ಕೃಷ್ಣನ ನವಿಲುಗರಿಯಲ್ಲಿ ಕೃಷ್ಣೆಯ ಕಣ್ಣು


Team Udayavani, Jan 12, 2018, 2:36 PM IST

12-41.jpg

ದ್ವಾಪರದ ಅಗ್ನಿಕನ್ಯೆ ಅವಳು! ದ್ರೋಣನ ವಿರುದ್ಧ ದ್ರುಪದನಲ್ಲಿ ಕೆರಳಿದ ಸೇಡಿನಕಿಚ್ಚಿಗೆ ಹುಟ್ಟಿದವಳು, ದಾಂಪತ್ಯದ ಅಕ್ಕರೆಗೆ ಹುಟ್ಟಿದವಳಲ್ಲ! ಅಮ್ಮನ ಗರ್ಭದ ಬೆಚ್ಚನೆ ಕತ್ತಲ ಸುಖವನ್ನುಂಡು ಬೆಳಕು ಕಂಡವಳಲ್ಲ! ಬೆಂಕಿಯನ್ನೇ ಉಡಿಯಲ್ಲಿ ಕಟ್ಟಿಕೊಂಡು ಹೋಮದ ಬೆಂಕಿಯೊಳಗಿಂದ ಉರಿಯುತ್ತಲೇ ಬಂದವಳು, ಉರಿಯುತ್ತಲೇ ಬದುಕಿದವಳು. ಬದುಕೇ ಬೆಂಕಿ ಇವಳಿಗೆ. ಬೆಂಕಿಯೆಂದರೆ ಹೋರಾಟದ ಕಿಚ್ಚು. ಕೊನೆಯತನಕವೂ ಅದನ್ನು ಉಳಿಸಿಕೊಂಡೇ ಬದುಕಿದಳು.ಹೋರಾಟದ ಕೆಚ್ಚೆದೆಯ ಕಿಚ್ಚನ್ನು ಹೊಂದಿದ ಭಾರತೀಯ ಸ್ತ್ರೀಯರ ಪ್ರತೀಕವೂ ಆದಳು. ಅವಳ ಕೇಶ ಇಡೀ ಕುರುಕ್ಷೇತ್ರವನ್ನು ಆವರಿಸಿಕೊಂಡು ಕೌರವರಿಗೆ  ಪಾಶವಾಯಿತು.

ಆಕೆಯ ಬದುಕು ಅದ್ಭುತವೇ ಸರಿ. ಒಬ್ಬ ಗಂಡನನ್ನು ಕಟ್ಟಿಕೊಂಡು ಹೋರಾಡುವುದೇ ಕಷ್ಟ ! ಅಂಥಾದ್ದರಲ್ಲಿ ಐದು ಬೆರಳುಗಳಂತಹ ಭಿನ್ನ ಭಿನ್ನ  ಸ್ವಭಾವದ ಐವರನ್ನು ಅವಳು ನಿಭಾಯಿಸುವ ರೀತಿಯೇ ವಿಸ್ಮಯ. ಅವಳ ಅತೀಂದ್ರಿಯತೆಯನ್ನು ಒಂದು ವಾಸ್ತವಿಕ ನೆಲೆಬಿಟ್ಟು ಕಾವ್ಯವಾಗಿ ಒಪ್ಪಿದಾಗ ಅದು ಸೌಂದರ್ಯವೇ. ಅವಳು ಅತಿಮಾನುಷಳಾಗಿರುವುದರಿಂದಲೇ ಐವರೊಡನೆ ಬದುಕು ಸಾಧ್ಯವಾಯಿತು, ಕಷ್ಟಗಳನ್ನು ಎದುರಿಸುವ ಶಕ್ತಿ ಬಂತು. ಅಗ್ನಿಸುತೆ ಆಗಿದ್ದುದರಿಂದಲೇ ಹೊಟ್ಟಿನೊಳಗಿನ ನಿಗಿನಿಗಿ ಕೆಂಡದಂತೆ ಸುಡುವ ಬೆಂಕಿಬೇಗೆ ಆಕೆಗೆ ಸಹಜವಾಯಿತು. ಜಲಕನ್ಯೆಯಾಗಿ ಹುಟ್ಟಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಅತಿಮಾನುಷೆಯಾಗಿದ್ದರಿಂದಲೇ ರುದ್ರಭೂಮಿಯಲ್ಲಿ ದುಶ್ಯಾಸನನ ಎದೆಬಗೆದು ರಕ್ತಹೀರಿ ನೆತ್ತರಿಂದ ತೊಯ್ದ ಕರುಳಲ್ಲೇ ಆಕೆಯ ಮುಡಿಯನ್ನು ಭೀಮಕಟ್ಟುವುದನ್ನು ಆಕೆ ಒಪ್ಪಿಕೊಳ್ಳಲು ಸಾಧ್ಯವಾಯಿತು. ಸಾಮಾನ್ಯಸ್ತ್ರೀಯಾಗಿದ್ದರೆ ಹುಚ್ಚುಹಿಡಿದು ಓಡುತ್ತಿರಲಿಲ್ಲವೆ?

ಅವಳ ಹುಟ್ಟು ಎಲ್ಲ ಸ್ತ್ರೀಯರಂತೆ ಸಹಜವಾದುದಲ್ಲ. ಆದರೆ ಬದುಕಿನ ಸಂಕಟಗಳೆಲ್ಲ ಈ ಜಗತ್ತಿನ ಸ್ತ್ರೀಯರದ್ದೇ, ಅದಕ್ಕಿಂತಲೂ ಹೆಚ್ಚೆ! ಕತ್ತಿಯ ಮೇಲಿನ ನಡಿಗೆ ಅವಳ ಬಾಳು. ಭಾರತದಲ್ಲಿ ಎಂತಹ ರಾಜಕುಟುಂಬದಲ್ಲಿ ಹುಟ್ಟಿದರೂ ಶೋಷಣೆ ಎಂಬುದು ಹೆಣ್ಣನ್ನು ಬಿಟ್ಟಿಲ್ಲ ಎಂಬುದಕ್ಕೆ ರಾಜಕುಮಾರಿಯಾಗಿ ದೈವಾಂಶಸಂಭೂತೆಯಾಗಿ ಹುಟ್ಟಿದರೂ ಪುರುಷಪ್ರಧಾನ ಸಮಾಜದಲ್ಲಿ ಅಡಿಗಡಿಗೂ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದೆ ನರಳುವ ಕೃಷ್ಣೆಯೇ ನಿದರ್ಶನ. ಕೃಷ್ಣನನ್ನು ವರಿಸುವ ಆಸೆಯಿತ್ತು, ಆಯ್ಕೆಯೇ ಇಲ್ಲ! ಅರ್ಜುನನನ್ನು ವರಿಸಬೇಕಿತ್ತು, ಸ್ವಯಂವರದಲ್ಲಿ ಅವಳಿಗೆ ಕಂಡದ್ದು ಅರ್ಜುನನಲ್ಲ, ಒಬ್ಬ ಬಡಬ್ರಾಹ್ಮಣ, ಭಿಕ್ಷು. ಒಪ್ಪಬೇಕಾಯಿತು. ಅಲ್ಲೂ ಆಯ್ಕೆಯಿಲ್ಲ! ಸರಿ, ಒಬ್ಬ ಸಾಮಾನ್ಯ ಬ್ರಾಹ್ಮಣನಾದರೂ ತೊಂದರೆಯಿಲ್ಲ, ಒಬ್ಬನೊಡನೇ ಸುಖವಾಗಿರುವೆ ಎಂದುಕೊಂಡರೆ ಅಲ್ಲೂ ಆಯ್ಕೆಯಿಲ್ಲ, ಹಣ್ಣಿನಂತೆ ಐವರಿಗೆ ಹೋಳಾಗಿ ಗೋಳಿನ ಬಾಳಿಗೆ ಆಳು! ಗಂಡನಾದವ ಹೆಂಡತಿಯನ್ನು ಜೂಜಿಗೆ ಒತ್ತೆಯಿಡುವ ಕ್ರಮವೇ ಇಲ್ಲ, ಅಲ್ಲೂ ಆಯ್ಕೆಯಿಲ್ಲ. ದುಶ್ಯಾಸನ ಸಭೆಗೆ ಎಳೆದು ತರುವಾಗ ತನ್ನ ತಾನು ರಕ್ಷಿಸಿಕೊಳ್ಳುವ ಆಯ್ಕೆಯೂ ಇಲ್ಲ. ತನ್ನ ಲೌಕಿಕ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂಬ ಸಂದರ್ಭದಲ್ಲಿ ಎಲ್ಲ ಸಾಮಾನ್ಯ ಸ್ತ್ರೀಯರಂತೆ ದೈವದ ಮೊರೆ ಹೊಕ್ಕು ಅಲೌಕಿಕಕ್ಕೆ ಮೊರೆ. ಪರಿಹಾರ ಪಡೆದಳು.  ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ, ದುಡಿಯುವ ವರ್ಗದ ಹೋರಾಟದ ಪ್ರತಿನಿಧಿಯಂತೆ ಕಾಣುವ ಕೃಷ್ಣ ಅಕ್ಷಯವಸನವಿತ್ತು ಮಾನ ಕಾಪಾಡುತ್ತಾನೆ.

ಕೃಷ್ಣ ಎಂದರೆ ಕಪ್ಪು ಅಥವಾ ಕತ್ತಲೆ. ಭಾರತೀಯ ಧರ್ಮದಲ್ಲಿ ಕಪ್ಪು$ಬಣ್ಣಕ್ಕೆ ವಿಶೇಷವಾದ ಅರ್ಥವಿದೆ. ಮೂಲತಃ ಸೃಷ್ಟಿಯಲ್ಲಿರುವುದು ಕಪ್ಪು$ಅಥವಾ ಕತ್ತಲೆ. ಕತ್ತಲೆ ಎಂಬುದು ಸರ್ವವ್ಯಾಪ್ತಿ. ಬೆಳಕಿಗೂ ಸ್ಥಾನವನ್ನು ಅಸ್ತಿತ್ವವನ್ನು ನೀಡುವುದು ಕತ್ತಲೆ. ಬೆಳಕು ಹುಟ್ಟುವುದು ಕೂಡ ಕತ್ತಲ ಗರ್ಭದಿಂದಲೇ. ಬೆಳಕಿನ ತಾಯಿಕತ್ತಲೆ.

ಇಡೀ ಬ್ರಹ್ಮಾಂಡದಲ್ಲಿ ಬೆಳಕು ಚಿಮ್ಮುವ ಆಕಾರಗಳನ್ನು ಬಿಟ್ಟು ಶೇಕಡ  99ರಷ್ಟು ಭಾಗ ವ್ಯಾಪಿಸಿರುವುದು ಕತ್ತಲೆಯೇ. ಒಂದು ಸೀಮಿತ ದೂರದವರೆಗೆ ಮಾತ್ರ ಬೆಳಕನ್ನು ಚಾಚಬಲ್ಲ ಕೋಟಿಕೋಟಿ ನಕ್ಷತ್ರಗಳು ಈ ಕತ್ತಲಲ್ಲಿ ಮಿಣುಕು ಹುಳುಗಳೇ. ಯಶೋದೆೆಯು ಕೃಷ್ಣನ ಬಾಯಲ್ಲೇ ಬ್ರಹ್ಮಾಂಡವನ್ನೇ ಕಂಡಳಂತೆ! ಕೃಷ್ಣಗಹ್ವರ ಎಂಬ ವೈಚಾರಿಕ ಪದವನ್ನು ಕೇಳಿದ್ದೇವೆ.

ಕೃಷ್ಣನೂ ಕಪ್ಪು , ಕೃಷ್ಣೆಯೂ ಕಪ್ಪು, ಕತ್ತಲೆ! ಕತ್ತಲಲ್ಲಿ ಎಲ್ಲವೂ, ಎಲ್ಲರೂ ಒಂದೇ. ಬೆಳಕಿಗೆ ಬಂದಾಗ ಮಾತ್ರ ನಾನು, ಅವನು, ಅದು ಬೇರೆ ಬೇರೆ. ಕೆಂಪು ಕೆಂಪಾಗಿ, ನೀಲಿ ನೀಲಿಯಾಗಿ, ಪಾರಿಜಾತ ಪಾರಿಜಾತವಾಗಿ, ಮಂದಾರ ಮಂದಾರವಾಗಿ ಕಾಣುವುದು ಬೆಳಕಿನಲ್ಲೇ. ಬೆಳಕು ಹೇಗೆ ಚೆಲುವನ್ನು ಬೀರುವುದೋ ಅದೇ ರೀತಿ ತಾರತಮ್ಯವನ್ನೂ ಸೃಷ್ಟಿಸುತ್ತದೆ, ಭಿನ್ನವಾಗಿಸುತ್ತದೆ, ಎರಡಾಗಿಸುತ್ತದೆ. ಬೆಳಕು ದ್ವೆ„ತ. ಕತ್ತಲು ಎಲ್ಲವನ್ನೂ ಎಲ್ಲರನ್ನೂ ಸಮಾನಗೊಳಿಸುವುದರಿಂದ ಅದು ಅದ್ವೆ„ತ. ಕಪ್ಪಿನಲ್ಲಿ ಎಲ್ಲವೂ ಕರಗಿ ಒಂದೇ ಆಗುತ್ತದೆ. ಅದಕ್ಕೇ ಇದು ಪರಮಾತ್ಮನ ಸಂಕೇತ, ಆಧ್ಯಾತ್ಮಿಕ ಸಂದೇಶ.

ಕತ್ತಲು ಕತ್ತಲು ಸೇರಿದಾಗ, ಇಬ್ಬರೂ ಒಂದೇ ಬೇಧವೇ ಇಲ್ಲವೆಂದಾದಾಗ ಅಲ್ಲಿ ಸೃಷ್ಟಿಕ್ರಿಯೆ ಅಸಾಧ್ಯ. ಕೃಷ್ಣೆ- ಕೃಷ್ಣರ ನಡುವೆ ಬೇಧವಿಲ್ಲ,  ಜೀವಾತ್ಮ -ಪರಮಾತ್ಮರ ನಡುವೆ ಬೇಧವಿಲ್ಲ. ಆದುದರಿಂದ ಇಲ್ಲಿ  ಸೃಷ್ಟಿ ಸಾಧ್ಯವಿಲ್ಲ. ದೇಹ ಮೀರಿದ ಆಧ್ಯಾತ್ಮಿಕ ಅಮೂರ್ತ ಆತ್ಮಮಟ್ಟದ ಸಂಬಂಧವದು. ಅದಕ್ಕೆ ಮನುಷ್ಯ ದೇಹದ ನಂಟನ್ನು ಅಂಟಿಸಲಾಗದು, ಮಿತಿಯಿಲ್ಲ. ಇದು ದೇಹದ ಸ್ಥಿತಿಗೆ ಬರಬೇಕಾದರೆ ದ್ವೆ„ತಗೊಳ್ಳಬೇಕಾಗುತ್ತದೆ. ಸೃಷ್ಟಿ ಸಾಧ್ಯವಾಗುವುದು ದ್ವೆ„ತದಿಂದ, ಪ್ರಕೃತಿ-ಪುರುಷ ಎಂಬ ಬೇಧದಿಂದ. ದ್ರೌಪದಿ ಪ್ರಕೃತಿ, ಜೀವಾತ್ಮ. ದೇಹದ ಮಟ್ಟದಲ್ಲಿ ಕೃಷ್ಣ ಗಂಡನಾಗಲಾರ, ಅವ ಪರಮಾತ್ಮ. ಆದರೆ ಅರ್ಜುನನಲ್ಲಿ ಆತ ಆತ್ಮರೂಪದಲ್ಲಿರುವವನಾದುದರಿಂದ ಪರಮಾತ್ಮಳಾಗಿ ಹುಟ್ಟಿದ ದ್ರೌಪದಿ ಜೀವಾತ್ಮಳಾಗಿ ಬದುಕಿರುವಾಗ ಪರಮಾತ್ಮನಾಗಿರುವ ಕೃಷ್ಣ ಆಕೆಗೆ ಆತ್ಮವಾಗಿಯೇ ಸಿಗಬೇಕಾಗುತ್ತದೆ, ಜೀವಾತ್ಮನಾದ ಅರ್ಜುನನೇ ಆಕೆಗೆ ಗಂಡನಾಗಬೇಕಾಗುತ್ತದೆ. ಈ ಕಾರಣದಿಂದಲೇ ಕೃಷ್ಣೆ ಆತನಿಗೆ ಸಹೋದರಿ, ಸಖೀ, ಭಕ್ತೆ ಎಲ್ಲವೂ ಆಗುತ್ತಾಳೆ. ಇದೊಂದು ಲಿಂಗಾತೀತ ದೇಹಾತೀತ ಸಂಬಂಧ. ಕಬೀರ-ರಾಮ, ಸೂರದಾಸ-ಕೃಷ್ಣ, ಅಕ್ಕ-ಚನ್ನ, ಕನಕ-ಕೃಷ್ಣ ಮುಂತಾದ ಅನುಭಾವೀ ನೆಲೆಯ ದಿವ್ಯವಾದ ಸಂಬಂಧಗಳ ತಳಹದಿಯನ್ನು  ನಾವು ಮಹಾಭಾರತದಲ್ಲೇ ಕೃಷ್ಣ-ಕೃಷ್ಣೆಯರಲ್ಲಿ ಕಾಣಬಹುದು. ಉದಾತ್ತವಾದ ದೈವೀ ನೆಲೆಗೇರಿದ  ಭಕ್ತ ಮತ್ತು ಪರಮಾತ್ಮನ ನಡುವಿನ ಸಂಬಂಧವಿದು. ವೈಜ್ಞಾನಿಕವಾಗಿ ನೋಡಿದರೂ ಪರಸ್ಪರ ವಿರುದ್ಧ ಧ್ರುವಗಳು ಆಕರ್ಷಿಸುತ್ತವೆ, ಸಮಧ್ರುವಗಳಲ್ಲಿ ಆಕರ್ಷಣೆ ಅಸಾಧ್ಯ. ಅದಕ್ಕೇ ಕೃಷ್ಣ-ಕೃಷ್ಣೆಯರಲ್ಲಿ  ವಿವಾಹ ಸಂಬಂಧ ಅಸಾಧ್ಯವಾಗುತ್ತದೆ. 

ಆತ ಕೃಷ್ಣ, ಶ್ಯಾಮ! ಈಕೆ ಕೃಷ್ಣೆ, ಶ್ಯಾಮಲೆ! ಮಹಾಭಾರತದ ಎರಡು ನೀಲ ನೈದಿಲೆಗಳು. ಕೃಷ್ಣೆಯ ಸಿರಿಮುಡಿಯಲ್ಲಿ ಕೃಷ್ಣನ ನವಿಲುಗರಿ. ಕೃಷ್ಣನ ನವಿಲುಗರಿಯಲ್ಲಿ ಕೃಷ್ಣೆಯದ್ದೇ ಕಣ್ಣು. ಆತ ಪರಮಾತ್ಮ , ಈಕೆ ಜೀವಾತ್ಮ. ಹೂವಿನಲ್ಲಡಗಿದ ಪರಿಮಳದಂತೆ ಕೃಷ್ಣ ಪರಮಾತ್ಮನು ಕೃಷ್ಣೆಯ ಆತ್ಮವನ್ನು ಆವರಿಸಿಕೊಂಡು ಏಕಕಾಲದಲ್ಲೇ ಮಹಾಭಾರತ ಕಾವ್ಯದ ಆತ್ಮವೂ ಆಗಿ ಅಲೌಕಿಕ ಅಮೂರ್ತ ಆಧ್ಯಾತ್ಮಿಕ ಗಂಧವನ್ನು ಸೂಸುತ್ತಿರುವ ಅನುಭವವಾಗುತ್ತದೆ. 

ಕಾತ್ಯಾಯಿನಿ ಕುಂಜಿಬೆಟ್ಟು

ಟಾಪ್ ನ್ಯೂಸ್

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.