ಒಂದೇ ಬದಿಯ ಕಡಲು ಅಮ್ಮ- ಮಗಳು!

Team Udayavani, Oct 17, 2018, 6:00 AM IST

3.jpg

ಹೆಣ್ಣಿಗೆ ಮಾನಸಿಕ ಆರೋಗ್ಯದ ಬುನಾದಿ ಬೀಳುವುದೇ ಅಮ್ಮನಿಂದ. ಅಮ್ಮ- ಮಗಳ ಸಂಬಂಧದಲ್ಲಿಯೇ ಅನೇಕ ಕಲಿಕೆಗಳಿವೆ. ಅಮ್ಮನ ಅನುಭವವೇ ಮಗಳಿಗೆ ಕೌನ್ಸೆಲಿಂಗ್‌ ಆಗಬಲ್ಲುದು.  ಈ ಎರಡೂ ಮನಸ್ಸುಗಳ ತೀರದ ತಲ್ಲಣಗಳು ಒಂದೇ ಎನ್ನುವ ಅಭಿಪ್ರಾಯ ಈ ಬರಹದ್ದು…

ಮಕ್ಕಳನ್ನು ಅಪ್ಪನಿಗಿಂತ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ. ಅದರಲ್ಲೂ ಅಮ್ಮ- ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ ಜೈವಿಕ ರಚನೆ- ಭಾವನಾತ್ಮಕ ನೆಲೆಗಟ್ಟು ಹೊಂದಿರುತ್ತಾರೆ. ಅಂದರೆ, ಮಗಳು ಹಾದು ಹೋಗುವ ಹದಿಹರೆಯ- ಮುಟ್ಟು- ಮದುವೆ- ಬಸಿರು- ಬಾಣಂತನ ಎಲ್ಲವನ್ನೂ ಹಿಂದೊಮ್ಮೆ ಅಮ್ಮನೂ ಅನುಭವಿಸಿರುತ್ತಾಳೆ. ಹಾಗೆಯೇ, ಸಾಮಾನ್ಯವಾಗಿ ತಾಯಿ ಋತುಬಂಧದ (ಮೆನೋಪಾಸ್‌) ಸಮಸ್ಯೆಗಳನ್ನು ಎದುರಿಸಲು ಆರಂಭಿಸುವುದು 30-40 ವರ್ಷ ವಯಸ್ಸಿನಲ್ಲಿ. ಮಗಳು ಹದಿಹರೆಯವನ್ನು ಪ್ರವೇಶಿಸುವ ಕಾಲವೂ ಅದೇ! ಅಂದರೆ ತಾಯಿಯಲ್ಲಿ ಹಾರ್ಮೋನುಗಳು ಕಡಿಮೆಯಾಗಿ, ಸಿಟ್ಟು- ಕಿರಿಕಿರಿ ಆರಂಭವಾದರೆ, ಮಗಳಲ್ಲಿ ಹಾರ್ಮೋನುಗಳು ಮೈ- ಮೆದುಳುಗಳ ತುಂಬಾ ಹರಿದಾಡುತ್ತಾ ಸಿಟ್ಟು- ಉದ್ವೇಗಗಳನ್ನು ಏರಿಸುತ್ತವೆ. ಅನ್ಯೋನ್ಯವಾಗಿರುವ ತಾಯಿ- ಮಗಳ ಜೋಡಿಗಳನ್ನು ಕೇಳಿ ನೋಡಿ, ಅವರಲ್ಲಿ ಹೆಚ್ಚಿನವರು ಹದಿಹರೆಯದ ಸಂಘರ್ಷಗಳನ್ನು ನೆನಪಿಸಿಕೊಳ್ಳುತ್ತಾರೆ. 

ಅಮ್ಮ- ಮಗಳ್ಯಾಕೆ ಜಗಳ ಆಡ್ತಾರೆ?  
“ಅಮ್ಮ’ನ ಬಗ್ಗೆ ಮಗಳು, ಸಾಮಾನ್ಯವಾಗಿ ದೂರುವುದೇನೆಂದರೆ, “ಅಮ್ಮ ನನ್ನನ್ನು ನಿಯಂತ್ರಿಸುತ್ತಾಳೆ’, “ಏನು ಮಾಡಿದ್ರೂ ತಪ್ಪು ಕಂಡುಹಿಡೀತಾಳೆ’, “ಹೀಗೆ ಮಾಡು, ಹಾಗೆ ಮಾಡು ಅಂತಾಳೆ’ ಅಂತ. ಇದಕ್ಕೆ ಅಮ್ಮ ಹೇಳುವುದು: “ಮಗಳು ನನ್ನ ಮಾತು ಕೇಳ್ಳೋದೇ ಇಲ್ಲ, ತಪ್ಪು ನಿರ್ಧಾರ ತಗೊಂಡು, ಕಷ್ಟಪಡ್ತಾಳೆೆ’. ಆದರೆ, ಎಷ್ಟೇ ಜಗಳಗಳಾದರೂ ಅವರಿಬ್ಬರಿಗೆ ಇರುವ ಬಲವಾದ ಭಾವನೆಯೆಂದರೆ, “ನಾವಿಬ್ಬರೂ ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಮುಕ್ತವಾಗಿ ಹೇಳದೆಯೂ ಇನ್ನೊಬ್ಬರ ಮನಸ್ಸಿನಲ್ಲೇನಿದೆ ಅಂತ ಗೊತ್ತಾಗುತ್ತೆ’ ಎಂಬುದು. ಈ ಬಲವಾದ ನಂಬಿಕೆಯೇ ಸಂವಹನದ ಕೊರತೆಗೆ ಅಥವಾ ಒರಟಾಗಿ ಮಾತಾಡುವುದಕ್ಕೆ, ಮನಸ್ಸಿಗೆ ನೋವುಂಟು ಮಾಡುವುದಕ್ಕೆ ಕಾರಣವಾಗುತ್ತದೆ.

  ಅಮ್ಮನ ಇನ್ನೊಂದು ನಂಬಿಕೆಯೆಂದರೆ, “ಅನುಭವಗಳಿಂದ ನಾನು ಪಾಠ ಕಲಿತಿದ್ದೇನೆ. ಹಾಗಾಗಿ, ಯಾವುದು ಒಳ್ಳೆಯದು, ಯಾವುದು ಕೆಟ್ಟದು ಅಂತ ಮಗಳಿಗಿಂತ ನನಗೆ ಚೆನ್ನಾಗಿ ಗೊತ್ತು’ ಎನ್ನುವುದು. ಆದರೆ, ಅಮ್ಮ ಹೇಳಿದಂತೆ ಕೇಳಲು ಮಗಳಿಗೆ ಕಷ್ಟ! ಯಾಕೆಂದರೆ, ಅವಳಿಗೊಂದು ವ್ಯಕ್ತಿತ್ವವಿದೆ. ಸಮಸ್ಯೆಯನ್ನು ಅವಳು ನೋಡುವ ದೃಷ್ಟಿಕೋನ, ಅವಳು ಬದುಕುತ್ತಿರುವ ಕಾಲಘಟ್ಟದ ಅನುಭವಗಳು ಬೇರೆಯೇ ಅಲ್ಲವೇ? ಉದಾ: ಅಮ್ಮ ತಾನು ಪ್ಯಾಂಟ್‌ ಹಾಕಿ ಟೀಕೆ ಅನುಭವಿಸಿದ್ದರಿಂದ ಮಗಳಿಗೆ ಪ್ಯಾಂಟ್‌ ಹಾಕಬೇಡ ಎನ್ನಬಹುದು. ಆದರೆ, ಮಗಳು ಅಂಥ ಟೀಕೆಯನ್ನು ತಳ್ಳಿ ಹಾಕಬಹುದು ಅಥವಾ ಅವಳಿಗೆ ಟೀಕೆಯೇ ಎದುರಾಗದಿರಬಹುದು! ಅಮ್ಮ- ಮಗಳು ಪರಸ್ಪರ ಒಪ್ಪದಿರುವ ಇಂಥ ಹಲವು ಸಂಗತಿಗಳಿವೆ. 

  ಅಮ್ಮ- ಮಗಳ ಸಂಬಂಧವನ್ನು ಸದೃಢವಾಗಿಸುವಲ್ಲಿ ಮುಖ್ಯ ಪಾತ್ರ ಅಮ್ಮನದೇ. ಅವಳದ್ದು ಇಲ್ಲಿ “ಡಬಲ್‌ ರೋಲ್‌’- ದ್ವಿಪಾತ್ರ! ಅಂದರೆ, ತನ್ನನ್ನು ತಾನು ಮಗಳ ಸ್ಥಾನದಲ್ಲಿ ಕಲ್ಪಿಸಿಕೊಂಡು, ಅವಳಂತೆ ಒಮ್ಮೆ ಯೋಚಿಸಿ ನೋಡಬೇಕು. ಡಿಜಿಟಲ್‌ ಕ್ಯಾಮೆರಾದಲ್ಲಿ ಫೋಟೋ ತೆಗೆದಂತಲ್ಲ. ದೊಡ್ಡ ಪ್ಯಾನರಾಮಿಕ್‌ ಲೆನ್ಸ್‌ನಲ್ಲಿ ದೃಶ್ಯಗಳನ್ನು ವಿಶಾಲ ದೃಷ್ಟಿಯಲ್ಲಿ ನೋಡುವುದನ್ನು ಅಮ್ಮ ಕಲಿಯಬೇಕು. ಅಷ್ಟೇ ಅಲ್ಲ, ಮಗಳ ಜೊತೆ ತನ್ನ ಅನುಭವಗಳನ್ನು ಹಂಚಿಕೊಂಡರೂ, ಅವುಗಳಿಂದ ಮಗಳು ಬುದ್ಧಿ ಕಲಿಯಬೇಕು ಎಂದು ನಿರೀಕ್ಷಿಸುವಂತಿಲ್ಲ. ಅದರ ಬದಲು “ನನ್ನ ಅನುಭವ ತಿಳಿಸಿದ್ದೇನೆ, ನಿರ್ಧಾರ ಅವಳದೇ’ ಎಂಬ ಮನಃಸ್ಥಿತಿ ಇಬ್ಬರ ಮಾನಸಿಕ ನೆಮ್ಮದಿಗೂ ಅವಶ್ಯ. ಮಗಳು ಬೆಳೆದಂತೆಲ್ಲಾ ಅಮ್ಮನೂ ಮಾನಸಿಕವಾಗಿ ಬೆಳೆಯಬೇಕು, ತನ್ನ ಅನುಭವಗಳನ್ನು ಉಳಿಸಿಕೊಂಡೂ ಬದಲಾಗಬೇಕು. 

   ಇಂದಿನ ಅಮ್ಮಂದಿರ ಮುಂದಿರುವ ದೊಡ್ಡ ಸವಾಲೆಂದರೆ; ಸ್ವಾವಲಂಬನೆ- ಆಧುನಿಕತೆ- ಆತ್ಮವಿಶ್ವಾಸಗಳ ಮಧ್ಯೆಯೂ; ಮಗಳನ್ನು, ಭಾವನೆಗಳನ್ನು ಕಳೆದುಕೊಳ್ಳದ, ಸಂವೇದನಾಶೀಲ ಸ್ತ್ರೀಯಾಗಿ ಬೆಳೆಸುವುದು ಹೇಗೆ ಎಂಬುದು. ಮಗಳ ಪಾಲನೆಯಲ್ಲಿ, ತನ್ನ ವ್ಯಕ್ತಿತ್ವದ ಬಗೆಗೆ ತನಗಿರುವ ಆತ್ಮವಿಶ್ವಾಸ/ ಕೀಳರಿಮೆ, ತನ್ನ ಭಾವನೆಗಳು, ತಾನು ಒತ್ತಡವನ್ನು ಎದುರಿಸುವ ರೀತಿ… ಇವೆಲ್ಲವನ್ನೂ ತಾಯಿಯಾದವಳು ಗಮನಿಸಬೇಕು. ಏಕೆಂದರೆ, ಮಗಳ ಅತ್ಮವಿಶ್ವಾಸ- ವ್ಯಕ್ತಿತ್ವದ ಮೇಲೆ, ಅಮ್ಮನ ಈ ಎಲ್ಲ ಗುಣಗಳು ಹೆಚ್ಚು ಪ್ರಭಾವ ಬೀರುತ್ತದೆ ಎನ್ನುತ್ತವೆ ಅಧ್ಯಯನಗಳು.  

   ಹೇಳಿದಷ್ಟು ಸುಲಭವಲ್ಲ ಇದು! ಆದರೆ, ಅಸಾಧ್ಯವೂ ಅಲ್ಲ. ಇದನ್ನು ಸಾಧಿಸಲು ಇರುವ ಸುಲಭದ ದಾರಿ, “ಮಾತನಾಡುವ’ “ಸಂವಹಿಸುವ’ ಸೂತ್ರ. ಇಲ್ಲಿ “ಮಾತನಾಡುವುದು’ ಓದಿನ ಬಗೆಗಲ್ಲ, ನಡವಳಿಕೆಯ ಬಗೆಗಲ್ಲ, ಸ್ನೇಹಿತರ ಕುರಿತೂ ಅಲ್ಲ ಅಥವಾ ಸಾಧನೆಗಳ ಬಗೆಗೂ ಅಲ್ಲ. ಅಮ್ಮ- ಮಗಳು ಪರಸ್ಪರ ಅನುಭವಗಳ- ಭಾವನೆಗಳನ್ನು ಹಂಚಿಕೊಳ್ಳುತ್ತಾ, ಒಂದಿಷ್ಟು ಸಮಯ ಯಾವ ಗುರಿಯೂ ಇರದೇ ಅಥವಾ ಮಾತಾಡುವುದನ್ನೇ ಗುರಿಯನ್ನಾಗಿಸಿ ಮಾತಾಡಬೇಕು! ಇದು ಇಬ್ಬರ ಮನಸ್ಸನ್ನೂ ತೆರೆಸುತ್ತದೆ, ವಿಸ್ತಾರವಾಗಿಸುತ್ತದೆ, ಖನ್ನತೆ- ಒತ್ತಡಗಳನ್ನು ದೂರವಾಗಿಸುತ್ತದೆ. ಇಂಥ ಮಾತುಕತೆ ಇಬ್ಬರಿಗೂ “ಅಪ್ತಸಲಹೆ’ಯಾಗುತ್ತದೆ. ಹೀಗೆ ಅಮ್ಮನೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವ ಮಗಳು ಮುಂದೆ ತನ್ನ ಮಗಳೊಂದಿಗೆ ಒಳ್ಳೆಯ ಸಂಬಂಧ ಹೊಂದುತ್ತಾಳೆ.

ನಾನು ಒಳ್ಳೆಯ ತಾಯಿಯೇ, ಅಲ್ಲವೇ?
ಬಹಳಷ್ಟು ಅಮ್ಮಂದಿರನ್ನು ಕಾಡುವ ಪ್ರಶ್ನೆ: “ನಾನು ಒಳ್ಳೆಯ ತಾಯಿಯೇ, ಅಲ್ಲವೇ?’ ಎಂಬುದು! ಹಾಗೆಯೇ ತನ್ನ ಕಾಳಜಿಯನ್ನು ಮಗಳಿಗೆ ಹೇಗೆ ಅರ್ಥ ಮಾಡಿಸುವುದು ಎಂಬುದು. ಆಗೆಲ್ಲಾ ಅಮ್ಮ ಹೇಳುವುದು “ನೀನು ಅಮ್ಮನಾದಾಗ ಮಾತ್ರ ನಿನಗೆ ಇವೆಲ್ಲಾ ಅರ್ಥ ಆಗುತ್ತೆ’ ಅಂತ! ಬಹಳಷ್ಟು ತಾಯಂದಿರು ತಮ್ಮ ಹೆಣ್ಣುಮಕ್ಕಳು ಹದಿಹರೆಯದಲ್ಲಿ ಎದುರು ಮಾತಾಡಿದಾಗ, “ಅಯ್ಯೋ, ಆಗ ಅಮ್ಮ ಹೇಳಿದ್ದು ಈಗ ಅರ್ಥವಾಗ್ತಾ ಇದೆ’ ಅಂತ ಅಂದುಕೊಳ್ಳುತ್ತಾರೆ. ಹಾಗಾಗಿ, ಇಲ್ಲಿ ಒಂದು ಮಾತಂತೂ ನಿಜ, ಎಲ್ಲ ಅಮ್ಮಂದಿರೂ ಒಳ್ಳೆಯ ಅಮ್ಮಂದಿರೇ! ಒಟ್ಟಿನಲ್ಲಿ, ಅಮ್ಮ- ಮಗಳ ವ್ಯಕ್ತಿತ್ವ ಆಗಾಗ ದೂರ ದೂರ ನಿಂತರೂ, ಇಬ್ಬರೂ ಹತ್ತಿರವೇ ಎಂಬುದು ನಿಶ್ಚಿತ.

ಡಾ. ಕೆ.ಎಸ್‌. ಪವಿತ್ರ

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.