CONNECT WITH US  

ನಿಮ್ಮ ಹುಡುಗ ಅಪ್ಪಟ ಚಿನ್ನವೇ?

ಇವತ್ತೇ ಇದನ್ನು ಟೆಸ್ಟ್‌ ಮಾಡಿಕೊಳ್ಳಿ!

ಮದುವೆ, ಮೂರು ದಿನದ ಕಮಿಟ್‌ಮೆಂಟ್‌ ಅಲ್ಲ. ಅದು ಕೊನೆಯವರೆಗೂ ಉಳಿಯುವ ಅನುಬಂಧ. ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಗಂಡನೊಂದಿಗೆ ಕಳೆಯಬೇಕಾಗುತ್ತದೆ. ಜೊತೆಗಾರ ಎಂಥವನು ಎಂಬುದರ ಮೇಲೆ ನಿಮ್ಮ ಬಾಳಿನ ಖುಷಿ ಮತ್ತು ನೆಮ್ಮದಿಗಳು ನಿರ್ಧರಿತವಾಗುತ್ತವೆ. ಮದುವೆಯೆಂದರೆ ಮನೆ, ಮಕ್ಕಳು ಅಷ್ಟೇ ಅಲ್ಲ. ಸದಾ ಜೊತೆಗೇ ಇರುವ ಗಂಡನ ಬಾಯಿ ವಾಸನೆಯೂ ಮುಖ್ಯವಾಗುತ್ತದೆ. ಜೀವನ ಪೂರ್ತಿ ಸಹಿಸಲಾಗದ ಕೆಟ್ಟ ವಾಸನೆಯನ್ನು ಅನುಭವಿಸುತ್ತಲೇ ಇರಲಾಗುವುದಿಲ್ಲ. ನಂಬಿಕೆ, ಸಹಕಾರ, ಅಪ್ಪುಗೆ, ಸಣ್ಣ ಸಣ್ಣ ಜಗಳ, ಬಿಟ್ಟಿರಲಾರದ ಸೆಳೆತ, ಮಕ್ಕಳ ಓದು, ಒಂದು ಚೆಂದದ ಮನೆಯ ಕನಸು... ಇವೆಲ್ಲವೂ, ನಿಮಗೆ ಜೊತೆಯಾಗುವ ಗಂಡನನ್ನು ಅವಲಂಬಿಸಿರುತ್ತವೆ! ಕಾಳಜಿಯ ಆಯ್ಕೆ ನಿಮ್ಮ ಪಾಲಿನ ಮೊದಲ ಆದ್ಯತೆಯಾಗಬೇಕು. ಬಾಳಸಂಗಾತಿಯನ್ನು ಆರಿಸಿಕೊಳ್ಳುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1) ಆತ ಕಡು ಕೋಪ ಮತ್ತು ಹಿಂಸೆಯ ಸಂಬಂಧಿಕನೇ? 
ಕೆಲವರಿಗೆ ಅದೆಂಥ ಕೋಪ ಬರುತ್ತದೆಯೆಂದರೆ, ಎದುರಿಗೆ ಇರುವವರನ್ನು ಸುಟ್ಟು ಬಿಡುವಷ್ಟು. ಚಿಕ್ಕ ಚಿಕ್ಕದಕ್ಕೆಲ್ಲಾ ಕೋಪ ಮಾಡಿಕೊಳ್ಳುತ್ತಾರೆ. ಆ ಸಿಟ್ಟು ಹಿಂಸೆಯ ರೂಪಕ್ಕೆ ತಿರುಗುತ್ತದೆ. ಕೋಪವೇ ಬರದ ವ್ಯಕ್ತಿ ಇಲ್ಲ ನಿಜ.ಆದರೆ ಅತೀ ಕೋಪ ಕೂಡ ಒಂದು ಕಾಯಿಲೆಯೇ! ಅಂಥವರಿಂದ ದೂರವಿರುವುದೇ ಒಳಿತು. 

2) ಅವನು ದ್ರೋಹ ಮಾಡುತ್ತಾನಾ? 
ಮೋಸ, ವಂಚನೆಗಳಲ್ಲಿ ಚಿಕ್ಕದು ದೊಡ್ಡದು ಅಂತ ಯಾವುದೂ ಇಲ್ಲ. ಚಿಕ್ಕ ಮೋಸ ಮಾಡಿದವನು ದೊಡ್ಡದನ್ನು ಮಾಡಲು ಹೇಸುವುದಿಲ್ಲ. ದಾಂಪತ್ಯ ದ್ರೋಹ (infidelity) ಕೆಲವರಿಗೆ ಸಲೀಸು. ಕೆಲವರ ಸ್ವಭಾವವೇ ಸುಳ್ಳು, ಮೋಸವಾಗಿರುತ್ತದೆ. ನಿಮ್ಮ ಹುಡುಗನಲ್ಲಿ ಅಂಥ ಗುಣಗಳು ಕಂಡು ಬಂದರೆ, ಅಂಥವರ ಉಸಾಬರಿ ನಿಮಗ್ಯಾಕೆ? ಬೇಡ ಎಂದು ಅಲ್ಲಿಂದ ಎದ್ದು ಬಿಡಿ. 

3) ವ್ಯಸನಿಯೆ? 
ಮನುಷ್ಯನನ್ನು ಚಟಗಳು ದಾರಿ ತಪ್ಪಿಸುವಷ್ಟು ಇನ್ಯಾವುದೂ ಕೂಡ ತಪ್ಪಿಸಲಾರವು. ಡ್ರಗ್ಸ್, ಕುಡಿತ, ಜೂಜು ಇತ್ಯಾದಿಗಳು ಸಂಸಾರವನ್ನು ಹಾಳು ಮಾಡುವ ಚಟಗಳು. ಅಷ್ಟು ಸುಲಭವಾಗಿ ಅವರು ಅದರಿಂದ ಹೊರಬರಲಾರರು. ನಾನು ಚಟದಿಂದ ಹೊರಬರುವಂತೆ ಮಾಡಿ, ಅವನನ್ನು ಒಳ್ಳೆಯವನನ್ನಾಗಿ ಮಾಡ್ತೀನಿ ಅನ್ನುವುದು ನಿಜಕ್ಕೂ ಮಾತಾಡಿದಷ್ಟು ಸುಲಭವಲ್ಲ. ಯಾವುದೇ ಕ್ಷಣದಲ್ಲೂ ಅವರು ತಮ್ಮ ಹಳೆಯ ಚಟಕ್ಕೆ ಅಂಟಿಕೊಳ್ಳಬಹುದು, ನೆನಪಿರಲಿ.  

4) ಪೊಸೆಸಿವ್‌ ಒಳ್ಳೆದಲ್ಲ.
ಪೊಸೆಸಿವ್‌ನೆಸ್‌ ಪ್ರೀತಿಯ ಸಂಕೇತವಾದರೂ, ಅದು ಅತಿಯಾದರೆ ಉಸಿರುಗಟ್ಟಿಸುತ್ತದೆ. ಆರಂಭದಲ್ಲಿ ನಿಮ್ಮವನ ಪೊಸೆಸಿವ್‌ನೆಸ್‌ ನಿಮಗೆ ಖುಷಿಯೆನಿಸಿದರೂ, ಬರುಬರುತ್ತಾ ಅದು ಹಿಂಸೆ ಅನಿಸುತ್ತದೆ. ಅನುಮಾನಕ್ಕೆ ತಿರುಗಿಕೊಳ್ಳುತ್ತದೆ. ಒಮ್ಮೆ ಅನುಮಾನ ಹೊಕ್ಕಿಬಿಟ್ಟರೆ, ಆಮೇಲೆ ಎಲ್ಲವೂ ನರಕ. ಹಾಗಂತ ತೀರಾ ನಿರ್ಲಿಪ್ತ, ತಿರಸ್ಕಾರವನ್ನು ಕಟ್ಟಿಕೊಂಡಿರುವುದೂ ಸಾಧ್ಯವಲ್ಲ. ಪ್ರೀತಿಯೇ ಬೇರೆ, ಅದರೊಳಗೆ ಗುಮ್ಮನಂತಿರುವ ಪೊಸೆಸಿವ್‌ನೆಸ್‌ ಬೇರೆ.    

ಸದಾಶಿವ ಎಸ್‌.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top