ಮರಿ ಟೈಗರ್‌ ಹಿಂದಿನ “ಜಿಮ್‌’ಕೆ ಮರಿ!


Team Udayavani, Jul 18, 2018, 6:00 AM IST

8.jpg

ನಟ ವಿನೋದ್‌ ಪ್ರಭಾಕರ್‌ ಅವರ ಹಿಂದಿನ ಶಕ್ತಿ ಅವರ ಪತ್ನಿ ನಿಶಾ. ಮದುವೆಗೂ ಮುನ್ನ ಇವರಿಬ್ಬರದ್ದು 15 ವರ್ಷಗಳ ಪ್ರೀತಿ. ಮೂಲತಃ ಹೈದರಾಬಾದ್‌ನ ತೆಲುಗು ಭಾಷಿಕ ಕುಟುಂಬಕ್ಕೆ ಸೇರಿದವರು. ಆದರೆ, ಇವರು ಕನ್ನಡ ಮಾತಾಡುವುದನ್ನು ಕೇಳಿದರೆ ಯಾರಿಗೂ ಇವರು ಅನ್ಯಭಾಷಿಕರು ಎಂಬ ಸಂದೇಹವೂ ಬರುವುದಿಲ್ಲ. “ನಾನು ಆರ್ಮಿ ಅಧಿಕಾರಿ ಮಗಳು, ನನ್ನ ಪ್ರಮುಖ ಆದ್ಯತೆಯೇ ಶಿಸ್ತಿನ ಜೀವನ’ ಎನ್ನುವ ನಿಶಾ, ಅದನ್ನೂ ಸ್ಟ್ರಿಕ್ಟಾಗಿಯೇ ಹೇಳಿದರು. ವಿನೋದ್‌ರ ಎಲ್ಲಾ ಏಳುಬೀಳುಗಳ ಜೊತೆ ನಗುನಗುತ್ತಲೇ ಜೀವನ ನಡೆಸಿದ್ದೇನೆ ಎನ್ನುತ್ತಾರೆ ಇವರು.

ಸೇನಾಧಿಕಾರಿ ಮಗಳಾದ ನಿಮ್ಮ ಬಾಲ್ಯ ಹೇಗಿತ್ತು?
ನಾವು ಮೂಲತಃ ಹೈದರಾಬಾದ್‌ನವರು. ನನ್ನ ತಂದೆ ಸಿಆರ್‌ಪಿಎಫ್ ಅಧಿಕಾರಿ. ಅವರಿಗೆ 2-3 ವರ್ಷಗಳಿಗೊಮ್ಮೆ ವರ್ಗಾವಣೆ ಆಗುತ್ತಲೇ ಇರುತ್ತಿತ್ತು. ನಾನು ಬಾಲ್ಯವನ್ನು ದೇಶದ ಬಹುತೇಕ ನಗರಗಳಲ್ಲಿ ಕಳೆದಿದ್ದೇನೆ. 11 ಮತ್ತು 12ನೇ ತರಗತಿ ಮತ್ತು ಡಿಗ್ರಿಯನ್ನು ಚೆನ್ನೈನಲ್ಲಿ ಪೂರೈಸಿದೆ. ಬೇರೆ ಬೇರೆ ನಗರಗಳನ್ನು ನೋಡುವುದು ಒಂದು ಖುಷಿಯಾದರೆ, ಆ ಕಡಿಮೆ ಸಮಯದಲ್ಲಿ ಸ್ನೇಹಿತರನ್ನು ಸಂಪಾದಿಸಲಾಗುತ್ತಿಲ್ಲವಲ್ಲ ಎಂಬ ಬೇಸರವಿತ್ತು. ಈಗಲೂ ನನಗೆ ಶಾಲೆಯ ಸ್ನೇಹಿತರು ಅಂತ ಯಾರೂ ಇಲ್ಲ. ನಮ್ಮ ಮನೆಯಲ್ಲಿ ಶಿಸ್ತಿನ ಜೀವನಕ್ಕೆ ಆದ್ಯತೆ ಇತ್ತು. ಬಾಲ್ಯದಿಂದಲೇ ಶಿಸ್ತಿನ ಜೀವನವನ್ನು ಮೈಗೂಡಿಸಿಕೊಂಡೆ.

ನಿಮ್ಮದು ಲವ್‌ ಮ್ಯಾರೇಜಾ? ಇಬ್ಬರು ಮೊದಲು ಭೇಟಿಯಾಗಿದ್ದು ಎಲ್ಲಿ? 
ನಮ್ಮದು 15 ವರ್ಷಗಳ ಸುದೀರ್ಘ‌ ಪ್ರೀತಿ. 1999ರಲ್ಲಿ ನಾನು ಕಾಲೇಜಿನಲ್ಲಿರುವಾಗ ಒಮ್ಮೆ ಬೆಂಗಳೂರಿಗೆ ಬಂದಿದ್ದೆ. ಆಗ ಅವರ ಭೇಟಿಯಾಗಿತ್ತು. ಅವರು ನನಗೆ ಬೆಂಗಳೂರು ತೋರಿಸಲು ಕರೆದುಕೊಂಡು ಹೋಗಿದ್ದರು. ನನಗೆ ಆಗಲೇ ಅವರು ಇಷ್ಟ ಆಗಿದ್ದರು. ನಮ್ಮಿಬ್ಬರ ಮನೆಯ ಲ್ಯಾಂಡ್‌ಲೈನ್‌ ನಂಬರ್‌ಗಳನ್ನೂ ಬದಲಿಸಿಕೊಂಡಿದ್ದೆವು. ಅವರಂತೂ ಫೋನ್‌ ಮಾಡಲಿಲ್ಲ. ಕಡೆಗೆ ನಾನೇ ಅವರಿಗೆ ಫೋನ್‌ ಮಾಡಿದೆ. ಆದರೆ, ಆಗೆಲ್ಲಾ ಸಂಪರ್ಕ ಉಳಿಸಿಕೊಳ್ಳುವುದು ಈಗಿನಷ್ಟು ಸುಲಭವಿರುತ್ತಿರಲಿಲ್ಲ. ಮಧ್ಯೆಮಧ್ಯೆ ನಾವಿಬ್ಬರೂ ಸಂಪರ್ಕದಲ್ಲಿ ಇಲ್ಲದೇ ಇರುವುದೂ ಆಗಿದೆ. ಆದರೆ, ಮತ್ತೆ ಸಂಪರ್ಕಕ್ಕೆ ಬಂದಾಗ ಅದೇ ಪ್ರೀತಿ ಇರ್ತಾ ಇತ್ತು. ನಾನೇ ಮೊದಲಿಗೆ ಅವರಿಗೆ ಪ್ರಪೋಸ್‌ ಮಾಡಿದೆ. ಅವರಿಗೂ ಇಷ್ಟ ಇತ್ತು. ತಕ್ಷಣ ಒಪ್ಪಿಕೊಂಡರು. 2014ರಲ್ಲಿ ಮದುವೆಯಾದೆವು.

ಫ್ಯಾಷನ್‌ ಡಿಸೈನಿಂಗ್‌ನಲ್ಲಿ ನಿಮಗೆ ತುಂಬಾ ಆಸಕ್ತಿಯಂತೆ…? 
ಹೌದು. ನಾನು ಡಿಸೈನಿಂಗ್‌ ಕೋರ್ಸ್‌ ಮಾಡಿದ್ದೇನೆ. ಅದನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ. ಆದರೆ, ವಿನೋದ್‌ರ ಕಾಸ್ಟೂéಮ್‌, ಲುಕ್‌ಗಳನ್ನೆಲ್ಲಾ ನಾನೇ ನೋಡಿಕೊಳ್ಳುತ್ತೇನೆ. 

ನೀವು ವಿನೋದ್‌ ಪ್ರಭಾಕರ್‌ರ ಕೈಹಿಡಿದ ಮೇಲೆ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಅಂತನ್ನಿಸುತ್ತೆ?
ಇವರು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್‌ ಮುಗಿಸಿದವರು. ಆದರೆ, ಕೆಲಸ ಹುಡುಕಿಕೊಂಡು ಹೋಗುವಷ್ಟು ದಿಟ್ಟ ವ್ಯಕ್ತಿತ್ವ ಅವರಿಗಿರಲಿಲ್ಲ. ಮದುವೆಗೆ ಮುಂಚೆ ಅವರಿಗೆ ಬರುವ ಸಿನಿಮಾಗಳನ್ನು ಅವರು ಮಾಡುತ್ತಾ ಇದ್ರು. ಅವರು ತುಂಬಾ ಸಂಕೋಚದ ಸ್ವಭಾವದವರು. ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಇವರು ಸಿನಿಮಾ ಇಂಡಸ್ಟ್ರಿಗೇ ಸೇರಿದವರಾಗಿದ್ದರೂ ಇಂಡಸ್ಟ್ರಿಯ ಜನರ ಜೊತೆಯೂ ಇವರಿಗೆ ಸಂಪರ್ಕ ಇರುತ್ತಿರಲಿಲ್ಲ. ಮದುವೆಯಾದ ಮೇಲೆ ನಾನು ಮಾಡಿದ ಮೊದಲ ಕೆಲಸವೆಂದರೆ, ಅವರ ಸಂಕೋಚ ಸ್ವಭಾವವನ್ನು ಕಡಿಮೆ ಮಾಡಿದ್ದು. ಅವರು ಸಿನಿಮಾ ಮಂದಿಯ ಜೊತೆ ಬೆರೆಯುವಂತೆ ಮಾಡಿದ್ದು. ನಾನೇ ಒತ್ತಾಯ ಮಾಡಿ ಅವರನ್ನು ಸಮಾರಂಭಗಳಿಗೆ, ಉದ್ಯಮದ ಮಂದಿಯನ್ನು ಭೇಟಿ ಮಾಡಲು ಕಳಿಸುತ್ತಿದ್ದೆ. “ಇಂಡಸ್ಟ್ರಿಯಲ್ಲಿ ನಿಮ್ಮ ಸಂಪರ್ಕ ಬೆಳೆದಷ್ಟು, ವಿನೋದ್‌ ಪ್ರಭಾಕರ್‌ ಎಂಬ ನಟನಿದ್ದಾನೆ ಎಂಬುದು ಜನರ ಮನಸ್ಸಿನಲ್ಲಿ ಇರುತ್ತದೆ’ ಎಂದು ಅವರಿಗೆ ಹೇಳುತ್ತಲೇ ಇರುತ್ತಿದ್ದೆ. ಅದರಂತೆ “ಟೈಸನ್‌’ ಸಿನಿಮಾ ಸಿಕ್ಕಿತು. ಈಗ ಅವರೂ ಬ್ಯುಸಿ ನಟ. 

ವಿನೋದ್‌ ಅವರು ಈಗ ಮೊದಲಿಗಿಂತ ಫಿಟ್‌, ಸ್ಟೈಲಿಷ್‌ ಆಗಿದ್ದಾರೆ. ಇದರ ಹಿಂದೆ ನಿಮ್ಮ ಕೈಚಳಕ ಇದೆಯಾ?
 ನಿರ್ದೇಶಕ ರಾಮ್‌ ನಾರಾಯಣ್‌ “ಟೈಸನ್‌’ ಚಿತ್ರಕ್ಕೆ, ವಿನೋದ್‌ಗೆ ಆಫ‌ರ್‌ ಕೊಟ್ಟಾಗ ನಾನು ಮೊದಲು ಮಾಡಿದ ಕೆಲಸ ಅವರ ಸಂಪೂರ್ಣ ಲುಕ್‌ ಬದಲಿಸಿದ್ದು. ಅವರ ಹೇರ್‌ ಸ್ಟೈಲ್‌, ಕಾಸ್ಟೂéಮ್‌, ಮೇಕಪ್‌ ಬದಲಿಸಿದೆ. “ಟೈಸನ್‌’ನಲ್ಲಿ ಅವರ ಸಂಪೂರ್ಣ ಲುಕ್‌ ಬದಲಾಗಿತ್ತು. ಅದಕ್ಕೆ ಅವರಿಗೆ ಸಾಕಷ್ಟು ಹೊಗಳಿಕೆ ಕೂಡಾ ಬಂದಿತು. ಟೈಸನ್‌ ಚಿತ್ರದಿಂದ ಅವರ ಲುಕ್‌ ಅನ್ನು ಅದೇ ಮಟ್ಟದಲ್ಲಿ ಪೋಷಿಸಿಕೊಂಡು ಬಂದಿದ್ದೇವೆ.  

ವಿನೋದ್‌ ಪ್ರಭಾಕರ್‌ ಅವರು 8 ಪ್ಯಾಕ್ಸ್‌ ಮಾಡಿದ್ದಾರೆ? ನೀವೂ ಸಾಕಷ್ಟು ಫಿಟ್‌ ಆಗಿದ್ದೀರ. ನಿಮ್ಮ ಫಿಟ್ನಸ್‌ ಗುಟ್ಟೇನು? 
ನಾನು ಆರ್ಮಿ ಅಧಿಕಾರಿ ಮಗಳಾದ್ದರಿಂದ ಮೊದಲಿನಿಂದಲೂ ಫಿಟೆ°ಸ್‌ ಕುರಿತು ವಿಶೇಷ ಪ್ರೀತಿ. ಮದುವೆಗೆ ಮುಂಚೆಯೂ ಡಯಟ್‌ ಪಾಲಿಸುತ್ತಿದೆ. ಅಮ್ಮ ನನಗೆ ಬೇಕಾದ ಡಯಟ್‌ ಆಹಾರವನ್ನು ತಯಾರಿಸಿಕೊಡುತ್ತಿದ್ದರು. ಮದುವೆಯಾದ ಮೇಲೆ ಅಡುಗೆ ತಯಾರಿಸುವುದು ನಾನೇ. ನಾನು ಡಯಟನ್ನು ಗಮನದಲ್ಲಿರಿಸಿಕೊಂಡೇ ಕಡಿಮೆ ಎಣ್ಣೆ, ಉಪ್ಪು, ಮಸಾಲೆ ಬಳಸಿ ಅಡುಗೆ ತಯಾರಿಸಿಸುತ್ತೇನೆ. ಅವರು ಯಾವಾಗಲೂ ಅಡುಗೆಯವರನ್ನಿರಿಸಿಕೊಳ್ಳಲು ಹೇಳುತ್ತಾರೆ. ಆದರೆ, ಅವರಿಗೆ ನನ್ನ ಡಯಟ್‌ ಕ್ರಮಗಳನ್ನು ಹೇಳಿಕೊಡುವುದು ಕಷ್ಟ. ಹೀಗಾಗಿ, ನಾನೇ ಅಡುಗೆ ಮಾಡುತ್ತೇನೆ. ಮದುವೆಯಾದ ಮೇಲೆ ಸ್ವಲ್ಪ ದಪ್ಪಗಾಗಿದ್ದೆ. ಅವರ ಜೊತೆ ನಾನೂ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಿ, 10 ಕೆ.ಜಿ. ತೂಕ ಇಳಿಸಿದೆ. ಫಿಟ್‌ ಆಗಿರಲು ಡಯಟ್‌ ಅಷ್ಟೇ ಸಾಲದು. ವರ್ಕ್‌ಔಟ್‌ ಮಾಡುವುದೂ ತುಂಬಾ ಮುಖ್ಯ. 

ನಿಮ್ಮಿಬ್ಬರ ಡಯಟ್‌ ಹೇಗಿರುತ್ತದೆ?
ವಿನೋದ್‌ರ ಡಯಟ್‌ ಫ‌ುಡ್‌ ಅನ್ನು ನಾನೇ ತಯಾರಿಸುವುದು. ಅವರಿಗೆ ಬೇಯಿಸಿದ ಮೊಟ್ಟೆ. ತರಕಾರಿ, ಹಣ್ಣುಗಳ ಸಲಾಡ್‌ ಕೊಡುತ್ತೇನೆ. ನಾನೂ ಅದನ್ನೇ ತಿನ್ನುತ್ತೇನೆ. ಅವರು ಸ್ಟ್ರಿಕ್ಟ್ ಡಯಟ್‌ನಲ್ಲಿ ಇರುವಾಗ ಆಹಾರಕ್ಕೆ ಉಪ್ಪು, ಮೆಣಸಿನ ಪುಡಿ, ನಿಂಬೆ ರಸ ಇಷ್ಟೇ ಬೆರೆಸುವುದು. ಮಸಾಲೆ ಪದಾರ್ಥ, ಸಕ್ಕರೆ, ಎಣ್ಣೆ ಬಳಸುವುದೇ ಇಲ್ಲ. 8 ಪ್ಯಾಕ್ಸ್‌ ಮಾಡುವುದಕ್ಕೂ ಮೊದಲು. ಬೇಯಿಸಿದ ಮೊಟ್ಟೆಯನ್ನು ಹೆಚ್ಚು ತಿನ್ನುತ್ತಿದ್ದರು. ಪ್ರೊಟೀನ್‌ ಹೆಚ್ಚಾದರೂ ದೇಹಕ್ಕೆ ಒಳ್ಳೆಯದಲ್ಲ. ಈಗ ಅದನ್ನು ಕಮ್ಮಿ ಮಾಡಿದ್ದೇನೆ. ತುಂಬಾ ಅಪರೂಪಕ್ಕೆ ನಾವು ಡಯಟ್‌ ತಪ್ಪಿಸುವುದು.

ನಿಮ್ಮ ಮಾವ ಕನ್ನಡದ ಪ್ರಖ್ಯಾತ ಖಳನಟರು. ಅವರ ಬಗ್ಗೆ ತಿಳಿದಿತ್ತಾ? ಅವರ ಸಿನಿಮಾಗಳನ್ನು ನೋಡಿದ್ದೀರಾ?
2000ನೇ ಇಸವಿಯಲ್ಲಿ ಕಾಲೇಜು ಸ್ನೇಹಿತೆ ಅಂತ ಹೇಳಿ ವಿನೋದ್‌ ನನಗೆ ಮಾವನನ್ನು ಪರಿಚಯ ಮಾಡಿಸಿದ್ದರು. ತುಂಬಾ ಪ್ರೀತಿಯಿಂದ ಮಾತಾಡಿಸಿದ್ದರು. ಬಹಳ ಒಳ್ಳೆಯ ಮನುಷ್ಯ ಅವರು. ಅವರನ್ನು ಭೇಟಿ ಮಾಡಿದ್ದು ಜೀವನದ ಮರೆಯಲಾರದ ಕ್ಷಣ. ಅದಾದ ಬಳಿಕ ಅವರ ಸಿನಿಮಾಗಳನ್ನು ನೋಡಲು ಆರಂಭಿಸಿದೆ. ಅವರೊಬ್ಬರು ಅದ್ಭುತ ನಟ.

ತೆಲುಗು ಮಾತೃಭಾಷಿಕರಾದರೂ ಇಷ್ಟು ಚೆನ್ನಾಗಿ ಕನ್ನಡ ಮಾತಾಡುತ್ತೀರಿ. ಇದಕ್ಕೆ ವಿನೋದ್‌ರಿಂದ ಮೆಚ್ಚುಗೆ ಸಿಕ್ಕಿದೆಯಾ?
ಬಹಳ ಸರಿ ನಾನು ಕನ್ನಡವನ್ನು ಇಷ್ಟು ಬೇಗ ಕಲಿತಿದ್ದಕ್ಕೆ ಅವರು ಹೊಗಳಿದ್ದಾರೆ. ಮನೆಯಲ್ಲಿ ಕೆಲಸದವರ ಜೊತೆ, ಸೆಟ್‌ನಲ್ಲಿ ಎಲ್ಲರ ಜೊತೆ ನಾನು ಕನ್ನಡದಲ್ಲೇ ಮಾತಾಡುವುದು. ಮನೆಯಲ್ಲೂ ಕನ್ನಡದಲ್ಲೇ ಮಾತಾಡುತ್ತೇವೆ. ವಿನೋದ್‌ರ ಅಭಿಮಾನಿಗಳು ಕರೆ ಮಾಡಿದಾಗಲೂ ಕನ್ನಡದಲ್ಲೇ ಪ್ರತಿಕ್ರಿಯೆ ಕೊಡುತ್ತೇನೆ. ಮದುವೆಯಾದ ನಂತರ ಕನ್ನಡವನ್ನೇ ಹೆಚ್ಚು ಬಳಸುವುದರಿಂದ ಕನ್ನಡ ಬೇಗ ಕಲಿತೆ. 

ನೀವು ಮದುವೆಯಾದಾಗ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿತ್ತು? ಕಷ್ಟದ ಸಂದರ್ಭವನ್ನು ಹೇಗೆ ನಿಭಾಯಿಸಿದ್ದೀರಿ?
ನಾವು ಮದುವೆಯಾದಾಗ ಅವರಿನ್ನೂ ಇಂಡಸ್ಟ್ರಿಯಲ್ಲಿ ನೆಲೆ ನಿಲ್ಲಲು ಕಷ್ಟಪಡುತ್ತಿದ್ದರು. ಆರ್ಥಿಕವಾಗಿಯೂ ಕಷ್ಟದಲ್ಲಿದ್ದೆವು. ನಮ್ಮ ಬಳಿ 100 ರೂ. ಇದ್ದರೆ ಅಷ್ಟರಲ್ಲೇ ಎಲ್ಲವನ್ನೂ ಸಂಭಾಳಿಸುತ್ತಿದ್ದೆ. 1000 ರೂ. ಇದ್ದರೆ ಅಷ್ಟರಲ್ಲೇ ಸಂಭಾಳಿಸುತ್ತಿದ್ದೆ. ಈಗ ಅಂಥದ್ದೇನೂ ತೊಂದರೆ ಇಲ್ಲ. ಕಷ್ಟ ಬಂದಾಗ ಯಾವತ್ತೂ ನಾವು ವ್ಯಥೆಪಟ್ಟಿಲ್ಲ. ಅವರು ನನ್ನನ್ನು ತುಂಬಾ ನಂಬುತ್ತಾರೆ. ಅವರೆದುರು ನಾನು ಧೈರ್ಯಗೆಟ್ಟರೆ, ಅವರೂ ಮಾನಸಿಕವಾಗಿ ಕುಸಿದುಬಿಡುತ್ತಾರೆ. ಹೀಗಾಗಿ, ನಾನು ಅವರೆದುರು ಯಾವತ್ತೂ ಕಷ್ಟವನ್ನು ತೋರಿಸಿಕೊಂಡಿಲ್ಲ. ಕೆಟ್ಟ ಕಾಲ ಬಂದ ಮೇಲೆ ಒಳ್ಳೆ ಕಾಲ ಬಂದೇ ಬರುತ್ತೆ ಎಂದು ದೃಢವಾಗಿ ನಂಬಿದ್ದವಳು ನಾನು. ನಮ್ಮ ವಿಷಯದಲ್ಲಿ ಅದು ಈಗ ನಿಜವಾಗುತ್ತಿದೆ.

ನಿಮ್ಮಿಬ್ಬರಲ್ಲಿರುವ ಸಮಾನ ಆಸಕ್ತಿ, ಗುಣಗಳು ಯಾವುವು? 
ಇಬ್ಬರೂ ಸಂಗೀತ ಪ್ರೇಮಿಗಳು, ಪ್ರವಾಸ ಮಾಡುವುದು ಇಬ್ಬರಿಗೂ ಇಷ್ಟ. ಇಬ್ಬರಿಗೂ ತುಂಬಾ ತಾಳ್ಮೆ ಇದೆ. ಇಬ್ಬರದ್ದೂ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ವಭಾವ. ನಾವಿಬ್ಬರೂ ಜಗಳವಾಡುವುದು ಬಹಳ ಕಡಿಮೆ. ಸದಾ ನಗುನಗುತ್ತಾ ಇರುತ್ತೇವೆ. “ನಿಮ್ಮಬ್ಬರನ್ನು ನೋಡುವುದೇ ಚೆಂದ, ಸದಾ ಇಷ್ಟು ಖುಷಿಯಾಗಿ ಹೇಗೆ ಇರಿ¤àರಾ?’ ಎಂದು ತುಂಬಾ ಜನ ನಮ್ಮನ್ನು ಕೇಳಿದ್ದಾರೆ.

ಬಿಡುವಿನ ಸಮಯ ಹೇಗೆ ಕಳೆಯುತ್ತೀರ? 
ನನಗೆ ಬಿಡುವೇ ಇರುವುದಿಲ್ಲ. ಅಡುಗೆ ಸೇರಿ ಮನೆಯ ಎಲ್ಲಾ ಕೆಲಸ ನಾನೇ ಮಾಡುತ್ತೇನೆ. ಅವರ ಜೊತೆ ಶೂಟಿಂಗ್‌ಗೆ ಹೊಗುತ್ತೇನೆ. ಅವರು ಶಾಪಿಂಗ್‌ ಮಾಡುವುದೇ ಇಲ್ಲ. ಹೀಗಾಗಿ, ಅವರ ಶಾಪಿಂಗ್‌ ಕೂಡ ನಾನೇ ಮಾಡಬೇಕು. ನನಗೆ ಸಮಯವೇ ಸಾಲುವುದಿಲ್ಲ.

ಮಹಿಳೆಯರಿಗೆ ಫಿಟ್ನೆಸ್‌ ಟಿಪ್ಸ್‌ ಕೊಡುವುದಾದರೆ? 
ಹೊರಗೆ ಹೋಗುವಾಗ ಒಂದು ಸೇಬು ಅಥವಾ ಒಂದು ಕ್ಯಾರೆಟ್‌, ಸೌತೆಕಾಯಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ. ನಿಮಗೆ ಹಸಿವಾದಾಗ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಬದಲು ಸೇಬು, ಸೌತೆಕಾಯಿಯನ್ನು ತಿನ್ನಿ. ಸಿಹಿತಿಂಡಿಯಿಂದ ದೂರ ಇರಿ. ತುಂಬಾ ಆಸೆಯಾದರೆ ಸ್ವಲ್ಪ ಡಾರ್ಕ್‌ ಚಾಕ್ಲೆಟ್‌ ತನ್ನಿ. ಪಾರ್ಟಿ, ಹಬ್ಬದಂದು ಚೆನ್ನಾಗಿ ತಿಂದರೆ ಅಂದೇ ವರ್ಕ್‌ಔಟ್‌ ಮಾಡಿ ಅದನ್ನು ಕರಗಿಸಿ.

– ಚೇತನ ಜೆ.ಕೆ. 

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.