ್ತಾ, ಆಕೆ ಉಭಯಸಾಹಸ ಮೆರೆಯುವುದು ಬಲು ಸುಲಭ.

- ಆದಷ್ಟು ಪೌಷ್ಟಿಕ ಆಹಾರಗಳನ್ನೇ ಸೇವಿಸಿ. ಧಾನ್ಯ, ಸೊಪ್ಪುಗಳಲ್ಲದೇ ಮೀನು, ಮೊಟ್ಟೆ, ಹಾಲು- ತುಪ್ಪದಂಥ ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸಿದರೆ, ಕಚೇರಿ ಅವಧಿಯ ದಣಿವನ್ನು ದೂರ ಮಾಡಬಹುದು. ಅಲ್ಲದೇ, ಕಚೇರಿಗೆ ನಾಲ್ಕೈದು ಪುಟ್ಟ ಪುಟ್ಟ ಬಾಕ್ಸ್‌ಗಳನ್ನು, ಅದರಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಕೊಂಡೊಯ್ಯಿರಿ. ಎರಡೆರಡು ಗಂಟೆ ಅವಧಿಯಲ್ಲಿ ಅದನ್ನು ಲಘುವಾಗಿ ಸೇವಿಸುತ್ತಿರಿ. ಆದಷ್ಟು ನೀರು ಕುಡಿಯುತ್ತಿರಿ. 

- ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಆ ಬಗ್ಗೆ ಕೊರಗು ಬೇಡ. ಒಮ್ಮೆ ಬಾಸ್‌ ಅನ್ನು ಸಂಪರ್ಕಿಸಿ, ಈ ಬಗ್ಗೆ ಹೇಳಿಕೊಳ್ಳಿ. ಮಾನವೀಯತೆ ಅನ್ನೋ ಅಂಶ ಈ ವೇಳೆ ವಕೌìಟ್‌ ಆಗಿಯೇ ಆಗುತ್ತೆ. ಆಗ ತೀರಾ ಒತ್ತಡ ಎನಿಸುವ, ಕಠಿಣ ಎನಿಸುವ ಕೆಲಸಗಳಿಂದ ಕೊಂಚ ರಿಯಾಯಿತಿ ಸಿಗುತ್ತದೆ.

- ಡೆಸ್ಕ್ ಕೆಲಸ ಇದ್ದವರು ಸದಾ ಕುಳಿತೇ ಇದ್ದರೆ, ರಕ್ತ ಸಂಚಾರಕ್ಕೆ ಕಷ್ಟವಾಗುತ್ತದೆ. ಕಾಲು ಊದಿಕೊಳ್ಳುತ್ತದೆ. ಕೆಲವರಿಗೆ ಮುಖ ದಪ್ಪಗಾಗುತ್ತದೆ. ಹಾಗಾಗಿ, ಪ್ರತಿ ಅರ್ಧ ತಾಸಿಗೊಮ್ಮೆ ಪುಟ್ಟ ವಾಕಿಂಗ್‌ ಮಾಡಿ. 

- ಕಂಪ್ಯೂಟರಿನಲ್ಲಿಯೇ ಮುಳುಗಿ ಹೋಗೋದು ಬೇಡ. ಪ್ರತಿ ಹತ್ತು ನಿಮಿಷಕ್ಕೆ ಅತ್ತಿತ್ತ ನೋಡುತ್ತಾ, ಕಣ್ಣಿಗೆ ಆರಾಮದ ಅನುಭವ ನೀಡಿ. ಕಣ್ಣು ದಣಿದಷ್ಟು ಮೆದುಳು ಕೂಡ ಆಯಾಸಗೊಳ್ಳುತ್ತದೆಂಬ ಸಂಗತಿ ಗೊತ್ತಿರಲಿ.  

- ಕಚೇರಿ ಅಂದಮೇಲೆ ಗಾಸಿಪ್‌ ಇಲ್ಲದೇ ಇರುತ್ತದೆಯೇ? ಇಂಥ ಮಾತುಕತೆ ಏರ್ಪಟ್ಟಾಗಲೆಲ್ಲ, ಮೌನ ವಹಿಸಿ. ಅದನ್ನು ಕೇಳುತ್ತಾ ಸುಮ್ಮನೆ ಎಂಜಾಯ್‌ ಮಾಡಿ ಅಷ್ಟೇ. ಪ್ರತಿಕ್ರಿಯಿಸಲು ಹೋಗಬೇಡಿ. ಗಾಸಿಪ್‌ಗ್ಳು ನಿಮ್ಮ ಮನಸ್ಸಿನಲ್ಲಿ ಯಾವುದೇ ಕಂಪನ ಸೃಷ್ಟಿಸದಂತೆ ನೋಡಿಕೊಳ್ಳಿ.

- ಕಚೇರಿಯಲ್ಲಿ ಇದ್ದಷ್ಟು ಹೊತ್ತು ನಗುತ್ತಾ ಇರಿ. ಕೆಲಸದ ಒತ್ತಡದ ಅನುಭವ ಮುಖದಲ್ಲಿ, ನಿಮ್ಮ ವರ್ತನೆಗಳಲ್ಲಿ ಪ್ರಕಟಗೊಳ್ಳದಂತೆ ನೋಡಿಕೊಳ್ಳಿ.

- ಗರ್ಭಿಣಿ ಅಂದಾಕ್ಷಣ ಮನೆಯ ಸದಸ್ಯರೆಲ್ಲ ಪ್ರೀತಿಯಿಂದ ಕಾಣುತ್ತಾರೆ. ಅಂಥದ್ದೇ ವಾತಾವರಣ ಕಚೇರಿಯಲ್ಲೂ ಸಿಗುತ್ತದೆ. ಹಾಗಾಗಿ, ಯಾರ ಮೇಲೂ ಮುನಿದು, ಸಂಬಂಧ ಹಾಳು ಮಾಡಿಕೊಳ್ಳದಿರಿ.

- ಸರಳ ಯೋಗ, ಪ್ರಾಣಾಯಮಗಳನ್ನು ಅನುಸರಿಸುತ್ತಾ, ದೇಹಕ್ಕೆ- ಮನಸ್ಸಿಗೆ ರಿಲ್ಯಾಕ್ಸ್‌ ನೀಡಿ.

- ಆಫೀಸಿಗೆ ಹೋಗುವಾಗ ಬಿಗಿ ಉಡುಪುಗಳನ್ನು ಧರಿಸದೆ ಇರುವುದೇ ಉತ್ತಮ. ಬಿಗಿ ಉಡುಪು ಧರಿಸಿದಾಗ, ಉಸಿರಾಟಕ್ಕೆ ಕಷ್ಟವಾಗುತ್ತದೆ. ರಕ್ತಸಂಚಾರಕ್ಕೂ ಅಡೆತಡೆಯಾಗುತ್ತದೆ. 7-8 ತಾಸು ಹೀಗೆ ಶರೀರವನ್ನು ಹಿಂಸೆಗೆ ದೂಡುವುದು ಕಂದನ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಕಾರಣ, ಸಡಿಲ ಉಡುಪುಗಳಿಗೆ ಹೆಚ್ಚು ಆದ್ಯತೆ ಕೊಡಿ.

- ಪ್ರಗ್ನೆನ್ಸಿ ಅಂದರೆ, ಅದು ಕೆರಿಯರ್‌ಗೆ "ಬ್ರೇಕ್‌' ಅಲ್ಲ. ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಯಿದೆ, ನಾನು ಹಿಂದುಳಿದಿದ್ದೇನೆ ಎಂಬುದನ್ನೇ ತಲೆಯಿಂದ ತೆಗೆದುಹಾಕಿ. ಅವರೆಷ್ಟೇ ಮುಂದಕ್ಕೆ ಹೋದರೂ, ಮುಂದೊಂದು ದಿನ ಒಂದಾದರೂ ಸಿಗ್ನಲ್‌ನಲ್ಲಿ ನಿಲ್ಲಲೇಬೇಕಲ್ಲವೇ? ಆಗ ನೀವು ವೇಗವಾಗಿ ಹೋದರೆ ಆಯಿತಷ್ಟೇ.

- ಶಾರ್ವರಿ

ಇಂದು ಹೆಚ್ಚು ಓದಿದ್ದು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. 

Nov 25, 2017 09:08am

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು.

Nov 25, 2017 08:52am
Back to Top