ಸೌಖ್ಯ ಸಂಧಾನ

Team Udayavani, May 16, 2018, 12:28 PM IST

soukhya.jpg

ನಾನು 42 ವರ್ಷದ ಅವಿವಾಹಿತ ಮಹಿಳೆ. ನಾನು ಏಪ್ರಿಲ್‌ ತಿಂಗಳಲ್ಲಿ ಮುಟ್ಟು ಆಗಿದ್ದೆ. ನಂತರ ಇವತ್ತಿನವರೆಗೆ ಆಗಿಲ್ಲ. ನಮ್ಮ ಮನೆ ಡಾಕ್ಟ್ರು ಮುಟ್ಟು ಆಗಲು ಮೇ ತಿಂಗಳಲ್ಲಿ 4 ದಿನದ ಮದ್ದು ಕೊಟ್ಟರು. ಆದರೂ ಆಗಲಿಲ್ಲ. ನಂತರ ಪುನಃ 4 ದಿನಕ್ಕೆ ಬೇರೆ ಮದ್ದು ಕೊಟ್ಟರು. ಆದರೂ ಆಗಲಿಲ್ಲ. ನಂತರ 20 ದಿನಕ್ಕೆ ವಿಟಮಿನ್‌ ಮಾತ್ರೆಗಳನ್ನು ಕೊಟ್ಟಿದ್ದಾರೆ. ಕೆಲವು ಸಲ ವೀಕ್‌ನೆಸ್‌ನಿಂದ ಮುಟ್ಟಾಗುವುದಿಲ್ಲ ಎಂದು ಹೇಳಿದ್ದಾರೆ. ಈಗ 15 ದಿನ ಆಯಿತು ಇನ್ನೂ ಮುಟ್ಟು ಆಗಲಿಲ್ಲ. ಹೀಗಿರುವಾಗ ಮುಟ್ಟು ನಿಂತಿದೆ ಎಂದು ತಿಳಿದುಕೊಳ್ಳಬೇಕೆ? ಅಥವಾ ಇನ್ನಾವುದಾದರು ಪರೀಕ್ಷೆ ಮಾಡಿಸಬೇಕೇ? ದಯಮಾಡಿ ತಿಳಿಸಿರಿ. ನನ್ನ ತಾಯಿಗೂ ಬೇಗ ಮುಟ್ಟು ನಿಂತಿತಂತೆ. ಅವರಿಗೆ ಸರಿಯಾದ ವರ್ಷ ಗೊತ್ತಿಲ್ಲ. 
-ಶ್ಯಾಮಲಾ, ಮಂಗಳೂರು 

ಒಂದು ವೇಳೆ ಮುಟ್ಟು ನಿಂತರೂ ಅದಕ್ಕಾಗಿ ಭಯಪಡಬೇಕಿಲ್ಲ. ಕೆಲವು ಹಾರ್ಮೋನು ಮತ್ತಿತರ ಪರೀಕ್ಷೆಗಳಿಂದ ನಿಮಗೆ ಮುಟ್ಟು ನಿಂತಿದೆಯೇ ಅಥವಾ ಋತುಬಂಧ ಹತ್ತಿರವಿದೆಯೇ ಎಂದುಕೊಳ್ಳಬಹುದು. ಸ್ತ್ರೀರೋಗ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳಿ. ಮುಟ್ಟು ನಿಲ್ಲುವುದರ ಜೊತೆಗೆ ಕೆಲವರಿಗೆ ವಿಪರೀತ ಬೆವರು, ಮುಖ, ಕುತ್ತಿಗೆಯಲ್ಲಿ ಬಿಸಿಯಾದ ಅನುಭವ, ಸುಸ್ತು ಮುಂತಾದ ಲಕ್ಷಣಗಳೂ ಕಾಣಿಸಬಹುದು. 

ನನ್ನ ವಯಸ್ಸು 23. ನನಗೆ ವಿಪರೀತ ಹಸ್ತಮೈಥುನ ಮಾಡಿಕೊಳ್ಳುವ ಚಟ ಅಂಟಿಕೊಂಡಿದೆ. ಅದನ್ನು ಹೇಗೆ ಕಂಟ್ರೋಲ್‌ ಮಾಡಬೇಕೆಂದು ತಿಳಿಯುತ್ತಿಲ್ಲ. ದಿನವೂ ಹಸ್ತಮೈಥುನ ಮಾಡಿದರೆ ಏನಾದರೂ ತೊಂದರೆ ಇದೆಯೆ? ಅದರಿಂದ ಮುಂದೆ ಮಕ್ಕಳಾಗದಿರಬಹುದೇ. ಅದರಿಂದ ಆಗುವ ದುಷ್ಪರಿಣಾಮಗಳನ್ನು ದಯವಿಟ್ಟು ತಿಳಿಸಿ. 
-ಅರವಿಂದ, ಉಡುಪಿ 

ಹಸ್ತಮೈಥುನ ಚಟವಾದರೆ ನಿಮ್ಮ ಊಟ, ತಿಂಡಿ, ನಿದ್ದೆ, ಓದು, ಹವ್ಯಾಸ ಎಲ್ಲದಕ್ಕೂ ಅಡ್ಡಿ ಉಂಟಾಗುತ್ತದೆ. ಮಾನಸಿಕ ತಜ್ಞರ ಬಳಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಆದಷ್ಟು ಮನಸ್ಸನ್ನು ಬೇರೆಡೆಗೆ ತೊಡಗಿಸಿಕೊಳ್ಳಿ. ಹಸ್ತಮೈಥುನ ಮಾಡಿಕೊಳ್ಳುವುದರಿಂದ ಮಕ್ಕಳಾಗುವುದಿಲ್ಲ ಎಂದೇನಿಲ್ಲ. ಲೈಂಗಿಕ ಒತ್ತಡವಿದ್ದಾಗ ಹಸ್ತಮೈಥುನ ಮಾಡಿಕೊಳ್ಳಬಹುದು.

ನನ್ನ ಹೆಂಡತಿಗೆ ಎರಡನೆಯ ಮಗುವಿನ ಜನನವಾಗಿ ಎರಡು ತಿಂಗಳಾಗುತ್ತಾ ಬಂತು. ಇನ್ನು ನಾವು ಎಷ್ಟು ಸಮಯದ ನಂತರ ಮಿಲನಕ್ರಿಯೆ ಮಾಡಬಹುದು ಎಂದು ನೀವು ತಿಳಿಸಬೇಕು, ಮತ್ತೆ ಈಗ ನನ್ನ ಸಮಸ್ಯೆ ಏನೆಂದರೆ, ನಾವು ಮಿಲನಕ್ರಿಯೆ ಮಾಡುವಾಗ ನನಗೆ ತುಂಬಾ ಬೇಗ ವೀರ್ಯ ಹೊರಬರುತ್ತದೆ. ಇದಕ್ಕೆ ಏನಾದರೂ ಮದ್ದು ತಿಳಿಸಿ ಮತ್ತು 69 ಲೈಂಗಿಕಾಸನದಿಂದ ಆರೋಗ್ಯಕ್ಕೆ ತೊಂದರೆ ಇದೆಯೆ? ತುಂಬ ಲೇಟಾಗಿ ವೀರ್ಯ ಹೊರಬರುವುದಕ್ಕೆ ನಾನು ಯಾವ ಮದ್ದು ತೆಗೆದುಕೊಳ್ಳಬೇಕು. ದಯಮಾಡಿ ಈ ಎಲ್ಲಾ ವಿಷಯಕ್ಕೆ ನೀವೇ ಸಹಾಯ ಮಾಡಬೇಕು. 
-ಜೀವನ್‌, ಹಾಸನ 

ನಿಮ್ಮ ಹೆಂಡತಿಗೆ ಈಗ ಯಾವುದೇ ತೊಂದರೆ ಇಲ್ಲದಿದ್ದರೆ, ಗಾಯಗಳೆಲ್ಲ ವಾಸಿಯಾಗಿದ್ದರೆ, ರಕ್ತಸ್ರಾವ ಎಲ್ಲ ಪೂರ್ತಿ ನಿಂತಿದ್ದರೆ ಮಿಲನಕ್ರಿಯೆ ಪ್ರಾರಂಭಿಸಲು ತೊಂದರೆ ಏನೂ ಇಲ್ಲ, ಆದರೆ ತಕ್ಷಣ ಮತ್ತೂಂದು ಗರ್ಭಧಾರಣೆಯಾಗದಂತೆ ತಡೆಯಲು ಗರ್ಭನಿರೋಧದ ಬಳಕೆ ಮಾಡಿ. ಬಹಳ ದಿನಗಳ ನಂತರ ಲೈಂಗಿಕ ಸಂಪರ್ಕ ಪ್ರಾರಂಭಿಸಿದಾಗ ಶೀಘ್ರಸ್ಖಲನವಾಗುವುದು ಸಾಮಾನ್ಯ. ಕ್ರಮೇಣ ಸರಿ ಹೋಗಬಹುದು, ಹಾಗೇ ಉಳಿದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದು. 69 ಲೈಂಗಿಕಾಸನದಿಂದ ತೊಂದರೆ ಏನೂ ಇಲ್ಲ ಆದರೆ, ಇಬ್ಬರೂ ಜನನಾಂಗದ ಸ್ವತ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೋಂಕೇನಾದರೂ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. 
 
ನನಗೆ ವಾರದಲ್ಲಿ 3 ರಿಂದ 4 ಬಾರಿ ಹಸ್ತಮೈಥುನ ಅಭ್ಯಾಸವಾಗಿದೆ. ಇದನ್ನು ತಡೆಗಟ್ಟಲಾಗುತ್ತಿಲ್ಲ. ನಾನು ಈಗ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೇನೆ ಇದರಿಂದ ಯಾವುದಾದರೂ ಪರಿಣಾಮ ಬೀರಬಹುದೇ? ಇದರಿಂದ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆಯಾ? ಮತ್ತು ಹಸ್ತಮೈಥುನದಿಂದ ಮುಂದೆ ಏನಾದರು ಆರೋಗ್ಯ ತೊಂದರೆ ಇದೆಯಾ? ಆರೋಗ್ಯದಲ್ಲಿ ಏನಾದರು ಏರುಪೇರಾಗಬಹುದೆ? ಹಾಗೂ ಶಕ್ತಿ ಹಾಗೂ energy ಏನಾದರೂ ಕಡಿಮೆ ಆಗಬಹುದೆ? ಇದಕ್ಕೆಲ್ಲ ಏನಾದರೂ ಪರಿಹಾರ ಹಾಗೂ ಇದನ್ನು ತಡೆಗಟ್ಟಲು ಸಾಧ್ಯವೆ ಎಂದು ದಯಮಾಡಿ ತಿಳಿಸಿಕೊಡಿ. 
-ಕೇಶವ, ದಾವಣಗೆರೆ 

ಹಸ್ತಮೈಥುನ ಪದೇ ಪದೇ ಮಾಡುವಂಥ ಚಟವಾದರೆ ಮಾನಸಿಕ ತಜ್ಞರ ಬಳಿ ಒಮ್ಮೆ ಚಿಕಿತ್ಸೆ ಪಡೆದುಕೊಳ್ಳಿ. ಹಸ್ತಮೈಥುನದಿಂದ ಜ್ಞಾಪಕ ಶಕ್ತಿ ಕಡಿಮೆಯಾಗುವುದಿಲ್ಲ. ಆರೋಗ್ಯಕ್ಕೆ ತೊಂದರೆ ಇಲ್ಲ. ಶಕ್ತಿ ಅಥವಾ ಎನರ್ಜಿ ಕಡಿಮೆಯಾಗುವುದಿಲ್ಲ. ಹಸ್ತಮೈಥುನವನ್ನು ತಡೆಗಟ್ಟಲು ಮನಸ್ಸನ್ನು ಯಾವಾಗಲೂ ಬ್ಯುಸಿಯಾಗಿಟ್ಟುಕೊಳ್ಳಿ. ಬೇರೆ ಯೋಚನೆ, ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಲೈಂಗಿಕ ಒತ್ತಡ ಹೆಚ್ಚಿದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳುವುದು ಒಳ್ಳೆಯದು. 

* ಡಾ.ಪದ್ಮಿನಿ ಪ್ರಸಾದ್

ಟಾಪ್ ನ್ಯೂಸ್

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.