ದುಶ್ಮನಿ ಬಗಲ್‌ ಮೇ ಹೈ


Team Udayavani, Apr 11, 2018, 6:00 PM IST

dushmani.jpg

ಅಲ್ಲಿಗೆ ಹೋಗಿ ಬಂದಾಗಿನಿಂದ ಗೀತಾಳ ಮನಸ್ಸು ಪ್ರಕ್ಷುಬ್ಧವಾಗಿದೆ. ಅದರಿಂದ ಹೊರಬರಲು ಇನ್ನೆರಡು ದಿನಗಳು ಬೇಕು. ಗೀತಾ ಬ್ಯಾಂಕ್‌ನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾಳೆ. ನಾದಿನಿಯ ಮನೆಯೂ ಅದೇ ಊರಿನಲ್ಲಿದೆ. ಪ್ರತಿ ಬಾರಿ,ಅವರ ಮನೆಗೆ ಹೋದಾಗಲೆಲ್ಲಾ ಅಲ್ಲಿಯವರ ಚುಚ್ಚು ಮಾತುಗಳನ್ನು ಕೇಳಿ ಸಾಕಾಗಿದೆ. ನಾದಿನಿ ಇವಳ ಗಂಡನಿಗೆ ಚಾಡಿ ಬೇರೆ ಹೇಳುತ್ತಾಳೆ.

ಹತ್ತಿರದ ಸಂಬಂಧಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣದಿಂದ ಗೀತಾ ಆಗಾಗ ಅಲ್ಲಿಗೆ ಹೋಗಿ ಬರುತ್ತಾಳೆ. ಆಗ ಮತ್ತೆ ಮೊದಲಿನ ವರ್ತನೆಯ ಪುನರಾವರ್ತನೆ ಆಗುತ್ತದೆ. ಹೌದು. ಕೆಲವರು ಹೀಗೆಯೇ. ನಮ್ಮ ಕುಟುಂಬದ ಸದಸ್ಯರಾಗಿರುತ್ತಾರೆ, ಸ್ನೇಹಿತರಾಗಿರುತ್ತಾರೆ, ಆಪ್ತರಾಗಿರುತ್ತಾರೆ. ಆಪ್ತರಾಗಿದ್ದೂ ಮನಸ್ಸು ನೋಯಿಸುತ್ತಾರೆ. ಚುಚ್ಚು ಮಾತನ್ನಾಡುತ್ತಾರೆ.

ಆಗ, ಇವರು ನಿಜವಾಗಿಯೂ ನಮಗೆ ಆತ್ಮೀಯರೇ? ಎಂಬ ಪ್ರಶ್ನೆ ಕಾಡುತ್ತದೆ. ಈ ಸಂಬಂಧವನ್ನು ಹೇಗೆ ಸಂಭಾಳಿಸಬೇಕು ಎಂದೇ ತಿಳಿಯುವುದಿಲ್ಲ. ಈ ನೋವಿನಿಂದ ನಾವೇ ಮಾನಸಿಕ ಖನ್ನತೆಗೆ ಒಳಗಾಗುತ್ತೇವೋ ಎಂಬ ಭಯ ಉಂಟಾಗುತ್ತದೆ. ಇದ್ದು ಅನುಭವಿಸುವುದಕ್ಕೂ ಆಗದ, ಹೊರ ಬರುವುದಕ್ಕೂ ಧೈರ್ಯ ಸಾಲದ, ಅಸಹಾಯಕ ಪರಿಸ್ಥಿತಿ. ಈ ನೋವು-ಬೇಸರ, ಮಹಿಳೆಯರಲ್ಲೇ ಹೆಚ್ಚು.

ಪುರುಷರ ಮತ್ತು ಮಹಿಳೆಯರ ಸ್ವಭಾವ ವಿಶ್ಲೇಷಿಸಿ ನೋಡಿದರೆ, ಮಹಿಳೆಯರೇ ಹೆಚ್ಚು ಭಾವನಾತ್ಮಕವಾಗಿರುವುದು ತಿಳಿದುಬರುತ್ತದೆ. “ನನಗೇನು ಅನ್ನಿಸುತ್ತದೆ’ ಎನ್ನುವುದಕ್ಕಿಂತ “ಬೇರೆಯವರು ಏನೆಂದುಕೊಳ್ಳುತ್ತಾರೆ’ ಎಂಬ ಬಗ್ಗೆಯೇ ಅವರಿಗೆ ಚಿಂತೆ. ಜೈವಿಕವಾಗಿ ನೋಡಿದಾಗ, ಮಹಿಳೆಯ ಸಂತಾನೋತ್ಪತ್ತಿ ಚಕ್ರವೂ ಸಮಸ್ಯೆ ಮಾಡಬಹುದು.

ಹದಿವಯಸ್ಸಿನ ಹುಡುಗಿಗೆ ಋತುಚಕ್ರ ಪ್ರಾರಂಭವಾಗುವುದು, ನಂತರದ ಪ್ರತಿ ತಿಂಗಳ ಋತುಸ್ರಾವ, ಮದುವೆಯ ನಂತರ ಬಸಿರು, ಬಾಣಂತನ, ನಲವತ್ತರ ನಂತರದ ಋತುಬಂಧ, ಹೀಗೆ ಎಲ್ಲ ಸಮಯದಲ್ಲೂ, ಮಹಿಳೆಗೆ ಹಾರ್ಮೋನುಗಳ ಏರುಪೇರಿನಿಂದ ಕೂಡ ಮಾನಸಿಕ ಒತ್ತಡ ಆಗುತ್ತದೆ. ಹಾಗಾಗಿ ಮಹಿಳೆಯರೇ ಹೆಚ್ಚಾಗಿ ಇಂಥ ಟೀಕೆ, ಚುಚ್ಚುಮಾತುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ.

ಯಾರು ಇಂಥ ವಿಷದ ಜನ?
* ಆರೋಗ್ಯಕರ ಟೀಕೆಗಳು ಪರ್ವಾಗಿಲ್ಲ. ಬೇಕೆಂದೇ ನೋವುಂಟು ಮಾಡುವಂತೆ ಟೀಕೆ ಮಾಡುತ್ತಾರೆ. ನಿಮ್ಮನ್ನು ವಿಮಶಾìತ್ಮಕವಾಗಿಯೇ ನೋಡುತ್ತಾರೆ. ಪ್ರತಿ ಬಾರಿಯೂ ಭೇಟಿಯಾದಾಗ, ಏನಾದರೂ ನಕಾರಾತ್ಮಕ ಟೀಕೆ ಇದ್ದದ್ದೇ.

* ನಿಮಗೆ ಏನೋ ತೀವ್ರಥರದ ಮಾನಸಿಕ ನೋವಾದಾಗ, ಆ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದೇರೆಂದುಕೊಳ್ಳಿ. ಕೆಲದಿನಗಳ ನಂತರ ನೋಡಿದರೆ, ಆ ವಿಷಯ ಕುಟುಂಬದ ಎಲ್ಲ ಸದಸ್ಯರಿಗೂ ತಿಳಿದಿದೆ. ನೀವು ಅವರಲ್ಲಿಟ್ಟಿದ್ದ ನಂಬಿಕೆಗೆ ದ್ರೋಹ ಬಗೆದಿದ್ದಾರೆ.

* ತಮಗೆ ಕೆಲಸವಿದ್ದಾಗ ಮಾತ್ರ ನಿಮ್ಮೊಂದಿಗೆ ಮಾತನಾಡುತ್ತಾರೆ. ಬೇರೆಯ ಸಮಯದಲ್ಲಿ ನಿಮ್ಮನ್ನು ಮರೆತೇ ಹೋಗುತ್ತಾರೆ.

* ನಿಮಗೆ ಬೇಸರವಾದಾಗ, ಯಾರದೋ ಬಗ್ಗೆ, ನಿಮ್ಮ ಅಭಿಪ್ರಾಯ ತೋಡಿಕೊಂಡಿದ್ದೀರೆಂದುಕೊಳ್ಳಿ. ಕೆಲವೇ ದಿನಗಳಲ್ಲಿ ನೀವು ಯಾರ ಬಗ್ಗೆ ಮಾತಾಡಿರುತ್ತೀರೋ ಅವರಿಗೆ ವಿಷಯ ತಿಳಿದುಬಿಡುತ್ತದೆ. ಅಂದರೆ ಹಚ್ಚಿಕೊಡುವ ಈ ಮಂದಿ ಕೂಡ ವಿಷಕಾರಿ. 

ಈ ರೀತಿಯ ಜನರು ಸುತ್ತಮುತ್ತ ಇದ್ದರೆ ಆಗುವುದಾದರೂ ಏನು? ನಿಮ್ಮ ಮನಸ್ಸು ಬೇಸರಗೊಳ್ಳುತ್ತದೆ. ಈ ಬೇಸರ ಕೆಲವು ಕ್ಷಣಗಳಿಂದ, ಕೆಲವು ದಿನಗಳವರೆಗೂ ಇರಬಹುದು. ವ್ಯಕ್ತಿಯ ವ್ಯಕ್ತಿತ್ವಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ಉಂಟಾಗುತ್ತದೆ.

ಉದಾಹರಣೆಗೆ: ಒಂದು ಮಹಿಳೆ ಅತ್ಯಂತ ಸೂಕ್ಷ್ಮ ಸ್ವಭಾವದವಳಾದರೆ, ಅವಳು ಮನಸ್ಸಿಗೆ ತುಂಬಾ ಹಚ್ಚಿಕೊಂಡು, ಎರಡು ಮೂರು ದಿನ ದುಃಖಕ್ಕೆ ಒಳಗಾಗಬಹುದು. ಕೆಲಸದಲ್ಲೂ ಅವಳ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಇತರರೊಂದಿಗೆ ಸಿಟ್ಟು ಮಾಡಬಹುದು. ಅದೇ ದಿಟ್ಟ ಸ್ವಭಾವದವಳಾದರೆ “ಅವಳು ಹೀಗೆ ಮಾಡಿದರೆ ನನಗೇನು? ಕತ್ತೆ ಬಾಲ ಕುದುರೆ ಜುಟ್ಟು’ ಎಂದು ಸುಮ್ಮನಾಗಬಹುದು. 

ನಿಮ್ಮ ಪಕ್ಕದಲ್ಲೂ ಇಂಥವರು ಇದ್ದರೆ…: ಮೊದಲು ಆ ವ್ಯಕ್ತಿ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ನಿರ್ಧರಿಸಿ. ಉದಾಹರಣೆಗೆ: ಆ ವ್ಯಕ್ತಿ, ಒಂದು ತಿಂಗಳಿಗೊಮ್ಮೆ ಫೋನ್‌ನಲ್ಲಿ ಮಾತಾಡುವ ಸ್ನೇಹಿತೆಯಾಗಿರಬಹುದು ಅಥವಾ ನಿಮ್ಮ ಜೊತೆಯಲ್ಲಿಯೇ ಒಟ್ಟು ಕುಟುಂಬದಲ್ಲಿರುವ ಅತ್ತಿಗೆ ಆಗಿರಬಹುದು.

ಈ ವ್ಯಕ್ತಿ ನಿಮ್ಮ ಜೀವನದಲ್ಲಿ ಅಂಥ ಮುಖ್ಯವಾಗಿಲ್ಲದಿದ್ದರೆ, ನೀವು ಆ ಸಂಬಂಧ ಕಡಿದುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಅದೇ ನಿಮ್ಮ ಹತ್ತಿರದ ಸಂಬಂಧಿಕರು ಅಥವಾ ಮನೆಯಲ್ಲೇ ಇರುವ ಒಟ್ಟು ಕುಟುಂಬದ ಸದಸ್ಯರಾಗಿದ್ದರೆ, ಮೊದಲ ಪ್ರಯತ್ನ, ಈ ಟೀಕೆಗಳನ್ನು ಅಲಕ್ಷಿಸುವುದು. ನಂತರ ನೇರವಾಗಿ ಆ ವ್ಯಕ್ತಿಗೆ “ನೀವು ಈ ರೀತಿ ಟೀಕಿಸುವುದು/ನನ್ನ ಬಗ್ಗೆ ಇತರರಲ್ಲಿ ಹಚ್ಚಿಕೊಡುವುದು ಸರಿಯಲ್ಲ’ ಎಂದು ಹೇಳಿಬಿಡಿ.

ಇನ್ನು ಈ ಎಲ್ಲ ಸಮಸ್ಯೆಗಳಿಗೂ ಪರಮ ಔಷಧ, ಸದಾ ಚಟುವಟಿಕೆಯಿಂದ ಇರುವುದು. An idle mind is devil’s workshop ಎಂಬಂತೆ ನಮ್ಮ ಮನಸ್ಸು ಖಾಲಿಯಿದ್ದರೆ, ಈ ನಕಾರಾತ್ಮಕ ಅನುಭವಗಳು ಗಿರಕಿ ಹೊಡೆಯುತ್ತಿರುತ್ತವೆ. ಬದಲಾಗಿ, ಪ್ರತಿ ಕ್ಷಣವೂ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿದ್ದರೆ, ಈ ವಿಷಕಾರಿ ಜನರ ಟೀಕೆಗಳು/ ಚುಚ್ಚು ಮಾತುಗಳು ನಮ್ಮನ್ನು ಕಾಡುವುದಿಲ್ಲ.

* ಡಾ. ಕೆ.ಎಸ್‌. ಶುಭ್ರತಾ, ಮನೋವೈದ್ಯೆ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.