ಲವ್ಲಿ ಸ್ಟಾರ್‌ “ಜ್ಯೋತಿ’


Team Udayavani, Feb 14, 2018, 12:10 PM IST

prem.jpg

ಜ್ಯೋತಿ, ಲವ್ಲಿ ಸ್ಟಾರ್‌ ಪ್ರೇಮ್‌ ಅವರ ಪತ್ನಿ. ಪ್ರೇಮ್‌ರನ್ನು ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದವರು. “ನಾವು ದಂಪತಿ ಥರಾ ಇಲ್ಲ, ಈಗಲೂ ನಾವು ಪ್ರೇಮಿಗಳೇ’ ಎನ್ನುತ್ತಾರೆ ಜ್ಯೋತಿ. ಬಹಳ ನಾಚಿಕೆ ಸ್ವಭಾವದ ಇವರು ಹೊರಗೆ ಕಾಣಿಸಕೊಳ್ಳುವುದೂ ಅಪರೂಪವೇ. ಮದುವೆಯಾಗಿ 17 ವರ್ಷಗಳಾಗಿವೆ. ಆದರೂ ಇಬ್ಬರೂ ಇಷ್ಟು ಯಂಗ್‌ ಆಗಿರಲು ಕಾರಣ ಏನೆಂದು ಕೇಳಿದರೆ, “ಪ್ರೀತಿ ಮತ್ತು ಸಂತೋಷ’ ಅನ್ನುತ್ತಾರೆ ನಗುತ್ತಾ. ಈ ಪ್ರೇಮಿಗಳ ದಿನ ಪ್ರೇಮ್‌ ಮತ್ತು ಜ್ಯೋತಿ ಅವರ ದಾಂಪತ್ಯ ಗೀತೆ ಇಲ್ಲಿದೆ. 

“ಐ ಲವ್‌ ಯು’ ಮೆಸೇಜ್‌ ತಪ್ಪಿಸಲ್ಲ! 
ಪ್ರೇಮ್‌ ಮನೆಯಲ್ಲೇ ಇರಲಿ ಅಥವಾ ಶೂಟಿಂಗ್‌ಗೆ ಅಂತ ಬೇರೆ ಕಡೆಗೇ ಹೋಗಿರಲಿ, ಅವರು ಎದ್ದ ಕೂಡಲೆ ನನಗೆ “ಐ ಲವ್‌ ಯೂ’ ಅಂತ ಮೆಸೇಜ್‌ ಕಳಿಸೋದನ್ನು ಮರೆಯೋದಿಲ್ಲ. ನಾನೂ ಅದಕ್ಕೆ ರಿಪ್ಲೆ„ ಮಾಡುತ್ತೇನೆ. ಕೆಲವೊಮ್ಮೆ ಮೆಸೇಜ್‌ ಕಳಿಸುವಾಗ ಅವರು ನನ್ನ ಪಕ್ಕದಲ್ಲೇ ಇರುತ್ತಾರೆ! 

ದಿನಾ ಜಗಳ ಮಾಡ್ತಿದ್ದೆ
ಅವರ ಮೊದಲ ಸಿನಿಮಾ ಶೂಟಿಂಗ್‌ ನಡೆಯುವಾಗ ಮನೆಯಲ್ಲಿ ದಿನಾ ಜಗಳ ನಡೆಯುತ್ತಿತ್ತು. ಅವರಿಗೆ 2003ರಲ್ಲಿ “ಪ್ರಾಣ’ ಚಿತ್ರದ ನಾಯಕ ನಟನಾಗಿ ಅವಕಾಶ ಸಿಕ್ಕಿತು. ನಮಗೆಲ್ಲಾ ಸಿನಿಮಾ ಪ್ರಪಂಚ ಬಹಳಾ ಹೊಸತು. ನಮ್ಮ ನೆಂಟರಿಷ್ಟರು, “ಸಿನಿಮಾ ಪ್ರಂಪಂಚ ಕೆಟ್ಟದ್ದು. ಹುಡುಗರು ಬೇಗ ಹಾದಿ ತಪ್ಪುತ್ತಾರೆ. ಪ್ರೇಮ್‌ ತುಂಬಾ ಹ್ಯಾಂಡ್‌ಸಮ್‌ ಇದ್ದಾರೆ. ಅವರು ಬೇರೆ ಹೆಣ್ಣಿನ ಸಹವಾಸ ಮಾಡಿದರೆ ನಿನ್‌ ಕಥೆ ಏನು?’ ಅಂತೆಲ್ಲಾ ಹೆದರಿಸುತ್ತಿದ್ದರು. ನಾನು ತುಂಬಾ ಹೆದರಿಕೊಂಡು ದಿನಾ ಪ್ರೇಮ್‌ ಜೊತೆ ಜಗಳವಾಡುತ್ತಿದ್ದೆ. “ಪ್ರಾಣ’ ಸಿನಿಮಾದ ಶೂಟಿಂಗ್‌ ಮುಗಿಯುವವರೆಗೂ ಮನೆಯಲ್ಲಿ ಶಾಂತಿಯೇ ಇರಲಿಲ್ಲ. ಆಮೇಲೆ, “ನನ್ನ ಗಂಡ ಎಂಥವನು ಅಂತ ನನಗೆ ಗೊತ್ತು’ ಎಂದು ಹೆದರಿಸುವವರಿಗೆ ಬೈದು ಬಾಯಿ ಮುಚ್ಚಿಸೋದನ್ನು ಕಲಿತೆ.

ಈಗಲೂ ನಾವು ಲವರೆÕà
ಮದುವೆಯಾಗಿ 17 ವರ್ಷವಾದರೂ ನಮಗೆ ನಮ್ಮ ಸಂಬಂಧ ಹಳತು ಅಂತ ಅನ್ನಿಸೇ ಇಲ್ಲ. ಮೊದಲು ಹೇಗೆ ಅವರು ನನಗೆ ಸಮಯ ನೀಡುವುದಿಲ್ಲ ಅಂತ ಜಗಳ ಮಾಡುತ್ತಿದ್ದೆನೋ ಈಗಲೂ ಹಾಗೆ ಜಗಳ ಮಾಡುತ್ತೇನೆ. ಇಬ್ಬರೇ ಸಮಯ ಕಳೆಯುವುದನ್ನು ಈಗಲೂ ಇಷ್ಟ ಪಡುತ್ತೇವೆ. ವ್ಯಾಲೆಂಟೈನ್ಸ್‌ ಡೇ, ಆ್ಯನಿವರ್ಸರಿ ಎಲ್ಲಾ ನಮಗೆ ಹಬ್ಬ ಇದ್ದ ಹಾಗೆ. ಯಾವ ವರ್ಷವೂ ಮಿಸ್‌ ಮಾಡುವುದಿಲ್ಲ. ಈಗಲೂ ನವ ಜೋಡಿಯಂತೆ ಜಗಳವಾಡುತ್ತೇವೆ. ನನ್ನ ಮಗಳು ಛೇಡಿಸ್ತಾ ಇರ್ತಾಳೆ, “ಏನಮ್ಮಾ ನೀನು, ಇನ್ನೂ ಹೊಸದಾಗಿ ಮದುವೆಯಾದವಳ ಥರಾ ಆಡ್ತೀಯಾ’ ಅಂತ.

-ಇದು ನಿಮ್ಮ ಎಷ್ಟನೇ ವ್ಯಾಲೆಂಟೈನ್ಸ್‌ ಡೇ?
ಮದುವೆಗೂ ಮೊದಲು 3 ವರ್ಷ, ಮದುವೆಯಾಗಿ 17 ವರ್ಷ. ಒಟ್ಟಿನಲ್ಲಿ ಇದು 20ನೇ ವ್ಯಾಲೆಂಟೈನ್ಸ್‌ ಡೇ.

-ನಿಮ್ಮ ವ್ಯಾಲೆಂಟೈನ್ಸ್‌ ಡೇ ಸೆಲೆಬ್ರೇಷನ್‌ ಹೇಗಿರುತ್ತದೆ?
ಗ್ರೀಟಿಂಗ್‌ ಕಾರ್ಡ್ಸ್‌, ಹೂಗುತ್ಛ, ಉಡುಗೊರೆಗಳನ್ನು ಪ್ರೇಮ್‌ ಅವರೇ ಕೊಡುತ್ತಾರೆ. ಪ್ರತಿ ವ್ಯಾಲೆಂಟೈನ್ಸ್‌ ಡೇ, ಆ್ಯನಿವರ್ಸರಿ ದಿನ ಅವರು ಜೊತೆಗಿರಬೇಕು ಎಂದು ನಾನು ಬಯಸುತ್ತೇನೆ. ಅವರೂ ಬಿಡುವು ಮಾಡಿಕೊಂಡು ಜೊತೆಯಲ್ಲಿ ಇರುತ್ತಾರೆ. ಅವರ ಜೊತೆಗಿರುವುದೇ ಸೆಲೆಬ್ರೇಷನ್‌ ನನಗೆ. ಆದರೆ, ಯಾವ ವರ್ಷವೂ ಸೆಲೆಬ್ರೇಟ್‌ ಮಾಡುವುದನ್ನು ತಪ್ಪಿಸಿಲ್ಲ. ಅವರು ಉಡುಗೊರೆ ಕೊಟ್ಟು ಲವ್‌ ಎಕ್ಸ್‌ಪ್ರೆಸ್‌ ಮಾಡುತ್ತಾರೆ. ನಾನು ಮಾತಿನ ಮೂಲಕವೇ ಅದನ್ನು ಅಭಿವ್ಯಕ್ತಿ ಮಾಡುವವಳು. 

-ಪ್ರೀತಿಸುವಾಗ ಯಾವಾಗಲಾದರೂ ಅಂದುಕೊಂಡಿದ್ರಾ ಪ್ರೇಮ್‌ ಒಂದು ದಿನ ಸ್ಟಾರ್‌ ನಟ ಆಗ್ತಾರೆ ಅಂತ?
ಪ್ರೀತಿಸುವಾಗ ಅಲ್ಲ, ಮದುವೆಯಾದ ಮೇಲೂ ಅಂದುಕೊಂಡಿರಲಿಲ್ಲ. ಆದರೆ ಅವರಿಗೆ ಮೊದಲಿನಿಂದಲೂ ಹಾಡುವುದರಲ್ಲಿ ಆಸಕ್ತಿ ಇತ್ತು. ಆರ್ಕೆಸ್ಟ್ರಾಗಳಲ್ಲಿ, ಮದುವೆ ರಿಸೆಪ್ಷನ್‌ಗಳಲ್ಲಿ ಹಾಡ್ತಾ ಇರೋರು. ಕೆಲವೊಮ್ಮೆ ಅವರಿಗೆ ಇಷ್ಟ ಇಲ್ಲದೇ ಇದ್ದರೂ ಸ್ನೇಹಿತರು ಒತ್ತಾಯವಾಗಿ ಕರೆದುಕೊಂಡು ಹೋಗಿ ಹಾಡಿಸ್ತಾ ಇದ್ದರು. ಆಗಲೂ ಅವರು ಅದನ್ನು ಹವ್ಯಾಸ ಎಂದೇ ಪರಿಗಣಿಸಿದ್ದರು. ಇನ್ನು ಇವರು ಹೀರೊ ಆಗ್ತಾರೆ ಅಂತ ಕಲ್ಪನೆಯೂ ನನಗಿರಲಿಲ್ಲ.

-ಪ್ರೀತಿ ಮಾಡುವಾಗ ಪ್ರೇಮ್‌ ಕಡೆಯಿಂದ ನಿಮ್ಮ ನಿರೀಕ್ಷೆಗಳು ಏನಿದ್ದವು?
ಪ್ರೀತಿ ಮಾಡುವಾಗ ಕಣ್ಣು ಕುರುಡಾಗಿರುತ್ತದೆ ಎನ್ನುತ್ತಾರಲ್ಲ, ಹಾಗೆ ನನಗೂ ಕಣ್ಣು ಕುರುಡಾಗಿತ್ತು. ಆಗ ಅವರು ಪವರ್‌ಲೂಮ್‌ ನೋಡಿಕೊಳ್ಳುತ್ತಿದ್ದರು. ಅವರ ಆದಾಯ ಎಷ್ಟಿದೆ, ಎಷ್ಟು ಸಂಪಾದನೆ ಮಾಡುತ್ತಾರೆ ಅಂತ ಯೋಚಿಸ್ತಾನೂ ಇರಲಿಲ್ಲ. ಅವರಿಗೆ ಜವಾಜಾªರಿ ಇತ್ತು. ಹಗಲೂ ರಾತ್ರಿ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದರು. ತಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಬಗ್ಗೆ ನನಗೆ ಭರವಸೆ ಇತ್ತು. ಅದೇ ಭರವಸೆಯಲ್ಲೇ ಮದುವೆಯಾದೆ.

-ಮದುವೆಗೆ ಮನೆಯವರು ಒಪ್ಪಿದ್ರಾ? ಹೇಗೆ ಒಪ್ಪಿಸಿದ್ರಿ?
ನಮ್ಮದು ತುಂಬಾ ಸಂಪ್ರದಾಯಸ್ಥರ ಕುಟುಂಬ. ನಾನು ಮನೆಯವರ ಮುಂದೆ ನಿಂತು ನಾನೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅಂತ ಹೇಳುವುದನ್ನ ಊಹಿಸಲೂ ಸಾಧ್ಯವಿರಲಿಲ್ಲ. ಅದಕ್ಕೆ ಪ್ರೇಮ್‌ ಅವರೇ ನಮ್ಮ ಮನೆಗೆ ಬಂದು ಹೆಣ್ಣು ಕೇಳಿದರು. ನಮ್ಮ ಮನೆಯಲ್ಲಿ ಎಲ್ಲರೂ ಖುಷಿಯಿಂದಲೇ ಒಪ್ಪಿ ಮದುವೆಗೆ ದಿನಾಂಕ ನಿಗದಿ ಪಡಿಸಿದ್ದರು. ಆದರೆ ಮಧ್ಯದಲ್ಲಿ ಮೂರನೆಯವರ್ಯಾರೋ ಬಂದು ಹುಳಿ ಹಿಂಡಿದರು. ನಮ್ಮ ಕುಟುಂಬದವರು ಮದುವೆಯನ್ನು ಏಕಾಏಕಿ ರದ್ದು ಮಾಡಿದರು. ಆದರೆ ನಾವು ಧೃಡವಾಗಿದ್ದವು. ನಾವೇ ಸ್ನೇಹಿತರ ಸಹಾಯದಿಂದ ಮದುವೆಯಾದೆವು. ನಮ್ಮ ಮನೆಯವರೂ ವೈಮನಸ್ಸನ್ನು ಮುಂದುವರಿಸಲಿಲ್ಲ. ಕೊನೆಗೆ ಎಲ್ಲಾ ಸುಖಾಂತ್ಯವಾಯಿತು.

-ಪ್ರೇಂ ಅವರ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಮತ್ತು ಯಾಕೆ?
ನನಗೆ ಅವರ “ಜೊತೆ ಜೊತೆಯಲಿ’ ತುಂಬಾ ಇಷ್ಟ. ಆ ಸಿನಿಮಾದಲ್ಲಿ ಏನು ನಡೆಯುತ್ತೋ, ಆಗ ನಮ್ಮ ಮನೆಯಲ್ಲೂ ಅದೇ ನಡೆಯುತ್ತಿತ್ತು. ನನಗೆ ಸಮಯ ಕೊಡಲ್ಲ ಅಂತ ನಾನು ಯಾವಾಗಲೂ ಅವರ ಜೊತೆ ಜಗಳ ಕಾಯುತ್ತಿದ್ದೆ. ಅವರು ನನಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದರು. ಆ ಸಿನಿಮಾ ನೋಡುವಾಗ ನನಗೆ ಪ್ರೇಮ್‌ ಮನೆಯಲ್ಲೇ ಇದ್ದು ಹೀಗೆಲ್ಲಾ ಮಾಡ್ತಾ ಇದ್ದಾರೆ ಅಂತನ್ನಿಸುತ್ತಿತ್ತು. ತುಂಬಾ ಕನೆಕ್ಟ್ ಆಗಿತ್ತು ಆ ಸಿನಿಮಾ. 

-ನೀವಿಬ್ಬರೂ ಲವ್‌ ಮಾಡುವಾಗ ನೋಡಿದ ಮೊದಲ ಸಿನಿಮಾ ಯಾವುದು? ಅವರು ನಿಮಗೆ ಯಾವ ಹಾಡು ಡೆಡಿಕೇಟ್‌ ಮಾಡುತ್ತಿದ್ದರು? 
ಒಟ್ಟಿಗೆ ನೋಡಿದ ಮೊದಲ ಚಿತ್ರ ಗೋವಿಂದ ಅಭಿನಯದ ಹಿಂದಿ ಚಿತ್ರ “ಹಸೀನಾ ಮಾನ್‌ ಜಾಯೇಗಿ’. “ಅಮೆರಿಕ ಅಮೆರಿಕ’ ಚಿತ್ರದ “ನೂರು ಜನ್ಮಕೂ ನೂರಾರೂ ಜನ್ಮಕೂ’ ಹಾಡನ್ನು ನನ್ನ ಮುಂದೆ ಯಾವಾಗ್ಲೂ ಹಾಡ್ತಾ ಇದ್ರು. 

-ಏನೆಲ್ಲಾ ಉಡುಗೊರೆ ಕೊಡ್ತಾ ಇದ್ರು?
ರೊಮ್ಯಾಂಟಿಕ್‌ ಹಾಡುಗಳನ್ನೆಲ್ಲಾ ಕ್ಯಾಸೆಟ್‌ಗಳಲ್ಲಿ ರೆಕಾರ್ಡ್‌ ಮಾಡಿಸಿ ಕೊಡ್ತಾ ಇದ್ರು. ಆ ಹಾಡುಗಳಲ್ಲೇ ಅವರ ಟೇಸ್ಟ್‌ ಹೇಗಿದೆ ಅಂತ ತಿಳೀತಿತ್ತು. ಅದು ಆಗ ಸ್ಪೆಷಲ್‌ ಗಿಫ್ಟ್ ಆಗಿತ್ತು. ಅದು ಬಿಟ್ಟರೆ ಆಗಾಗ ಗ್ರೀಟಿಂಗ್‌ ಕಾರ್ಡ್ಸ್‌ ಮತ್ತು ಮಿಲ್ಕಿ ಬಾರ್‌ ಚಾಕೊಲೇಟ್‌ ಕೊಡ್ತಾಯಿದ್ರು.

-ಪ್ರೇಮ್‌ ಅವರ ಡಯಡ್‌ ಅನ್ನು ಯಾರು ನೋಡಿಕೊಳ್ಳುತ್ತಾರೆ?
ಅವರಿಗೆ ಪರ್ಸನಲ್‌ ಡಯಟಿಶಿಯನ್‌ ಇದ್ದಾರೆ. ಅವರೇ ಪ್ರೇಮ್‌ ಏನೆಲ್ಲಾ ತಿನ್ನಬೇಕು ಅಂತ ಪಟ್ಟಿ ಕೊಟ್ಟಿರುತ್ತಾರೆ. ಆದರೆ, ಅದನ್ನೆಲ್ಲಾ ಮನೆಯಲ್ಲಿ ಮಾಡಿ ಕೊಡುವುದು ನಾನೇ. ಅವರೇನಾದರೂ ಸಿಕ್ಸ್‌ ಪ್ಯಾಕ್‌ ಮಾಡುತ್ತಿದ್ದರೆ, ಅವರು ಇಡೀ ದಿನ ಜಿಮ್‌ನಲ್ಲಿ ಇರ್ತಾರೆ, ಆಗ ನಾನು ಇಡೀ ದಿನ ಅಡುಗೆ ಮನೆಯಲ್ಲಿ ಇರಬೇಕಾಗುತ್ತದೆ. ಗಂಟೆಗೊಮ್ಮೆ ಇವರಿಗೆ ಡಯಟ್‌ ಫ‌ುಡ್‌ ತಯಾರಿಸಿಕೊಡಬೇಕು. ಜೊತೆಗೆ ಮಕ್ಕಳಿಗೂ ಅವರ ಸಮಯಕ್ಕೆ ಸರಿಯಾಗಿ ಅಡುಗೆ ತಯಾರಿಸಬೇಕು. ನನ್ನ ಹೆಚ್ಚಿನ ಸಮಯ ಅಡುಗೆ ಮನೆಯಲ್ಲೇ ಕಳೆದುಹೋಗುತ್ತದೆ.

-ನೀವು ಯಾವ ಅಡುಗೆಯಲ್ಲಿ ಎಕ್ಸ್‌ಪರ್ಟ್‌? ಪ್ರೇಮ್‌ಗಾಗಿ ಯಾವೆಲ್ಲಾ ವಿಶೇಷ ಅಡುಗೆ ತಯಾರಿಸ್ತೀರಿ? 
ನಮ್ಮ ಮನೆಯಲ್ಲಿ ಎಲ್ಲರೂ ನಾನ್‌ವೆಜ್‌ ಪ್ರಿಯರು. ಪ್ರೇಮ್‌ಗೆ ಪ್ರತಿದಿನ ನಾನ್‌ವೆಜ್‌ ಅಡುಗೆ ಇರಲೇಬೇಕು. ನಮ್ಮ ತಾಯಿ ಮನೆಯಲ್ಲಿ ತರಕಾರಿ ಹೆಚ್ಚು ಬಳಸುತ್ತಾರೆ, ಖಾರ ಕಮ್ಮಿ. ಆದರೆ ಇಲ್ಲಿ ಖಾರ ಜಾಸ್ತಿ ಮತ್ತು ನಾನ್‌ ವೆಜ್‌ ಅಡುಗೆ ಜಾಸ್ತಿ ಮಾಡ್ತಾರೆ. ನಾನು ಈಗ ಸ್ಪೈಸಿ ಅಡುಗೆ ಮಾಡೋದನ್ನೇ ಅಭ್ಯಾಸ ಮಾಡಿಕೊಂಡಿದ್ದೇನೆ. ಮನೆಯಲ್ಲಿ ಸತ್ಯನಾರಾಯಣ ಪೂಜೆ ಅಥವಾ ವ್ರತ ಮಾಡಿದಾಗ ಅದು ಮುಗಿಯುವವರೆಗೂ ಪ್ರೇಮ್‌ ನಾನ್‌ವೆಜ್‌ ಮುಟ್ಟೋದೇ ಇಲ್ಲ. ಆಗ ನನಗೇ ಆಶ್ಚರ್ಯ ಆಗುತ್ತೆ, ಇವರು ಇಷ್ಟೊಂದು ಡಿಟರ್‌ವೆುçನ್‌x ಇದ್ದಾರ ಅಂತ.

-ಮಕ್ಕಳಿಬ್ಬರಿಗೂ ಅವರಿಗೆ ಮಾರ್ಗದರ್ಶನ ಮಾಡೋದು ಯಾರು? 
ಮೊದಮೊದಲಿಗೆ ನಾನು ಅವರ ಕಡೆ ನಿಗಾ ವಹಿಸುತ್ತಿದ್ದೆ. ಈಗ ಅವರೇ ಜವಾಬ್ದಾರಿಯಿಂದ ಓದಿಕೊಳ್ಳುತ್ತಾರೆ. ಚೆನ್ನಾಗಿ ಓದಬೇಕು ಎಂಬ ಆಸಕ್ತಿ ಅವರಿಗೇ ಇದೆ. ನನ್ನ ಮಗಳಿಗೆ ಫ‌ಸ್ಟ್‌ ಪಿಯು ಪರೀಕ್ಷೆ ಆರಂಭವಾಗಿದೆ. ಕೂತು ಓದಿಕೊಳ್ಳುತ್ತಾಳೆ. ಬೋರ್‌ ಆದರೆ ಎದ್ದು ಬಂದು ಟಿವಿ ನೋಡುತ್ತಾಳೆ. ಹೊರಗೆ ಹೋಗಿ ರಿಲ್ಯಾಕ್ಸ್‌ ಮಾಡುತ್ತಾಳೆ. 10ನೇ ತರಗತಿಯಲ್ಲೂ ಹೀಗೆ ಆರಾಮಾಗಿದ್ದುಕೊಂಡೇ ಓದಿ 95% ಪಡೆದಿದ್ದಳು. ಮಗ ಮೊದಲೆಲ್ಲಾ ನಾನು ಹೀರೊ ಆಗ್ತಿàನಿ ಅಂತ ಇದ್ದ. ಅದಕ್ಕೆ “ಹೀರೊ ಆಗಬೇಕಾದ್ರೂ ಚೆನ್ನಾಗಿ ಓದಿರಬೇಕು’ ಅಂತ ಪ್ರೇಮ್‌ ಹೇಳಿದ್ದರು. ಅವನೂ ಈಗ ಓದಿನ ಕಡೆ ತುಂಬಾ ಗಮನಹರಿಸುತ್ತಿದ್ದಾನೆ.

-ಪ್ರೇಂ ಅವರ ಯಾವ ಸ್ವಭಾವ ನಿಮಗೆ ಕೋಪ ತರಿಸುತ್ತದೆ?
ಮೊದಲೆಲ್ಲಾ ನನಗೆ ಮಾತು ಮಾತಿಗೂ ಅಳು ಬರ್ತಾ ಇತ್ತು. ಅತ್ತಾಗ ನನ್ನನ್ನು ಸಮಾಧಾನ ಮಾಡುವ ಬದಲು ಅವರು ಕೋಪಿಸಿಕೊಂಡು ಇನ್ನಷ್ಟು ಬಯ್ಯುತ್ತಿದ್ದರು. ನಾನು ಸಮಾಧಾನ ಮಾಡಲಿ ಅಂತ ನಿರೀಕ್ಷೆ ಮಾಡ್ತಿದ್ದೆ. ಆದರೆ, ಅದು ಉಲ್ಟಾ ಆಗಿರೋದು. ಆಗೆಲ್ಲ ತುಂಬಾ ಬೇಜಾರಾಗ್ತಿತ್ತು. ಸಿಟ್ಟು ಬರಿ¤ತ್ತು.

-ಪ್ರೇಂ ನಿಮಗೆ ಅಡುಗೆಯಲ್ಲಿ ಸಹಾಯ ಮಾಡ್ತಾರ?
ಅವರಿಗೆ ಏನೂ ಬರಲ್ಲ. ಹೇಳಿಕೊಡು, ನಾನು ಕಲಿಯುತ್ತೇನೆ ಅಂತ ಅಡುಗೆ ಮನೆಗೆ ಬರ್ತಾರೆ. ಒಂದಷ್ಟು ರಾದ್ಧಾಂತ ಮಾಡ್ತಾರೆ. ಅದಕ್ಕೆ ನಾನೇ ಅವರನ್ನು ಹೊರಗೆ ಓಡಿಸುತ್ತೇನೆ. ಅವರು ಕಿಚನ್‌ನಲ್ಲಿ ಇದ್ದರೆ ನನಗೆ ಡಬಲ್‌ ಕೆಲಸ.

-ನೀವು ಯಾವ ಉಡುಗೆ ತೊಟ್ಟರೆ ಪ್ರೇಮ್‌ ಅವರಿಂದ ಮೆಚ್ಚುಗೆ ಸಿಗುತ್ತದೆ?
ಸೀರೆ ಉಟ್ಟಾಗ ತಪ್ಪದೇ ಕಾಂಪ್ಲಿಮೆಂಟ್‌ ಸಿಗುತ್ತದೆ. ನಾವು ಶಾಪಿಂಗ್‌ ಹೋದಾಗಲೂ ಅವರು ಸೀರೆ ಕೊಡಿಸಲು ಜಾಸ್ತಿ ಆಸಕ್ತಿ ತೋರಿಸುತ್ತಾರೆ. 

– ಚೇತನ ಜೆ.ಕೆ.

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.