ನೆರೆ-ಹೊರೆ


Team Udayavani, May 19, 2017, 3:27 PM IST

neighbour.jpg

ಆಂಟಿ, ನಿಮಗೆ ಬೆಂಗಳೂರಿಂದ ಫೋನ್‌ ಬಂದಿದೆ. ಹತ್ತು ನಿಮಿಷ ಬಿಟ್ಟು ಪುನಃ ಕರೆ ಮಾಡ್ತಾರಂತೆ. ಬೇಗ ಬನ್ನಿ…” ಸ್ಥಿರ  ದೂರವಾಣಿ ಇರುವ ಮನೆಯ ಮಗು ಓಡುತ್ತ ಹತ್ತಿರದ ಮನೆಯ ಆಂಟಿಗೆ ಸುದ್ದಿ ಮುಟ್ಟಿಸುತ್ತದೆ. ಇಲ್ಲಿ ನೆರೆಮನೆ ಹತ್ತು ಹೆಜ್ಜೆಗಳಾಚೆ ಇರಬಹುದು ಅಥವಾ ಅರ್ಧ ಮೈಲಿ ದೂರವೇ ಇರಬಹುದು. ಆ ಸುದ್ದಿ ತಲುಪಿಸಲು ದೂರವಾಣಿ ಇರುವ ಮನೆಯವರು ಸ್ವಲ್ಪವೂ ವಿಳಂಬಿಸುವುದಿಲ್ಲ. 

ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ಫೋನ್‌ ಕರೆಗೆ ಬಂದಿರುವ ನೆರೆಮನೆಯಾಕೆಯೂ ಅಷ್ಟೇ. ಅಲ್ಲಿ ಕುಳಿತು ಈ ಮನೆಯವರಲ್ಲಿ ಒಂದು ಹತ್ತು ನಿಮಿಷವಾದರೂ ಮಾತನಾಡಿಯೇ ಹೋಗುತ್ತಾಳೆ. ಆ ಮನೆಗೆ ಅಪರೂಪದ ನೆಂಟರು ಬಂದಿದ್ದಾರೆ. ಅವರನ್ನು ಮಾತನಾಡಿಸಿದ ಮನೆಯಾಕೆ ಚಹಾ ಅಥವಾ ಜ್ಯೂಸ್‌ ಕೊಡಲು ನೋಡುವಾಗ  ಡಬ್ಬಿಯಲ್ಲಿ ಸ್ವಲ್ಪವೇ ಸಕ್ಕರೆಯಿದೆ. ಮೆಲ್ಲನೆ ಮಕ್ಕಳಲ್ಲಿ ಒಬ್ಬರನ್ನು ಕರೆದು ಗುಟ್ಟಾಗಿ ನೆರೆಮನೆಗೆ ಕಳಿಸುತ್ತಾಳೆ. ಕೆಲವೇ ನಿಮಿಷಗಳಲ್ಲಿ ಮಗು ಸಕ್ಕರೆಯೊಂದಿಗೆ ಮರಳುತ್ತದೆ. ನೆರೆಮನೆಯವರಿಂದಾಗಿ ನೆಂಟರ ಮುಂದೆ ತನ್ನ ಮರ್ಯಾದೆ ಉಳಿಯಿತೆಂದು ಮನದಲ್ಲೇ ಅವರಿಗೆ ಕೃತಜ್ಞತೆ ಹೇಳುತ್ತಾಳೆ. 

ಮದುವೆಗೆ ಹೋಗಲಿಕ್ಕಿದೆ. ಆಕೆಯ ಆಭರಣಗಳನ್ನು ಯಾವುದೋ ಅಗತ್ಯಕ್ಕೆ ಅಡವಿಡಲಾಗಿದೆ. ಎಲ್ಲರೂ ಹಲವು ಆಭರಣಗಳನ್ನು ಧರಿಸಿ ಹೋಗುವಾಗ ತಾನು ಬೋಳು ಕುತ್ತಿಗೆ, ಬೋಳು ಕೈಗಳಲ್ಲಿ ಹೋಗುವುದು ಹೇಗೆ? ಅತ್ಯಂತ ಆಪ್ತರ ಮದುವೆಗೆ ಹೋಗದಿರಲೂ ಸಾಧ್ಯವಿಲ್ಲ. ಇವಳ ಇಕ್ಕಟ್ಟಿನ ಪರಿಸ್ಥಿತಿ ತಿಳಿದ ನೆರೆಮನೆಯಾಕೆ ತನ್ನ ಆಭರಣಗಳನ್ನು ಆಕೆಗೆ ಸಾಲ ಕೊಡುತ್ತಾಳೆ. ಸಂತೋಷದಿಂದ ಮದುವೆಗೆ ಹೋಗಿ ಬರುವ ಆಕೆ ಕೃತಜ್ಞತೆಯಿಂದ ಆಭರಣಗಳನ್ನು ಹಿಂತಿರುಗಿಸುತ್ತಾಳೆ. ಅಡುಗೆ ಸಾಮಾನುಗಳು, ಪಾತ್ರೆ ಪರಡಿಗಳು, ಹಣ ಹೀಗೆ ಎಲ್ಲವನ್ನೂ ನೆರೆಮನೆಯವರಿಂದ ತುರ್ತು ಸಂದರ್ಭಗಳಲ್ಲಿ ಪಡೆದುಕೊಂಡು ನಂತರ ಹಿಂತಿರುಗಿಸುವ ಕ್ರಮ ಹಳ್ಳಿಗಳಲ್ಲಿ ರೂಢಿಯಲ್ಲಿತ್ತು. ಒಂದು ಮನೆಯಲ್ಲಿ ಯಾವುದಾದರೊಂದು ಕಾರ್ಯಕ್ರಮವಿದ್ದರೆ ಬಂಧುಮಿತ್ರರು, ನೆರೆಮನೆಯವರು ಬಂದು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದರು. ಅಲ್ಲಿದ್ದದ್ದು ಸಂಬಳದ ದುಡಿಮೆಯಲ್ಲ, ಬಡ್ಡಿ ವ್ಯವಹಾರಗಳಲ್ಲ. ಪ್ರೀತಿಯ ಕೊಡುಕೊಳ್ಳುವಿಕೆ.

ಈಗ ನೆರೆಮನೆ ಎಂಬುದಕ್ಕಿಂತ ನೆರೆಹೊರೆ ಎಂಬ ಪದವೇ ನಮಗೆ ಪಥ್ಯವೆನಿಸಿದೆ. ನಮ್ಮ ಸುತ್ತಮುತ್ತಲಿನ ಮನೆಯವರು ನಮಗೆ ಹೊರೆಯೆಂಬ ಕಲ್ಪನೆ ನಮ್ಮದು. ನೆರೆಮನೆಯವರೊಂದಿಗೆ ಮಾತುಕತೆ, ಆತ್ಮೀಯತೆಗಳೇ ಕಡಿಮೆಯಾಗಿದೆ. ಆಸ್ತಿ, ಅಂತಸ್ತು ಉದ್ಯೋಗ, ನೋಡಿ ನೆರೆಯವರೊಂದಿಗೆ ಸಂಬಂಧ ಬೆಳೆಸುವುದೋ ಬೇಡವೋ ಎಂದು ತೀರ್ಮಾನಿಸುವ ಮನಃಸ್ಥಿತಿ ಬೆಳೆದಿದೆ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿದ ನೆರೆಹೊರೆ ಸಂಬಂಧವೂ ಶಿಷ್ಟಾಚಾರದ ಪರಿಧಿಯಲ್ಲಿರುತ್ತದೆ. ಮನೆಯಲ್ಲಿ ಉಪವಾಸ ಬಿದ್ದು ಸತ್ತರೂ ನೆರೆಮನೆಯವರಲ್ಲಿ ಕೇಳಲು ನಮ್ಮ ದುರಭಿಮಾನ ಒಪ್ಪುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಪರಸ್ಪರ ನಂಬಿಕೆಯ ಕೊರತೆಯೂ ಇಲ್ಲಿರುತ್ತದೆ. ಕಾಂಪೌಂಡ್‌ ಗೋಡೆಯ  ಆಚೆ ಈಚೆ ನಿಂತು ಮಾತನಾಡುವ ಹೆಂಗಸರು ಅಪ್ಪಿತಪ್ಪಿಯೂ ನೆರೆಮನೆಯಾಕೆಯನ್ನು ಮನೆಗೆ ಕರೆಯುವುದಿಲ್ಲ. ಒಟ್ಟಿಗೆ ವಾಕಿಂಗ್‌, ಶಾಪಿಂಗ್‌, ದೇವಸ್ಥಾನಗಳಿಗೆ ಹೋದರೂ ಒಂದು ಸುರಕ್ಷಿತ ಅಂತರವನ್ನು ಕಾಪಾಡಿಕೊಂಡಿರುತ್ತಾರೆ.ಎದುರುಬದುರು ಮನೆಗಳಿದ್ದರೂ, ಒಂದು ಗೋಡೆಯ ಆಚೆ ಈಚೆಗಿನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೂ ಪರಸ್ಪರ ನೋಡಿಲ್ಲದವರು ಎಷ್ಟೋ ಜನ ಇದ್ದಾರೆ.  ಮುಂಬೈ, ಚೆನ್ನೈ ಮುಂತಾದ ಪಟ್ಟಣಗಳ ಫ್ಲಾಟ್‌ ಗಳಲ್ಲಿ ಸಂಭವಿಸುತ್ತಿದ್ದದ್ದು ಹಳ್ಳಿಗಳಲ್ಲಿ ಸಂಭವಿಸುತ್ತಿದೆ. ನೆರೆಮನೆಯವರನ್ನು ಆಪತಾºಂಧವರಂತೆ, ಕುಟುಂಬದ ಸದಸ್ಯರಂತೆ ಕಾಣುತ್ತಿದ್ದ ಕಾಲ ಹೋಗಿ, ಅಪರಿಚಿತರಂತೆ, ಕಳ್ಳರಂತೆ, ಶತ್ರುಗಳಂತೆ ಪರಿಗಣಿಸುವ ಕಾಲ ಬಂದಿದೆ. ಮನೆಮನೆಯಲ್ಲೂ ಆಧುನಿಕ ಟಿ.ವಿ, ಹೋಮ್‌ ಥಿಯೇಟರ್‌ಗಳು ಬಂದಾಗ, ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್‌ ಬಂದು ಜಾಲತಾಣಗಳ ಸಂಬಂಧಗಳಲ್ಲಿ ಎಲ್ಲರೂ ಮಗ್ನರಾಗಿರುವಾಗ ಯಾರಿಗೆ ಬೇಕು ನೆರೆಮನೆಯವರೊಂದಿಗಿನ ಸಂಬಂಧ? ಆದರೆ ಯಾವುದೋ ಅವಘಡ ಸಂಭವಿಸಿದಾಗ, ತುರ್ತು ಸಂದರ್ಭಗಳಲ್ಲಿ ನಮ್ಮ ಯಾವ ಹೈಟೆಕ್‌ ಸಂಬಂಧಗಳೂ ಪ್ರಯೋಜನಕ್ಕೆ ಬರುವುದಿಲ್ಲ. ನಾವು ಅವಗಣಿಸಿದ ನೆರೆಹೊರೆಯವನೇ ಮನೆಯವನಂತೆ ನಮ್ಮ ಸಹಾಯಕ್ಕೆ ಬರಬಹುದು.

– ಜೆಸ್ಸಿ ಪಿ. ವಿ. 

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.