ಥಂಡಾ ಥಂಡಾ ಕೂಲ್‌ ಕೂಲ್‌!

Team Udayavani, Mar 6, 2019, 12:30 AM IST

z-7.jpg

ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ. ಸಿಹಿ, ಸಿಹಿಯ ಪಾನೀಯಗಳನ್ನು ಮನಸ್ಸು ಬಯಸುತ್ತಿದೆ. ತಾಜಾ ಹಣ್ಣಿನ ಜ್ಯೂಸ್‌ಗಳು ಬಾಯಾರಿಕೆ ತಣಿಸುವುದಷ್ಟೇ ಅಲ್ಲ, ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನೂ ಚೆನ್ನಾಗಿಡುತ್ತವೆ. ಜ್ಯೂಸ್‌ ಕುಡಿಯಲು ಜ್ಯೂಸ್‌ ಸೆಂಟರ್‌ಗೆ ಹೋಗಬೇಕಲ್ಲ ಎನ್ನಬೇಡಿ; ತುಂಬ ಸುಲಭವಾಗಿ ಮನೆಯಲ್ಲೇ ಸ್ವಾದಿಷ್ಟ ಪಾನೀಯಗಳನ್ನು ತಯಾರಿಸಬಹುದು. ಅಂಥ ಕೆಲವು ಜ್ಯೂಸ್‌ಗಳ ರೆಸಿಪಿ ಇಲ್ಲಿದೆ. 

1. ಅನಾನಸ್‌ ಮಿಲ್ಕ್ ಶೇಕ್‌
ಬೇಕಾಗುವ ಸಾಮಗ್ರಿ:
ಅನಾನಸ್‌ ತುಣುಕು- 2 ಕಪ್‌, ಕ್ಯಾರೆಟ್‌ ತುಣುಕು- 1 ಕಪ್‌, ಬಾಳೆಹಣ್ಣು- 1, ಹಾಲು- 1/2 ಕಪ್‌

ಮಾಡುವ ವಿಧಾನ: ಅನಾನಸ್‌ ಮತ್ತು ಕ್ಯಾರೆಟ್‌ ತುಣುಕುಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ಬಾಳೆಹಣ್ಣನ್ನು ಕಿವುಚಿ, ಹಾಲಿನೊಂದಿಗೆ ಸೇರಿಸಿ, ಪೇಸ್ಟ್‌ ಮಾಡಿ. ಎರಡೂ ಬಗೆಯ ಪೇಸ್ಟ್‌ಅನ್ನು ಸರಿಯಾಗಿ ಬೆರೆಸಿದರೆ ಅನಾನಸ್‌ ಮಿಲ್ಕ್ ಶೇಕ್‌ ರೆಡಿ. 

2. ಮಾವು-ಕ್ಯಾರೆಟ್‌ ಜ್ಯೂಸ್‌ 
ಬೇಕಾಗುವ ಸಾಮಗ್ರಿ:
ಮಾವಿನ ಹಣ್ಣು- 2, ಜೇನುತುಪ್ಪ- 1 ಚಮಚ (ಸಕ್ಕರೆಯ ಬದಲು) ಕ್ಯಾರೆಟ್‌- 2

ಮಾಡುವ ವಿಧಾನ : ಮಾವಿನ ಹಣ್ಣು ಮತ್ತು ಕ್ಯಾರೆಟ್‌ ಅನ್ನು ಚೆನ್ನಾಗಿ ತೊಳೆಯಿರಿ. ಕ್ಯಾರೆಟ್‌ನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದನ್ನು ಮಾವಿನ ಹಣ್ಣಿನ ಜೊತೆ ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ.  ಆ ಮಿಶ್ರಣಕ್ಕೆ ಜೇನುತುಪ್ಪ ಬೆರೆಸಿ, ಸಮನಾಗಿ ಕಲಕಿದರೆ ಸ್ವಾದಿಷ್ಟಕರವಾದ ಜ್ಯೂಸ್‌ ಸಿದ್ಧ. 

3. ದಾಳಿಂಬೆ ಜ್ಯೂಸ್‌
ಬೇಕಾಗುವ ಸಾಮಗ್ರಿ:
ದಾಳಿಂಬೆ ಕಾಳು- ಒಂದು ಕಪ್‌, ಲಿಂಬೆರಸ- ಎರಡು ಚಮಚ, ಪುದೀನಾ ಸೊಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ- 1/2 ಚಮಚ.

ಮಾಡುವ ವಿಧಾನ: ದಾಳಿಂಬೆ ಕಾಳನ್ನು, ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಸ್ವಲ್ಪ ನೀರು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಲಿಂಬೆರಸ, ಕಾಳುಮೆಣಸಿನ ಪುಡಿ ಬೆರೆಸಿ, ಪುದೀನಾ ಎಲೆಯನ್ನು ಉದುರಿಸಿ. (ರುಬ್ಬುವಾಗಲೇ ಪುದೀನಾ ಸೊಪ್ಪನ್ನು ಸೇರಿಸಬಹುದು) 

4. ಕ್ಯಾರೆಟ್‌-ಬೀಟ್‌ರೂಟ್‌ ಜ್ಯೂಸ್‌
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌- 1, ಬೀಟ್‌ರೂಟ್‌- 2, ಕಪ್ಪುದ್ರಾಕ್ಷಿ- 15, ಸಕ್ಕರೆ/ ಜೇನುತುಪ್ಪ, ನೀರು

ಮಾಡುವ ವಿಧಾನ: ಕ್ಯಾರೆಟ್‌ ಹಾಗೂ ಬೀಟ್‌ರೂಟ್‌ ತುರಿದು, ದ್ರಾಕ್ಷಿಯ ಜೊತೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಿಮಗೆ ಬೇಕಾದಷ್ಟು ನೀರು ಸೇರಿಸಿ. ಅದನ್ನು ಸೋಸಿ, ಜೇನುತುಪ್ಪ ಅಥವಾ ಸಕ್ಕರೆ ಹಾಕಿ, ಕರಗಿಸಿ. ಈ ಜ್ಯೂಸ್‌ನಲ್ಲಿ ಝಿಂಕ್‌ ಹಾಗೂ ವಿಟಮಿನ್‌ ಎ ಅಧಿಕವಾಗಿದ್ದು, ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆಯನ್ನು ತಡೆಯಬಲ್ಲದು.  

ಭಾಗ್ಯಶ್ರೀ, ವಿಜಯಪುರ

ಟಾಪ್ ನ್ಯೂಸ್

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.