ತನುವು ಚಿನ್ನದು


Team Udayavani, Jan 6, 2017, 3:45 AM IST

Sara-001.jpg

ಕತ್ತಿಗೆ ನೆಕ್ಲೆಸ್‌ ಅಥವಾ ಚೋಕರ್‌ ಹಾಕ್ಕೊಳ್ಳಬಹುದು, ಕೈಗೆ ಬಳೆ ಅಥವಾ ಬ್ರೇಸ್‌ಲೈಟ್‌, ಜೊತೆಗೆ ಡಾಬು… ಎಲ್ಲವೂ ಬೇರೆ, ಬೇರೆ. ಎಲ್ಲೋ ಫ‌ಂಕ್ಷನ್‌ಗೆ ಹೋಗ್ಬೇಕು, ಅರ್ಜೆಂಟಾಗಿ ರೆಡಿಯಾಗ್ಬೇಕು. ಜ್ಯುವೆಲ್ಲರಿ ಬಾಕ್ಸ್‌ ನೋಡಿದ್ರೆ ಎಲ್ಲಾ ಇದೆ, ಒಂದು ಯಿಯರ್‌ರಿಂಗ್‌ಗೆ ಹಿಂದಿನ ಬಟನ್‌ ಇಲ್ಲ.

“ಅಷ್ಟೇನಾ, ಇನ್ನೊಂದ್ರದ್ದು ತೆಗೆದು ಇದಕ್ಕೆ ಸಿಕ್ಕಿಸು, ಇಲ್ಲಾಂದ್ರೆ ಬೇರೆ ಹಾಕ್ಕೋ’ ಅಮ್ಮನದು ಎಂದಿನ ಹಾಗೆ ಸಾವಕಾಶದ ಉತ್ತರ. ಆದರೆ ಅದು ಹೇಗೆ ಸಾಧ್ಯ? ಒಂದು ಚಿಕ್ಕ ಹಿಂಬದಿಯ ಬಟನ್‌ಗೊàಸ್ಕರ ಅರ್ಧ ಗಂಟೆ ಜಾಲಾಡೋದು ಮನೆಯವರ ಅಸಹನೆಯನ್ನು ಹೆಚ್ಚಿಸುತ್ತೆ. ಆದರೆ ಅದಿಲ್ಲದೇ ಹೋದರೆ ಇಡೀ ಆಭರಣಗಳ ಗುಂಪಿಗೆ ಅವಮಾನ.

ಹೀಗೊಂದು ಸನ್ನಿವೇಶ ಒಂದಿಲ್ಲೊಮ್ಮೆ ಬಂದೇ ಇರುತ್ತದೆ. ಆದರೆ ಬಾಡಿ ಜ್ಯುವೆಲ್ಲರಿ ಹಾಕ್ಕೊಂಡರೆ ಯಿಯರ್‌ರಿಂಗ್‌ ಹಾಕ್ಕೊಳ್ಳೋ ಆವಶ್ಯಕತೆ ಇರಲ್ಲ. ಯಾಕೆಂದರೆ, ಇಡೀ ಬಾಡಿ ಜ್ಯುವೆಲ್ಲರಿಗೆ ಅದ್ದೂರಿಯಾದ ಲುಕ್‌ ಇರುತ್ತೆ. ಇಲ್ಲಿ ಕೂದಲನ್ನು ಹರವಿಟ್ಟರೆ ನಿಮ್ಮ ಯಿಯರ್‌ರಿಂಗ್‌ ಕಾಣೋದೇ ಇಲ್ಲ. ಮತ್ತೂಂದು ವಿಶೇಷ ಅಂದರೆ ಅರ್ಧ ದೇಹವನ್ನು ಕವರ್‌ ಮಾಡುತ್ತೆ ಈ ಜ್ಯುವೆಲ್ಲರಿ.

ಈ ಆಭರಣದ ಬಹಳ ಹಿಂದಿಂದಲೇ ಇತ್ತು. ಆದರೆ ಈಗ ಫೇಮಸ್‌ ಆಗ್ತಿರೋದಕ್ಕೆ ಕಾರಣ ಇದೆ. ಮೊದಲು ಈ ಬಗೆಯ ಆಭರಣ ಮದುಮಗಳಿಗೆ (ಬ್ರೈಡಲ್‌)ಅಥವಾ ಮದುವೆಯಂಥ ಫ‌ಂಕ್ಷನ್‌ಗಳಲ್ಲಿ ಮಿಂಚುವ ಹುಡುಗಿಯರಿಗೆ ಸೀಮಿತವಾಗಿತ್ತು. ಆದರೆ ಈಗ ಸಾಕಷ್ಟು ವೆರೈಟಿಗಳು ಬಂದಿವೆ. ಸರಳತೆ ಮತ್ತು ಫ್ಯಾಶನೇಬಲ್‌ ಆಗಿರೋದು ಅವುಗಳ ಹೆಚ್ಚುಗಾರಿಕೆ. ಸಿಂಗಲ್‌ ಪೀಸ್‌ನಲ್ಲಿ ನೆಕ್‌ಲೆಸ್‌, ಡಾಬು ಎಲ್ಲ ಬಂತು. ನೋಡೋದಕ್ಕೆ ಬಲು ಆಕರ್ಷಕ. ಮಾಡರ್ನ್ ನೆಕ್‌ಲೆಸ್‌ ಮೆಟಾಲಿಕ್‌ ಮಾದರಿಯಲ್ಲಿರೋದು ಜನಪ್ರಿಯ. ಅದರಿಂದಿಳಿದ ದಪ್ಪ ಚೈನ್‌ ಮಾದರಿ ಡಾಬುಗೆ ಜಾಯಿನ್‌ ಆಗಿದೆ. ನೆಕ್‌ಪೀಸ್‌ಗಿಂತ ಬಾಡಿಚೈನ್‌ ಹೆಚ್ಚು ಹೈಲೈಟ್‌ ಆಗ್ತಿದೆ. ಚಿಕ್ಕ ಚಿಕ್ಕ ಗೆಜ್ಜೆಗಳು ಇಳಿಬಿದ್ದಿರೋ ಡಾಬುವಿನಲ್ಲೂ ಸೊಬಗಿದೆ.

ಕಡುಗಪ್ಪಿನ ಮೈಗಂಟಿ ನಿಲ್ಲುವ ಡ್ರೆಸ್‌ ತೊಟ್ಟಿರುವ ಕಾರಣ ಆಭರಣ ಹೆಚ್ಚು ಹೈಲೈಟ್‌ ಆಗ್ತಿದೆ. ಈ ಬಗೆಯ ಮಾಡರ್ನ್ ಬಾಡಿ ಜ್ಯುವೆಲ್ಲರಿಗೆ ಸ್ಲಿಮ್‌ μಟ್‌ನ ಯಾವ ಡಿಸೈನೂ ಇಲ್ಲದ ಪ್ಲೇನ್‌ ಡ್ರೆಸ್‌ ಸಖತ್ತಾಗಿರತ್ತೆ. ಆಭರಣಗಳು ಎದ್ದು ಕಾಣುವ ಜೊತೆಗೆ ಇಡೀ ಲುಕ್‌ನಲ್ಲೇ ಕ್ರಿಯೇಟಿವಿಟಿ ಕಾಣತ್ತೆ. ಈ ವೇಷದಲ್ಲಿ ಮಾದಕತೆ ಹಾಸುಹೊಕ್ಕಾಗಿದೆ ಅಂತ ಮತ್ತೆ ಹೇಳ್ಬೇಕಿಲ್ಲ.

ಬಾಡಿ ಜ್ಯುವೆಲ್ಲರಿ ಸಾಂಪ್ರದಾಯಿಕ ಮಾದರಿಗಳಲ್ಲಿರೋ ಇಷ್ಟೇ ಜನಪ್ರಿಯತೆ ಸಾಧಿಸಿದೆ. ಆದರೆ ಅವುಗಳನ್ನು ತೊಡಲು ದೊಡ್ಡ ಸಮಾರಂಭವೋ, ಹಬ್ಬವೋ ಬರಬೇಕು ಅನ್ನೋದೊಂದು ಮಿತಿಯಿತ್ತು. ಈಗ ಅದೂ ಇಲ್ಲ. ಇಲ್ಲಿ ಬಾಲಿವುಡ್‌ ನಟಿ ಪ್ಲೇನ್‌ ಕಪ್ಪು ಕ್ರಾಪ್‌ಟಾಪ್‌ ಮತ್ತು ಸ್ಕರ್ಟ್‌ ಮೇಲೆ ಸಾಂಪ್ರದಾಯಿಕ ಬಾಡಿ ಜ್ಯುವೆಲ್ಲರಿಗಳನ್ನು ಧರಿಸಿ ತೀಕ್ಷ್ಣ ನೋಟ ಬೀರುತ್ತಿದ್ದಾಳೆ. ಹಾಗಾಗಿ ಆಧುನಿಕ, ಪಾರಂಪರಿಕ ಅಥವಾ ಎಥಿ°ಕ್‌ ಬಾಡಿ ಜ್ಯುವೆಲ್ಲರಿಗಳನ್ನು ಆಯ್ಕೆ ಮಾಡಿಕೊಳ್ಳೋದು ನಿಮ್ಮ ಖುಷಿಗೆ ಬಿಟ್ಟಿದ್ದು. ಪ್ಲೇನ್‌ ಡ್ರೆಸ್‌ ಅದರಲ್ಲೂ ಕಪ್ಪು ಡ್ರೆಸ್‌ ಮೇಲೆ ಈ ಬಾಡಿಜ್ಯುವೆಲ್ಲರಿ ಸಖತ್ತಾಗಿ ಕಾಣೋದಂತೂ ಸುಳ್ಳಲ್ಲ. 

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.