ಸನ್ನಿ ಬ್ರಾಂಡ್‌


Team Udayavani, Dec 1, 2017, 1:25 PM IST

01-40.jpg

ಇನ್ನು ನೀವು ಸನ್ನಿ ಲಿಯೋನ್‌ಳನ್ನು ನಿಮ್ಮ ಜತೆಗೆ ಇಟ್ಟುಕೊಳ್ಳಬಹುದು, ಬೇಕಾದಲ್ಲಿಗೆ ಎತ್ತಿಕೊಂಡು ಹೋಗಬಹುದು, ಎಷ್ಟು ಬೇಕಾದರೂ ಮಾತನಾಡಬಹುದು. ಇದು ನಟಿ ಸನ್ನಿ ಲಿಯೋನ್‌ ಅಲ್ಲ, ಬದಲಾಗಿ ಅವಳ ಮೊಬೈಲ್‌ ಫೋನ್‌. ಬಾಲಿವುಡ್‌ನ‌ ಉಳಿದ ನಟನಟಿಯರಂತೆ ಸನ್ನಿ ಲಿಯೋನ್‌ ಕೂಡ ಬೇಡಿಕೆ ತುಸು ಕಡಿಮೆಯಾಗುತ್ತಿದ್ದಂತೆ ವ್ಯಾಪಾರದತ್ತ ಹೊರಳಿದ್ದಾಳೆ. 

ಮೊದಲ ಪ್ರಯತ್ನವಾಗಿ ಸನ್ನಿ ಲಿಯೋನ್‌ ಬ್ರಾಂಡ್‌ನ‌ಡಿಯಲ್ಲಿ ರೆಡಿಮೇಡ್‌ ಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾಳೆ. ಇದು ಸಖತ್‌ ಹಿಟ್‌ ಆದ ಸ್ಫೂರ್ತಿಯಲ್ಲೇ ಇದೀಗ ಮೊಬೈಲ್‌ ಫೋನ್‌ ಬಿಡುಗಡೆ ಮಾಡಲು ಹೊರಟಿದ್ದಾಳೆ. ಸನ್ನಿ ಲಿಯೋನ್‌ ಬ್ರಾಂಡ್‌ ಮೊಬೈಲ್‌ ಕೂಡ ಹಿಟ್‌ ಆಗುವುದರಲ್ಲಿ ಅವಳಿಗೆ ಯಾವುದೇ ಅನುಮಾನವಿಲ್ಲ. ಏಕೆಂದರೆ ಅವಳನ್ನು ಹಗಲಿರುಳು ಆರಾಧಿಸುವ ದೊಡ್ಡ ಅಭಿಮಾನಿ ಬಳಗವೇ ಇದೆ. ಅಂದ ಹಾಗೆ ಮೊಬೈಲ್‌ ಫೋನ್‌ ವ್ಯಾಪಾರದಲ್ಲಿ ಸಲ್ಮಾನ್‌ ಖಾನ್‌ಗೆ ಸ್ಪರ್ಧೆ ನೀಡಲು ಸನ್ನಿ ಲಿಯೋನ್‌ ಮುಂದಾಗಿದ್ದಾಳೆ. ಏಕೆಂದರೆ ತನ್ನ ಬ್ರಾಂಡ್‌ನ‌ ಮೊಬೈಲ್‌ ಮಾರುಕಟ್ಟೆಗೆ ತರುವ ಪರಿಕಲ್ಪನೆ ಮೊದಲು ಮೂಡಿದ್ದು ಸಲ್ಮಾನ್‌ ಖಾನ್‌ಗೆ. ಬೀಯಿಂಗ್‌ ಸ್ಮಾರ್ಟ್‌ ಎಂಬ ಸಲ್ಮಾನ್‌ ಖಾನ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲು ತಯಾರಿ ನಡೆದಿರುವಂತೆ, ಸನ್ನಿ ಲಿಯೋನ್‌ ಸಹ ಸನ್ನಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಬಾಂಬ್‌ ಸಿಡಿಸಿದ್ದಾಳೆ. ಗಂಡ ವೆಬೆರ್‌ ಜತೆಗೆ ಸೇರಿಕೊಂಡು ಸನ್ನಿ ಲಿಯೋನ್‌ ಸ್ಮಾರ್ಟ್‌ ಫೋನ್‌ ರೇಂಜ್‌ ಕುರಿತು ಉದ್ಯಮಿಗಳ ಜತೆಗೆ ಕುಳಿತು ಚರ್ಚಿಸುತ್ತಿದ್ದಾಳೆ. ಚೀನಾದ ಒಂದು ಕಂಪೆನಿಯ ಜತೆಗೆ ಈ ಕುರಿತು ಮಾತುಕತೆಯೂ ಆಗಿದೆಯಂತೆ. ಮೊಬೈಲ್‌ ಉತ್ಪಾದನೆಯಾಗುವುದು ಚೀನಾದಲ್ಲಿ. ಹೆಸರು ಮಾತ್ರ ಸನ್ನಿಯದ್ದು. ಹಾಗೆಂದು, ಇದು ಅಗ್ಗದ ಬೆಲೆಯ ಅಲ್ಪಾಯುಷಿ ಸ್ಮಾರ್ಟ್‌ಫೋನ್‌ ಅಲ್ಲ. ಉತ್ತಮ ಗುಣಮಟ್ಟದ ಫೋನನ್ನೇ ಕೊಡುತ್ತೇನೆ ಎನ್ನುವುದು ಸನ್ನಿ ನೀಡುವ ಭರವಸೆ.

ಸನ್ನಿಯ ಅಭಿನಯ ಪ್ರತಿಭೆಯ ಬಗ್ಗೆ ಯಾರಿಗಾದರೂ ತಕರಾರು ಇರಬಹುದು. ಎಲ್ಲೋ ನೀಲಿಚಿತ್ರಗಳಲ್ಲಿ ನಟಿಸುತ್ತಿದ್ದವಳಿಗೆ ಬಾಲಿವುಡ್‌ನ‌ ಬಾಗಿಲು ತೆರೆದದ್ದು ಅವಳ ಅಭಿನಯ ನೋಡಿ ಅಲ್ಲ , ಬದಲಾಗಿ ಮಾದಕ ಮೈಮಾಟ ನೋಡಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವಳ ವ್ಯವಹಾರ ಕೌಶಲವನ್ನು ಮಾತ್ರ ಯಾರೂ ಅನುಮಾನಿಸುವಂತಿಲ್ಲ. ಈ ವಿಚಾರದಲ್ಲಿ ಉಳಿದ ನಟನಟಿಯರಿಗಿಂತ ಸನ್ನಿ ಲಿಯೋನ್‌ ಬಹಳ ಮುಂದಿದ್ದಾಳೆ. ಉಳಿದವರೆಲ್ಲ ಹೊಟೇಲ್‌, ಜಿಮ್‌, ರೆಡಿಮೇಡ್‌ ಅಂಗಡಿ ಎಂದು ತಲೆಕೆಡಿಸಿಕೊಂಡಿರುವಾಗ ಸನ್ನಿ ಲಿಯೋನ್‌ ಸ್ಮಾರ್ಟ್‌ಫೋನ್‌, ಆನ್‌ಲೈನ್‌ ಪೋರ್ಟಲ್‌ ಎಂದೆಲ್ಲ ಹೊಸ ರೀತಿಯ ಉದ್ಯಮದ ಕನಸು ಕಾಣುತ್ತಿದ್ದಾಳೆ. ನಟಿಯಾಗಿ ಗೆದ್ದ ಸನ್ನಿ ಇದೀಗ ಉದ್ಯಮಿ ಯಾಗಿಯೂ ಗೆಲ್ಲುವ ಸನ್ನಾಹ ದಲ್ಲಿದ್ದಾಳೆ.

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.