ಹಿತ್ತಲ ಗಿಡವೇ ಮದ್ದು!


Team Udayavani, May 5, 2017, 4:07 PM IST

asds.jpg

ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಭಿಕ್ಷುಕನಂತೆ ಊಟ ಮಾಡಬೇಕೆಂಬ ಗಾದೆ ಮಾತಿದೆ. ಈಗ ಈ ಜೀವನಕ್ರಮ ಉಲ್ಟಾ ಆಗಿದೆ, ರಾತ್ರಿ ಎಂದರೆ ಮಧ್ಯರಾತ್ರಿ ಎಂದಾಗಿದೆ, ಆರೋಗ್ಯವೂ ಉಲ್ಟಾ ಆಗಿದೆ. ಈಗ ಬೇಸಗೆ ಕಾಲ. ನೀರು ಆಳಕ್ಕೆ ಇಳಿದಿರುತ್ತದೆ. ಆರೋಗ್ಯ ಕೆಡುವ ಕಾಲವೂ ಹೌದು. ನೈಸರ್ಗಿಕವಾಗಿ ಬದುಕಲು ಕಲಿಯಲೂ ಇದು ಸಕಾಲ. 

ಆಹಾರದ ಜೊತೆ ವಿವಿಧ ಔಷಧೀಯ ಸಸ್ಯಗಳ ತಳಿಗಳಲ್ಲಿ ಒಂದು ಸಸ್ಯ, ಒಂದು ಎಲೆಗಳನ್ನು ಹಾಕಿ ತಿಂದರೆ ಅದರ ಪರಿಣಾಮ ಒಂದೆರಡು ತಿಂಗಳಲ್ಲಿ ತಿಳಿಯುತ್ತದೆ. ಇಂತಹ ಸಸ್ಯಗಳನ್ನು ಸಾವಿರಪಟ್ಟು ತಿನ್ನುವ ದನದ ದೇಹದಲ್ಲಿ ನಾನಾ ವಿಧದ ಪ್ರಕ್ರಿಯೆ ನಡೆದು ಅದರಿಂದ ಬರುವ ಹಾಲು, ಅದರಿಂದಾಗುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪದಲ್ಲಿ ಎಷ್ಟು ಶಕ್ತಿ ಇದ್ದಿರಬಹುದು ಎಂದು ಊಹಿಸಿಕೊಳ್ಳಲು ಕಷ್ಟಪಡಬೇಕಾಗಿಲ್ಲ. 

ಸರಳ ಪ್ರಯೋಗ
ಮೇದು ಬರುವ ನಾಟಿ ದನದ ಒಂದೆರಡು ಚಮಚ ತುಪ್ಪವನ್ನು ರಾತ್ರಿ ನಾಟಿದನದ ಬಿಸಿ ಹಾಲಿಗೆ ಅಥವಾ ಬಿಸಿನೀರಿಗೆ ಹಾಕಿ ಏಳೆಂಟು ಬಾರಿ ಮೇಲೆ ಕೆಳಗೆ ಬೆರೆಸಿ ಕುಡಿದರೆ ಜೀರ್ಣ, ಅಸಿಡಿಟಿ, ಹೆಪಟೈಟಿಸ್‌ ಬಿ, ಕಿಡ್ನಿ ಸಮಸ್ಯೆ ಬಗೆಹರಿಯುತ್ತದೆ, ಹೊಳಪು ಬರುತ್ತದೆ, ಕಾಯಿಲೆ ಬರುವ ಹಿಂದಿನ ಹಂತಗಳಾದ ವಿವಿಧ ಅಂಗಗಳ ನ್ಯೂನತೆಗಳನ್ನು ನಿವಾರಿಸುತ್ತದೆ. ಒಂದೆರಡು ಹನಿ ತುಪ್ಪವನ್ನು ಮೂಗಿನ ಹೊಳ್ಳೆಗೆ ಬಿಟ್ಟರೆ ಸೈನಸ್‌ ಸಮಸ್ಯೆ ಪರಿಹಾರವಾಗುತ್ತದೆ. ಸಿಸೇರಿಯನ್‌ ಆಪರೇಶನ್‌ ಆದ ಬಳಿಕ ಆಗುವ ಹೊಟ್ಟೆಯ ಉಬ್ಬುವಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ನೀರು ಮಜ್ಜಿಗೆಯನ್ನು ಸೇವಿಸುವುದರಿಂದ ಹೊಟ್ಟೆ ಉರಿ, ಹುಳಿತೇಗು, ಅಸಿಡಿಟಿ ಮಾಯವಾಗುವುದಲ್ಲದೆ ಶಕ್ತಿ ಸದಾ ಇರುತ್ತದೆ. ಸಂಜೆ ಬಳಿಕ ಸೇವಿಸಬಾರದಷ್ಟೆ. ಗೋಮೂತ್ರ ಅರ್ಕದಿಂದ ಶೀತ, ಅಸಿಡಿಟಿ, ಜೀರ್ಣ ಸಮಸ್ಯೆ ಪರಿಹಾರವಾಗುವುದಲ್ಲದೆ ಜ್ಞಾಪಕ ಶಕ್ತಿ ಉದ್ದೀಪನಗೊಳ್ಳುತ್ತದೆ ಎನ್ನುತ್ತಾರೆ ಇದೆಲ್ಲವನ್ನೂ ತನಗೂ, ಇತರರಿಗೂ ಪ್ರಯೋಗ ಮಾಡಿ ನೋಡುತ್ತಿರುವ ವಿಜ್ಞಾನದ ವಿದ್ಯಾರ್ಥಿಗಳಾಗಿದ್ದ ಲಕ್ಷ್ಮೀಶ ಮತ್ತು ಪತ್ನಿ ಸುಪ್ರಿಯಾ ಅವರು. ಸದ್ಯ ಉಜಿರೆಯಲ್ಲಿರುವ ಇವರು ದೊಡ್ಡ ಗೋಶಾಲೆಯನ್ನು ನಿರ್ವಹಿಸಬೇಕೆಂದಿದ್ದಾರೆ.
 
ಒಳಗೆ ಏರ್‌ಕಂಡೀಶನ್‌ ಬೇಕೆ?
“ನಾವು ಕೋಣೆಗೆ, ಸಭಾಂಗಣಕ್ಕೆ ಏರ್‌ಕಂಡೀಶನ್‌ ಹಾಕುತ್ತೇವೆ. ಸುಮಾರು 250 ಗ್ರಾಂ ದೇಸೀ ದನದ ಮೊಸರು, ಸ್ವಲ್ಪ ಬೆಲ್ಲ, ಕೊತ್ತಂಬರಿ ಬೀಜದ ಪುಡಿಯನ್ನು ಮಿಶ್ರಣ ಮಾಡಿ ಕುಡಿದು ಬಿಸಿಲಿಗೆ ಹೋಗಿ. ಎಷ್ಟು ಬೇಕಾದರೂ ಹೋಗಿ. ಹೊರಗೆ ಬಿಸಿಲಿದ್ದರೂ ಬಾಡಿ ಮಾತ್ರ ಕೂಲ್‌ ಆಗಿರುತ್ತದೆ. ನಾವು ಹೊರಗೆ ಏರ್‌ಕಂಡೀಶನ್‌ ಹಾಕಿ ಬಾಡಿಯ, ಪರಿಸರದ ಬಿಸಿಯನ್ನೂ ಏರಿಸುತ್ತಿದ್ದೇವೆ. ಒಳಗೆ ಏರ್‌ಕಂಡೀಶನ್‌ ಮಾಡುವ ತಂತ್ರಜ್ಞಾನವನ್ನು ಆಯುರ್ವೇದ ಕೊಟ್ಟಿದೆ. ಅದು ಪೊಲುಶನ್‌ ಟೆಕ್ನಾಲಜಿ, ನಮ್ಮದು ಹರ್ಬಲ್‌ ಟೆಕ್ನಾಲಜಿ’ ಎಂಬ ಮಾತು ಆಯುರ್ವೇದ ವೈದ್ಯ ಉಡುಪಿಯ ಡಾ| ತನ್ಮಯ ಗೋಸ್ವಾಮಿಯವರದು. 

ವಿಜ್ಞಾನಿ-ಅಜ್ಞಾನಿಗಳ ಮೌಡ್ಯ!
ಸ್ವಾತಂತ್ರಾéನಂತರ ನಮ್ಮ ಮೇಧಾವಿಗಳು ನಮ್ಮದೇ ತೆರಿಗೆ ಹಣದಲ್ಲಿ “ಮೇಯುತ್ತ’ ಮೇಯಲು ಬಾರದ, ಸದಾ ಕಾಯಿಲೆಗಳಿಗೆ ತುತ್ತಾಗುವ, ಆದರೆ ಹಾಲಿನ ಪ್ರಮಾಣವನ್ನು ಹೈಲೈಟ್‌ ಮಾಡಿ ಮಿಶ್ರತಳಿಗಳನ್ನು ಮತ್ತು ಕಾಯಿಲೆಗಳಿಗೆ ಔಷಧಿಯನ್ನೂ ಸಂಶೋಧಿಸಿ, ವಿಶ್ಲೇಷಿಸಿ, ನಮ್ಮನ್ನು ಉದ್ಧರಿಸಲೆಂದು ಹೇಳಿ ನಮಗೇ ಕೊಟ್ಟು ಇದ್ದ ಸಹಜ ವ್ಯವಸ್ಥೆಯನ್ನು ಕುಲಗೆಡಿಸಿದ್ದು, ಅವರ ಮಾತನ್ನು ತಿಳಿವಳಿಕೆ ಇರುವವರೂ ಶಿರಸಾವಹಿಸಿ ಸ್ವೀಕರಿಸಿದ್ದು ಅತ್ಯದ್ಭುತಗಳಲ್ಲಿ ಒಂದು. ಈಗ ವೈಜ್ಞಾನಿಕವಾಗಿ ನಾಟಿದನಗಳ ಉತ್ಪನ್ನಗಳು ಶ್ರೇಷ್ಠ ಎಂಬುದು ಸಾಬೀತಾದರೂ ಸಹಜವಾಗಿ ಮೇಯುವ ನಾಟಿ ದನಗಳನ್ನು ಹುಡುಕಬೇಕಾಗಿದೆ. ಕಷ್ಟಪಟ್ಟು ಹುಡುಕಿದರೂ ಸಾಂಪ್ರದಾಯಿಕ ಕೃಷಿ ಕ್ಷೇತ್ರವನ್ನು ನಾಶಗೊಳಿಸಿದ್ದರಿಂದ ಅದರ ಸಂತತಿಯನ್ನು ಮುಂದುವರಿಸಲು ಅಗತ್ಯವಾದ ಎತ್ತುಗಳಿಲ್ಲದೆ ಮತ್ತೆ ಮಿಶ್ರತಳಿ ಸಂತತಿಯನ್ನೇ ನೆಚ್ಚಿಕೊಳ್ಳುವಂತೆ ಮಾಡಿಟ್ಟಿದ್ದಾರೆ.

ಕುಲಗೆಡಿಸಿದವರು, ಕುಲಗೆಡಿಸುತ್ತಿರುವವರು ತಮ್ಮ ಪಾತ್ರ ಏನೂ ಇಲ್ಲ ಎಂಬಂತೆ “ಮೇಯುತ್ತಲೇ’ ಇದ್ದಾರೆ. ಒಂದು ಕಡೆ ಮನುಷ್ಯರಿಗೆ-ದನಗಳಿಗೆ ಅನಾರೋಗ್ಯ, ಇನ್ನೊಂದೆಡೆ ಈ ಅನಾರೋಗ್ಯವನ್ನು ಸರಿಪಡಿಸುವ ಪ್ರಯತ್ನ ಇವುಗಳ ನಡುವೆ ಇಡೀ ಸಮಾಜವೇ ರೋಗಿಷ್ಟವಾಗಿ ಒಂದು ಪ್ರಯೋಗಾಲಯವಾಗಿ ನಿಂತಿದೆ. ಇದು ಕೇವಲ ದನಗಳಿಗೆ ಮಾತ್ರವಲ್ಲ ಕೋಳಿಗೂ ಅನ್ವಯ. ಬಾಯ್ಲರ್‌ ಕೋಳಿ ತೋರಿಸಿ ಆರೋಗ್ಯಕರವಾದ ನಾಟಿಕೋಳಿಗಳ ಸಾಕಣೆಯನ್ನು ಮರೆಸಿಬಿಟ್ಟರು. ಏನಾದರೂ ವಿಶೇಷ ಸಮಾರಂಭ ನಡೆಯುವುದಾದರೆ ಅಂಗಡಿಯಿಂದ ಬಾಯ್ಲರ್‌ ಕೋಳಿ ಮಾಂಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿಕೊಂಡು ಬರುವುದು ಹೆಚ್ಚಿನ ಮರ್ಯಾದೆಯೇ ವಿನಾ ಮನೆಯಲ್ಲಿ ನಾಟಿ ಕೋಳಿ ಸಾಕುವವರಿಗಲ್ಲ. ಕಡಿಮೆ ಪ್ರಮಾಣದ, ಆರೋಗ್ಯದಾಯಿ ಗುಣಮಟ್ಟದ ಆಹಾರ ಉತ್ತಮವೋ? ಹೆಚ್ಚು ಪ್ರಮಾಣದ, ಕಳಪೆ ಗುಣಮಟ್ಟದ, ಅನಾರೋಗ್ಯವನ್ನು ಹುಟ್ಟುಹಾಕುವ ಆಹಾರ ಉತ್ತಮವೋ ಎಂಬುದನ್ನು ನಿರ್ಧರಿಸಬೇಕು. 

ಸ್ಥಳೀಯ ಧಾನ್ಯಗಳೇ ಶ್ರೇಷ್ಠ
ಈಗ ಪ್ರಚಾರದ ಯುಗ. ವಿವಿಧ ಮಾರುಕಟ್ಟೆ ಶಕ್ತಿಗಳು ಆಯಾ ವಸ್ತುಗಳನ್ನು ದುಡ್ಡಿನ ಬಲದಲ್ಲಿ ಮಾರಾಟ ಮಾಡುತ್ತಿವೆ. ನಿಜವಾಗಿ ಯಾವ ಆಹಾರ ಧಾನ್ಯ ಶ್ರೇಷ್ಠ? 

ಸ್ಥಳೀಯವಾಗಿ ಬೆಳೆದ ಧಾನ್ಯ, ತರಕಾರಿಗಳೇ ಶ್ರೇಷ್ಠ ಎಂದು ಆಯುರ್ವೇದ ಶಾಸ್ತ್ರಜ್ಞರು ಬಹಳ ಹಿಂದೆಯೇ ಹೇಳಿದ್ದಾರೆ. ಸ್ಥಳೀಯವಾಗಿ ಎನ್ನುವಾಗ 12 ಯೋಜನ ಪ್ರದೇಶದೊಳಗೆ (144 ಮೈಲಿ) ಎಂದು ನಿರ್ದಿಷ್ಟ ಪ್ರಾದೇಶಿಕ ಗಡಿಯನ್ನೂ ಗುರುತಿಸಿದ್ದಾರೆ. ಉದಾಹರಣೆಗೆ ಭತ್ತ ಬೆಳೆಯುವ ಸ್ಥಳಗಳಲ್ಲಿ ಆ ಊರಿನಲ್ಲಿ ಬೆಳೆದ ಅಕ್ಕಿಯೇ ಶ್ರೇಷ್ಠ. ಸೇಬು ಹಣ್ಣು ಇಲ್ಲಿಗೆ ಸೂಕ್ತವಲ್ಲ. ಇಲ್ಲಿಗೆ ಬಿಳಿ ಸೂರಿ ಹಣ್ಣುಗಳು ಸೇಬಿನಂತೆ. ಉಳಿದ ಧಾನ್ಯ, ಹಣ್ಣು, ತರಕಾರಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬಹುದು ಅಥವಾ ವೈದ್ಯರ ಸಲಹೆಯಂತೆ ಔಷಧವಾಗಿ ಬಳಸಬಹುದು ವಿನಾ ಆಹಾರವಾಗಿಯಲ್ಲ ಎಂಬ ಅಭಿಪ್ರಾಯ ಆಯುರ್ವೇದ ತಜ್ಞ ಉಡುಪಿಯ ಡಾ| ಶ್ರೀಧರ ಬಾಯರಿ ಅವರದು.  

ಸುನೀತಿ ಅಡುಗೆ ನೀತಿ!
ಉಡುಪಿ ದಿಶಾ ಮಾರ್ಕೆಟಿಂಗ್‌ನ ಮಾಲಕ, ಉದ್ಯಮಿ ಸುದರ್ಶನ್‌ ಅವರ ಪತ್ನಿ ಸುನೀತಿ ಸುದರ್ಶನ್‌ ಅವರು ಒಂದು ವರ್ಷದಿಂದ ಅನ್ನ, ಸಾರು, ಸಾಂಬಾರು, ಪಲ್ಯ, ಹಾಲು ಕಾಯಿಸುವುದು, ಮಜ್ಜಿಗೆ, ಮೊಸರು ಎಲ್ಲವನ್ನೂ ಮಣ್ಣಿನ ಪಾತ್ರೆಯಲ್ಲಿ ತಯಾರಿಸುತ್ತಿದ್ದಾರೆ. ಒಂದು ವೇಳೆ ಕಡಿಮೆಯಾದರೆ ತಾಮ್ರ, ಹಿತ್ತಾಳೆ, ಕಬ್ಬಿಣದ ಪಾತ್ರೆಗಳಲ್ಲಿ ತಯಾರಿಸುತ್ತಾರೆ ವಿನಾ ಬೇರಾವುದೇ ಉಪಕರಣಗಳನ್ನು ಬಳಸುವುದಿಲ್ಲ. “ರಾಜೀವ್‌ ದೀಕ್ಷಿತ್‌ ಅವರ ಮಾತುಗಳನ್ನು ಅಂತರ್ಜಾಲದಲ್ಲಿ ನೋಡಿ ಮಣ್ಣಿನ ಮಡಕೆಯಲ್ಲಿ ಅಡುಗೆ ಆರಂಭಿಸಿದೆ. ಮಧುಮೇಹ ನಿಯಂತ್ರಣಕ್ಕೆ ಬಂದುದು ಅನುಭವಕ್ಕೆ ಬಂದಿದೆ. ಆಹಾರ ಬೇಗ ಹಾಳಾಗುವುದಿಲ್ಲ. ಮನಸ್ಸಿಗೆ ತೃಪ್ತಿ ಕೊಟ್ಟಿದೆ’ ಎನ್ನುತ್ತಾರೆ ಸುನೀತಿ. 

ತಾಮ್ರದ ಪಾತ್ರೆಗೆ ತವರ (ಕಲಾಯಿ) ಹಾಕುವ ಸಮಸ್ಯೆ ಇದೆ ಎಂದು ಸಾಮಾನ್ಯ ಜನರು ತಿಳಿದುಕೊಂಡಿದ್ದಾರೆ. ಆದರೆ ಉಪ್ಪು, ಖಾರ, ಹುಳಿಯ ಪದಾರ್ಥ ಮಾಡುವಾಗ ವಿಶೇಷವಾಗಿ ಹುಳಿಗೆ ಮಾತ್ರ ತವರ ಬೇಕು. ಕೇವಲ ಅನ್ನ ಮಾಡುವುದಾದರೆ ತವರ ಬೇಕೆಂದಿಲ್ಲ. ಅನ್ನ ಮಾಡಿದ ಕೆಲವೇ ಹೊತ್ತಿನಲ್ಲಿ ಅದನ್ನು ಬೇರೆ ಪಾತ್ರೆಗೆ ಹಾಕಿಟ್ಟರೆ ಏನೂ ತೊಂದರೆ ಇಲ್ಲ ಎಂದು  ಡಾ| ಶ್ರೀಧರ ಬಾಯರಿ ಹೇಳುತ್ತಾರೆ. 

ನಾಟಿ ದನಗಳ ಉಪಯೋಗದ ಕುರಿತು ಮಾಹಿತಿ ಬೇಕಿದ್ದರೆ ಲಕ್ಷ್ಮೀಶರನ್ನು (9741370039), ಮಳೆಗಾಲದಲ್ಲಿ ಔಷಧೀಯ ಸಸ್ಯಗಳನ್ನು ನೆಡಲು ಆಸಕ್ತಿ ಇರುವವರು ಮಂಜುನಾಥ ಗೋಳಿಯವರನ್ನು (9449101194) ಸಂಪರ್ಕಿಸಬಹುದು.

ಅಜ್ಞಾನದಿಂದ ಅಮೂಲ್ಯ ಸಸ್ಯಗಳ ವಿನಾಶ
ವಿಟಮಿನ್‌ ಸೊಪ್ಪು, ಗೃಹಿಣೀಬೀಳು, ಜಲಬ್ರಾಹ್ಮಿ, ಎಲಸುರಿಯಂತಹ ಅನೇಕ ಸಸ್ಯಗಳ ಪ್ರಯೋಜನ ಜನರಿಗೆ ಗೊತ್ತಿಲ್ಲದೆ ವಿನಾಶದಂಚಿನಲ್ಲಿರುವುದು ದುಃಖಕರ.
– ಮಂಜುನಾಥ ಗೋಳಿ ಕರ್ಜೆ, ಔಷಧೀಯ ಸಸ್ಯಗಳ ಉತ್ಪಾದಕರು. 

.ಅನ್ನಕ್ಕಿಂತ ಹಿಟ್ಟಿನ ಮುದ್ದೆ, ಹಿಟ್ಟಿಗಿಂತ ಹಾಲು, ಮಾಂಸಕ್ಕಿಂತ ತುಪ್ಪ ಹತ್ತು ಪಟ್ಟು ಹೆಚ್ಚು ಶಕ್ತಿ ಹೊಂದಿದೆ.

.ಹಸಿರು ಸೊಪ್ಪು, ತರಕಾರಿಗಳಿಂದ ಆರೋಗ್ಯ ವೃದ್ಧಿಯಾಗಿ ರೋಗ ನಿವಾರಣೆ, ಹಾಲಿನಿಂದ ಶರೀರದ ಸಂಪೂರ್ಣ ಬೆಳವಣಿಗೆ, ತುಪ್ಪದಿಂದ ವೀರ್ಯವೃದ್ಧಿ, ಮಾಂಸದಿಂದ ಮಾಂಸಖಂಡ ವೃದ್ಧಿ ಆಗುತ್ತದೆ. 

. ಗಿಡಮೂಲಿಕೆಗಳಲ್ಲಿ ಅಮೃತಬಳ್ಳಿ ಶ್ರೇಷ್ಠ. 

-ಚಾಣಕ್ಯ ನೀತಿ 
(ಇದು ಎಂಥ ಹಾಲು, ತುಪ್ಪ, ಅಕ್ಕಿ, ಮಾಂಸ? ನೈಸರ್ಗಿಕವಾಗಿ ಬೆಳೆದ ಧಾನ್ಯ, ತರಕಾರಿ, ಸೊಪ್ಪು, ಗಿಡಮೂಲಿಕೆಗಳನ್ನು ಮೇಯುವ ದನ, ಆಡು, ಕುರಿ, ನೈಸರ್ಗಿಕವಾಗಿ ಸುತ್ತಾಡಿ ಆಹಾರ ತಿಂದು ಬಂದ ಕೋಳಿಗಳಿಂದ ಆದದ್ದು.) 

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.