ಶ್ರಾವಣ ಬಂದಾಯ್ತು ಲಕ್ಷ್ಮಿ ಬರುವ ಹೊತ್ತು…


Team Udayavani, Aug 22, 2018, 6:00 AM IST

8.jpg

ಹಬ್ಬಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ವರಮಹಾಲಕ್ಷ್ಮಿ ಹಬ್ಬವೆಂದರೆ ಮನೆ-ಮನಗಳಲ್ಲಿ ವಿಶೇಷ ಸಡಗರ. ಅದು ಸಿರಿದೇವಿಯನ್ನು ಮನೆತುಂಬಿಸಿಕೊಳ್ಳುವ ಹಬ್ಬ. ಉಳ್ಳವರು ಅದ್ದೂರಿಯಾಗಿ, ಉಳಿದವರು ಚೊಕ್ಕಟವಾಗಿಯಾದರೂ ಈ ಹಬ್ಬವನ್ನಾಚರಿಸುತ್ತಾರೆ. ಶ್ರಾವಣವೆಂದರೆ ಹಬ್ಬಗಳ ಸಾಲು. ಸಮಾಜದಲ್ಲಿ ಮೇಲು, ಕೀಳು, ಬಡವ, ಬಲ್ಲಿದರೆಂಬ ಭೇದವಿಲ್ಲದೆ, ಸರ್ವ ಸಮಾನರಾಗಿ ಎಲ್ಲರೂ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ವರಮಹಾಲಕ್ಷ್ಮೀವ್ರತ.

ಪೊರೆಯುವ ದೇವಿಗೆ ಅಕಲಂಕ ಭಕ್ತಿ, ಶ್ರದ್ಧೆಯಿಂದ ಅರ್ಚಿಸಿ, ಪೂಜಿಸಲು ಧಾರ್ಮಿಕ ನಿಷ್ಠೆ, ಭಕ್ತಿಯುಳ್ಳ ಮನೆ ಮನೆಗಳ ಸದಸ್ಯರು ಹಬ್ಬಗಳ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ಮೊದಲಿನದು. ವಿವಾಹಿತ ಮಹಿಳೆಯರಿಗೆ ವಿಶೇಷದ ಸಡಗರ. ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ ವರಮಹಾಲಕ್ಷ್ಮಿಯ ಪೂಜಾಸಂಭ್ರಮ. ದೇವಸ್ಥಾನಗಳಲ್ಲಿ, ಮನೆಮನೆಗಳಲ್ಲಿ. ಮಂಗಳವಾರ, ಶುಕ್ರವಾರ ದೇವೀಪೂಜೆಗೆ ಶುಭ ದಿನ. ಅದರಲ್ಲೂ ಗೋಧೂಳಿ ಹೊತ್ತು ಶ್ರೇಷ್ಠ. ಲಕ್ಷ್ಮಿದೇವಿ ಅಂದರೆ ಸಿರಿಯ ಅಧಿದೇವಿ. ಆಕೆಯ ಅರ್ಚನೆ, ಪೂಜೆಗಳಿಂದ ಸಕಲ ಸಂಪತ್ತನ್ನು ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಸಾರ್ವತ್ರಿಕವಾಗಿದೆ. ವಿಜೃಂಭಣೆಯಿಂದ ಉಳ್ಳವರು ಆಚರಿಸಿದರೆ, ಸರಳವಾಗಿ, ಸಾಮೂಹಿಕವಾಗಿ ಆಚರಿಸಿ ದೇವಿಯ ಕೃಪೆಗೆ ಭಾಜನರಾಗುವವರು ಧಾರಾಳವಾಗಿದ್ದಾರೆ.

  ಎಲ್ಲ ಪೌರಾಣಿಕ ಹಬ್ಬ, ವ್ರತಗಳಿಗೂ ಇರುವಂತೆ ವರಮಹಾಲಕ್ಷ್ಮಿ ವ್ರತದ ಹಿಂದೆಯೂ ಒಂದು ಹಿನ್ನಲೆ ಕಥೆ ಇದೆ. ಚಾರುಮತಿ ಎಂಬ ಒಬ್ಬಳು ಬಡ ಮುತ್ತೈದೆ ಬಹು ಕಷ್ಟದಲ್ಲಿ ಬದುಕುತ್ತಿದ್ದಳು. ಇಡೀ ದಿನ ಹಿರಿಯರ ಸೇವೆ, ಪತಿ ಸೇವೆ. ಮಕ್ಕಳ ಆರೈಕೆ ಎಂದು ದುಡಿಯುತ್ತಿದ್ದಳು. ಆಕೆ ಲಕ್ಷ್ಮಿದೇವಿಯ ಪರಮಭಕ್ತೆ. ಅವಳ ನಿರ್ವಾಜ್ಯ ಭಕ್ತಿಗೆ ಒಲಿದ ದೇವಿ ಶ್ರಾವಣಮಾಸದ ಒಂದು ರಾತ್ರಿ ಸ್ವಪ್ನದಲ್ಲಿ ಕಾಣಿಸಿಕೊಂಡಳು. ನಿದ್ರಿಸುತ್ತಿದ್ದ ಚಾರುಮತಿಯನ್ನು ದೇವಿ ಎಬ್ಬಿಸಿದಳು. ಆಕೆಯ ಎದುರಿನಲ್ಲಿ ಅಪೂರ್ವಪ್ರಭೆಯ ಮಹಾಲಕ್ಷ್ಮಿ ಪ್ರತ್ಯಕ್ಷವಾಗಿದ್ದಳು. “ಚಾರುಮತಿ, ನಾನು ವರಮಹಾಲಕ್ಷ್ಮಿ ಬಂದಿದ್ದೇನೆ. ನಿನ್ನ ನಿಜಭಕ್ತಿಗೆ ಮೆಚ್ಚಿದ್ದೇನೆ. ಶ್ರಾವಣಮಾಸದ ಶುಕ್ಲಪಕ್ಷದ ಹುಣ್ಣಿಮೆಗೆ ಸಮೀಪದ ಶುಕ್ರವಾರ ದೇವಿಪೂಜೆಯ ವಿಶೇಷದ ದಿನ. ಆ ದಿನ ನಾನು ವರಮಹಾಲಕ್ಷ್ಮಿಯಾಗಿ ಬಂದು ನಂಬಿದ ಭಕ್ತರಿಗೆ ಬೇಡಿದ್ದನ್ನು ಕರುಣಿಸುತ್ತೇನೆ. ಧನಕನಕವೇ ಮೊದಲಾದ ಕೋರಿಕೆಗಳನ್ನು ಈಡೇರಿಸುತ್ತೇನೆ. ಅಂದು ಶ್ರದ್ಧಾಭಕ್ತಿಯಿಂದ ನನ್ನನ್ನು ಅರ್ಚಿಸಿ, ಪೂಜಿಸಿ ಒಳ್ಳೆಯ ಫ‌ಲಗಳನ್ನು ಪಡೆದುಕೋ’ ಚಾರುಮತಿ ನೋಡುತ್ತಿದ್ದಂತೆ ದೇವಿ ಮಾಯವಾದಳು. ಎಚ್ಚೆತ್ತ ಅವಳು ಮನೆಯವರನ್ನು ಎಬ್ಬಿಸಿ ಸ್ವಪ್ನದ ವಿಚಾರವನ್ನೆಲ್ಲ ಮನೆಯವರಿಗೆ ತಿಳಿಸಿದಳು. ಎಲ್ಲರೂ ಸಂತೋಷದಿಂದ, ಭಕ್ತಿಯಿಂದ ಶುಕ್ರವಾರದ ದಿನ ವರಮಹಾಲಕ್ಷ್ಮಿಯನ್ನು ಅರ್ಚಿಸಿ ಬೇಡಿಕೊಂಡರು. ಪ್ರಸನ್ನೆಯಾದ ದೇವಿ ಚಾರುಮತಿಗೆ ಸುಖ, ಸಂಪತ್ತು, ಆರೋಗ್ಯವೇ ಮೊದಲಾದ ಸರ್ವ ವರಗಳನ್ನೂ ಕರುಣಿಸಿದಳು. ಅಂದಿನಿಂದ ಚಾರುಮತಿ ದಿನೇ ದಿನೇ ಸಂಪತ್ತು, ಸಮೃದ್ಧಿ ಹೊಂದಿದಳು. ನಂತರ ವರ್ಷ ವರ್ಷವೂ ಭಕ್ತಿಯಿಂದ ಪೂಜಿಸುತ್ತಾ ಇತರರಿಗೆ ಒಳಿತನ್ನು ಮಾಡುತ್ತ ಸುಖಸಂತೋಷದಿಂದ ಕುಟುಂಬದವರೊಂದಿಗೆ ಕಾಲ ಕಳೆದಳು.

“ಲೋಕದ  ಭಕ್ತರ  ಸುಖ, ಸಂತೋಷ ಹೆಚ್ಚಿಸಲು ಒಳ್ಳೆಯ ವ್ರತವೊಂದನ್ನು ತಿಳಿಸಬೇಕು’ ಎಂದು ಪಾರ್ವತಿದೇವಿ ಪರಮೇಶ್ವರನಲ್ಲಿ ಬೇಡಿಕೊಂಡಾಗ ಶಿವನು ಉಪದೇಶಿಸಿದ ವ್ರತ, ಇದೇ ವರಮಹಾಲಕ್ಷ್ಮಿವ್ರತ. ಸ್ತ್ರೀ - ಪುರುಷರೆಂಬ ಭೇದ, ಬಡವ- ಬಲ್ಲಿದರೆಂಬ ಅಂತರ, ಮೇಲು- ಕೀಳು ಎಂಬ ಭಾವನೆ ಇಲ್ಲದೆ ಸರ್ವ ಭಕ್ತರೂ ಆಚರಿಸಬಹುದಾದ ಈ ವ್ರತ ಭಕ್ತರ ಮನೋಭಿಷ್ಟವನ್ನು ಈಡೇರಿಸುತ್ತದೆ. ಮುಂದೆ ಶೌನಕಾದಿ ಮುನಿಗಳು, ಸೂತ ಪುರಾಣಿಕರ ಮೂಲಕ ನಾಡಿನ ಎಲ್ಲೆಡೆ ವರಮಹಾಲಕ್ಷ್ಮಿ ವ್ರತವನ್ನು ಭಕ್ತಿ ಭಾವದಿಂದ ಆಚರಿಸತೊಡಗಿದರು.

ಸಾಮೂಹಿಕವಾಗಿ ಮಾಡುವ ಪೂಜೆ, ಅರ್ಚನೆಗಳಲ್ಲಿ ವಿಶೇಷವಾದ ಶಕ್ತಿ ಇದೆ. ಅಲ್ಲಿ ದೇವತಾ ಸಾನ್ನಿಧ್ಯವಿರುತ್ತದೆ. ಯಾವುದೇ ಭೇದ ಭಾವಗಳಿಲ್ಲದೆ ಎಲ್ಲರೂ ಒಟ್ಟಾಗಿ ನಿಜ ಭಕ್ತಿಯಿಂದ ಮಾಡುವ  ದೇವತಾ ಕಾರ್ಯಗಳಲ್ಲಿ ದೇವತಾನುಗ್ರಹವಾಗುತ್ತದೆ. ಅದ್ಧೂರಿ, ಆಡಂಬರ, ವೈಭವದ ಪ್ರದರ್ಶನಕ್ಕಿಂತಲೂ ಭಕ್ತಿಪೂರ್ವಕವಾಗಿ ಭಗವಂತನಿಗೆ ಒಂದು ತುಳಸೀದಳ ಅರ್ಪಿಸಿದರೆ ಅವನು ಪ್ರಸನ್ನನಾಗಿ ಒಲಿಯುತ್ತಾನೆ. ಸಂತತಿಯೇ ಇಲ್ಲದ ದಂಪತಿ ಒಂದು  ಸಂತಾನಕ್ಕಾಗಿ ತಮ್ಮೆಲ್ಲ ಆರ್ಥಿಕ ಸಂಪತ್ತನ್ನು ಸಮರ್ಪಿಸಲು ಹಿಂದು ಮುಂದೆ ನೋಡುವುದಿಲ್ಲ. ಹಾಸಿಗೆ ಹಿಡಿದ ರೋಗಿ ತನಗೆ ನಡೆದಾಡುವಂತಾಗಲು ಅದೆಷ್ಟು ವೆಚ್ಚ ಮಾಡಲೂ ಹಿಂಜರಿಯಲಾರ. ಕೋಟಿ ಹೊನ್ನಿಗಿಂತ ಮಿಗಿಲು ಉತ್ತಮ ಸಂತಾನ. ಅದು ಹೆಣ್ಣು ಮಗು ಅಥವಾ ಗಂಡು ಮಗುವೇ ಇರಲಿ. ಅದೇ ಮನೆಯ ಮಾಣಿಕ್ಯ. ಮತಿ ವಿಕಲ್ಪತೆ, ಅಂಗ ವೈಕಲ್ಯ, ಕಾಡುವ ಅನಾರೋಗ್ಯದಿಂದ ಬಸವಳಿದ ಜನರಲ್ಲಿ ವಿಚಾರಿಸಿದರೆ ಉತ್ತಮ ಆರೋಗ್ಯವೇ ದೊಡ್ಡ ಸಂಪತ್ತು. ಮನೆ ಮನೆಗಳಲ್ಲಿ ಬಂಧುಗಳು ಕಳೆದುಕೊಂಡ ಪ್ರೀತಿಪಾತ್ರರು ಮರಳಿ ಸಿಗುವುದಾದರೆ ತಮ್ಮೆಲ್ಲ ಧನ ಸಂಪತ್ತು ವೆಚ್ಚ ಮಾಡಲೂ ಹಿಂಜರಿಯುವುದಿಲ್ಲ. ಬರಿದೇ ಹಣ, ಒಡವೆ, ಮನೆ, ಮಹಲು, ಭೂಮಿಗಾಗಿ ಹಾತೊರೆಯುವ ಬದಲಾಗಿ ಅದಕ್ಕಿಂತ ಸಹಸ್ರ ಪಟ್ಟು ಹೆಚ್ಚಿನ ಮೌಲ್ಯದ ನೆಮ್ಮದಿ, ಆರೋಗ್ಯಪೂರ್ಣ, ಸಂತೋಷದ ಕುಟುಂಬ ಜೀವನಕ್ಕಾಗಿ ದೇವರಲ್ಲಿ ಕೈ ಜೋಡಿಸಬಹುದು. ಎಲ್ಲದಕ್ಕಿಂತ  ಹೆಚ್ಚಿನ ಮೌಲ್ಯದ ಸಂಪತ್ತು- ದುಡ್ಡು, ಕಾಸು, ಆಭರಣ, ಭೂಮಿಗಿಂತ ಮಿಗಿಲಾಗಿ ಶಾರೀರಿಕ, ಮಾನಸಿಕ ಆರೋಗ್ಯ ಭಾಗ್ಯದ ಬದುಕು. ಕೋಟಿ ಹೊನ್ನಿಗೂ ಹೆಚ್ಚಿನ ಉತ್ತಮ ಸಂಸ್ಕಾರವಂತ ಸಂತಾನ. ಲಕ್ಷ್ಮಿದೇವಿಯ ಅನುಗ್ರಹದಿಂದ ಅದು ಚೆನ್ನಾಗಿದ್ದರೆ ಹಣ, ಒಡವೆ, ಆಸ್ತಿ ಎಲ್ಲ ತಾನಾಗಿಯೇ ಹಿಂಬಾಲಿಸುತ್ತದೆ.

ಕೃಷ್ಣವೇಣಿ ಎಂ. ಕಿದೂರು

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.