ಜಾರಿ ಬೀಳದಿರು ಜಾಣ


Team Udayavani, Nov 15, 2017, 6:00 AM IST

LEAD4.jpg

ಇಂದು ಎಲ್ಲರಲ್ಲೂ ಎಲ್ಲದಕ್ಕೂ ಧಾವಂತ. ಪ್ರತಿಯೊಂದೂ ಪ್ರತಿಯೊಬ್ಬರ ನಿರೀಕ್ಷೆಯಂತೆ ಪರಿಪೂರ್ಣವಾಗಿರಬೇಕು. ಒಂದು ಮಗು ಹುಟ್ಟುತ್ತಲೇ ಐದಾರು ಭಾಷೆ, ಸಾಮಾನ್ಯ ಜ್ಞಾನದಲ್ಲಿ ಪರಿಣತನಾಗಿರಬೇಕು. ಮುದ್ದು ಕಂಗಳು ಅರಳುವ ಮೊದಲೇ ಇಡಿಯ ವಿಶ್ವದ ಜ್ಞಾನ ಅಲ್ಲಿ ಕಾಣಿಸಬೇಕು. ಹೆತ್ತವರಿಗೆ ತಡೆಯಲಾರದ ನಿರೀಕ್ಷೆ. ತಾನು ತನ್ನ ಬಾಲ್ಯ ಹೇಗೆ ಕಳೆದೆನೋ ತನಗಿದ್ದ ಖುಷಿಯೇನೋ ಒಂದೂ ನೆನಪಿರದಂತೆ ಪುಟ್ಟ ಮಕ್ಕಳನ್ನು ವಿಷಯಗಳನ್ನು ಕಂಠಪಾಠ ಮಾಡುವ ಯಂತ್ರಗಳಾಗಿ ಮಾಡಿಬಿಡುತ್ತಾರೆ. ಒಟ್ಟಿನಲ್ಲಿ ಇರುವ ಒಂದು ಮಗು ಅಥವಾ ಇಬ್ಬರು ಮಕ್ಕಳು ಹತ್ತು ಜನರಿದ್ದರೆ ಪೂರೈಸಬಲ್ಲ ನಿರೀಕ್ಷೆಗಳನ್ನೆಲ್ಲ ಪೂರೈಸಬೇಕು ಎನ್ನುವ ಸಾಧನೆಯ ಸಾಹಸದ ಹಿಂದಿನ ಆತಂಕವನ್ನು ಈ ಲೇಖನ ತೆರೆದಿಟ್ಟಿದೆ…

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮಕ್ಕಳೊಂದಿಗೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡುವ ಎನ್‌ಜಿಓ ಒಂದರಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಆಗಾಗ್ಗೆ ನಾವು ಶಾಲೆಗಳಿಗೆ ಭೇಟಿ ನೀಡಿ ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದ ಶಿಕ್ಷಕರ ತರಗತಿ ನಿರ್ವಹಣೆಯನ್ನು ಗಮನಿಸಬೇಕಿತ್ತು. ಒಂದು ದಿನ ವಿಶಿಷ್ಟವಾದ ಅನುಭವವೊಂದು ಲಭಿಸಿತು. ಶಿಕ್ಷಕರು ಹತ್ತನೇ ತರಗತಿ ತೆಗೆದುಕೊಂಡಿದ್ದರು. ಇಂಗ್ಲಿಷ್‌ ಪಾಠ. ಒಬ್ಬ ಪುಟ್ಟ ಬಾಲಕ ಆ ತರಗತಿಯಲ್ಲಿದ್ದ. ಚಿಕ್ಕವನು ಎಂದರೆ ಅವನನ್ನು ನೋಡಿದರೆ ಎಂಟನೇ ತರಗತಿಯಲ್ಲಿಯೂ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಕರು ಹೇಳಿದ ಪಾಠವನ್ನು ಚೆನ್ನಾಗಿಯೇ ಓದಿದ. ದನಿ ತುಂಬಾ ಎಳೆಯದಿತ್ತು. ಅವನ ಬೆಂಚಿನಲ್ಲಿ ಆತನೊಬ್ಬನೇ ಕುಳಿತಿದ್ದ. ಅಕ್ಕಪಕ್ಕದವರೊಂದಿಗೆ ಯಾವ ಸಂವಹನವೂ ಇಲ್ಲ. ಬೆಲ್‌ ಹೊಡೆದದ್ದೇ ಎಲ್ಲರೂ ಆಚೆ ಬರುತ್ತಿರಬೇಕಾದರೆ ಅವನು ಸರ್ರನೇ ಓಡಿ ಆರನೇ ತರಗತಿಯವರೊಂದಿಗೆ ಬೆರೆತ. ಅವನಲ್ಲಿ ಸಂಭ್ರಮವಿತ್ತು.

ಜೊತೆಗಾರರು ದೊರೆತ ನಿರಾಳತೆಯಿತ್ತು. ಹಾಗಿದ್ದರೆ, ಅವನು ಆರನೇ ತರಗತಿಯವನು ಎಂಬುದು ನಮಗರ್ಥವಾಯಿತು. ಆದರೆ, ಹತ್ತನೇ ತರಗತಿಯಲ್ಲೇಕೆ? ಗೊಂದಲ. ವಿಚಾರಿಸಿದರೆ ಬಳಿಕ ಗೊತ್ತಾಯಿತು. ಅವನ ವಯಸ್ಸು ಇನ್ನೂ ಹನ್ನೆರಡು. ಆದರೆ, ಅವನು ಅತ್ಯಂತ ಬುದ್ಧಿವಂತನಿದ್ದುದರಿಂದ ಅವನಿಗೆ ಹತ್ತನೇ ತರಗತಿಗೆ ಮುಂಬಢಿ¤. ಅದು ಅವನ ಹೆತ್ತವರ ನಿರೀಕ್ಷೆಯ ಪ್ರಕಾರ. ಆ ಮಗುವಿನ ರೀತಿ, ಅವನಿಗೆ ತರಗತಿಯಲ್ಲಿ ಆಗುತ್ತಿದ್ದ ಚಡಪಡಿಕೆ, ಹೊರಬಂದಾಗ ದೊರೆತ ಬಿಡುಗಡೆಯ ಭಾವ ಎಲ್ಲ ನೋಡಿದರೆ, ಯಾರಧ್ದೋ ಮಹತ್ವಾಕಾಂಕ್ಷೆಗೆ ಅವನು ಬಲಿಪಶುವಾದುದರಲ್ಲಿ ಸಂಶಯವಿಲ್ಲ. ಆ ವರ್ಷ ಅವನು ಹತ್ತನೇ ತರಗತಿ ಓದಿದರೂ ಪರೀಕ್ಷೆ ಬರೆಯಲು ಸಾಧ್ಯವಿರಲಿಲ್ಲ. ಅಂದಮೇಲೆ, ಮುಂದಿನ ಎರಡೋ ಮೂರೋ ವರ್ಷ ಅವನೇನು ಮಾಡಬೇಕು? ತನ್ನೊಂದಿಗೆ ಓದಿದವರು ಮುಂದೆ ಹೋದರು, ಹಿಂದಿನ ತರಗತಿಯವರೊಂದಿಗೆ ತಾನು ಸೇರಿಕೊಳ್ಳುವುದು ಅವನಿಗೆ ಸರಿಯೆನಿಸುವುದೇ? ಆ ಹಂತವನ್ನು ಅವನು ಹೇಗೆ ದಾಟಿದನೋ ಆಮೇಲೇನಾಯಿತೋ ಗೊತ್ತಿಲ್ಲ. ಮಕ್ಕಳನ್ನು ಮಕ್ಕಳನ್ನಾಗಿರಲು ಬಿಡದೇ ಹೋದರೆ ಮುಂದೇನು?

ಇಂದು ಎಲ್ಲರಲ್ಲೂ ಎಲ್ಲದಕ್ಕೂ ಧಾವಂತ. ಪ್ರತಿಯೊಂದೂ ಪ್ರತಿಯೊಬ್ಬರ ನಿರೀಕ್ಷೆಯಂತೆ ಪರಿಪೂರ್ಣವಾಗಿರಬೇಕು. ಒಂದು ಮಗು ಹುಟ್ಟುತ್ತಲೇ ಐದಾರು ಭಾಷೆ, ಸಾಮಾನ್ಯ ಜ್ಞಾನದಲ್ಲಿ ಪರಿಣತನಾಗಿರಬೇಕು. ಮುದ್ದು ಕಂಗಳು ಅರಳುವ ಮೊದಲೇ ಇಡಿಯ ವಿಶ್ವದ ಜ್ಞಾನ ಅಲ್ಲಿ ಕಾಣಿಸಬೇಕು. ಹೆತ್ತವರಿಗೆ ತಡೆಯಲಾರದ ನಿರೀಕ್ಷೆ. ತಾನು ತನ್ನ ಬಾಲ್ಯ ಹೇಗೆ ಕಳೆದೆನೋ ತನಗಿದ್ದ ಖುಷಿಯೇನೋ ಒಂದೂ ನೆನಪಿರದಂತೆ ಪುಟ್ಟ ಮಕ್ಕಳನ್ನು ವಿಷಯಗಳನ್ನು ಬಾಯಿಪಾಠ ಮಾಡುವ ಯಂತ್ರಗಳಾಗಿ ಮಾಡಿಬಿಡುತ್ತಾರೆ. ಒಟ್ಟಿನಲ್ಲಿ ಇರುವ ಒಂದು ಮಗು ಅಥವಾ ಇಬ್ಬರು ಮಕ್ಕಳು ಹತ್ತು ಜನರಿದ್ದರೆ ಪೂರೈಸಬಲ್ಲ ನಿರೀಕ್ಷೆಗಳನ್ನೆಲ್ಲ ಪೂರೈಸಬೇಕು. ಪರಿಣಾಮ ಮುಗ್ಧತೆ ನಳನಳಿಸುತ್ತಿರಬೇಕಾದ ಕಂದಮ್ಮಗಳು, ಅದೇ ತಾನೇ ನಸುನಗುವ ಗುಲಾಬಿ ಎಸಳಂತೆ ಇರುವ ಅವರ ಮನಸ್ಸು ಬದುಕನ್ನು ಕಂಡು ಮುಗಿಸಿದವರಂತೆ ನಿರ್ಲಿಪ್ತವಾಗುತ್ತವೆ. ಇಲ್ಲವೇ, ತಾನೇ ಎಲ್ಲವನ್ನೂ ಅರಿತಿರುವ ಪ್ರಕಾಂಡ ಪಂಡಿತನಂತೆ ಅಹಂಕಾರ ವ್ಯಕ್ತಪಡಿಸುತ್ತವೆ. ಬದುಕಿನಲ್ಲಿ ಕುತೂಹಲವನ್ನೆಲ್ಲ ಕಳೆದುಕೊಂಡಂತೆ ಬಾಳುವುದೇ ಅವರ ಸ್ಥಿತಿಯಾಗುತ್ತದೆ.

ಒಂದು ಮಗು ಅತ್ಯಂತ ಬುದ್ಧಿವಂತನಾಗಿರಬಹುದು. ಮುಖದಲ್ಲಿಯೇ ಆ ಕಳೆ ಗೋಚರಿಸುತ್ತಿರಲೂಬಹುದು. ಹಾಗೆಂದ ಮಾತ್ರಕ್ಕೆ ಅದರ ವಯಸ್ಸಿನ ಪರಿವೆಯೇ ಇಲ್ಲದಂತೆ ಮಿತಿಮೀರಿ ನಿರೀಕ್ಷಿಸುವುದು ಸರಿಯೇ? ಬುದ್ಧಿವಂತಿಕೆಯಲ್ಲಿ ಹಲವು ವಿಧಗಳಿವೆ ಎಂಬುದು ಸರ್ವವಿದಿತ. ಆದರೆ, ಭಾವನಾತ್ಮಕ ಬುದ್ಧಿವಂತಿಕೆಯ ಬಗ್ಗೆ, ಬದುಕಿನ ಯಶಸ್ಸಿನಲ್ಲಿ ಅದರ ಅಗತ್ಯತೆಯ ಬಗ್ಗೆ ಬಹುತೇಕರು ಆಲೋಚನೆಯೇ ಮಾಡುವುದಿಲ್ಲ. ಒಂದು ವಿಷಯವನ್ನು ಸಮರ್ಪಕವಾಗಿ ಗ್ರಹಿಸಿಕೊಂಡು, ಯಾವುದೇ ಸವಾಲನ್ನು ಎದುರಿಸಲು, ಪರಿಹರಿಸಲು ಅದನ್ನು ಬಳಸಬಲ್ಲ ಸಾಮರ್ಥ್ಯ ವ್ಯಕ್ತಿಗಿದ್ದಲ್ಲಿ ಅದು ಅವನ ಬುದ್ಧಿವಂತಿಕೆ. ಇಂಟೆಲಿಜೆಂಟ್‌ ಖೋಷಂಟ್‌ ಎಂಬುದು ವ್ಯಕ್ತಿಯ ಬುದ್ಧಿಮತ್ತೆಯನ್ನು ಅಳೆಯಲು ಬಳಸುವ ಪರೀಕ್ಷೆ.

ಸಾಮಾನ್ಯ ಜನರಲ್ಲಿ ಇದು 90 ರಿಂದ 110 ಇರುತ್ತದೆ. ಹೆಚ್ಚಿದ್ದರೆ ಅವರು ಹೆಚ್ಚು ಜಾಣರಾಗಿರುತ್ತಾರೆ, 85ಕ್ಕಿಂತ ಕಡಿಮೆಯಾದಲ್ಲಿ ಸಾಮಾನ್ಯ ಭಾಷೆಯಲ್ಲಿ ನಾವೆನ್ನುವ ದಡ್ಡತನ ಇರುತ್ತದೆ. ಈ ಬುದ್ಧಿವಂತಿಕೆಯು ಜನರಿಗೆ ಸುಲಭವಾಗಿ ಗೋಚರಿಸುವಂಥದ್ದು. ಆದರೆ, ಇದಕ್ಕಿಂತ ಕಠಿಣವಾದ ಬುದ್ಧಿವಂತಿಕೆಯೆಂದರೆ ಭಾವನಾತ್ಮಕ ಬುದ್ಧಿವಂತಿಕೆ.

ಇಮೋಷನಲ್‌ ಖೋಷಂಟ್‌ ಮುಖೇನ ಇದನ್ನು ಅಳೆಯಲಾಗುತ್ತದೆ. ನಮ್ಮ ಮತ್ತು ನಮ್ಮ ಸುತ್ತಲಿರುವ, ನಮ್ಮೊಂದಿಗೆ ವ್ಯವಹರಿಸುವ ವ್ಯಕ್ತಿಗಳ ಭಾವನೆಗಳನ್ನು ಅರಿಯಬಲ್ಲ ಸಾಮರ್ಥ್ಯ, ಇತರರಿಗೆ ತೀರಾ ಘಾಸಿಯಾಗದಂತೆ ಒಂದು ವಿಷಯವನ್ನು ಹೇಳುವ ಚಾಕಚಕ್ಯತೆ ನಮ್ಮ ಭಾವನಾತ್ಮಕ ಬುದ್ಧಿವಂತಿಕೆಯನ್ನು ನಿರ್ಧರಿಸುತ್ತದೆ. ಇವೆರಡರ ನಡುವೆ ಸಮತೋಲನ, ಹೊಂದಾಣಿಕೆ ಇಲ್ಲದೇ ಹೋದಲ್ಲಿ ಯಾರಿಗೂ ಯಾವುದೇ ಯಶಸ್ಸು ದೊರೆಯಲು ಸಾಧ್ಯವಿಲ್ಲ.

ತರಗತಿಯಲ್ಲಿ, ಅಧ್ಯಯನದಲ್ಲಿ ಅತ್ಯಂತ ಜಾಣನಾದವನೂ ಬದುಕಿನಲ್ಲಿ ಕನಿಷ್ಠ ಹೊಂದಾಣಿಕೆಯೂ ಇಲ್ಲದೇ ಸಮಸ್ಯೆಗಳ ಮೂಟೆಗಳಾಗಿ ಮಾರ್ಪಟ್ಟು ತಮ್ಮೊಂದಿಗೆ ಇರುವವರಿಗೂ ಸದಾ ನೋವನ್ನಷ್ಟೇ ಉಣಿಸುತ್ತಾ ಬದುಕುತ್ತಾರೆ. ಜೀವನದಲ್ಲಿ ಅದಕ್ಕಿಂತ ದೊಡ್ಡ ಸೋಲು ಬೇರೇನಿದೆ?

ಹದಿನೆಂಟು ಹತ್ತೂಂಭತ್ತನೆಯ ಶತಮಾನದ ಅವಧಿಯಲ್ಲಿ ಬದುಕಿದ್ದ ಪ್ರಸಿದ್ಧ ಕವಿ ವಿಲಿಯಂ ಬ್ಲೇಕ್‌ ಔಪಚಾರಿಕ ಶಿಕ್ಷಣದ ಕೊರತೆಗಳನ್ನು ಎತ್ತಿ ಹಿಡಿಯುವಂತೆ “ದ ಸ್ಕೂಲ್‌ ಬಾಯ್‌’ ಎಂಬ ಪದ್ಯ ಬರೆದಿದ್ದಾನೆ. ಆ ಹುಡುಗನಿಗೆ ಹಿತವಾದ ಮುಂಜಾನೆಯೆದ್ದು ಹಕ್ಕಿಗಳ ಕಲರವ ಕೇಳುತ್ತಾ, ಮರಮರದಲ್ಲೂ ಹಕ್ಕಿಗಳಿಂಚರ ಸವಿಯುತ್ತಾ, ತನ್ನ ಸಂಗಡಿಗರೊಂದಿಗೆ ವನದಲ್ಲೆಲ್ಲ ಸುತ್ತುವ ಆಸೆ. ಅದಕ್ಕೆ ವಿರುದ್ಧವಾಗಿ ಅವನ ಹೆತ್ತವರು ಅವನನ್ನು ಶಾಲೆಗೆ ಸೇರಿಸಿಬಿಟ್ಟಿದ್ದಾರೆ. ಅವನಿಗದು ಪಂಜರ ಎನಿಸುತ್ತದೆ. ಸ್ವತಂತ್ರವನ್ನು ಅನುಭವಿಸುತ್ತಾ ಸ್ವತ್ಛಂದ ಚೆಂದವಾಗಿ ಹಾರಲೆಳಸುವ, ಆ ಸ್ವಾತಂತ್ರÂಕ್ಕಾಗಿಯೇ ಹುಟ್ಟಿರುವ ಹಕ್ಕಿಯನ್ನು ಪಂಜರದಲ್ಲಿಟ್ಟು ಖುಷಿಯಾಗಿರು ಎಂದರೆ ಅದು ಹಿತವಾಗಿ ಹಾಡಬಲ್ಲುದೇ? ಬಾಲ್ಯದ ನಿರುಮ್ಮಳತೆಯನ್ನು ಅನುಭವಿಸುವುದು, ಒತ್ತಡವಿಲ್ಲದೇ ಬದುಕುವುದು ಪ್ರತಿಯೊಂದು ಮಗುವಿನ ಹಕ್ಕು. ಅದನ್ನೇ ಕಸಿದುಕೊಂಡರೆ ಆ ಮಗುವಿನ ಭವಿಷ್ಯವೇನು ಎಂಬುದು ಕವಿಯ ಪ್ರಶ್ನೆ. ಕೊನೆಯಲ್ಲಿ ಎಚ್ಚರಿಸುತ್ತಾನೆ: ವಸಂತದ ಹೊಸಿಲಲ್ಲೇ ಎಳೆಯ ಗಿಡಗಳನ್ನೆಲ್ಲ ಕಿತ್ತು/ ಅರಳಬೇಕಾದ ಮೊಗ್ಗುಗಳನ್ನು ಚಿವುಟಿ/ ಈಗಿನ್ನೂ ಅರಳಿದ ಹೂವಿನ ದಳಗಳನ್ನೆಲ್ಲ ಹರಿದು ಹಾಕಿದರೆ ಗ್ರೀಷ್ಮ ಋತು ಚೆನ್ನಾಗಿರುವುದೇ?
ಏಳೆಂಟು ವರ್ಷ ತುಂಬಿದ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೇ ಅಸಮಾಧಾನ ತೋರಿದ ಬ್ಲೇಕ್‌ ಈಗ ಜನಿಸಿದ್ದರೆ ಪಾಪ ಏನನ್ನುತ್ತಿದ್ದನೋ? ಎರಡೂವರೆ ವರ್ಷದ ಎಳೆಯ ಮಗು ಶಾಲೆಗೆ ಹೋಗಬೇಕು. ನಾಲ್ಕು ವರ್ಷಗಳಾಗುವಷ್ಟರಲ್ಲಿ ಕನಿಷ್ಠ ನಾಲ್ಕು ಭಾಷೆಯಲ್ಲಿ ಬರೆಯಲು ಕಲಿತಿರಬೇಕು. ಅನುಭವಿಸಲು ಈ ಮಕ್ಕಳಿಗೆ ಬಾಲ್ಯವೆಲ್ಲಿದೆ? ಹೋಮ್‌ ವರ್ಕ್‌ ಭರಾಟೆಯಲ್ಲಿ ನಲುಗುವ ಕಂದಮ್ಮಗಳಿಗೆ ಆಟದ ಕೀಟಲೆಯ ತುಂಟಾಟದ ಸಂಭ್ರಮವೆಲ್ಲಿದೆ? ಹೆತ್ತವರ ಈ ಗಡಿಬಿಡಿಗೆ ಪೂರಕವಾಗಿ ಎಲ್ಲ ಚಾನೆಲ್ಲುಗಳಲ್ಲೂ ರಿಯಾಲಿಟಿ ಶೋಗಳು. ಅದರಲ್ಲಿ ಮರೆಸಲ್ಪಡುವ ಪುಟಾಣಿ ಕೂಸುಗಳು. ಅವರೆಲ್ಲ ಆಮೇಲೇನಾಗುತ್ತಾರೆ? ಎಲ್ಲಿ ಹೋಗುತ್ತಾರೆ?

ಹಿರಿಯರು ಹೇಳುವಂತೆ, ಇಂದಿನ ತಲೆಮಾರಿನವರು ಅತ್ಯಂತ ಬುದ್ಧಿವಂತರು. ಅವರ ಕಾಲಕ್ಕೆ ಹೋಲಿಸಿಕೊಂಡರೆ ಬಹಳಷ್ಟು ಮುಂದೆ ಇರುವವರು. ಆದರೆ, ಇಂದಿಗೂ ಎಂಭತ್ತರ ಹರೆಯದಲ್ಲಿರುವ ಅಜ್ಜ- ಅಜ್ಜಿಯರ ನಡುವೆ ಕಾಣಸಿಗುವ ಭದ್ರ ಬಾಂಧವ್ಯ ಹೊಸ ತಲೆಮಾರಿನಲ್ಲಿಲ್ಲ. ಮೂರು ತಿಂಗಳ ಅವಧಿಯಲ್ಲಿ ಎರಡು ಸಾವಿರಕ್ಕೂ ಮೇಲ್ಪಟ್ಟು ವಿಚ್ಛೇದನ ಕೇಸುಗಳು ದಾಖಲಾಗುತ್ತವೆ. ಅವರಲ್ಲಿ ಬಹುತೇಕರು ಇನ್ನೂ ಮದುವೆಯಾಗಿ ಒಂದೆರಡು ತಿಂಗಳು ಪೂರೈಸಿದವರು.

ಅಷ್ಟು ಬೇಗ ಬದುಕನ್ನು ಮುರಿಯುವಂಥ ಒಡಕು ಅವರ ನಡುವೆ ಬಂದೀತಾದರೂ ಹೇಗೆ? ಎಲ್ಲದಕ್ಕೂ ಅವಸರವೆಂಬುದು ಹೊಂದುವುದೇ? ಕುಂತಿಗೆ ಮಗು ಜನಿಸಿತೆಂದು ಗಾಂಧಾರಿ ಒಡೆದುಕೊಂಡ ಗರ್ಭ ನೂರೊಂದು ಹೋಳಾಗಿ ಜನಿಸಿದ್ದು ಕೌರವರೆಂಬ ಮದಾಂಧರು ತಾನೇ?

ನಮ್ಮ ಮಕ್ಕಳು ಎಲ್ಲದರಲ್ಲೂ ಮುಂದಿರಬೇಕು ಎಂಬ ಅತೀವ ಹುಮ್ಮಸ್ಸಿನಿಂದ ನಮ್ಮ ಮಕ್ಕಳನ್ನು ನಾವೂ ಅದೇ ಹಾದಿಯಲ್ಲಿ ಬೆಳೆಸುತ್ತಿದ್ದೇವೆಯೇ? ನಮ್ಮ ಅಮ್ಮ ನಮಗೆ ಹೇಳಿದ ಎಂಟು ಸುಳ್ಳುಗಳನ್ನು ನಂಬುವ ಮನಸ್ಸು ನಮಗಿತ್ತು. ಅವರು ನಮ್ಮ ಖುಷಿಗಾಗಿ ಎಂಟು ನೂರು ಸುಳ್ಳುಗಳನ್ನು ಹೇಳಿದರೂ ಅದು ಸುಳ್ಳೆಂದರಿಯದೇ ನಂಬಿ ಸಂಭ್ರಮಿಸಿದೆವು. ಆ ಖುಷಿಯನ್ನು ನಮ್ಮ ಮಕ್ಕಳಿಂದ ಕಿತ್ತುಕೊಳ್ಳುವ ಅಧಿಕಾರವನ್ನು ನಮಗೆ ನೀಡಿದವರು ಯಾರು? “ಮೊಟ್ಟೆ ಒಳಗಿನ ಒತ್ತಡದಿಂದ ಒಡೆದರೆ ಮರಿ ಜನಿಸಿರುತ್ತದೆ, ಆ ಒತ್ತಡದ ಬದಲು ಹೊರಗಿಂದ ಒಡೆದರೆ ಜೀವ ಸತ್ತಿರುತ್ತದೆ’ ಎಂಬ ಮಾತು ಇಂದಿನ ಪೋಷಕರಿಗೆ ಮನನವಾಗಬೇಕಿದೆ.

– ಆರತಿ ಪಟ್ರಮೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.