“ಕೇಪ್‌’ ಆಫ್ ಗುಡ್‌ ಹೋಪ್‌!


Team Udayavani, Sep 26, 2018, 6:00 AM IST

e-47.jpg

ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್‌ ರೀತಿಯ ಬಟ್ಟೆ ಅದು. ಮುಂದೆ ಎದೆಯವರೆಗೂ ಮುಚ್ಚಿಗೆ; ಹಿಂದೆ ನೆಲ ಸಾರಿಸುವಷ್ಟು ಉದ್ದಕೆ… ಅದುವೇ “ಕೇಪ್‌’ನ ಆಕರ್ಷಣೆ. ಐತಿಹಾಸಿಕ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದ್ದ “ಕೇಪ್‌’ ಉಡುಪು, ಈಗ ಬೀದಿಬೀದಿಗಳಲ್ಲಿ ದಾರಿಹೋಕರ ಕಣ್ಮನ ಸೆಳೆಯುತಿದೆ…

ಐತಿಹಾಸಿಕ ಸಿನಿಮಾ/ ಧಾರಾವಾಹಿಗಳಲ್ಲಿ ಸೇನಾಧಿಕಾರಿಗಳ ಪೋಷಾಕು ನೋಡಿದ್ದೀರಾ? ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್‌ ರೀತಿಯ ಬಟ್ಟೆಯನ್ನು ಧರಿಸಲಾಗುತ್ತಿತ್ತು. ಮುಂದೆ ಎದೆಯವರೆಗೆ ಹಾಗೂ ಹಿಂದೆ ನೆಲ ತಾಕುವಷ್ಟು ಉದ್ದವಿರುವ ಆ ಉಡುಪಿಗೆ “ಕೇಪ್‌’ ಎಂದು ಹೆಸರು. ಅಷ್ಟೆಲ್ಲಾ ಯಾಕೆ, ಹೇರ್‌ ಸಲೂನ್‌ಗೆ ಹೋದಾಗ ನಮ್ಮನ್ನು ಕುರ್ಚಿಯ ಮೇಲೆ ಕೂರಿಸಿ, ಮೈಗೆ ಹೊದೆಸುವ ಬಟ್ಟೆಯೂ ಕೇಪ್‌ ವಿನ್ಯಾಸದ ಒಂದು ವಿಧ. ಆದರೀಗ ಕೇಪ್‌, ಕೇವಲ ಬಟ್ಟೆಯಷ್ಟೇ ಅಲ್ಲ, ಫ್ಯಾಷನ್‌ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಟ್ರೆಂಡ್‌.

  ಪಾರ್ಟಿಯಲ್ಲಿ ಎಲ್ಲರಿಗಿಂತ ಸುಂದರವಾಗಿ ಕಾಣಿಸಿಕೊಳ್ಳುವ ಆಸೆಯೇ? ಹಾಗಾದ್ರೆ ನಿಮ್ಮ ವಾರ್ಡ್‌ರೋಬ್‌ಗ ಕೇಪ್‌ ಡ್ರೆಸ್‌ ಅನ್ನು ಸೇರಿಸಿ. ಹಾಫ್ ಬ್ಲೇಝರ್‌ನಂತೆ ಕಾಣುವ ಈ ಡ್ರೆಸ್‌ ಅನ್ನು ಶಾರ್ಟ್‌ ಡ್ರೆಸ್‌, ಮಿನಿ ಸ್ಕರ್ಟ್‌ ಜೊತೆಗೆ ಮಾತ್ರವಲ್ಲ, ಅದ್ದೂರಿ ಪಾರ್ಟಿ ಗೌನ್‌ಗಳ ಜೊತೆಗೂ ಧರಿಸಬಹುದು.

ಗೌನ್‌ ಜೊತೆಗೇ ಕೇಪ್‌
ಕೇಪ್‌ ಅನ್ನು ಗೌನ್‌ ಮೇಲೆ ಪ್ರತ್ಯೇಕವಾಗಿ ಧರಿಸಬೇಕೆಂದಿಲ್ಲ. ಉದ್ದದ ಗೌನ್‌ ಜೊತೆಗೆ ಕೇಪ್‌ಗ್ಳು ಅಟ್ಯಾಚ್‌ ಆಗಿರುತ್ತವೆ. ಹಾಫ್ ಬ್ಲೇಝರ್‌ನಂತೆ ಮುಂದೆ ಮತ್ತು ಹಿಂದೆ, ಮೊಣಕೈವರೆಗೆ ಮಾತ್ರ ಕವರ್‌ ಆಗುವ ಕೇಪ್‌ಗ್ಳು ಸದ್ಯದ ಟ್ರೆಂಡ್‌.

ಉದ್ದನೆಯ ಕೇಪ್‌ ಗೌನ್‌
ಉದ್ದನೆಯ ಗೌನ್‌ ಜೊತೆಗೆ, ಇಡೀ ಬೆನ್ನನ್ನು ಕವರ್‌ ಮಾಡಿ, ನೆಲ ಮುಟ್ಟುವಷ್ಟು ಉದ್ದವಿರುವ ಕೇಪ್‌ಗ್ಳು ಅಟ್ಯಾಚ್‌ ಆಗಿರುತ್ತವೆ. ಇಂಥ ಗೌನ್‌ಗಳು ರಾಯಲ್‌ ಲುಕ್‌ ನೀಡುವುದರಿಂದ, ಮದುವೆಯಂಥ ದೊಡ್ಡ ಸಮಾರಂಭಗಳಿಗೆ ಹೇಳಿ ಮಾಡಿಸಿದ್ದಾಗಿವೆ. 

ಶಾರ್ಟ್‌ ಕೇಪ್‌ ಡ್ರೆಸ್‌
ಶಾರ್ಟ್‌ ಡ್ರೆಸ್‌ ಪ್ರಿಯರೂ ತಮ್ಮ ದಿರಿಸಿಗೆ ಹೊಸ ಸ್ಪರ್ಶ ನೀಡಬಹುದು. ಶಾರ್ಟ್‌ ಡ್ರೆಸ್‌ಗಳ ಮುಂಭಾಗದಲ್ಲಿ ಮೊಣಕೈವರೆಗೆ ಹಾಗೂ ಹಿಂದೆ ಡ್ರೆಸ್‌ನಷ್ಟೇ ಉದ್ದ ಇರುವ ಕೇಪ್‌ ಅನ್ನು ಅಟ್ಯಾಚ್‌ ಮಾಡಲಾಗಿರುತ್ತದೆ. ಶಾರ್ಟ್‌ ಸಿಲ್ಕ್ ಡ್ರೆಸ್‌ ಜೊತೆಗೆ ಲೇಯರ್‌x ಕೇಪ್‌ ಇರುವ ಉಡುಪುಗಳು ಪಾರ್ಟಿಗಳಲ್ಲಿ ಫ್ಯಾಷನೇಬಲ್‌ ಎನಿಸುತ್ತವೆ. 

ಪ್ಯಾಂಟ್‌ ಸೂಟ್‌ ಜೊತೆಗೆ ಕೇಪ್‌
ಬೋರಿಂಗ್‌ ಎನಿಸುವ ಪ್ಯಾಂಟ್‌ಸೂಟ್ಸ್‌/ ಜಂಪ್‌ಸೂಟ್‌ಗೂ ಈಗ ಕೇಪ್‌ ಹೊಸ ಲುಕ್‌ ನೀಡಿದೆ. ಫಿಟ್‌ ಇರುವ ಪ್ಯಾಂಟ್‌ಗೆ ಶಾರ್ಟ್‌, ಸೊಂಟದವರೆಗೆ ಬರುವ ಅಥವಾ ಪೂರ್ತಿ ಕವರ್‌ ಆಗಿ ನೆಲ ಮುಟ್ಟುವ ಕೇಪ್‌ಗ್ಳು ಅಟ್ಯಾಚ್‌ ಆಗಿರುತ್ತವೆ. 

ಯಾವುದು ಉತ್ತಮ?
ಕೇಪ್‌ ಡ್ರೆಸ್‌ಗಳು ನೋಡಲು ಸ್ವಲ್ಪ ಅದ್ದೂರಿ ಅನ್ನಿಸುವುದರಿಂದ ಜೊತೆಗೆ ಧರಿಸುವ ಆ್ಯಕ್ಸೆಸರೀಸ್‌ ಆದಷ್ಟು ಸಿಂಪಲ್‌ ಆಗಿರಲಿ. ಸ್ಯಾಂಡಲ್ಸ್‌ ಅಥವಾ ಪೆನ್ಸಿಲ್‌ ಹೈ ಹೀಲ್ಸ್‌ ಉತ್ತಮ ಆಯ್ಕೆ. ಮೇಕಪ್‌ ಕೂಡ ತೆಳುವಾಗಿಯೇ ಇರಲಿ.
•    ಕ್ರಾಪ್ಡ್ ಕೇಪ್‌/ ಕೇಪ್ಲೆಟ್ಸ್‌ (ಸೊಂಟದವರೆಗೆ ಉದ್ದವಿರುವ ಜ್ಯಾಕೆಟ್‌ನಂಥ ಉಡುಪು)ಗಳನ್ನು ಶಾರ್ಟ್‌ ಸ್ಕರ್ಟ್‌ ಜೊತೆಗೆ ಧರಿಸಿದರೆ ಚೆನ್ನ.
•    ಲೇಯರ್ ಮತ್ತು ಫೋಲ್ಡ್‌ಗಳಿರುವ ಕೇಪ್‌ಗ್ಳನ್ನು ಪೆನ್ಸಿಲ್‌ ಸ್ಕರ್ಟ್‌ ಜೊತೆಗೆ ಧರಿಸಬಹುದು. 
•    ಮದುವೆಗೆ ಧರಿಸುವ ಬಿಳಿ ಗೌನ್‌ ಜೊತೆಗೆ ಕೇಪ್‌ ಫ್ಯಾಷನೇಬಲ್‌ ಆಗಿ ಕಾಣುತ್ತದೆ. 

ಕೇಳಿರಿ, ಕೇಪ್‌ ಚರಿತೆ…
ಕೇಪ್‌ ಡ್ರೆಸ್‌ಗಳು ಮೊದಲು ಚಾಲ್ತಿಗೆ ಬಂದದ್ದು, ಕ್ರೈಸ್ತ ಸಮುದಾಯದ ಮೆನೊನೈಟ್‌ ಮಹಿಳೆಯರಿಂದ. ತಮ್ಮ ಸಾಂಪ್ರದಾಯಿಕ ಡ್ರೆಸ್‌ನ ಭಾಗವಾಗಿ ಅವರು ಕೇಪ್‌ ಡ್ರೆಸ್‌ಗಳನ್ನು ಧರಿಸುತ್ತಿದ್ದರು. 19ನೇ ಶತಮಾನದ ಕೊನೆಯವರೆಗೂ ಹೆಚ್ಚು ಸದ್ದು ಮಾಡದ ಈ ದಿರಿಸು ಈಗ ಕೇವಲ ಮೇಲುಡುಪಾಗಿ ಉಳಿದಿಲ್ಲ. 

– ಪ್ರಿಯಾಂಕಾ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.