CONNECT WITH US  

ಸೋಲದಿರು ಸೋನಾಲಿ

ಬ್ಯೂಟಿ ಮತ್ತು ಸ್ವೀಟಿ ಎಂದೇ ಹೆಸರಾಗಿದ್ದಾಕೆ, ನಟಿ ಸೋನಾಲಿ ಬೇಂದ್ರೆ. "ಪ್ರೀತ್ಸೆ' ಸಿನಿಮಾದ ಮೂಲಕ ಹುಡುಗರಷ್ಟೇ ಅಲ್ಲ, ಹುಡುಗಿಯರ ಮನಸನ್ನೂ ಗೆದ್ದುದು ಆಕೆಯ ಹೆಚ್ಚುಗಾರಿಕೆ. "ದಂತದ ಗೊಂಬೆ' ಎನ್ನಿಸಿಕೊಂಡಿದ್ದ ಆಕೆಯೀಗ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಸೋನಾಲಿಗೆ ಧೈರ್ಯ ಹೇಳುತ್ತಲೇ ಅವಳೊಂದಿಗಿನ ಬಾಂಧವ್ಯವನ್ನು ತೆರೆದಿಟ್ಟಿರುವ ಅಭಿಮಾನಿಯೊಬ್ಬಳ ಬರಹ ಇಲ್ಲಿದೆ. ಸೋನಾಲಿ ಎಂದರೆ ನಟಿಯಷ್ಟೇ ಅಲ್ಲ; ಅದು ನಮ್ಮ ನಡುವೆಯೇ ಇರುವ ಇನ್ನೊಂದು ಜೀವದ ಹೆಸರು ಮತ್ತು ಬದುಕೂ ಆಗಿರಬಹುದು ಎಂದುಕೊಂಡೇ ಓದಿಕೊಳ್ಳಿ... 

  ಗೆಳತಿ, ಅದು, ಇಸವಿ 2000ದ ಮೇ ತಿಂಗಳ ಒಂದು ದಿನ. ಆವತ್ತು, ಕನ್ನಡ ಚಿತ್ರರಂಗದಲ್ಲಿ ಒಂದು ಬ್ರೇಕಿಂಗ್‌ ನ್ಯೂಸ್‌ ಕೇಳಿ ಬಂತು. ಹಿಂದಿಯಲ್ಲಿ ಸೂಪರ್‌ ಹಿಟ್‌ ಆಗಿರುವ "ಢರ್‌' ಸಿನಿಮಾ, ಕನ್ನಡಕ್ಕೆ ರಿಮೇಕ್‌ ಆಗುತ್ತಿದೆ. ಡಿ. ರಾಜೇಂದ್ರಬಾಬು ಆ ಸಿನಿಮಾ ನಿರ್ದೇಶಿಸುತ್ತಾರೆ. ಉಪೇಂದ್ರ ಮತ್ತು ಶಿವರಾಜ್‌ಕುಮಾರ್‌ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಬಾಲಿವುಡ್‌ನ‌ ಪ್ರಮುಖ ತಾರೆಯೊಬ್ಬರು, ನಾಯಕಿಯಾಗಿ ಆಯ್ಕೆಯಾಗುವ ಸಂಭವವಿದೆ...' ಇದಿಷ್ಟೂ ಬ್ರೇಕಿಂಗ್‌ ನ್ಯೂಸ್‌ನ ತಿರುಳಾಗಿತ್ತು. ಹತ್ತು ದಿನಗಳು ಕಳೆಯುತ್ತಿದ್ದಂತೆ, ನಟಿ ಸೋನಾಲಿ ಬೇಂದ್ರೆ, ನಾಯಕಿಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಮತ್ತೂಂದು ಸಾಲು, ಆ ಬ್ರೇಕಿಂಗ್‌ ನ್ಯೂಸ್‌ಗೆ ಸೇರ್ಪಡೆಯಾಗಿತ್ತು. 

 ನಿಜ ಹೇಳಲಾ? ಈ ಸುದ್ದಿ ತಿಳಿದು, ಆಗಷ್ಟೇ ಡಿಗ್ರಿ ಕಾಲೇಜಿನ ಮೆಟ್ಟಿಲೇರಿದ್ದ ನಮಗೆ ಅಂಥಾ ಖುಷಿಯೇನೂ ಆಗಿರಲಿಲ್ಲ. ಏಕೆಂದರೆ, "ಢರ್‌' ಸಿನಿಮಾದಲ್ಲಿ ನಟಿ ಜೂಹಿ ಚಾವ್ಲಾ, ನಾಯಕಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಳು. ಅವಳಂತೆಯೇ ನಡೆಯುವುದು, ಅವಳ ಥರಾನೇ ಕೊರಳು ಕೊಂಕಿಸುವುದು, ಅವಳಂತೆಯೇ ನಗುವುದು ಮತ್ತು ಅವಳಂತೆಯೇ ಕಣ್ಣು ಹೊಡೆಯುವುದು ನಮಗೆ ಅಭ್ಯಾಸವಾಗಿ ಹೋಗಿತ್ತು. "ಜೂಹಿ ಚಾವ್ಲಾಳ ಥರ ಅಭಿನಯಿಸೋಕೆ ಈ ಸೋನಾಲಿಗೆ ಸಾಧ್ಯವೇ ಇಲ್ಲ. ಇವಳೇನಿದ್ರೂ ವಯ್ನಾರಕ್ಕೇ ಲಾಯಕ್ಕು' ಎಂದು ನಮಗೆ ನಾವೇ ಹೇಳಿಕೊಂಡಿದ್ವಿ. ಆಮೇಲೊಂದು ದಿನ ಸಿನಿಮಾ ಬಿಡುಗಡೆಯಾಯ್ತು. ವಾರ ಕಳೆದ ನಂತರವೂ ಥೇಟರುಗಳ ಮುಂದೆ ಹೌಸ್‌ಫ‌ುಲ್‌  ಬೋರ್ಡು! ಅಷ್ಟೊಂದು ಚೆನ್ನಾಗಿದೆಯಾ? ಒಂದ್ಸಲ ನೋಡೇ ಬಿಡೋಣ ಅಂದುಕೊಂಡು ಥಿಯೇಟರಿಗೆ ಹೊಕ್ಕಿದ್ದಾಯ್ತು.... 

  "ಅಬಬಬಬಾ... ಹೀರೊಯಿನ್ನು ಮಸ್ತಾಗಿದ್ದಾಳೆ. ಅದೇನೋ ಅಪ್ಸರೆ ಅಂತಾರಲ್ಲ ಮಗಾ, ಥೇಟ್‌ ಹಂಗೇ ಇದ್ದಾಳೆ. 36-24-36 ಅಂತಾರೆ ನೋಡಿ. ಆ ಸೈಜು ಇದೇ ಇರಬೇಕು. ಒಳ್ಳೇ ಗೊಂಬೆ, ಗೊಂಬೆ ಥರ ಇದ್ದಾಳೆ. ಹೀರೋಯಿನ್‌ ಅಂದ್ರೆ ಹಿಂಗಿರಬೇಕು ನೋಡಪ್ಪ..' ಥಿಯೇಟರಿನಲ್ಲಿ ಹುಡುಗರು ಹೀಗೆಲ್ಲಾ ಕಾಮೆಂಟ್‌ ಮಾಡುತ್ತಿದ್ದರು. "ಎಷ್ಟೊಂದು ಸಪೂರಾಗಿ ಇದ್ದಾಳೆ ಅಲ್ವ? ತುಂಬಾ ಚೆನ್ನಾಗಿ ಫಿಗರ್‌ ಮೇಂಟೇನ್‌ ಮಾಡಿದ್ದಾಳೆ. ಆ ಗೋದಿವರ್ಣದ ಮೈ ಬಣ್ಣ, ಕಂಡೂ ಕಾಣದಂತಿರುವ ಮೇಕಪ್‌ ಅವಳಿಗಿರುವ ಪೋಸ್‌ ಪಾಯಿಂಟು. ಯಾವ ಕಲರಿನ ಡ್ರೆಸ್‌ ಹಾಕ್ಕೊಂಡ್ರೂ ಮುದ್ದು ಮುದ್ದಾಗಿ ಕಾಣಿಸ್ತಾಳೆ. ಈ ಬ್ಯೂಟಿ, ಸಖತ್‌ ಸ್ವೀಟಿ...' ಹೀಗೆಲ್ಲಾ ಅಂದವರು ಹುಡುಗರಲ್ಲ; ನನ್ನೊಂದಿಗೆ ಇದ್ದ ಹುಡುಗಿಯರು. ಡಿಯರ್‌ ಸೋನಾಲಿ ಬೇಂದ್ರೆ... ನೀನು ನಮ್ಮೆಲ್ಲರ ಮನಸಿಗೆ ಬಂದದ್ದು ಹೀಗೆ !

  ವರ್ಷಗಳು ಕಳೆದವು. ನೀನು ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲೆಲ್ಲ ಪಾತ್ರ ಮಾಡಿ ಬಂದೆ. ಉಹು, ಎಲ್ಲಿಯೂ ಒಂದೇ ಒಂದು ವಿವಾದವಾಗಲಿಲ್ಲ. ನಿನ್ನ ಹೆಸರಿನೊಂದಿಗೆ ಬೇಂದ್ರೆ ಎಂಬ ಸರ್‌ನೆàಮ್‌ ಇತ್ತಲ್ಲ, ಅದನ್ನು ಕಂಡು - ಈ ಬೆಡಗಿ ನಮ್ಮ ಬೇಂದ್ರೆ ಅಜ್ಜನ ಕಡೆಯ ಸಂಬಂಧಿಯೋ ಹೇಗೆ ಎಂದು ಕೆಲವರು ಗುಪ್ತ್ ಗುಪ್ತ್ ಆಗಿಯೇ ತನಿಖೆ ಮಾಡಿದರು ! ಇಷ್ಟೆಲ್ಲಾ ಆಗುವ ಹೊತ್ತಿಗೆ ಎಂಟØತ್ತು ವರ್ಷಗಳೇ ಕಳೆದಿದ್ದವು. ಆಗಲೇ ನೀನೊಮ್ಮೆ ಯಾವುದೋ ಕಾರ್ಯಕ್ರಮಕ್ಕೆಂದು ಬೆಂಗಳೂರಿಗೆ ಬಂದದ್ದು ;ಉಹುಂ, ಅಷ್ಟು ವರ್ಷದ ನಂತರವೂ ನೀನು ಡುಮ್ಮಿಯಾಗಿರಲಿಲ್ಲ. ಕಣ್ಣ ಹೊಳಪು ಕುಂದಿರಲಿಲ್ಲ. ಮುಖದಲ್ಲಿ ನೆರಿಗೆಯಾಗಲಿ, ಹಣೆಯಲ್ಲಿ ಸುಕ್ಕಾಗಲಿ ಕಾಣಲಿಲ್ಲ. "ಅಲಿÅà ಇವಳಿಗೇನು ವಯಸ್ಸೇ ಆಗೋದಿಲ್ವೇ? ಈಗ್ಲೂ "ಪ್ರೀತ್ಸೆ' ಸಿನಿಮಾದಲ್ಲಿ ನೋಡಿದ್ವಲ್ಲ, ಹಾಗೇ ಇದಾಳೆ ... ಜನ ಅವತ್ತು ಹೀಗೆಲ್ಲಾ ಉದ್ಗರಿಸಿದ್ದರು. ಮೆಚ್ಚುಗೆಯಿಂದ, ಅಸೂಯೆಯಿಂದ !

  ನಿನಗೆ ಕ್ಯಾನ್ಸರ್‌ ಅಂತೆ ! ಅದೂ ಏನು? ಆಗಲೇ ಫೈನಲ್‌ ಸ್ಟೇಜ್‌ಗೆ ಹೋಗಿಬಿಟ್ಟಿದೆಯಂತೆ...! ಈ ಮಾತನ್ನು ಬೇರೆಯಾರೋ ಹೇಳಿದ್ದಿದ್ರೆ - ಯಾರೋ ಕಿಡಿಗೇಡಿಗಳು ಈ ಥರಾ ಸುಳ್ಳು ಸುದ್ದಿ ಹಬ್ಬಿಸುತ್ತಾ ಇದಾರೆ. ದಂತದ ಗೊಂಬೆಯಂತಿರುವ ಸೋನಾಲಿಗೆ ಕಾಯಿಲೆ ಬರೋದು ಅಂದ್ರೆ ಏನರ್ಥ? ಎಂದು ಕೇಳಬಹುದಿತ್ತು. ಆದರೆ, ಎಲ್ಲರಿಗೂ ಶಾಕ್‌ ಕೊಡುವಂಥ ಸುದ್ದಿಯನ್ನು ಹೇಳಿರೋದು ಮತ್ಯಾರೂ ಅಲ್ಲ, ನೀನೇ! ಸ್ವಲ್ಪ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಚೆಕ್‌ ಮಾಡಿಸಲು ಹೋದಾಗ ಕ್ಯಾನ್ಸರ್‌ ಇದೇಂತ ಗೊತ್ತಾಯ್ತು. ಅದೂ ಏನು? ಆಗಲೇ ಫೈನಲ್‌ ಸ್ಟೇಜ್‌ಗೆ ಬಂದು ಬಿಟ್ಟಿದೆಯಂತೆ. ನಮ್ಮ ಡಾಕ್ಟರ್‌ ಸಲಹೆಯಂತೆಯೇ ನಾನು ಅಮೆರಿಕಕ್ಕೆ, ಅಲ್ಲಿನ ನ್ಯೂಯಾರ್ಕ್‌ ನಗರಕ್ಕೆ ಬಂದಿದೀನಿ. ಆಲ್ರೆಡೀ ಟ್ರೀಟ್‌ಮೆಂಟ್‌ ಶುರುವಾಗಿದೆ. ಅಷ್ಟು ಸುಲಭಕ್ಕೆ ನಾನು ಸೋಲೊಪ್ಪಿಕೊಳ್ಳೋದಿಲ್ಲ. ನಾನು ಫೈಟರ್‌. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತೇನೆ. ಗೆದ್ದೇ ಗೆಲೆ¤àನೆ.... ಹೀಗಂತ ನೀನೇ ಹೇಳಿದೀಯ. ಗೆಳೆಯ, ಗೆಳೆತಿಯರು, ಬಂಧುಗಳು, ಇಂಡಸ್ಟ್ರೀಯ ಮಂದಿ ನಿನಗೆ ಧೈರ್ಯ ಹೇಳಿ, ಶುಭ ಹಾರೈಸಿ ಕಳುಹಿಸಿರುವ ಮೆಸೇಜುಗಳು ಗೂಗಲ್‌ನಲ್ಲಿ ರಾಶಿ ರಾಶಿ ಕಾಣಿಸುತ್ತಿವೆ. ಹಾಗಾಗಿ, ನಂಬಲಾಗದಂಥ ಸುದ್ದಿಯೊಂದನ್ನು ನಂಬಲೇಬೇಕಾಗಿದೆ. !

    ನನ್ನ ತಿಳಿವಳಿಕೆಯ ಪ್ರಕಾರ ಹೇಳುವುದಾದರೆ- ಚಿಕಿತ್ಸೆಯ ಹೆಸರಲ್ಲಿ ಮೊದಲು ಕಿಮೋಥರೆಪಿ ಶುರುವಾಗುತ್ತೆ. ಅದು ನಾಲ್ಕು ಹಂತದ್ದು. ಸುಳ್ಳಲ್ಲ ಡಿಯರ್‌, ಕಿಮೋ ಥೆರಪಿ ಬಹಳ ಹಿಂಸೆ ಅನಿಸುತ್ತೆ. ಎಷ್ಟೋ ಸಲ ಜೋರಾಗಿ ಕಿರುಚವಂತೆ ಮಾಡುತ್ತಂತೆ. ಆ ಟ್ರೀಟ್‌ಮೆಂಟ್‌ ಆದ ಕೆಲವೇ ಕ್ಷಣಕ್ಕೆ ವಾಂತಿಯಾಗಿ ವಿಪರೀತ ಸುಸ್ತೂ ಜೊತೆಯಾಗಿ, ಬವಳಿ ಬಂದು ಬಿದ್ದು ಹೋಗುವ ಹಾಗಾಗುತ್ತಂತೆ. ಸುಮ್ನೆà ಒಂದ್ಸಲ ಅಂದಾಜು ಮಾಡ್ಕೊà. ಇಂಥದೇ ಒಂದು ಸೀನ್‌ ಸಿನಿಮಾದಲ್ಲಿ ಇದ್ದಿದ್ರೆ- ಈ ಥರ ಮುಖ ಕಿವಿಚಬೇಕು. ಆಕ್ಷನ್‌ ಅಂದ ತಕ್ಷಣ ಜೋರಾಗಿ ಚೀರಬೇಕು, ಈ ಆ್ಯಂಗಲ್‌ನಲ್ಲಿ ನಿಂತೇ ವಾಂತಿ ಮಾಡಬೇಕು, ಇಂಥ ಜಾಗದಲ್ಲೇ ತಲೆಸುತ್ತಿ ಬಂದವಳಂತೆ ಧಬಾರನೆ ಬಿದ್ದು ಹೋಗಬೇಕು ಎಂದೆಲ್ಲಾ ಡೈರೆಕ್ಟರ್‌ ಅಭಿನಯಿಸಿ ತೋರಿಸಿರುತ್ತಿದ್ದ! 

ಆ್ಯಕ್ಟಿಂಗು  ತಾನೇ ? ಮಾಡೇ ಬಿಡೋಣ ಎಂದುಕೊಂಡು ನೀನು ರೆಡಿ ಆಗಿರುತ್ತಿದ್ದೆ. ಅದಕ್ಕೂ ಮೊದಲು ಯಾರಾದ್ರೂ ರೋಗಿಯನ್ನು ಕಂಡು, ಅವರ ಹಾವಭಾವ ಗಮನಿಸಿರುತ್ತಿದ್ದೆ. ಆದರೆ ಈಗಿನದ್ದು ಸಿನಿಮಾ ಅಲ್ಲ, ಜೀವನ ! ಈಗ ನಿನ್ನ ಕಣ್ಮುಂದೆ ನಡೀತಿರೋದು ರೀಲಲ್ಲ, ರಿಯಲ್‌ ! ಕಿಮೋ ಥೆರಪಿಯ ಕಾರಣದಿಂದಲೇ ಎದೆ ಉರಿ, ಬಾಯಿ ಹುಣ್ಣು, ಚರ್ಮ ಸೀಳು ಬಿಡೋದು.... ಇಂಥದೇ ತೊಂದರೆಗಳು ಜೊತೆಯಾಗಬಹುದು, ಇದಕ್ಕೆಲ್ಲಾ ನೀನು ಹೆದರೋದಿಲ್ಲ ಅಂತ ಗೊತ್ತಿದೆ. ಆದ್ರೂ ಒಬುÛ ಅಭಿಮಾನಿಯಾಗಿ ಹೇಳ್ತಿದೀನಿ. ಹೆದರ್ಕೋ ಬೇಡ, ಧೈರ್ಯವಾಗಿರು...

  ಕಿಮೋ ಥೆರಪಿಯ ಚಿಕಿತ್ಸೆ ಮುಗಿದಾಗ ಆಗುವ ಇನ್ನೊಂದು ಸಂಗತಿಯನ್ನು ಹಲವರು ಹೇಳಿದ್ದಾರೆ. ಏನ್‌ ಗೊತ್ತ? ಸುಮ್ನೆà ತಲೆಬಾಚಿದ್ರೆ ಸಾಕು, ಗುಪ್ಪೆ ಗುಪ್ಪೆ ಕೂದಲು ಉದುರಿ ಹೋಗುತ್ತಂತೆ. ಆ ಮೂಲೆಯಿಂದ ಈ ಮೂಲೆಗೆ ನಡೆದುಹೋದರೆ, ಆಗಲೂ ಹೆಜ್ಜೆ ಹೆಜ್ಜೆಗೂ ಕೂದಲು ಉದುರಿ, ಹತ್ತಿಪ್ಪತ್ತು ದಿನದಲ್ಲಿ ಬಾಲ್ಡಿ ಆಗಿಬಿಡುತ್ತಂತೆ. ಅಂಥ ಸಂದರ್ಭದಲ್ಲಿ ನೀನು ಡಿಪ್ರಷನ್‌ಗೆ ತುತ್ತಾಗಬೇಡ. ಅದೆಷ್ಟೋ ದಿನಗಳ ಕಾಲ ಖಾರವಿಲ್ಲದ, ಉಪ್ಪು ಹಾಕದ ಸಪ್ಪೆ ಊಟ ತಿನ್ನಬೇಕು. ಅದನ್ನೆಲ್ಲ ನೆನೆದು ಕಂಗಾಲಾಗಬೇಡ. ಒಂದ್ಮಾತು ಹೇಳಲಾ? ತುಂಬಾ ಹೀಟ್‌ ಆದಾಗ ಗಾಡೀನ ನಿಲ್ಲಿಸಿ ಬ್ರೇಕ್‌ ಕೊಡಬೇಕು. ಯೋಚಿಸಿ ಯೋಚಿಸಿ ಸುಸ್ತಾದಾಗ ಮಿದುಳಿಗೂ ನಿದ್ರೆಯ ಮೂಲಕ ರೆಸ್ಟ್‌ ಕೊಡಬೇಕು. ಕಂಪ್ಯೂಟರ್‌ಗೆ ಕೂಡ ಆಗಾಗ್ಗೆ ರೆಸ್ಟ್‌ ನೀಡಿ ರೀಸ್ಟಾರ್ಟ್‌ ಮಾಡಬೇಕು. ಅದೇ ಥರ, ನಿನ್ನ ಬದುಕಿಗೂ ಸ್ವಲ್ಪ ರೆಸ್ಟ್‌ ಬೇಕಿತ್ತೇನೋ. ಅದು  ಈ ರೀತಿಯಲ್ಲಿ ಸಿಕ್ಕಿದೆ. ಮರವೂ ಒಮ್ಮೆ ಎಲೆಗಳೆನ್ನೆಲ್ಲ ಉದುರಿಸಿಕೊಂಡು ಬೋಳಾಗಿ ನಿಲ್ಲುತ್ತದೆ. ಮತ್ತೆ ಚಿಗುರುತ್ತದೆ. ಇಂಥಾ ಏರಿಳಿತಗಳು ಇದ್ದಾಗಲೇ ತಾನೇ ಬದುಕಿನಲ್ಲಿ ಆಸಕ್ತಿ ಹೆಚ್ಚೋದು? ಇವತ್ತಲ್ಲ ನಾಳೆ, ಎಲ್ಲವೂ ಸರಿ ಹೋಗುತ್ತದೆ ಎಂಬ ವಿಲ್‌ಪವರ್‌ ನಮ್ಮೊಳಗೆ ಇದ್ದಾಗ ಮಾತ್ರ ಯಾವ ಚಿಕಿತ್ಸೆಗಾದರೂ ದೇಹ ಸ್ಪಂದಿಸುತ್ತದೆ. ಮತ್ತೆ ಮತ್ತೆ ಹೇಳ್ತಿದೀನಿ. ಈ ಕ್ಯಾನ್ಸರ್‌ ಅನ್ನೋದು ನಮ್ಮನ್ನೆಲ್ಲ ಹೆದರಿಸುವ, ನಡುಗಿಸುವ, ನರಳಿಸುವ ಕಾಯಿಲೆ. ಅಂಥ ಕ್ಯಾನ್ಸರ್‌ನ ವಿರುದ್ಧವೇ ತೊಡೆತಟ್ಟಿ ಬಂದವರಲ್ಲಿ, ನಿನ್ನ ಸೀನಿಯರ್‌ ಗೆಳತಿ ಮನಿಷಾ ಕೊಯಿರಾಲ ಇದ್ದಾಳೆ. ಸ್ಪೂರ್ತಿ ತುಂಬುವ ಗೆಳೆಯ ಯುವರಾಜ್‌ಸಿಂಗ್‌ ಕೂಡ ಇದ್ದಾನೆ ! ಅವರನ್ನೆಲ್ಲ ನೆನಪು ಮಾಡ್ಕೊ. 

 ಹೌದು ಡಿಯರ್‌,  ಈ ಕಾಯಿಲೆಯನ್ನು ಗೆದ್ದು ನಿಲ್ಲುವುದೇ ಒಂದು ಸಾಧನೆ. ಈ ಕಾಯಿಲೆಯಿಂದಾಗಿ ನನ್ನ ಬದುಕಿನ ಅಮೂಲ್ಯ ಅವಧಿ ನಷ್ಟವಾಯ್ತು ಅಂದ್ಕೋಬೇಡ. ಮಗಳು, ನಾಯಕ, ಲೇಖಕ, ಗೃಹಿಣಿ... ಈ ಎಲ್ಲಾ "ಅವತಾರಗಳಲ್ಲಿ' ರೀಲ್‌ ಮತ್ತು ರಿಯಲ್‌- ಈ ಎರಡೂ ಕ್ಷೇತ್ರದಲ್ಲಿ ಗೆದ್ದಿರುವವಳು ನೀನು. ಅಂಥವಳು, ಈ ಕ್ಯಾನ್ಸರ್‌ ಜೊತೆಗಿನ ಹೋರಾಟದಲ್ಲೂ ವಿನ್ನರ್‌ ಆಗಬೇಕು. ನಿನ್ನ ಮಾದಕ ನಗುವಿಗೆ, ಗುಳಿಕೆನ್ನೆಯ ಚೆಲುವಿಗೆ ಮರುಳಾಗಿದ್ದ ಅಭಿಮಾನಿಗಳೇ ಗೊತ್ತಾಯ್ತ? ಸೋನಾಲಿ ಬೇಂದ್ರೆ ಕ್ಯಾನ್ಸರ್‌ ವಿರುದ್ಧವೂ ಗೆದ್ದು ಬಿಟ್ಟಂತೆ ಎಂದು ಬೆರಗಿನಿಂದ ಹೇಳುವುದನ್ನು ಎಲ್ಲರೂ ಕೇಳುವಂತಾಗಬೇಕು. 

   ನಾನು ಚಿಕ್ಕವಳು. ಆದರೂ, ನಿನ್ನ ಮೇಲಿನ ಪ್ರೀತಿ-ಅಭಿಮಾನದಿಂದ ಹೀಗೆಲ್ಲಾ ಹೇಳಿ ಬಿಟ್ಟಿದ್ದೇನೆ. ಚಿಕಿತ್ಸೆ ಮುಗಿಯುವವರೆಗೂ ಅಮೆರಿಕದಲ್ಲಿ ಖುಷಿಯಿಂದ ಇದ್ದು ಬಾ ಮತ್ತು ಗೆದ್ದು ಬಾ... 

ಪ್ರೀತಿಯಿಂದ
 ನೀಲಿಮಾ


Trending videos

Back to Top