ಪೂಜಾ ಪಾತ್ರೆಗೆ ಮಜ್ಜನ
Team Udayavani, Feb 13, 2019, 12:30 AM IST
ಇದು ಉತ್ತರಾಯಣ ಕಾಲ. ಮನೆಯ ಯಾವುದೋ ಒಂದು ಕಡೆ, ತೊಳೆದು ಸುತ್ತಿಟ್ಟಿರುವ ಬೆಳ್ಳಿ ಪಾತ್ರೆಗಳನ್ನು ಮತ್ತೂಮ್ಮೆ ಬೆಳಗಿಸುವ ಜವಾಬ್ದಾರಿ ಮನೆಯಾಕೆಯ ಹೆಗಲೇರಿದೆ. ಜೊತೆಗೆ ಇದು, ಮದುವೆ, ಮುಂಜಿಯಂಥ ಅನೇಕ ಶುಭ ಕಾರ್ಯಕ್ರಮಗಳು ನಡೆಯುವ ಸಮಯ. ಪೂಜಾ ಸಾಮಗ್ರಿಗಳನ್ನು ಫಳಫಳ ಹೊಳೆಯುವಂತೆ ಮಾಡಲು ಕೆಲವು ಟಿಪ್ಸ್ ಇಲ್ಲಿವೆ…
1. ಆಲೂಗಡ್ಡೆಯನ್ನು ಬೇಯಿಸಿದ ನಂತರ ಅದರ ನೀರನ್ನು ತೆಗೆದುಕೊಂಡು, ಅದರಲ್ಲಿ ಬೆಳ್ಳಿ ಪಾತ್ರೆಗಳನ್ನು ಸ್ವಲ್ಪ ಹೊತ್ತು ನೆನೆಸಿಟ್ಟು, ಸೀಗೆಪುಡಿ ಅಥವಾ ಬೂದಿ ಮಿಶ್ರಣದಿಂದ ಉಜ್ಜಿ ತೊಳೆಯಬೇಕು. ನಂತರ ಪಾತ್ರೆಗಳನ್ನು ಒಣಗಿದ ಬಟ್ಟೆಯಲ್ಲಿ ಒರೆಸಿಟ್ಟರೆ ಅಷ್ಟು ಬೇಗ ಅವು ಕಪ್ಪಾಗುವುದಿಲ್ಲ.
2. ಬೆಳ್ಳಿ ಪಾತ್ರೆಯ ಜೊತೆ ಕರ್ಪೂರವನ್ನು ಇಟ್ಟರೆ ಪಾತ್ರೆ ಕಪ್ಪಾಗುವುದಿಲ್ಲ.
3. ಅಡುಗೆ ಸೋಡಕ್ಕೆ ಸ್ವಲ್ಪ ನೀರು ಬೆರೆಸಿ ಅದರಿಂದ ಬೆಳ್ಳಿ ಪಾತ್ರೆ ತೊಳೆಯಿರಿ.
4. ಉಪಯೋಗಿಸಿದ ನಂತರ ಪಾತ್ರೆಗಳನ್ನು ಟಿಶ್ಯೂ ಅಥವಾ ಪೇಪರ್ನಲ್ಲಿ ಸುತ್ತಿ ಇಡಬೇಕು.
5. ಹಲ್ಲುಜ್ಜುವ ಪೇಸ್ಟ್ನಿಂದ ಬೆಳ್ಳಿ ಪಾತ್ರೆಯನ್ನು ತೊಳೆದರೆ, ಪಾತ್ರೆಗೆ ಅಂಟಿದ್ದ ಕಪ್ಪು, ಜಿಡ್ಡಿನಾಂಶ ಹೋಗುತ್ತದೆ.
6. ಕಡಲೆಹಿಟ್ಟಿನ ಜೊತೆ ಲಿಂಬೆ ಹಣ್ಣಿನ ರಸ ಬೆರೆಸಿ ತೊಳೆದರೆ, ಬೆಳ್ಳಿ ಪಾತ್ರೆ ಹೊಳೆಯುತ್ತದೆ.
ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ