CONNECT WITH US  

ಭಾವನಾ ಹೇಳೋ ಕೆಲವು ಸಿಂಪಲ್‌ ಡಯೆಟ್‌ ಟಿಪ್ಸ್‌

ಭಾವನಾ ಭಟ್‌ 2014ರ "ಫೆಮಿನಾ ಸ್ಟೈಲ್‌ ದಿವಾ ಮಿಸ್‌ ಸೌತ್‌ ಇಂಡಿಯಾ' ಕಿರೀಟ ತೊಟ್ಟವರು. ಈ ಸ್ಪರ್ಧೆಗೆ ಜಡ್ಜ್ ಆಗಿದ್ದವರು ಬಾಲಿವುಡ್‌ ನಟಿ ಬಿಪಾಶಾ ಬಸು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಓದುತ್ತಿರೋ ಭಾವನಾ, ಮಾಡಲಿಂಗ್‌ ಮಾಡ್ತಿದ್ದಾರೆ. ಮುಂದೆ ಮಿಸ್‌.ಇಂಡಿಯಾ ಸ್ಪರ್ಧೆಗೆ ಕಾಂಟೆಸ್ಟ್‌  ಮಾಡ್ತಾರೆ. ಸೌಂದರ್ಯ ಸ್ಪರ್ಧೆ, ಅದರ ತಯಾರಿ ಜೊತೆಗೇ ಒಂದಿಷ್ಟು ಫಿಟ್‌ನೆಸ್‌ ಟಿಪ್ಸ್‌ಗಳನ್ನೂ ಭಾವನಾ ಕೊಟ್ಟಿದ್ದಾರೆ. 

-ಮೊದ್ಲು ನಿಮ್ಮ ದೇಹಪ್ರಕೃತಿ ಯಾವ ರೀತಿಯದ್ದು ಅನೋದನ್ನ ನೋಡ್ಕೊಳ್ಳಿ. ನನ್ನ ಡಯೆಟ್‌ ಅಂದ್ರೆ ತಿನ್ನೋದನ್ನ ಕಡಿಮೆ ಮಾಡೋದಲ್ಲ. ಬದಲಾಗಿ ನಮ್ಮ ದೇಹಪ್ರಕೃತಿಗೆ ಎಷ್ಟು ಫ‌ುಡ್‌, ಎಂತಹ ಫ‌ುಡ್‌ ಬೇಕು ಅನ್ನೋದನ್ನು ಮೊದಲೇ ನಿರ್ಧರಿಸ್ಬೇಕು. ನನ್ನ ದೇಹ ಸಣ್ಣಗೇ ಇರೋ ಕಾರಣ ಕಾರ್ಬೋಹೈಡ್ರೇಟ್‌ ಅಂದ್ರೆ ಹೆದ್ರಬೇಕಾಗಿಲ್ಲ. ಹಾಗಾಗಿ ಎಲ್ಲವನ್ನೂ ಚೆನ್ನಾಗಿ ತಿಂತೀನಿ. ಹಾಗಂತ ಎಲ್ಲ ದೇಹ ಪ್ರಕೃತಿಯವರಿಗೂ ಇದು ಅನ್ವಯವಾಗಲ್ಲ. 

-ಬೆಳಗ್ಗಿನ ಊಟ ತಿಂಡಿ, ಹೊಟ್ಟೆಗೆಷ್ಟು ಬೇಕೋ ಅಷ್ಟು ತಿನ್ನಿ. ಮಧ್ಯಾಹ್ನ ಸ್ವಲ್ಪ ಕಡಿಮೆ ಇರಲಿ. ರಾತ್ರಿ ತರಕಾರಿ, ಸೊಪ್ಪು ತಿನ್ನಿ. 

-ಡಯೆಟ್‌ನಲ್ಲಿ ಆಸಕ್ತಿ ಇರುವವರು ರಾತ್ರಿ ಹಣ್ಣು ತಿಂದು ಮಲ್ಕೋಬೇಡಿ. ಹಣ್ಣಿನ ಬದಲು ತರಕಾರಿ ತಿನ್ನೋದನ್ನು ರೂಢಿಸಿಕೊಳ್ಳಿ. 

-ಹೊಟ್ಟೆ ಖಾಲಿಬಿಟ್ಟು ಫಿಟ್‌ನೆಸ್‌ ಕಾಪಾಡ್ಕೊಳ್ತೀನಿ ಅನ್ನೋದರಲ್ಲಿ ಹುರುಳಿಲ್ಲ. ಪ್ರಮಾಣಬದ್ಧವಾಗಿ ತಿನ್ನೋದನ್ನ ಖಂಡಿತಾ ಬಿಡ್ಬೇಡಿ. 

-ಜಂಕ್‌ಫ‌ುಡ್‌ ತಿನ್ಬೇಡಿ ಅಂತೆØàಳಲ್ಲ. ಆದ್ರೆ ಕಡಿಮೆ ತಿನ್ನಿ.

- ರಾತ್ರಿ ಹೊಟೇಲ್‌ ಫ‌ುಡ್‌ ಹೊಟ್ಟೆತುಂಬ ತಿಂದು ಬೆಳಗ್ಗಿನವರೆಗೆ ನಿದ್ದೆ ಮಾಡ್ತಿದ್ರೆ ಜಪ್ಪಯ್ನಾ ಅಂದ್ರೂ ಫಿಟ್‌ ಆಗಕ್ಕಾಗಲ್ಲ. 

-ರಾತ್ರಿ ಹೊಟೇಲ್‌ ಫ‌ುಡ್‌ ತಿಂದಿದ್ರೆ ಬೆಳಗ್ಗೆದ್ದು ಚೆನ್ನಾಗಿ ಜಾಗಿಂಗ್‌ ಮಾಡ್ಲೆàಬೇಕು. ಜೀರ್ಣ ಚೆನ್ನಾಗಾಗತ್ತೆ. ಬೊಜ್ಜು ತುಂಬೊRಳ್ಳೋದು ಅವೈಡ್‌ ಆಗತ್ತೆ.

-ಹೆಜ್ಜಿನವರ ವರ್ಕಿಂಗ್‌ ಶೆಡ್ನೂಲ್‌ನಲ್ಲಿ ಕೂತ್ಕೊಂಡೇ ಕೆಲ್ಸ ಮಾಡೋದಿರತ್ತೆ. ನಡುವೆ ಫ್ರೀ ಸಿಕ್ಕಾಗಲೂ ಕೂತಿದ್ರೆ ಹೇಗೆ? ಓಡಾಡ್ತಾನೇ ಹರಟೆ ಹೊಡಿಯೋದು ರೂಢಿಸಿಕೊಳ್ಳಿ. 
ಬಾಯಿಗೂ, ದೇಹಕ್ಕೂ ವ್ಯಾಯಾಮ ಸಿಗತ್ತೆ. 

-ಪ್ರತಿದಿನ ನಡೆಯೋ ಹೆಜ್ಜೆಗಳನ್ನ ನೆನಪಿಡೋದು ಕಲಿತುಕೊಳ್ಳಿ. ವ್ಯಕ್ತಿ ದಿನಕ್ಕೆ 12,000 ದಿಂದ 15,000 ಹೆಜ್ಜೆ ನಡಿಯಲೇ ಬೇಕು ಅನ್ನೋ ನಿಯಮವನ್ನ ಪಾಲಿಸೋದು ಕಲಿಯಿರಿ. 

-ಫಿಟ್‌ನೆಸ್‌ ಬಗ್ಗೆ ಗೈಡ್‌ ಇಲೆªà ಏನೇನೋ ಮಾಡಕ್ಕೆ ಹೋಗ್ಬೇಡಿ. ಅದ್ರಿಂದ ದೇಹ ಪ್ರಮಾಣಬದ್ಧವಾಗದೇ ಅಸಮತೋಲನ ಕಾಣಿಸಿಕೊಳ್ಳೋ ಸಾಧ್ಯತೆ ಇರತ್ತೆ. 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top