ಕಲೆ ಬಲೆ ಸಿಂಗಾರ: ಜ್ಯೋತಿ ಕೈಹಿಡಿದ ಅಲಂಕಾರ  

Team Udayavani, Sep 5, 2018, 6:00 AM IST

4.jpg

ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ…

“ಉದ್ಯೋಗ, ಮನೆ, ಮಕ್ಕಳು ಅಂತ ಚೂರೂ ಪುರುಸೊತ್ತೇ ಸಿಗ್ತಾ ಇಲ್ಲ. ಮದುವೆಗೂ ಮುಂಚೆ ಇದ್ದ ಹವ್ಯಾಸಗಳೆಲ್ಲ ಈಗ ಮರೆತೇಹೋಗಿವೆ’ ಎಂದು ಬೇಸರಿಸಿ, ಸಪ್ಪೆ ಮೋರೆ ಮಾಡಿಕೊಳ್ಳುವವರು ಇದ್ದಾರೆ. ಕಸೂತಿ ಕಲೆ, ಹೂ ಕಟ್ಟೋದು, ರಂಗೋಲಿ, ಹಾಡು, ಹಸೆ… ಇವೆಲ್ಲಾ ಮಹಿಳೆಯರಿಗೆ ಒಲಿದ ಕಲೆಗಳು. ಆದರೆ, ಜಂಜಾಟದ ಬದುಕಿನಲ್ಲಿ ಇವೆಲ್ಲದಕ್ಕೆ ಸಮಯ ಎತ್ತಿಡಲು ಆಗುತ್ತಿಲ್ಲ ಎಂಬ ಕೊರಗು ಅನೇಕರದ್ದು. ಇಲ್ಲೊಬ್ಬರಿದ್ದಾರೆ, ಕೈ ತುಂಬಾ ಕೆಲಸದ ಮಧ್ಯೆಯೂ ತಮ್ಮ ಎದೆಯೊಳಗಿನ ಕಲೆಗೆ ನೀರೆರೆದು ಪೋಷಿಸಿಕೊಂಡು ಬಂದಿದ್ದಾರೆ.

  ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ. ಸೋಲೋ ವುಡ್‌ ಫ್ಲವರ್‌, ದಾರದ ಆಭರಣಗಳು, ಹ್ಯಾಂಡ್‌ ಬ್ಯಾಂಕ್‌, ಹ್ಯಾಂಡ್‌ ಪರ್ಸ್‌, ಮದುವಣಗಿತ್ತಿಯ ಸಿಂಗಾರ ಸಾಧನಗಳು, ಅಲಂಕಾರಿಕ ಹೂಗಳು, ಟ್ರೇಯಲ್ಲಿ ಅಲಂಕಾರ, ಮ್ಯಾಟ್‌ ಮೇಕಿಂಗ್‌, ಬಾಗಿಲ ತೋರಣ, ಸೀರೆಯಲ್ಲಿ ಭಿನ್ನ ಬಗೆಯ ಅಲಂಕಾರಗಳು ಹೀಗೆ ದಿನೋಪಯೋಗಿ ವಸ್ತುಗಳಲ್ಲಿಯೇ ಕಲೆಯನ್ನು ಅರಳಿಸುತ್ತಾರೆ.

  ಮೂಲತಃ ಶಿವಮೊಗ್ಗದ ಚಿಲುಮೆ ಜೆಡ್ಡು ಗ್ರಾಮದ ಜ್ಯೋತಿ, ಯಾವುದೇ ಕಲಾ ತರಗತಿಗೆ ಹೋದವರಲ್ಲ. ಬಾಲ್ಯದಿಂದಲೂ ಕಲಾಸಕ್ತಿ ಹೊಂದಿದ್ದ ಇವರಿಗೆ ತಾಯಿ ಹಾಗೂ ಶಿಕ್ಷಕಿಯರೇ ಪ್ರೇರಣೆ. ಅವರನ್ನು ನೋಡುತ್ತಲೇ ಚಿಕ್ಕಪುಟ್ಟ ಕಲಾಕೃತಿಗಳನ್ನು ಮಾಡುವುದನ್ನು ಕಲಿತರು. ನಂತರ ಸತತ ಅಭ್ಯಾಸದಿಂದ ಕಲೆಯನ್ನು ಕರಗತ ಮಾಡಿಕೊಂಡರು. ಮದುವೆಯ ನಂತರ ಪತಿ ಜಗನ್ನಾಥ್‌ ಮತ್ತು ಅತ್ತೆಯ ಪ್ರೋತ್ಸಾಹವೂ ಸಿಕ್ಕಿತು. ಇವರು ಅಂಧ ಮಕ್ಕಳಿಗೆ, ವಿಭಿನ್ನ ರೀತಿಯ ಕಲಾ ಪ್ರಕಾರಗಳ ತರಬೇತಿ ನೀಡಿ ಅವರ ಕೈಯಲ್ಲಿ ವಿಶಿಷ್ಟ ವಸ್ತುಗಳನ್ನು ಮಾಡಿಸಿದ್ದಾರೆ. ಅವರಿಂದ ಕರಕುಶಲ ಕಲೆಯ ಬಗ್ಗೆ ಮಾಹಿತಿ ಪಡೆಯಲು 805069333/8660264334 ಸಂಪರ್ಕಿಸಿ.

ಈ ಹವ್ಯಾಸವನ್ನು ನಾನು ತಾಯಿಯನ್ನು ನೋಡಿ ಕಲಿತದ್ದು. ನಂತರ ಶಾಲಾ ಶಿಕ್ಷಕಿಯರ, ಮದುವೆಯ ನಂತರ ಗಂಡ ಹಾಗೂ ಅತ್ತೆಯ ಬೆಂಬಲ ಸಿಕ್ಕಿದ್ದರಿಂದ, ಇಷ್ಟಪಟ್ಟ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ. 
– ಜ್ಯೋತಿ ಜಗನ್ನಾಥ ಶೆಟ್ಟಿ 

ಬಳಕೂರು ವಿ.ಎಸ್‌.ನಾಯಕ, ಬೆಂಗಳೂರು

ಟಾಪ್ ನ್ಯೂಸ್

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.