ಅಷ್ಟಮಿಗೆ ಇಷ್ಟದ ತಿಂಡಿಗಳು


Team Udayavani, Aug 29, 2018, 6:00 AM IST

s-5.jpg

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಚಕ್ಕುಲಿ, ಕೋಡುಬಳೆ, ವಿವಿಧ ಬಗೆಯ ಉಂಡೆಗಳನ್ನು ತಯಾರಿಸುವ ಸಂಪ್ರದಾಯ ನಮ್ಮಲ್ಲಿದೆ. ಹಬ್ಬದ ಗಡಿಬಿಡಿಯಲ್ಲಿ ಎಲ್ಲರೂ ಸುಲಭವಾಗಿ ತಯಾರಿಸಬಹುದಾದ ಉಂಡೆ, ಚಕ್ಕುಲಿಯ ರೆಸಿಪಿ ಇಲ್ಲಿದೆ ನೋಡಿ. 

1.ಕೋಡುಬಳೆ.
ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು- 1/2 ಕಪ್‌, ಚಿರೋಟಿ ರವೆ 1/4 ಕಪ್‌, ಮೈದಾ ಹಿಟ್ಟು 1/2 ಕಪ್‌, ಅಜವಾನ ಅರ್ಧ ಚಮಚ, ಇಂಗು ಚಿಟಿಕೆ, ಬಿಸಿ ಎಣ್ಣೆ ಎರಡು ಚಮಚ, ಉಪ್ಪು ರುಚಿಗೆ, ಎಣ್ಣೆ ಕರಿಯಲು, ತೆಂಗಿನತುರಿ- 1/4ಕಪ್‌, ಜೀರಿಗೆ ಅರ್ಧ ಚಮಚ, ಒಣಮೆಣಸು-5-6,  ನೀರು 1/4 ಕಪ್‌ ಹಾಕಿ ರುಬ್ಬಿಕೊಳ್ಳಿ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ,ಇಂಗು,ಅಜವಾನ ಹಾಕಿ ಆ ಮಿಶ್ರಣಕ್ಕೆ ಬಿಸಿ ಮಾಡಿದ ಎಣ್ಣೆ ಹಾಕಿ ಕಲಸಿ. ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಅದು ಚಪಾತಿ ಹಿಟ್ಟಿನ ಹದಕ್ಕೆ ಮೃದುವಾಗಿರಲಿ. ನಂತರ ಸ್ವಲ್ಪ ಸ್ವಲ್ಪವೇ ಹಿಟ್ಟನ್ನು ತೆಗೆದುಕೊಂಡು ಒಂದೇ ರೀತಿಯಲ್ಲಿ ಉಜ್ಜುತ್ತಾ ಹೋಗಿ. ನಂತರ ಬಳೆಯ ಆಕಾರ ಮಾಡಿ. ಎಣ್ಣೆ ಬಿಸಿ ಮಾಡಿ. ಕೋಡುಬಳೆಯನ್ನು ಎಣ್ಣೆಯಲ್ಲಿ ಹಾಕಿ ಎರಡೂ ಬದಿಗಳಲ್ಲಿ ಕೆಂಬಣ್ಣ ಬರುವವರೆಗೆ ಬೇಯಿಸಿ. ಗರಿಗರಿಯಾದ ಕೋಡುಬಳೆ ಹಬ್ಬಕ್ಕೂ ಹಾಗೂ ಬೇರೆ ದಿನಗಳಲ್ಲಿ ಕಾಫಿ ಜೊತೆಗೆ ಸವಿಯಲೂ ಆಗುತ್ತದೆ. 

2.ಹಾಲಿನ ಪುಡಿಯ ಉಂಡೆ
ಬೇಕಾಗುವ ಸಾಮಗ್ರಿ: ಹಾಲಿನ ಪುಡಿ-1 ಕಪ್‌, ಒಣಕೊಬ್ಬರಿ ತುರಿಯ ಬಿಳಿಯ ಭಾಗ (ರೆಡಿಮೇಡ್‌ ಒಣ ಕೊಬ್ಬರಿ ತುರಿ) 1/2 ಕಪ್‌, ಸಕ್ಕರೆ 1/4 ಕಪ್‌, ಹಾಲು- 1/4 ಕಪ್‌, ಏಲಕ್ಕಿ ಪುಡಿ- 1/4 ಚಮಚ, ತುಪ್ಪ-2 ಚಮಚ.

ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ತುಪ್ಪ, ಹಾಲು ಮತ್ತು ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ಗಂಟಾಗದ ರೀತಿಯಲ್ಲಿ ಕೈಯಾಡಿಸುತ್ತಾ ಇರಿ. ಆ ಮಿಶ್ರಣ ಒಂದು ನಿಮಿಷಕ್ಕೆ ಗಟ್ಟಿಯಾಗುತ್ತದೆ. ಅದಕ್ಕೆ ಸಕ್ಕರೆಯನ್ನು ಪುಡಿ ಮಾಡಿ ಸೇರಿಸಿ (ಸಕ್ಕರೆ ಪುಡಿ ಹಾಕಿದರೆ ಬೇಗ ಕರಗಿ, ಬೇಗ ಪಾಕ ಬರುತ್ತದೆ) ಪಾಕ ಬಂದ ಮೇಲೆ ಒಣ ಕೊಬ್ಬರಿ ತುರಿ ಹಾಕಿ ಮಿಶ್ರಣ ಮಾಡಿ, ಏಲಕ್ಕಿ ಪುಡಿಯನ್ನು ಸೇರಿಸಿ. ಈಗ ಮುಟ್ಟಿದರೆ ಕೈಗೆ ಅಂಟುವುದಿಲ್ಲ. ನಂತರ ಒಲೆಯಿಂದ ಇಳಿಸಿ. ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ ಕೊಬ್ಬರಿ ತುರಿಯಲ್ಲಿ ಉರುಳಿಸಿ. ಹಾಲಿನ ಪುಡಿಯಿಂದ ಐದಾರು ನಿಮಿಷದಲ್ಲಿ ತಯಾರಿಸಬಹುದಾದ ರೆಸಿಪಿ ಇದಾಗಿದೆ. ಈ ಉಂಡೆ ಹದಿನೈದು ದಿನಗಳ ಕಾಲ ಕೆಡುವುದಿಲ್ಲ. 

3. ಪಾಲಕ್‌ ಸೊಪ್ಪಿನ ಚಕ್ಕುಲಿ
ಬೇಕಾಗುವ ಸಾಮಗ್ರಿ:
ಅಕ್ಕಿ- 2ಕಪ್‌, ಕಡಲೆಹಿಟ್ಟು 1/2ಕಪ್‌, ಹುರಿಗಡಲೆಪುಡಿ- 2ಚಮಚ, ಜೀರಿಗೆ 1/2ಚಮಚ, ಚಿಟಿಕೆ ಇಂಗು, ಉಪ್ಪು ರುಚಿಗೆ, ಬೆಣ್ಣೆ-1 ಚಮಚ, ಎಳ್ಳು 1 ಚಮಚ, ನೀರು 1/4ಕಪ್‌, ಕರಿಯಲು ಎಣ್ಣೆ. (ರುಬ್ಬಿಕೊಳ್ಳಲು- ಪಾಲಕ್‌ ಸೊಪ್ಪು ಒಂದು ಹಿಡಿ, ಹಸಿಮೆಣಸು 2, ನೀರು 1/4 ಕಪ್‌)

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆಹಿಟ್ಟು, ಹುರಿಗಡಲೆ ಪುಡಿ, ಜೀರಿಗೆ, ಎಳ್ಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಬೆಣ್ಣೆಯನ್ನು ಬಿಸಿ ಮಾಡಿ ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರುಬ್ಬಿಕೊಂಡ ಪಾಲಕ್‌ ಸೊಪ್ಪನ್ನು ಹಾಕಿ ಕಲಸಿಕೊಳ್ಳಿ. ಸ್ವಲ್ಪ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಒಂದು ತಟ್ಟೆ ಅಥವಾ ಪ್ಲಾಸ್ಟಿಕ್‌ ಹಾಳೆ ಮೇಲೆ ಚಕ್ಕುಲಿ ಹಿಟ್ಟನ್ನು ಒತ್ತಿ ಕೊಳ್ಳಿ. ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ, ಒತ್ತಿಕೊಂಡ ಚಕ್ಕುಲಿಯನ್ನು ಹಾಕಿ ಎರಡೂ ಬದಿಯಲ್ಲಿ ಗರಿ ಗರಿಯಾಗಿ ಕರಿಯಿರಿ. 

4. ಶೇಂಗಾ-ಎಳ್ಳಿನ ಉಂಡೆ
ಬೇಕಾಗುವ ಸಾಮಗ್ರಿ:
ಶೇಂಗಾ-1/2 ಕಪ್‌, ಎಳ್ಳು-1/2 ಕಪ್‌, ಬೆಲ್ಲದ ಪುಡಿ-1/2 ಕಪ್‌, ನೀರು-1/4 ಕಪ್‌, ತುಪ್ಪ-1/2 ಚಮಚ, ಏಲಕ್ಕಿ ಪುಡಿ- 1/2 ಚಮಚ.

ತಯಾರಿಸುವ ವಿಧಾನ: ಸಣ್ಣ ಉರಿಯಲ್ಲಿ ಶೇಂಗಾವನ್ನು ಹುರಿದು ಸಿಪ್ಪೆ ತೆಗೆಯಿರಿ. ಎಳ್ಳು ಸಿಡಿಯುವವರೆಗೆ ಹುರಿಯಿರಿ. ಎರಡನ್ನೂ ಬೇರೆ ಬೇರೆಯಾಗಿ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಬೆಲ್ಲ ಮತ್ತು ಕಾಲು ಕಪ್‌ ನೀರು ಹಾಕಿ ಉಂಡೆ ಪಾಕ ಮಾಡಿಕೊಂಡು ಒಲೆಯಿಂದ ಇಳಿಸಿ. ನಂತರ ಪುಡಿ ಮಾಡಿದ ಶೇಂಗಾ ಮತ್ತು ಎಳ್ಳನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆರಿದ ನಂತರ, ತುಪ್ಪವನ್ನು ಕೈಗೆ ಮುಟ್ಟಿಕೊಂಡು ಉಂಡೆ ಕಟ್ಟಿ. ರುಚಿಯಾದ, ಆರೋಗ್ಯಕರವಾದ ಶೇಂಗಾ ಮತ್ತು ಎಳ್ಳಿನ ಉಂಡೆಯನ್ನು ತಯಾರಿಸುವುದು ತುಂಬಾ ಸುಲಭ. ಮೂರು ವಾರದವರೆಗೆ ಕೆಡದಂತೆ ಇಡಬಹುದು.

ವೇದಾವತಿ ಹೆಚ್‌. ಎಸ್‌

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

KARADI (2)

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.