“ಒಲೆ’ಯೇ ಜೀವನ


Team Udayavani, Aug 29, 2018, 6:00 AM IST

s-10.jpg

ನಾಡಿನ ಮೂಲೆ ಮೂಲೆಯಲ್ಲಿರುವ ಅದೆಷ್ಟೋ ಗೃಹಿಣಿಯರು ಹಳ್ಳಿಮನೆಯಲ್ಲಿ ತಮ್ಮ ಒಲೆ ಉರಿಸುವ ಕಾಯಕವನ್ನು ತಪಸ್ಸಿನಂತೆ ನಿರ್ವಹಿಸುತ್ತಾ ಬಂದಿದ್ದಾರೆ. ಒಲೆ ಉರಿಸುವುದೂ ಒಂದು ರೀತಿಯ ತಲ್ಲೀನತೆ. ಅದೊಂದು ಕಲೆ. ಬಹಳ ಚಾಕಚಕ್ಯತೆಯಿಂದ ಒಲೆ ಉರಿಸಬೇಕು. ಇಲ್ಲದಿದ್ದರೆ ಅವಾಂತರ ಆಗಿಬಿಡುತ್ತದೆ. ಒಬ್ಬೊಬ್ಬರು ಒಂದೊಂದು ತೆರನಾಗಿ ಒಲೆ ಉರಿಸುವ ಕಲೆ ತಿಳಿದಿರುತ್ತಾರೆ…

ಕಾಲ ಯಾವುದಾದರೇನು, ಒಲೆ ಉರಿಯಲೇಬೇಕು ತಾನೆ? ಮಳೆಗಾಲಕ್ಕೆಂದು ಸೌದೆ, ತೆಂಗಿನ ಗರಿಗಳನ್ನೆಲ್ಲಾ ಸಂಗ್ರಹಿಸಿ ಇಟ್ಟದ್ದು ಆಯ್ತು, ಅದು ಅದರಷ್ಟಕ್ಕೆ ಅತಿಯಾದ ಗಾಳಿ- ಮಳೆಗೆ ಥಂಡಿ ಹಿಡಿದದ್ದೂ ಆಯ್ತು. ಅದನ್ನು ಉರಿಸಿ ಅಡುಗೆ ಮಾಡುವ ಮಹಿಳೆಯರ ಪಾಡು, ಅವಳಿಗಷ್ಟೇ ತಿಳಿದ ಹಾಡು. ಮಳೆಗಾಲದ ಸುಂದರವಾದ ಹಿತವಾದ ಬೆಳಗನ್ನು ಆಸ್ವಾದಿಸುತ್ತಾ¤ ಒಂದು ನಿಮಿಷ ನಿಲ್ಲೋಣವೆಂದರೆ ಒಲೆಗೆ ಬೆಂಕಿ ಹಿಡಿಸುವ ಕಸುಬು ನಮ್ಮನ್ನು ಸೆಳೆದು ಬಿಡುತ್ತದೆ. ಹೌದು, ಬೆಂಕಿ ಮಾಡುವುದೂ ಒಂದು ರೀತಿಯ ತಲ್ಲೀನತೆ. ಅದೊಂದು ಕಲೆ. ತುಂಬಾ ನಿಧಾನ ವಿಧಾನದಲ್ಲಿ ಚಾಕಚಕ್ಯತೆಯಿಂದ ಒಲೆ ಉರಿಸಬೇಕು. ಇಲ್ಲವೆಂದರೆ, ಒಂದೇ ಸಮನೆ ಹೊಗೆ ಹೊರಗೆ ಬಂದು ಅವಾಂತರ ಆಗಿಬಿಡುತ್ತದೆ. ಮತ್ತೆ ತಿರುಗಿ ಉರುಗಿ ಹೊತ್ತಿಸುವ ಹೊತ್ತಿಗೆ ಸಾಕಾಗಿ ಹೋಗುತ್ತದೆ. ಒಬ್ಬೊಬ್ಬರು ಒಂದೊಂದು ತೆರನಾದ ವಿಧಾನದಲ್ಲಿ ಒಲೆ ಉರಿಸುವ ಕಲೆಯನ್ನು ತಿಳಿದಿರುತ್ತಾರೆ.

  ನಾಡಿನ ಮೂಲೆಮೂಲೆಯಲ್ಲಿರುವ ಅದೆಷ್ಟೋ ಗೃಹಿಣಿಯರು ಹಳ್ಳಿಮನೆಯಲ್ಲಿ  ಒಲೆ ಉರಿಸುವ ಕಾಯಕವನ್ನು ತಪಸ್ಸಿನಂತೆ ನಿರ್ವಹಿಸುತ್ತಾ ಬಂದಿದ್ದಾರೆ. ಅಡುಗೆಯ ವಿಚಾರದಲ್ಲಿ ವಿದ್ಯುತ್‌ ಓವನ್‌ ವರೆಗೆ ಅಥವಾ ಅದಕ್ಕೂ ಮೀರಿ ಆಧುನಿಕತೆ ಧಾವಿಸಿದ್ದರೂ ನಮ್ಮ ಮನೆಯ ಅಮ್ಮ ಪ್ರತಿದಿನ ರೊಟ್ಟಿ ಮಾಡುವುದು ಬೆಂಕಿ ಒಲೆಯಲ್ಲಿ ಮಾತ್ರ. ಹೀಗೆ ಬೆಳಗ್ಗೆ ಹೊತ್ತಿಕೊಳ್ಳುವ ಒಲೆಯಲ್ಲಿ ಮತ್ತೆ ಅಡುಗೆ ಕೆಲಸ ಬಿಗಡಾಯಿಸುತ್ತಲೇ ಹೋಗುತ್ತದೆ. ಕೆಲವೊಮ್ಮೆ ಸಂಜೆಯವರೆಗೂ ಒಲೆ ಉರಿಯುತ್ತಲೇ ಇರುತ್ತದೆ. ನಮ್ಮಂಥ ಕೃಷಿಕರಿಗೆ ಇದು ತೀರಾ ಸಾಮಾನ್ಯ ವಿಚಾರ. ಬೆಳ್ಳಂಬೆಳಗೇ ಉರಿಸಿದ ಒಲೆಯಲ್ಲಿ ರೊಟ್ಟಿ, ಗಂಜಿಯಿಂದ ಶುರುಹಚ್ಚಿ, ಇನ್ನು ಇತರ ಪ್ರಾಣಿಗಳನ್ನು ಸಾಕಿದವರಿಗೆ ಅದಕ್ಕಿರುವ ಆಹಾರ ಬೆಂದಾಗುವ ಹೊತ್ತಿಗೆ ಮಧ್ಯಾಹ್ನ ದಾಟಿರುತ್ತದೆ. ಕೆಲವು ದಿನಗಳಲ್ಲಿ ಎರಡೆರಡು ಒಲೆ ಉರಿಯುತ್ತದೆ. ನಮ್ಮ ಒಲೆ ಉರಿಸುವ ಅಡುಗೆ ಕೋಣೆಯಲ್ಲಿ ನಾಲ್ಕು ಒಲೆಗಳಿವೆ. ಒಂದಂತೂ ಪ್ರತಿದಿನ ಉರಿಯುತ್ತಲೇ ಇರುತ್ತೆ. ತೋಟದ ಕೆಲಸಕ್ಕೆ ಬರುವವರು ಜಾಸ್ತಿ ಇದ್ದಾಗ ಎರಡು ಒಲೆ ಕಡ್ಡಾಯ. ಹಬ್ಬದ ದಿನಗಳಿ¨ªಾಗ ನಾಲ್ಕು ಒಲೆಗಳು ಉರಿಯುವುದೂ ಇದೆ. ಮಾಡಿದ ಬೆಂಕಿಯನ್ನು ಆಗಾಗ ಮುಂದಕ್ಕೆ ದೂಡಿ ಸರಿಪಡಿಸುತ್ತಲೇ ಇರಬೇಕು. ಇಲ್ಲವೆಂದರೆ, ಸೌದೆ ಹೊರಗಡೆ ಬಂದು ಉರಿಯತೊಡಗುತ್ತದೆ. ತಪ್ಪಿಯೂ ಕಾಲಲ್ಲಿ ದೂಡಬಾರದು ಅಂತ ಹಿರಿಯರು ಹೇಳುತ್ತಾರೆ. ನಾಗರೀಕತೆಯಲ್ಲಿ ಅಗ್ನಿಗೆ ದೇವರ ಸ್ಥಾನವಿದ್ದು ಅದನ್ನು ಪೂಜಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಸೀಮೆಎಣ್ಣೆಯನ್ನು ಬಳಸಿಯೂ ಬೆಂಕಿ ಮಾಡುವಂತಿಲ್ಲ. ಅದು ಅಗ್ನಿಯ ಮೇಲಿರುವ ಪೂಜನೀಯ ಭಾವಕ್ಕೆ ಲೋಪ ಉಂಟು ಮಾಡುತ್ತದೆ ಎಂಬ ಮಾತನ್ನೂ ಕೇಳಿದ ನೆನಪು.

  ಹಾಗೆಯೇ, ಸೌದೆಯನ್ನು ಒಲೆಗೆ ಇರಿಸುವ ತುದಿಗಳಿಗೂ ಒಂದು ಸಂವಿಧಾನವಿದೆ. ಒಲೆಗಿಡುವ ಸೌದೆಯ ಸಂಖ್ಯೆಗಳಿಗೂ ಲೆಕ್ಕಾಚಾರವಿದೆ. ಮುಂಜಾನೆ, ಮುಖ ತೊಳೆಯದೆ ಒಲೆ ಉರಿಸಬಾರದು ಎಂಬ ನಿಯಮವಿದೆ. ಒಲೆಯ ಹತ್ತಿರವೇ ಕುಳಿತು ಮಾಡುವ ಅಡುಗೆ, ಗೃಹಿಣಿಗೆ ತುಂಬ ತೊಂದರೆಯನ್ನುಂಟು ಮಾಡುತ್ತದೆ. ಆಕೆಗೆ ಹೊಗೆಯಿಂದ ರಕ್ಷಿಸಿಕೊಳ್ಳುವ ಜಾಣತನವೂ ತಿಳಿದಿರುತ್ತದೆಯೆನ್ನಿ. ಆಕೆ ಊದುಕೊಳವೆಯಿಂದ ಊದುತ್ತಲೇ ನಿಪುಣತೆಯಿಂದ ಬೆಂಕಿ ಸರಿಪಡಿಸುತ್ತ ಇರುತ್ತಾಳೆ. ನನ್ನ ಮದುವೆಯಾದಾಗ ತಂದೆ ಹೇಳಿದ ಮಾತು ಹನ್ನೆರಡು ವರುಷಗಳ ತರುವಾಯವೂ ಪ್ರತಿದಿನ ಬೆಳಗ್ಗೆ ಒಲೆ ಉರಿಸುವಾಗ ನೆನಪಾಗದೇ ಇರುವುದಿಲ್ಲ.ಅಪ್ಪ ಹೇಳಿದ್ದರು: “ಕೊಳವೆಯಲ್ಲಿ ಊದುವಾಗ ಉಸಿರನ್ನು ತಪ್ಪಿಯೂ ಹಿಂದಕ್ಕೆ ಎಳೆದುಕೊಳ್ಳಬೇಡ, ಕೆಮ್ಮು ಬರುತ್ತದೆ, ದಮ್ಮು ಕಟ್ಟುತ್ತದೆ!’

  ಅವರಿಗೆ ನಾನು ಪ್ರತಿದಿನ ಒಲೆ ಉರಿಸುವ ಬಗ್ಗೆ ಅತೀವ ಕಾಳಜಿ ಇತ್ತು. ಏಕೆಂದರೆ, ಅಲ್ಲಿಯವರೆಗೆ ನನಗೆ ಒಲೆ ಉರಿಸುವ ಕೆಲಸವೇ ತಿಳಿದಿರಲಿಲ್ಲ. ಹೊಸ ಕೆಲಸ ಕಲಿತೆ. ಕಲಿತ ನಂತರ ನನಗದೀಗ ತುಂಬಾ ಸಲೀಸು. ಕೆಲಸಗಳು ಒಗ್ಗುವವರೆಗೆ ಮಾತ್ರ ನಮ್ಮನ್ನು ಸತಾಯಿಸುತ್ತವೆ ಎಂಬ ಪಾಠವನ್ನು ನಾನು ಒಲೆಯಿಂದಲೇ ಕಲಿತಿದ್ದು.

  ಮಹಿಳೆಯರು ಬೆಂಕಿಯ ವಿಚಾರದಲ್ಲಿ ಇನ್ನು ತುಂಬಾ ಜಾಗರೂಕತೆ ಮಾಡುವ ಎರಡು ಅತಿ ಮುಖ್ಯ ವಿಚಾರಗಳಿವೆ. ಸೀರೆ ಅಥವಾ ತೊಟ್ಟ ಯಾವುದೇ ಬಟ್ಟೆಗಳ ವಿಚಾರದಲ್ಲಿ ಒಲೆ ಬುಡದಲ್ಲಿದ್ದಾಗ ಆದಷ್ಟು ಜಾಗ್ರತೆ ವಹಿಸಬೇಕು. ಕಾರಣ, ಬಟ್ಟೆಗೆ ಬೆಂಕಿ ತಗುಲಿಬಿಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹೀಗೆ ಬೆಂಕಿ ತಗುಲಿ ಜೀವಕ್ಕೆ ಹಾನಿಯಾದ ಹಲವಾರು ಪ್ರಸಂಗಗಳು ನಮ್ಮ ಕಣ್ಮುಂದಿವೆ. ಚಿಕ್ಕಮಕ್ಕಳನ್ನು ಒಲೆ ಹತ್ತಿರ ಒಯ್ಯದೇ ಎಚ್ಚರವಹಿಸುವುದೂ ಒಂದು ಸವಾಲೇ. 

  ತಮ್ಮ ನೂರಾರು ಕೆಲಸ- ಕಾರ್ಯಗಳಿಂದ ಕಲ್ಲಿನಂತಾದ ಕೈಗಳಿಂದ ಒಲೆ ಉರಿಸುವ ಕೃಷಿಮಹಿಳೆಯರ ನಿತ್ಯಗಾಥೆ ನಿಜಕ್ಕೂ ರೋಚಕ. ಈಗ ಕೃಷಿಯಲ್ಲೂ ಸಾಕಷ್ಟು ಸುಧಾರಣೆ ಕಂಡು, ನಾವು ಕೃಷಿ ಮಹಿಳೆಯರು ಮನೆಯೊಳಗಡೆ ಬಹಳಷ್ಟು ಸುಧಾರಿಸಿದ್ದೇವೆ ಎಂದರೂ ತಪ್ಪಲ್ಲ. ಕುಕ್ಕರಗಾಲಲ್ಲಿ ಕುಳಿತು ಒಲೆ ಉರಿಸುತ್ತಿದ್ದ ಕಾಲ ಬದಲಾಗಿ ತಮ್ಮ ಆಧುನಿಕ ಅಡುಗೆ ಮನೆಯ ಮೂಲೆಯಲ್ಲಿ ಅಸ್ತ್ರ ಒಲೆ ಅಥವಾ ಸಾಮಾನ್ಯ ಒಲೆಯಾದರೂ ಎಲ್ಲ ಅನುಕೂಲತೆಗಳನ್ನು ಮಾಡಿ ನಿಂತೇ ಅಡುಗೆ ಮಾಡಿ ಮುಗಿಸುತ್ತಾರೆ. ಪ್ರತಿ ಹಳ್ಳಿ ಮನೆಯಲ್ಲಿಯೂ ಗ್ಯಾಸ್‌ ಸೌಲಭ್ಯವಿದ್ದರೂ, ತೋಟದಲ್ಲಿ ಬೇಕಾದಷ್ಟು ಸೌದೆಗಳು ಸಿಗುವಾಗ ಇದೇ ಉತ್ತಮವೆಂಬ ಅನಿಸಿಕೆ ಹಳ್ಳಿಯ ಹೆಣ್ಣುಮಕ್ಕಳಲ್ಲಿ ಈಗಲೂ ಇದೆ. ಕೃಷಿಯಲ್ಲಿ ಸಿಗುವ ಅಲ್ಪ ಲಾಭವನ್ನು ದುಬಾರಿ ಒಲೆಗೆ ತೆತ್ತು ಬಿಡುವ ಜಾಯಮಾನ ನಮ್ಮ ಹಳ್ಳಿ ಹೆಣ್ಮಕ್ಕಳಲ್ಲಿ ಇಲ್ಲ. ಹಾಗಾಗಿ, ಸೌದೆ ಒಲೆ ಉರಿಸುವುದಕ್ಕೆ ಎಲ್ಲರೂ ಒಗ್ಗಿ ಹೋಗಿದ್ದಾರೆ.

  ಪಟ್ಟಣದಿಂದ ವರುಷಕೊಮ್ಮೆ ಬರುವ ಅಕ್ಕನಿಗೂ, ತವರಲ್ಲಿ ಕೆಂಡದಲ್ಲಿ ಸುಟ್ಟ ಗೇರುಬೀಜ ತಿನ್ನಲೇಬೇಕು. ಧಾವಂತದ ಬದುಕಿನ ಸದ್ಯದ ಬದುಕಿನಲ್ಲಿ ಒಲೆಯಲ್ಲಿ ಅಡುಗೆ ಮಾಡುವುದನ್ನು ಮರೆತರೂ ಅದರಲ್ಲಿ ಮಾಡಿದ ತಿಂಡಿ ತಿನಿಸುಗಳ ರುಚಿಯನ್ನು ಮಾತ್ರ ಯಾರೂ ಮರೆತಿರಲಿಕ್ಕಿಲ್ಲ. ಮಣ್ಣಿನ ಪಾತ್ರೆಗಳಲ್ಲಿ, ಬಳಪದ ಕಾವಲಿಗಳಲ್ಲಿ ಮಾಡಿದ ತಿಂಡಿಯ ರುಚಿಯೇ ಹೆಚ್ಚು. ಇನ್ನು ಕೆಲವು ತಿಂಡಿ- ತಿನಿಸುಗಳು ಒಲೆಯಲ್ಲಿಯೇ ಕಡ್ಡಾಯವಾಗಿ ಮಾಡುವಂಥದ್ದು. ಏನೇ ಇರಲಿ, ಬದಲಾದ ಜಮಾನದಲ್ಲಿ ಇದನ್ನೆಲ್ಲ ಒಲೆಯಲ್ಲಿ ಮಾಡಿಕೊಟ್ಟರೆ ತಿಂದೇನು, ಮಾಡಿ ತಿನ್ನಲಾರೆನು ಎನ್ನುವವರೇ ಜಾಸ್ತಿ. ಹಳ್ಳಿಯ ಕೃಷಿಕ ಹುಡುಗನನ್ನು ಮದುವೆಯಾಗಲು ಈ ಕಾಲದಲ್ಲಿ ಯಾರೂ ತಯಾರಿಲ್ಲ. ಅಂಥದ್ದರಲ್ಲಿ ಒಲೆಯಲ್ಲಿ ಅಡುಗೆ ಮಾಡಲು ತಯಾರಿರುವರೇ?

  ನಮ್ಮ ಮಹಿಳೆಯರ ಸ್ಥಿತಿ ಹೇಗಿದೆಯೆಂದರೆ, ಒಲೆ ಹತ್ತಿರ ಕೂತು ಮನೆಮಂದಿಗೆಲ್ಲ ರೊಟ್ಟಿ ತಟ್ಟುವುದರಲ್ಲೇ ಮಗ್ನವಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ ಕೃಷಿಕ ಕುಟುಂಬ ಒಂದು ತಕ್ಕಡಿಯಲ್ಲಾದರೆ ಇನ್ನೊಂದು ಕಡೆಯಲ್ಲಿ ಫ್ಲಾಟ್‌ನಲ್ಲಿ ರೆಡಿಮೇಡ್‌ ರೊಟ್ಟಿ ತಂದು ತಿನ್ನುವ ಕುಟುಂಬ. ಇವೆಲ್ಲ ಯಾವಾಗ ಸಮತೋಲನ ಕಾಯ್ದುಕೊಳ್ಳುತ್ತದೋ? ಬೆಳೆದ ಭತ್ತ ಅಕ್ಕಿಯಾಗಿ, ಅಕ್ಕಿ ಅನ್ನವಾಗುವ ಅಮೃತ ಘಳಿಗೆಯ ಮಧ್ಯದಲ್ಲಿ ಎಷ್ಟೊಂದು ವಿಚಾರಗಳಿವೆ. ಇದನ್ನೆಲ್ಲ ತಿಳಿದವರಾರೂ ಒಲೆಯೂದುವ ಬಗ್ಗೆ ಖಂಡಿತಾ ಚಕಾರವೆತ್ತಲಾರರು. ಮಹಿಳೆಯರು ಮಾಡಬೇಕಾದದ್ದೇನೆಂದರೆ, ತಮ್ಮ ಕನಸು- ಕನವರಿಕೆಗಳನ್ನು ನಾವು ಮಾಡುವ ಬೆಂಕಿಯೊಂದಿಗೆ ಉರಿದು ಬೂದಿಯಾಗಲು ಬಿಡದೇ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿಯೂ ಯೋಚಿಸಬೇಕು. ಉರಿಸಿದ ಬೆಂಕಿ ಜ್ಯೋತಿಯಾಗಿ ಜೀವನವನ್ನು ಬೆಳಗುವ ದಾರಿದೀಪವಾಬೇಕು.

ಒಲೆ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ..!
ಒಮ್ಮೆ ಹೀಗಾಯಿತು. “ನಾನು ರೈತಾಪಿ ಕುಟುಂಬಕ್ಕೆ ಸೊಸೆಯಾಗಿ ಹೋಗುವೆನು. ಆದರೆ, ಒಲೆಯಲ್ಲಿ ಅಡುಗೆ ಮಾಡಲು ನನ್ನಿಂದಾಗಲ್ಲಪ್ಪಾ…’ ಎಂದು ಪಟ್ಟು ಹಿಡಿದು ಕುಳಿತಿದ್ದಳು ಒಬ್ಬ ಹುಡುಗಿ. ಕೊನೆಗೂ ಪಟ್ಟಣದ ಪುಟ್ಟ ಸಿಗಲಿಲ್ಲ.  ಹಳ್ಳಿ ಹೈದನನ್ನೇ ಕೈ ಹಿಡಿದು ಹೋದಾಗ ಅಲ್ಲಿ ಒಲೆ ಉರಿಸಲು ಇತ್ತೆನ್ನಿ. ಏನೇ ಆದರೂ ಹಠ ಬಿಡಲೊಲ್ಲದ ನೈಲ್‌ ಪಾಲೀಶ್‌ ಹುಡುಗಿ ಗ್ಯಾಸ್‌ ಮತ್ತು ಮೈಕ್ರೋ ಓವನ್‌ನಲ್ಲೇ ಮಶ್ರೂಮ್‌ ಮಂಚೂರಿ ಮಾಡುತ್ತಾಳಂತೆ. ಒಲೆಯ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ ಎಂದು ಗತ್ತಿನಿಂದ ಹೇಳುತ್ತಾಳೆ. ಆಧುನೀಕತೆ ಬಂದರೂ ಕೆಲವು ವಿಚಾರಗಳಿಗೆ ಮತ್ತು ಪರಿಸ್ಥಿತಿಗಳಿಗೆ ನಾವು ರಾಜಿಯಾಗಲೇಬೇಕಾಗುತ್ತದೆ. ಇಲ್ಲದಿದ್ದರೆ ಇತರರ ಬಾಯಿಮಾತಿಗೂ ಗುರಿಯಾಗಬೇಕಾಗುತ್ತದೆ. 

ಸಂಗೀತಾ ರವಿರಾಜ್‌

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.