ನಾಗವೇಣಿಯ ಕತೆಗಳು


Team Udayavani, Apr 21, 2017, 3:45 AM IST

nazria.jpg

ಕೂ… ಈ ಸ್ವರ ಕೇಳಿದಾಕ್ಷಣ ಮಕ್ಕಳಿಗೆ ಮೊದಲು ನೆನಪಾಗುವುದು ತಮ್ಮದೇ ಕೆಲಸದಲ್ಲಿ ನಿರತರಾದವರ ಕಿವಿಯ ಬಳಿ ಹೋಗಿ “ಕೂ…’ ಎಂದು ಕೂಗಿ ಬೆಚ್ಚಿಬೀಳಿಸುವುದು. ಬಹುಶಃ ಈ ಆಟ ಆಡದ ಮಕ್ಕಳೇ ಇರಲಾರರು. ಇನ್ನು ಹಳ್ಳಿಯಲ್ಲಿ , ಕೃಷಿಯಲ್ಲಿ ತೊಡಗಿಕೊಂಡವರು ಇರುವ ಪ್ರದೇಶದಲ್ಲಿ ಕಾಫಿ, ಊಟ, ಕೆಲಸದ ಮುಕ್ತಾಯದ ವೇಳೆಯ ಸಂಕೇತವಾಗಿ “ಕೂ…’ ಎಂದು ಕೂಗಿ ಕರೆಯುತ್ತಾರೆ. ಪ್ರತಿಯಾಗಿ “ಕೂ…’ ಎಂಬ ಕೂಗು ಕೇಳಿಬಂತೆಂದರೆ ತಮ್ಮ ಸಾಂಕೇತಿಕ ಭಾಷೆ ತಲುಪಿತೆಂದು ಭಾವಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ದನಗಾಹಿ ಹುಡುಗರು ಒಂದು ಗುಡ್ಡದ ಮೇಲೆ ನಿಂತು “ಕೂ…’ ಎಂದು ಕೂಗಿದರೆ ಪಕ್ಕದ ಇನ್ನೊಂದು ಗುಡ್ಡದ ಮೇಲಿನ ಹುಡುಗರಿಗೆ ತಮ್ಮ ಇರುವಿಕೆಯ ಪ್ರದೇಶವನ್ನು ಅರುಹುತ್ತಿದ್ದಾರೆಂದೇ ಅರ್ಥವಾಗಿತ್ತು. ಇನ್ನು ಅಕ್ಷರಮಾಲೆ ಕಲಿಯುತ್ತಿರುವ ಮಕ್ಕಳು “ಕೂ…’ ಎಂದರೆ “ಕ’ಗುಣಿತದ ಆರನೆಯ ಅಕ್ಷರವೆಂದೇ ಅರ್ಥೈಸುವರು. ಆದರೆ ಕನ್ನಡ ಭಾಷಾ ವಿದ್ವಾಂಸರು ಈ ಮೇಲಿನ ಎಲ್ಲರಿಗಿಂತಲೂ ಭಿನ್ನರು. ಅವರು “ಕೂ…’ ಎಂಬುದನ್ನು ಹಗುರವಾಗಿ ನೋಡದೆ ಅದನ್ನು ವಿಂಗಡಿಸಿ ನೋಡುವರು; ಉಚ್ಚರಿಸಿ ವ್ಯಂಜನವೆಂದೂ “ಊ’ ಎಂದರೆ ಸ್ವರವೆಂದೂ ಕರೆಯುವರು. ಉಚ್ಚಾರಣೆಯ ಕಾಲಾವಧಿಯನ್ನು ಪರಿಗಣಿಸಿ ಎರಡು ಮಾತ್ರೆಯ ಕಾಲಾವಧಿ ತೆಗೆದುಕೊಳ್ಳುವುದರಿಂದ “ಕೂ…’ ಎಂಬುದು ಲಘುವಲ್ಲ, ಗುರು ಎನ್ನುವರು.

ನೋಡಿ… ಒಂದು ಅಕ್ಷರ (ಸ್ವರ) ಎಷ್ಟೊಂದು ರೂಪದಲ್ಲಿ ಬಳಕೆಯಾಗುವುದಲ್ಲವೆ? ಹಾಗಾದರೆ ಮುಂದೆ ಅಕ್ಷರಗಳು ಸೇರಿ ಪದವಾದಾಗ ಅದಕ್ಕೆಷ್ಟು ರೂಪಗಳಿರಬಹುದು? ನಿಜಕ್ಕೂ ಪ್ರತಿಯೊಂದು ಪದವೂ ಬೇರೆ ಬೇರೆಯವರ ದೃಷ್ಟಿಯಲ್ಲಿ ಬಳಕೆಯಲ್ಲಿ ವಿಭಿನ್ನ ರೂಪ ಪಡೆದುಕೊಳ್ಳುತ್ತದೆ. ಈಗಾಗಲೇ ನಾನು ಬರೆದ “ಕೂ…’ ಎಂಬ ಅಕ್ಷರದ ಮುಂದೆ ಅಕ್ಷರಗಳನ್ನು ಸೇರಿಸಿ ಪದ ಬರೆಯಲು ಹೇಳಿದರೆ ಒಬ್ಬೊಬ್ಬರು ಒಂದೊಂದು ವಿಭಿನ್ನ ಪದಗಳನ್ನು ಬರೆಯಬಹುದು. ಆದರೆ ನಾನೀಗ ಹೇಳಲು ಹೊರಟಿರುವುದು ಕೂದಲಿನ ಬಗ್ಗೆ.

ಜಗತ್ತಿನಲ್ಲಿರುವ ಇತರ ಹಲವು ವಸ್ತುಗಳಂತೆ ಹೇಗೆ ಸೃಷ್ಟಿಯಾಯಿತು? ಎಂಬ ಪ್ರಶ್ನೆಗೆ ಉತ್ತರವಿಲ್ಲದ ಒಂದು ವಸ್ತು “ಕೂದಲು’. ಮಗು ಹುಟ್ಟಿದ ತಕ್ಷಣ ಕಾಣಿಸಿಕೊಳ್ಳುವ ದೇಹದ ಅಂಗಗಳಲ್ಲಿ ಇದೂ ಒಂದು. ಪುರಾಣವು ಹೇಳುವಂತೆ ಕೂದಲು ಹುಟ್ಟಿಗೂ ವಿನಾಶಕ್ಕೂ ಕಾರಣವಾಗಬಲ್ಲದು. ಶಿವನ ಜಟೆಯ ಕೂದಲಿನಿಂದ ವೀರಭದ್ರನು ಹುಟ್ಟಿದರೆ, ದ್ರೌಪದಿಯ ಬಿಚ್ಚಿದ ಕೂದಲು ಇಡೀ ಕುರುಕುಲದ ನಾಶಕ್ಕೇ ಕಾರಣವಾಯಿತೆನ್ನುತ್ತದೆ ಪುರಾಣ. ಹೀಗೆ ಕೂದಲು ಪುರಾಣ ಕಾಲದಿಂದಲೂ ಪ್ರಸಿದ್ಧವಾದುದು. ಮಗು ಹುಟ್ಟಿದ ತಕ್ಷಣ ಹೆಣ್ಣೋ ಗಂಡೋ ಎಂಬ ಕುತೂಹಲದಷ್ಟೇ ವೇಗವಾಗಿ ಅಮ್ಮನ ಕಣ್ಣು ಓಡುವುದು ಮಗುವಿನ ತಲೆಯ ಮೇಲೆ. ಅಲ್ಲಿಂದಲೇ ಆರಂಭ ಕೂದಲಿನ ಬಗೆಗಿನ ಲೆಕ್ಕಾಚಾರ. ಹುಟ್ಟಿ ಒಂದು ಗಂಟೆಯೊಳಗೆ ಕೂದಲಿನ ಬಗೆಗಿನ ವರ್ಣನೆಗಳು ಆರಂಭವಾಗಿಬಿಡುತ್ತದೆ. 

ಕೂದಲು ತೆಳ್ಳಗೆ, ಬೆಳ್ಳಗೆ, ದಪ್ಪ , ಒಪ್ಪ , ಓರಣಗಳ ಬಗ್ಗೆ ಮಗುವನ್ನು ನೋಡಿದ ಎಲ್ಲ ಹೆಂಗಳೆಯರ ಬಾಯಲ್ಲಿ ಮಾತು ಮುತ್ತಿನಂತೆ ಉದುರುತ್ತದೆ. ನನ್ನ ಮಗ/ಮಗಳ ಕೂದಲು ಹುಟ್ಟುತ್ತಲೇ ತೆಳ್ಳಗೆ, ನಿನ್ನ ಮಗುವಿನ ಕೂದಲು ತುಂಬ ದಪ್ಪ , ಕೂದಲು ದಪ್ಪವಿದ್ದರೆ ಬಸುರಿ ಹೆಂಗಸು ಹಾಗೆ ಮಾಡಿರಬೇಕು, ತೆಳ್ಳಗಿದ್ದರೆ ಬಸುರಿಯ ಕ್ರಮಗಳು ಸರಿಯಾಗಿದ್ದಿರಲಿಲ್ಲವೆಂದೋ, ದಪ್ಪವಿದ್ದರೆ ಹಾಗೆ, ತೆಳ್ಳಗಿನ ಕೂದಲಿದ್ದರೆ ಹೀಗೆ ಎಂದು ಶುಭ-ಅಶುಭಗಳು ಮಾತಿನ ಸರಪಣಿ ಸರಾಗವಾಗಿ ಸಾಗುತ್ತದೆ. ಹೀಗೆ ಹುಟ್ಟುತ್ತಲೇ ಬರುವ ಕೂದಲು ಭಸ್ಮವಾಗುವುದು ಚಿತೆಯೊಂದಿಗೆಯೇ! ಅಲ್ಲಿಯವರೆಗೂ ದೇಹದ ಭಾಗವಾಗಿಯೇ ಇರುತ್ತದೆ.

ಕೂದಲು ದೇಹಕ್ಕೆ ಆಭರಣವಿದ್ದಂತೆ. ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ತಲೆತುಂಬ ಕೂದಲುಳ್ಳವರು ಸಂಪೂರ್ಣವಾಗಿ ಕೂದಲು ತೆಗೆದರೆ ಎಷ್ಟು ವಿರೂಪವಾಗಿ ಕಾಣುತ್ತಾರೆಂದು ದೇವಾಲಯಗಳಿಗೆ ಹರಕೆಯ ರೂಪದಲ್ಲಿ ಮುಂಡನ ಮಾಡಿಸಿಕೊಂಡವರನ್ನು ನೋಡಿದಾಗ ತಿಳಿಯುತ್ತದೆ. ಇನ್ನು ಉದ್ದನೆಯ ಕೂದಲುಳ್ಳವರ ಕೂದಲು ನಿರ್ವಹಣೆಯ ರೀತಿಯೋ ದೇವರಿಗೇ ಪ್ರೀತಿ! ಸ್ನಾನದ ವಿಚಾರ ಬಿಡಿ, ದಿನಕ್ಕಾರು ಬಾರಿ ಕೂದಲನ್ನು ಬಾಚುವುದರಿಂದ ಹಿಡಿದು ಒಮ್ಮೆಯೂ ಬಾಚದವರೂ ಈ ಕಾಲದಲ್ಲೂ ನಮ್ಮ ನಡುವೆ ಇದ್ದಾರೆ. ಬೆಳಿಗ್ಗೆ ಎದ್ದಾಕ್ಷಣ ಬಾಚುವವರು ಮಾತ್ರವಲ್ಲ. ಕೇವಲ ರಾತ್ರಿ ಮಲಗುವ ಮುನ್ನ ಮಾತ್ರ ಕೂದಲನ್ನು ಓರಣಗೊಳಿಸುವ ಜನರೂ ಇದ್ದಾರೆ. ಕೆಲವರ ಕೈಯಂತೂ ಕೂದಲಿನ ಮೇಲಿಂದ ಕೆಳಗಿಳಿಯುವುದೇ ವಿರಳ. ಮೋಟುದ್ದ ಕೂದಲನ್ನು ತಲೆಯ ಬುಡದಲ್ಲೊಂದು ರಬ್ಬರ್‌ಬ್ಯಾಂಡಿನಿಂದಲೋ, ಕ್ಲಿಪ್ಪಿನಿಂದಲೋ ಕುದುರೆ ಬಾಲದಂತೆ ಮೇಲಕ್ಕೆತ್ತಿ ನಿಲ್ಲಿಸುವ ಯುವತಿಯರಿಗಂತೂ ದಿನಕ್ಕೆ ನಾಲ್ಕಾರು ಬಾರಿ ಬಾಚಣಿಗೆ ತಲೆಮೇಲೆ ಓಡದಿದ್ದರೆ ನಿದ್ದೆಯೇ ಸುಳಿಯದು.

ಇನ್ನು ಕೂದಲನ್ನು ಓರಣಗೊಳಿಸಲು ಅದೆಷ್ಟು ವಿಧದ ಬಾಚಣಿಗೆಗಳು? ಸಿಕ್ಕು ಬಿಡಿಸಲೊಂದು, ಹಗುರಕ್ಕೆ ಬಾಚಲೊಂದು, ಸೊಂಪಾಗಿ ಬಾಚಲೊಂದು, ರಬ್ಬರ್‌ಬ್ಯಾಂಡ್‌ ಸಿಕ್ಕಿಸಿದ ಮೇಲೂ ಕೊನೆಯಲ್ಲಿ ಉಳಿದ ಕೂದಲನ್ನು ಗುಂಗುರು ಕೂದಲಂತೆ ದಪ್ಪವಾಗಿ ಕಾಣುವಂತೆ ಮಾಡಲೊಂದು ಹೀಗೆ ಹಲವು ಬಾಚಣಿಗೆಗಳು. ಇವೆಲ್ಲವನ್ನು ಹೊರತುಪಡಿಸಿ ಆಪದಾºಂಧವನಂತೆ ಪ್ರತಿಮನೆಯಲ್ಲೂ ಕಾವಲಿರುವ ಬಾಚಣಿಗೆ “ಹೇನು’ ಬಾಚುವ ಬಾಚಣಿಗೆ! ಇಷ್ಟೆಲ್ಲಾ ಬಾಚಣಿಗೆಗಳು ಕೂದಲನ್ನು ಒಪ್ಪಗೊಳಿಸಲು ಸಾಕಾಗುವುದಿಲ್ಲವೆಂದು ಇದೀಗ ನೂರಾರು ಬ್ಯೂಟಿಪಾರ್ಲರುಗಳು, ಹಲವು ವಿಧದ “ಕಟ್‌’ ಗಳೂ ಮೈದಾಳಿವೆ. “ಯು’ ಕಟ್‌, “ವಿ’ ಕಟ್‌, “ಸ್ಟೆಪ್‌ ಕಟ್‌’, “ಫೆದರ್‌ ಕಟ್‌’ “ಬಾಬ್‌ಕಟ್‌’- ಹೀಗೆ ಕೂದಲನ್ನು ಕತ್ತರಿಸಲೂ ಅದೆಷ್ಟು ರೀತಿಗಳು? ದಪ್ಪವೋ ತೆಳ್ಳಗೆಯೋ ಯಾವುದರ ಅರಿವೆಯೂ ಇಲ್ಲದೆ ತಲೆ ಅತಿಯಾಗಿ ಬೆವರಿ ಹುಣ್ಣುಗಳೆದ್ದಾಗಲೋ, ಕೂದಲು ತಲೆತುಂಬಿ ಶೀತ ಪದೇ ಪದೇ ಕಾಡುತ್ತಿದೆಯೆಂದಾಗ ತನ್ನ ಆಕ್ಷೇಪದ ಹೊರತಾಗಿಯೂ ಸೊಸೆ ಮೊಮ್ಮಕ್ಕಳ ಕೂದಲನ್ನು ಸಣ್ಣಗೆ ಕತ್ತರಿಸುತ್ತಿದ್ದುದನ್ನು ನೋಡುತ್ತಿದ್ದ ಅಜ್ಜಿ ಈಗ ಬೆಳೆದುನಿಂತ ಮೊಮ್ಮಕ್ಕಳ ಕೂದಲ ರೀತಿ-ರಿವಾಜುಗಳನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟಿದ್ದಾಳೆ! ಈ ರೀತಿಯ ಕೂದಲುಳ್ಳವರಿಗೆ ಬೇರೆ ಎಲ್ಲ ವಿಷಯಗಳಿಗಿಂತಲೂ ಅಧಿಕ ಚಿಂತೆ ತಮ್ಮ ಕೂದಲಿನದೇ! ಅಂತಹವರಿಗಾಗಿಯೇ ಬಂದಿದೆ ವಿದ್ಯುತ್‌ ಹಾಯಿಸಿ ಕೂದಲನ್ನು ನೇರಗೊಳಿಸುವ ಪ್ರಕ್ರಿಯೆಗಳು!

ಇದೀಗ ಫ್ಯಾಶನ್‌ ಯುಗ. ಕೂದಲು ಎಂದಾಕ್ಷಣ ಎಲ್ಲರೂ ಏಕೆ ಹೆಂಗಸರತ್ತಲೇ ಮುಖ ಮಾಡಬೇಕು? ಗಂಡಸರಿಗೂ ಕೂದಲಿಲ್ಲವೇ? ಆದ್ದರಿಂದಲೇ ಬಂದಿದೆ ಗಂಡಸರ ಕೂದಲು ಕತ್ತರಿಸುವುದರಲ್ಲೂ ನೂರಾರು ಫ್ಯಾಶನ್‌ಗಳು; ಅವರಿಗಾಗಿಯೇ ಪ್ರತ್ಯೇಕ ಬ್ಯೂಟಿಪಾರ್ಲರುಗಳು. 

ಕುದುರೆಲಾಲದಾಕಾರದಲ್ಲೋ, ರೈಲುಪಟ್ಟಿ ತಲೆ ಮೇಲೆಯೇ ಬಂದಂತೆನಿಸುವಂತೆಯೋ, ಕ್ರಿಕೆಟ್‌, ಫ‌ುಟ್‌ಬಾಲ್‌, ಸಿನೆಮಾ ಹೀರೋಗಳನ್ನು ಅನುಕರಿಸಿಯೋ ಮಾಡುವ ಫ್ಯಾಶನ್‌ ಅಂತಿರಲಿ, ಹೆಂಗಸಿನ ಉದುರಿದ ಕೂದಲನ್ನು ಕಂಡು ಹೌಹಾರುವ, ಅಸಹ್ಯವನ್ನು ಮುಟ್ಟಿದಂತೆ ಮುಖ ಸಿಂಡರಿಸುವ ಗಂಡಸರೂ ಹೆಂಗಸರಂತೆ ಕೂದಲು ಇಳಿಬಿಟ್ಟು ಜುಟ್ಟು ಕಟ್ಟಲು ಆರಂಭಿಸಿದ್ದಾರೆ. ಆದರೆ ಉದ್ದನೆಯ ಕೇಶರಾಶಿ ಎಂಬುದು ಹೆಂಗಸಿನ ಸಂಗಾತಿಯೆಂಬುದು ಹಿಂದಿನಿಂದಲೂ ಬಂದ ವಾಡಿಕೆ. ಕ್ಷಣಾರ್ಧದಲ್ಲಿ ಎಲ್ಲವೂ ಮುಗಿದುಬಿಡಬೇಕೆಂಬ ಈ ಕಾಲದಲ್ಲಿ ಗಂಟೆಗಟ್ಟಲೆ ಎಣ್ಣೆಹಚ್ಚಿ ಕುಳಿತು, ಬೊಗಸೆ ತುಂಬ ಸೊಪ್ಪು ಕಿವುಚಿ ಬಾಲ್ದಿ ತುಂಬ ಗೊಂಪು ಸುರಿದು, ತಾಸುಗಟ್ಟಲೆ ಮಿಂದು, ಕೂದಲು ಒರೆಸಿ ತಲೆಗೊಂದು ಬಟ್ಟೆ ಬಿಗಿದು ಕಟ್ಟಿ ಬಿಚ್ಚುತ್ತಲೇ ಹದವಾಗಿ ಒಣಗಿದ ತಲೆತುಂಬಾ ಸಿಕ್ಕುಗಳು! ಅವುಗಳನ್ನು ಬಿಡಿಸಿ ದಿನನಿತ್ಯ ತಪಸ್ಸಿನಂತೆ ಜಡೆ ಹೆಣೆಯುವ ವ್ಯವಧಾನ ಯಾರಿಗಿದೆ? ಮೋಟುದ್ದ ಕೂದಲು, ಚೋಟುದ್ದ ಜಡೆ  ಬಾಚಿದರೂ ಆಗುತ್ತೆ, ಇಲ್ಲದಿದ್ದರೂ ನಡೆಯುತ್ತೆ. 

ಈ ಫ್ಯಾಶನ್‌ ಜಗತ್ತಿನಲ್ಲಿ ಮುಖದ ಬದಿಯ ಕೂದಲು ಕಣ್ಣನ್ನು ಸೋಕಿಸುತ್ತಾ, ಅದನ್ನು ಕೈಗಳಲ್ಲಿ ಹಿಂದಕ್ಕೆ ತಳ್ಳುತ್ತಾ, ಕುದುರೆ ಬಾಲದಂತೆ ಮೇಲೆತ್ತಿ ಕಟ್ಟಿದ ಮೋಟುದ್ದ ಕೂದಲನ್ನು ಹಾರಿಸುತ್ತಾ ಯುವತಿಯರು ನಡೆಯುತ್ತಿರುವಾಗ ಹಿಂದಿನ ನಾಗವೇಣಿ, ನೀಲವೇಣಿಯರೆಲ್ಲ ಎಲ್ಲಿ ಹೋದರೆಂದು ಯೋಚಿಸುವಾಗ ಸಿಕ್ಕಿತು ಉತ್ತರ… ಬಹುಶಃ ಮುದುಕಿಯರಾಗಿರಬೇಕು! ಹೀಗೆ ಯೋಚಿಸುತ್ತಿರುವಾಗ ಇನ್ನೂ ಹಳ್ಳಿಯಲ್ಲಾದರೂ ಅಲ್ಲೊಬ್ಬರು ಇಲ್ಲೊಬ್ಬರು ನಾಗವೇಣಿಯರಿದ್ದಾರೆಂದರೆ ಅದು ಆಶ್ಚರ್ಯವಲ್ಲದೆ ಸಂತೋಷದ ವಿಚಾರವಲ್ಲವೆ? ಉದ್ದನೆಯ ಕೂದಲು ಹೆಂಗಸಿಗೆ ಹಿರಿಮೆಯೆಂದು ಆ ಯುವತಿಯರು ಭಾವಿಸಿದ್ದಾರೆಂದೇ ನಾನು ಆಲೋಚಿಸುತ್ತೇನೆ!

– ಸ್ವಾತಿ ಕೆ., ಸುರತ್ಕಲ್‌

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.