ಟ್ಯಾಂಕ್‌ ಯೂ


Team Udayavani, Apr 18, 2018, 5:06 PM IST

tyanka.jpg

ಟ್ಯಾಂಕ್‌ ಅಂದಕೂಡಲೇ ನೆನಪಾಗುವುದು, ನೀರಿನ ಟ್ಯಾಂಕ್‌ಗಳು. ಆದರೆ, ನಾವಿಲ್ಲಿ ಹೇಳುತ್ತಿರೋದು ನೀರಿನ ಟ್ಯಾಂಕ್‌ಗಳಲ್ಲ; ಬದಲಿಗೆ ನೀರೆಯರನ್ನು ಸೆಳೆಯುವ ಟ್ಯಾಂಕ್‌ಗಳು. ಅಂದರೆ, ಟ್ಯಾಂಕ್‌ ಡ್ರೆಸ್‌ಗಳು. ಬೇಸಿಗೆಗೆ ಹಾಯೆನಿಸುವ ಈ ಒನ್‌ಪೀಸ್‌ ಡ್ರೆಸ್‌ಗಳಲ್ಲಿ ಹತ್ತು ಹಲವು ವೈವಿಧ್ಯಗಳಿವೆ…

ಟ್ಯಾಂಕ್‌ ಡ್ರೆಸ್‌ ಎಂಬುದು ಬಹಳ ಹಿಂದಿನಿಂದಲೂ ಫ್ಯಾಷನ್‌ ಲೋಕದಲ್ಲಿ ಮಿಂಚುತ್ತಿರುವ ಉಡುಪು. ಇದರಲ್ಲಿ ಎರಡು ಪ್ರಕಾರಗಳಿವೆ-ಒಂದು ಬಿಗಿಯಾದ ಟ್ಯಾಂಕ್‌ ಡ್ರೆಸ್‌, ಇನ್ನೊಂದು ಸಡಿಲವಾದ ಡ್ರೆಸ್‌. ಬಿಗಿಯಾದ ಟ್ಯಾಂಕ್‌ ಡ್ರೆಸ್‌ ಧರಿಸಿ ಮಿಂಚಿದ ಗಾಯಕಿಯರು, ಕ್ರೀಡಾಪಟುಗಳು, ನಟಿಯರು, ಹಾಲಿವುಡ್‌ ಬೆಡಗಿಯರ ಫೋಟೊವನ್ನು ನೀವು ನೋಡಿರುತ್ತೀರಿ. ಆದರೆ, ಈಗ ಸಡಿಲ ಟ್ಯಾಂಕ್‌ ಡ್ರೆಸ್‌ಗಳ ಸರದಿ. ಬೇಸಿಗೆಯಲ್ವಾ? ಧರಿಸಲೂ ಸುಲಭ ಮತ್ತು ಸೆಖೆಗೂ ಆರಾಮು. ಮೈ-ಕೈಗೆ ಅಂಟಿಕೊಳ್ಳದೇ ಇರುವ ಕಾರಣದಿಂದ ಈ ಡ್ರೆಸ್‌ ಎಲ್ಲರಿಗೂ ಅಚ್ಚುಮೆಚ್ಚು. 

ಎರಡಲ್ಲ, ಮೂರಲ್ಲ; ಒಂದೇ: ಇದು ಒನ್‌ ಪೀಸ್‌ ಡ್ರೆಸ್‌. ಅಂದರೆ- ಮೇಲಂಗಿ, ಲಂಗ ಅಥವಾ ಪ್ಯಾಂಟ್‌ ಎಂದು ಪ್ರತ್ಯೇಕ ಉಡುಪುಗಳು ಇರುವುದಿಲ್ಲ. ಅಂಗಿಯೇ ಸ್ವಲ್ಪ ಉದ್ದವಾಗಿದ್ದು, ಕಾಲಗಂಟಿನವರೆಗೆ ಬಂದರೆ ಅದೇ ಟ್ಯಾಂಕ್‌ ಡ್ರೆಸ್‌. ಅವುಗಳಿಗೆ ಉದ್ದದ ತೋಳುಗಳೂ ಇರುವುದಿಲ್ಲ. ಸೆಖೆಗೆ ಸ್ಲಿàವ್‌ಲೆಸ್‌ ಉಡುಪು ಹಿತವಾದ್ದರಿಂದ, ಈ ಡ್ರೆಸ್‌ ಈಗ ಹೆಚ್ಚು ಚಾಲ್ತಿಯಲ್ಲಿದೆ. 

ಪಟ್ಟೆ ಪಟ್ಟೆಯ ಪ್ರಿಟ್ಟಿ ಡ್ರೆಸ್‌: ಹಿಂದೆಲ್ಲ ಟ್ಯಾಂಕ್‌ ಡ್ರೆಸ್‌ಗಳು ಸಾಲಿಡ್‌ ಕಲರ್ಡ್‌ ಆಗಿದ್ದವು. ಅಂದರೆ, ಒಂದೇ ಬಣ್ಣದ ಉಡುಪಾಗಿದ್ದವು. ಕ್ರಮೇಣ ಈ ಡ್ರೆಸ್‌ಗಳು ಹೊಸ ಹೊಸ ರೂಪ ಪಡೆಯಿತು. ಸ್ಟ್ರೈಪ್ಸ್‌ ಅಂದರೆ ಪಟ್ಟೆ ಪಟ್ಟೆ ವಿನ್ಯಾಸದ ಟ್ಯಾಂಕ್‌ ಡ್ರೆಸ್‌ಗಳು ಮೊದಲಿಗೆ ಪ್ರಚಲಿತಗೊಂಡವು. ಅವುಗಳಲ್ಲೂ ಅಡ್ಡಪಟ್ಟೆಗಳು ಮೊದಲು. ನಂತರ ಉದ್ದ ಪಟ್ಟೆಗಳ ಪರಿಚಯವಾಯಿತು.

ಈ ಶೈಲಿ ಕ್ಲಾಸಿಕ್‌ಆಗಿಬಿಟ್ಟಿತು! ಎಲ್ಲರ ವಾರ್ಡ್‌ರೋಬ್‌ನಲ್ಲಿ ಈ ಡ್ರೆಸ್‌ ರಾರಾಜಿಸಿತು. ಸಿನಿಮಾನಟಿಯರ ಫ್ಯಾಶನ್‌ ಟ್ರೆಂಡ್‌ ಅನ್ನು ಫಾಲೋ ಮಾಡುವ ಸಮೂಹಕ್ಕೂ ಈ ಟ್ಯಾಂಕ್‌ ಡ್ರೆಸ್‌ಗಳು ಮೋಡಿ ಮಾಡಿದವು. ಬಿಳಿ-ಕೆಂಪು, ಬಿಳಿ-ನೀಲಿ ಕಾಂಬಿನೇಶನ್‌ನ ಪಟ್ಟೆಗಳಿರುವ ಸಡಿಲ ಟ್ಯಾಂಕ್‌ ಡ್ರೆಸ್‌ಗಳು ನಟಿಯರ ಮತ್ತು ಫ್ಯಾಷನ್‌ಪ್ರಿಯರ ಶಾಪಿಂಗ್‌ ಲಿಸ್ಟ್‌ ಸೇರಿದವು. 

ಹೂವು, ಬಳ್ಳಿ, ಚಿಟ್ಟೆ ಚಿತ್ತಾರ..: ನಂತರ ಈ ಡ್ರೆಸ್‌ಗಳ ಮೇಲೆ ಹೂವು, ಬಳ್ಳಿ, ಚಿಟ್ಟೆ, ಹಣ್ಣು ಮುಂತಾದ ಆಕೃತಿಗಳು ಮೂಡಿದವು. ಕೇವಲ ಕಪ್ಪು, ಬಿಳಿ, ಕಂದು ಮತ್ತು ಬೂದಿ ಬಣ್ಣಗಳಲ್ಲಿಯೇ ಲಭ್ಯವಿದ್ದ ಸಡಿಲ ಟ್ಯಾಂಕ್‌ಡ್ರೆಸ್‌ಗಳು ಈಗ ಬೇರೆ ಬಣ್ಣಗಳಲ್ಲಿಯೂ ಲಭ್ಯ. ಪೇಸ್ಟಲ್‌ ಶೇಡ್ಸ್ ಅಂದರೆ ಬಳಪದ ಕಡ್ಡಿಯ ಬಣ್ಣದಲ್ಲೂ ಈ ಡ್ರೆಸ್‌ ಸಿಗುತ್ತದೆ.

ಹತ್ತಾರು ಆಯ್ಕೆ, ಹತ್ತಾರು ಬಣ್ಣ: ಕ್ಯಾಶುಯಲ್‌ ಉಡುಗೆಯಾಗಿರುವ ಟ್ಯಾಂಕ್‌ ಡ್ರೆಸ್‌ಅನ್ನು ಹಾಲಿಡೇ, ಶಾಪಿಂಗ್‌, ಪಾರ್ಟಿಗಳಿಗೆ ಧರಿಸಿದರೆ ಚೆಂದ. ಆನ್‌ಲೈನ್‌ನಲ್ಲಿ ಕಸ್ಟಮೈಸ್ಡ್ ಟ್ಯಾಂಕ್‌ ಡ್ರೆಸ್‌ಗಳು ಲಭ್ಯವಿದೆ. ದೇಹಕ್ಕೊಪ್ಪುವ ಬಣ್ಣ, ವಿನ್ಯಾಸ ಅಥವಾ ಚಿತ್ರವನ್ನು ಆಯ್ಕೆ ಮಾಡಿ, ವಿನ್ಯಾಸಕರಿಂದ ಅವುಗಳನ್ನು ಉಡುಪಿನ ಮೇಲೆ ಮೂಡಿಸಿಕೊಳ್ಳಬಹುದು.

ಉಡುಪಿನ ಮೇಲೆ ನಕ್ಷತ್ರ ಲೋಕ, ಸಾಗರದ ಅಲೆಗಳು, ಮೀನು-ಮರಳು-ಚಿಪ್ಪು-ಕಲ್ಲು -ಮುತ್ತುಗಳನ್ನೂ ಅವತರಿಸಿಕೊಳ್ಳಿ.  ಕಾಮನಬಿಲ್ಲಿನ ಬಣ್ಣಗಳು, ನವಿಲು ಗರಿಯ ಆಕೃತಿ, ಪೋಲ್ಕಾಡಾಟ್ಸ್‌, ಜ್ಯಾಮಿತೀಯ ಆಕೃತಿಗಳು, ರಂಗೋಲಿ, ಬರಹ, ಭಾವಚಿತ್ರ, ವ್ಯಂಗ್ಯಚಿತ್ರ ಹೀಗೆ ಹತ್ತು ಹಲವು ಆಯ್ಕೆಗಳು ನಿಮ್ಮ ಮುಂದಿವೆ. 

* ಅದಿತಿ ಮಾನಸ ಟಿ.ಎಸ್‌.

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.