ತಿನ್ತಾ ತಿನ್ತಾ ಪ್ರಿ ವೆಡ್‌ ಪೋಸು

Team Udayavani, Jan 24, 2018, 2:37 PM IST

27-29.jpg

ಇವರ ಮದುವೆಯ ಊಟ ಹೇಗಿರುತ್ತದೋ ಗೊತ್ತಿಲ್ಲ. ಆದರೆ, ಥರಹೇವಾರಿ ತಿಂಡಿ- ತಿನಿಸುಗಳ ಜೊತೆಗೆ ಇವರು ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದವರಿಗೆ, ಅಯ್ಯೋ, ಹೀಗೂ ಫೋಟೋಶೂಟ್‌ ಮಾಡಿಸ್ತಾರಾ ಅಂತ ಅನ್ನಿಸದೇ ಇರದು… 

ಕೆಲ ವರ್ಷಗಳ ಹಿಂದೆ ಮದುವೆಯ ಸಂಭ್ರಮ ಅಂದರೆ, ನಿಶ್ಚಿತಾರ್ಥ, ಮೆಹಂದಿ, ಮದುವೆ, ರಿಸೆಪ್ಷನ್‌ ಅಷ್ಟೇ ಆಗಿತ್ತು. ಆದರೆ, ಈಗ ಆ ಸಾಲಿಗೆ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಸಹ ಸೇರಿಕೊಂಡಿದೆ. ಜೀವನದ ಅತಿ ಪ್ರಮುಖ ಘಟ್ಟದ, ಸುಮಧುರ ಕ್ಷಣಗಳನ್ನು ಜೀವನ ಪೂರ್ತಿ ನೆನಪಿನಲ್ಲಿರುವಂತೆ ಸೆರೆ ಹಿಡಿಯಲಾಗುತ್ತಿದೆ. 

ಈ ಪ್ರಿ ವೆಡ್‌ ಫೋಟೋಶೂಟ್‌ಗೆ ಶಾಸ್ತ್ರ, ಸಂಪ್ರದಾಯದ ಹಂಗಿಲ್ಲ. ಆದರೂ, ಎಲ್ಲರ ಪ್ರಿ ವೆಡ್ಡಿಂಗ್‌ ಶೂಟ್‌ ಹೆಚ್ಚಾ ಕಡಿಮೆ ಒಂದೇ ರೀತಿ ಇರುತ್ತದೆ. ಹುಡುಗ ಹುಡುಗಿ ಕೈ ಹಿಡಿದು ನಡೆಯುವುದು, ಹುಡುಗ ಮಂಡಿಯೂರಿ ಕುಳಿತು ಪ್ರಪೋಸ್‌ ಮಾಡುವುದು, ಪ್ರಕೃತಿಯ ನಡುವೆ ಹೆಜ್ಜೆ ಹಾಕುವುದು, ಹುಡುಗಿಯ ಹಣೆಗೆ ಹೂ ಮುತ್ತನ್ನಿಡುವುದು, ಹೂವು, ಗ್ರೀಟಿಂಗ್ಸ್‌, ಚಾಕೊಲೇಟ್‌, ಟೆಡ್ಡಿ ಬೇರ್‌, ಕಡಲ ತೀರ… ಆದರೆ, ಇಲ್ಲೊಂದು ಜೋಡಿಯಿದೆ. ಇವರ ಪ್ರಿ ವೆಡ್ಡಿಂಗ್‌ ಶೂಟ್‌ ಎಷ್ಟು ಡಿಫ‌ರೆಂಟಾಗಿದೆ ಅಂದರೆ, ನೋಡಿದವರು, “ಅಯ್ಯೋ ಇವರೇನು ಬಕಾಸುರರಾ?’ ಅಂತ ಹುಬ್ಬೇರಿಸುವಂತಿದೆ.

ಮುಂಬೈನ ವಿಶಾಖಾ ಪ್ರಸಾದ್‌ ಹಾಗೂ ವಿನೀತ್‌ ಮೆಹ್ತಾ ಸದ್ಯದಲ್ಲೇ ಸಪ್ತಪದಿ ತುಳಿಯಲಿರುವ ಜೋಡಿ. ಎಲ್ಲರಂತೆ ಇವರೂ ಪ್ರಿ ವೆಡ್‌ ಶೂಟ್‌ ಮಾಡಿಸಿಕೊಂಡರು. ಆದ್ರೆ, ಬೇರೆಯವರಿಗಿಂತ ತಮ್ಮ ಫೋಟೋಶೂಟ್‌ ಭಿನ್ನವಾಗಿರಬೇಕು ಅಂತ ಯೋಚಿಸಿ, ಇಬ್ಬರಲ್ಲೂ ಇರುವ ಒಂದು ಕಾಮನ್‌ ಸಂಗತಿಯನ್ನು ತಮ್ಮ ಫೋಟೊ ಥೀಮ್‌ ಆಗಿಸಿಕೊಂಡರು. ಆ ಕಾಮನ್‌ ಅಂಶ ಯಾವುದು ಗೊತ್ತಾ? 

“ಆಹಾರ ಪ್ರೀತಿ’!  
ಹೌದು, ಅವರಿಬ್ಬರಿಗೂ ತಿನ್ನೋದು ಅಂದರೆ ತುಂಬಾ ಇಷ್ಟ. ಮುಂಬೈನ ಬಹುತೇಕ ಎಲ್ಲ ಹೋಟೆಲ್‌, ಡಾಬಾ, ರೆಸ್ಟೋರೆಂಟ್‌, ಚಾಟ್‌ ಸ್ಟ್ರೀಟ್‌ನ ರುಚಿ ನೋಡಿರೋ ಇವರು ತಮ್ಮ ಪ್ರಿ ವೆಡ್‌ ಶೂಟ್‌ನ ಥೀಮ್‌ ಆಗಿ ಆರಿಸಿಕೊಂಡಿದ್ದು “ಫ‌ುಡ್‌’ ಅನ್ನೇ. ನಾವಿಬ್ಬರೂ ಬದುಕೋದಕ್ಕಾಗಿ ತಿನ್ನೋದಲ್ಲ, ತಿನ್ನೋದಕ್ಕಾಗೇ ಬದುಕಿದ್ದೇವೆ ಅನ್ನೋ ಇವರು, ತಮಗಿಷ್ಟದ ತಿನಿಸು ಸಿಗುವ ಎಲ್ಲ ತಾಣಗಳಲ್ಲೂ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

ಮದುವೆಗೂ ಸ್ವಲ್ಪ ದಿನಗಳ ಮುನ್ನ ಸೌಂದರ್ಯ, ಫಿಟೆ°ಸ್‌ ಕಾಪಾಡಿಕೊಳ್ಳೋದು ತುಂಬಾ ಮುಖ್ಯ. ಹಾಗಾಗಿ ಊಟ- ತಿಂಡಿ ಬಗ್ಗೆ ಗಮನ ಹರಿಸಬೇಕು ಅನ್ನುವವರ ಮಧ್ಯೆ ವಿಶಾಖ- ವಿನೀತ್‌ ಭಿನ್ನವಾಗಿ ಕಾಣಿಸುತ್ತಾರೆ. ತಾವು ಮೊದಲು ಭೇಟಿಯಾದ ರೆಸ್ಟೋರೆಂಟ್‌, ಆಗಾಗ ಹೋಗುವ ಹೋಟೆಲ್‌, ಪಾನ್‌ ಶಾಪ್‌, ಕಾಫಿ ಶಾಪ್‌, ಬೀದಿ ಬದಿಯ ಚಾಟ್ಸ್‌… ಹೀಗೆ ಎಲ್ಲ ಕಡೆಗೂ ಹೋಗಿ ತಿಂದು, ತಿನ್ನಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆಹಾರವೇ ಜೀವನ, ಜೀವನವೇ ಪ್ರೀತಿ ಅನ್ನುವ ಹಾಗೆ ಇವರ ಫೋಟೊಗಳಲ್ಲಿ “ಆಹಾರ ಪ್ರೀತಿ’ ಎದ್ದು ಕಾಣುತ್ತಿದೆ.

ರೋಸ್‌ ಅಲ್ಲ ಫ್ರೈಸ್‌
ಗುಲಾಬಿ ಹೂವು ಅಥವಾ ಚಿನ್ನದುಂಗುರ ಹಿಡಿದು, ಮಂಡಿಯೂರಿ ಕುಳಿತು ಪ್ರಪೋಸ್‌ ಮಾಡೋದು ಗೊತ್ತೇ ಇದೆ. ವಿನೀತ್‌ ಸಹ ಮಂಡಿಯೂರಿ ಕುಳಿತು ವಿಶಾಖಾಗೆ ಪ್ರಪೋಸ್‌ ಮಾಡಿದ್ದೇನೋ ನಿಜ. ಆದ್ರೆ, ಕೈಯಲ್ಲಿ ಇದ್ದದ್ದು ರೋಸ್‌ ಅಲ್ಲ, ಬದಲಿಗೆ ಆಕೆಯ “ಹಾಟ್‌’ ಫೇವರಿಟ್‌ ಫ್ರೆಂಚ್‌ ಫ್ರೈಸ್‌!

ಫ‌ುಡ್‌ ಗೈಡ್‌
ಇವರ ಫೋಟೋಶೂಟ್‌ ನೋಡಿದರೆ, ಮುಂಬೈಗೆ ಹೋದರೆ ಏನನ್ನೆಲ್ಲಾ ತಪ್ಪದೇ ತಿನ್ನಬೇಕು ಅನ್ನೋದು ಗೊತ್ತಾಗುತ್ತೆ. ಯಾಕಂದ್ರೆ, ಇವರು ತೆಗೆಸಿಕೊಂಡ ಫೋಟೋಗಳು ಫ‌ುಡ್‌ಗೆçಡ್‌ ಇದ್ದ ಹಾಗೇ ಇವೆ. ಯಾವ ಹೋಟೆಲ್‌ನಲ್ಲಿ ಏನು ಸ್ಪೆಷೆಲ್‌ ಅಂತ ಈ ಜೋಡಿಗೆ ಚೆನ್ನಾಗಿ ಗೊತ್ತು. ಫೇಸ್‌ಬುಕ್‌ನಲ್ಲಿ “ಸಂಸಾರ ಫೋಟೊಗ್ರಫಿ’ ಪೇಜ್‌ನಲ್ಲಿ ಇವರ ಪ್ರಿ ವೆಡ್ಡಿಂಗ್‌ ಫೋಟೋಗಳನ್ನು ನೋಡಬಹುದು. 

ಈ ಜೋಡಿಯ ವಿವಾಹ ಮಹೋತ್ಸವ ಜ.21ರಂದು ಗೋವಾದಲ್ಲಿ ನಡೆಯಲಿದೆ. ಈ ಫ‌ುಡ್ಡಿಗಳ ಮದುವೆಯ ಊಟದ ಮೆನುವಿನಲ್ಲಿ ಏನೇನೆಲ್ಲಾ ಇರಬಹುದು, ಅಲ್ವಾ?

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.