ಗಂಡನನ್ನು ಹೆಂಡತಿ ಏಕವಚನದಿಂದ ಕರೆಯಬಹುದೆ? 


Team Udayavani, Apr 13, 2018, 6:00 AM IST

8.jpg

ಮಗಳು ಮುದ್ದಿನವಳಾದರೂ ಅಮ್ಮನಿಗೆ ಆಕೆ ಗಂಡನನ್ನು ಏಕವಚನದಲ್ಲಿ ಕರೆಯುವುದು ಹಿಡಿಸಿರಲಿಲ್ಲ. ಲಗ್ನವಾಗಿ ವಾರವಷ್ಟೇ ಕಳೆದಿದ್ದು ಅಳಿಯನನ್ನು ಎಗ್ಗಿಲ್ಲದೆ “ನೀನು, ನೀನು’ ಎಂದು ಮಾತಾಡುವಾಗ ಅಮ್ಮನಿಗೆ ಇರುಸುಮುರುಸು. ಗುಟ್ಟಾಗಿ ಒಳಕರೆದು ಮೆದುವಾಗಿ ತಿಳಿಹೇಳಿದಳು; ಗದರಿಸಿದಳು, “ಅಪ್ಪನಿಗೆ ಹೇಳೆ¤àನೆ’ ಎಂದು ಹೆದರಿಸಿಯೂ ಆಯಿತು. ಏನೇನೂ ಉಪಯೋಗವಿಲ್ಲ. 

“”ಅಮ್ಮಾ, ಇದು ನಿನ್ನ ಕಾಲವಲ್ಲ. ನೀನು ಮದುವೆಯಾದ ಕಾಲದಲ್ಲಿ ಹಾಗಿದ್ದಿರಬಹುದು. ಅದೂ ಹದಿನೈದಿಪ್ಪತ್ತು ಜನರಿದ್ದ ಮನೆ. ಗಂಡನಿಗೂ ಹೆಂಡತಿಗೂ ಹತ್ತು, ಹದಿನೈದು ವರ್ಷದ ಅಂತರ ಬೇರೆ. ನೀವು, ತಾವು, ಅವರು ಅಂತಲೇ ಕರೆಯುತ್ತ ಇದ್ದೀರಿ. ಈಗ ನೋಡು. ನನಗೂ  ಕಿಶನ್‌ಗೂ ಇರುವುದು ಒಂದೇ ವರ್ಷದ ವ್ಯತ್ಯಾಸ. ನಮ್ಮ ನಮ್ಮಲ್ಲಿ, “ಹೀಗೆ ಕೂಗು’, “ಹಾಗೇ ಕರೆ’ ಎಂಬ ಕಂಡೀಶನ್‌ ಇಲ್ವೇ ಇಲ್ಲ. ಸ್ನೇಹಿತರ ಹಾಗಿದ್ದೇವೆ. ಅಲ್ಲದೆ ನಾವಿಬ್ಬರು ಸಮಾನ ವಿದ್ಯಾವಂತರು. ಒಂದೇ ರೀತಿಯ ನೌಕರಿ ಮಾಡುತ್ತಿದ್ದೇವೆ”

“”ಗೆೆಳೆಯನ  ಹಾಗಿರುವವನನ್ನು ಒಡೆಯನನ್ನು ಕೂಗಿದ ಹಾಗೆ “ಅವರು’, “ಇವರು’, “ನಮ್ಮೆಜಮಾನ್ರು’ ಎನ್ನಲು ನನಗಿಷ್ಟವಿಲ್ಲ. ಅವನು ಯಜಮಾನನಲ್ಲ; ನಾನು ದಾಸಿಯೂ ಅಲ್ಲ. ನಮ್ಮನ್ನು ನಮಗಿಷ್ಟ ಬಂದ ಹಾಗೆ ಇರಲು ಬಿಡು” -ಎಂದೆಲ್ಲ ದೀರ್ಘ‌ವಾಗಿ ಮಗಳು ಮಾತಾಡಿದಳು. ತಾಯಿಗೋ ಉಭಯ ಸಂಕಟ. ಮಗಳು ಪತಿಯ ಜೊತೆ ಸಂತೋಷದಲ್ಲಿ¨ªಾಳೆ. ಆದರೆ, ಮನೆಯ ಹಿರಿಯರ ಕಣ್ಣು  ಆಕೆಯ ನಿರ್ಭಿಡೆಯ ನಡವಳಿಕೆಯನ್ನು ಮೌನವಾಗಿ ಪ್ರಶ್ನಿಸುತ್ತಿದೆ. ಬೇರೆಯರು ಬಿಡಿ. ಮಗಳ ಅಪ್ಪನಿಗೆ ಸುತರಾಂ ಸಮಾಧಾನವಿಲ್ಲ. ಹೊಸ ನೆಂಟರ ಎದುರಿಗೆ ಪತಿಯನ್ನು “ಅವನು’, “ಹೋದ’, “ಬಂದ’, “ಬಾ ಇಲ್ಲಿ’, “ನಿಂತ್ಕೊಳ್ಳೋ’, “ನಿನ್ನನ್ನೇ’, “ನಿನಗೇ ಹೇಳ್ತಿರೋದು’- ಹೀಗೆಲ್ಲ ಹಳೆಯ ಒಡನಾಡಿಗಳ ಹಾಗೆ ಕರೆದು ಓಡಾಡುವಾಗ ಅಪ್ಪನ ಮೋರೆ ಬಿಗಿದುಕೊಳ್ಳುತ್ತದೆ. ಮಗಳೇನೋ ಮುದ್ದಿನವಳು. ಆದರೆ, ಲಗ್ನ ಮಾಡಿದ ನಂತರ ಬೇರೆ ಮನೆಯ ಸೊಸೆ. ಅಲ್ಲೂ ಅತ್ತೆ, ಮಾವ ಎಂದು ಹಿರಿಯರಿ¨ªಾರೆ. ನಾಳೆಗೆ ಅವರು ಆಕ್ಷೇಪಿಸಿದರೆ ತವರಿಗೆ ಹೆಸರು ಬರುತ್ತದೆ. ಅಪ್ಪನ ಭೀತಿ ಅಮ್ಮನನ್ನೂ ಬಿಟ್ಟಿಲ್ಲ.

“”ಅತ್ತೆಮಾವಗಂಜಿ, ಸುತ್ತೇಳು ನೆರೆಗಂಜಿ; ಮತ್ತೆ  ನಲ್ಲನ ದನಿಗಂಜಿ ನಡೆದರೆ ಎಂಥ ಉತ್ತಮರ ಮಗಳಂದ ಕಾಲ ಸರಿದು ಹೋಗಿದೆ. ಅಂದಿಗೆ ಮನೆ ಸೊಸೆಯನ್ನು ಹಿಡಿತದಲ್ಲಿರಿಸಿಕೊಳ್ಳಲು ಹಾಗೆ ಹೊಗಳಿ ಬೋಧಿಸಿ ಮುಷ್ಟಿಯಲ್ಲಿರಿಸಿಕೊಂಡಿ¨ªಾರೆ. ಅದನ್ನೇ ನಂಬಿ ತನ್ನ ಸ್ವಂತಿಕೆಯನ್ನು  ಮನಸ್ಸಿದ್ದೋ, ಇಲ್ಲದೆಯೋ ಬದಿಗಿರಿಸಿ ಹಾಕಿದ ಪಾತ್ರೆಗೆ ಹೊಂದಿಕೊಂಡ ನೀರಿನ ಹಾಗೆ ತನ್ನ ವ್ಯಕ್ತಿತ್ವನ್ನು ತಿದ್ದಿಕೊಂಡ ಹಾಗೆ ನಾನಿರುತ್ತೇನೆ ಎಂದುಕೊಂಡರೆ ಅದು ನಿನ್ನ ನಂಬಿಕೆ ಮಾತ್ರಾ. ನನ್ನನ್ನು ನನ್ನ ಹಾಗಿರಲು ಬಿಡು ಅಮ್ಮ. ನಿಮ್ಮ ಕಾಲದ ಪತಿ, ಪತ್ನಿಯ ಜೀವನಕ್ಕೂ ಇಂದಿನದಕ್ಕೂ ಅಜಗಜಾಂತರವಿದೆ. ಆಗೆಲ್ಲ ಪತಿಯು ದನಿ ಎತ್ತರಿಸಿ ಗದರಿದರೆ,  ಬೈಸಿಕೊಂಡು, ಹೊಡೆದರೆ ಹೊಡೆಸಿಕೊಂಡು ಇರಲು ನಾವೆಲ್ಲ ತಯಾರಿಲ್ಲ. ನಿಮ್ಮ  ಹಿರಿಯರು ಹೆಣ್ಮಕ್ಕಳನ್ನು ಮದುವೆಯಾದ ಮನೆಗೆ ಹೊಂದಿಕೊಂಡಿರುವ ಪಾಠ ಕಲಿಸಿದರೇ ಹೊರತು ಸ್ವಂತವಾಗಿ ಬದುಕು ರೂಪಿಸಿಕೊಂಡು, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಕಲಿಸಿಕೊಟ್ಟೇ ಇಲ್ಲ”

“”ಲಗ್ನ ನಿಶೆòಸುವಾಗ ಅಂದಿಗೆ ಕನ್ಯೆಗೆ ಮತ್ತು ಮದುಮಗನಿಗೆ  ವಯಸ್ಸಿನ ವ್ಯತ್ಯಾಸ  ಹೆಚ್ಚಿಗೆ ಇರಲಿ ಎನ್ನುವುದಕ್ಕೆ ಕಾರಣ ಸೊಸೆಗೆ ನಾಲ್ಕಾರು ಮಕ್ಕಳಾದ ಮೇಲೆ ಮುದುಕಿಯಾಗುತ್ತಾಳೆ ಅಂತಲೂ ಇತ್ತಂತೆ. ನಂಗೊತ್ತು, ಗಂಡ ಹತ್ತಾರು ವರ್ಷ ದೊಡ್ಡವನಿದ್ದರೆ ಪತ್ನಿ ಹೇಳಿದ ಹಾಗೆ ಕೇಳುತ್ತಾಳೆ ಅಂತಲೂ ಆಗಿರಬಹುದಲ್ವಾ ಅಮ್ಮಾ.  ಹಿರಿಯರಿಗೆ ಸಮಾನವಾಗಿ ಕೂರಬೇಡ, ಅವರಿಗಿಂತ ಮೊದಲೇ ಹಸಿದರೂ ಉಣಬೇಡ. ಅವರುಗಳು ಬಂದಾಗ ಬಾಗಿಲ ಹಿಂದೆ ಸರಿದು ನಿಲ್ಲು ಅಂತಲೇ ತಿದ್ದಿ ತೀಡಿದ್ದೀರಿ”   

“”ಹೊಡೆದರೆ, ಬಡಿದರೆ, ಉಪವಾಸ ಕೆಡವಿದರೆ ಅದು ಗಂಡನ ಪರಮಾಧಿಕಾರ. ಸಹನೆ, ತಾಳ್ಮೆ  ಹೆಂಡತಿಗೆ ಮುಖ್ಯವೇ ಹೊರತು ಗಂಡನಿಗೂ ಇರಲಿ ಅಂತ ಬೋಧಿಸಿದವರಿಲ್ಲ.  ಮಾತಿಗೆ ಎದುರಾಡಬೇಡ, ನೀನು ಉಪವಾಸವಿದ್ದರೂ ಪರವಾಗಿಲ್ಲ; ಗಂಡ, ಮಕ್ಕಳು, ಹಿರಿಯರಿಗೆ ಬಡಿಸಿ ಎರಡು ಲೋಟನೀರು ಕುಡಿದು ಹೊಟ್ಟೆ ತುಂಬಿಸ್ಕೋ  ಎಂದು ಹೇಳಿದ ಹೆತ್ತವರೆಲ್ಲ ಸರಿದುಹೋದರು. ನಾವುಗಳೆಲ್ಲ ಇದ್ದುದನ್ನು ಹಂಚಿ ಉಣ್ಣುವಾ ಅನ್ನುವ ಮನೋಭಾವದವರು. ಇದು ನಮ್ಮ ವಿಚಾರ. ನೀವು ಮಗ, ಮಗಳು ಭೇದವಿಲ್ಲದೆ ವಿದ್ಯೆ ಕೊಡಿಸಿದ್ದೀರಿ ಅಲ್ವಾಮ್ಮ?”

“”ಹಿಂದಿನ ಗಂಡಸರ ಹಾಗೆ ದರ್ಪ, ದಬ್ಟಾಳಿಕೆ, ಅಧಿಕಾರಶಾಹಿ ಮನೋಭಾವ ತಗ್ಗಿ ಹೋಗಿ ಪತ್ನಿ  ತನ್ನ ಜೀವನ ಸಂಗಾತಿಯೆ ಹೊರತು ಬಿಟ್ಟಿ ಸಿಕ್ಕ ದಾಸಿಯಲ್ಲ ಎಂಬ ಅರಿವು ವಿದ್ಯೆ, ಸಂಸ್ಕಾರವಿರುವ ಕುಟುಂಬಗಳಲ್ಲಿ ಪಡಿಮೂಡಿದೆ. ಹೆಣ್ಣು ಮಕ್ಕಳೆಂದರೆ ನಿವಾರಣೆ, ಅಸಡ್ಡೆ, ತಾತ್ಸಾರ ಮಾಡಿ ಮಾಡಿದ್ದರ ಪರಿಣಾಮ ಈಗ ಲಗ್ನಕ್ಕೆ ಕನ್ಯೆ ಅಲಭ್ಯವಾಗಿದ್ದು. ಹಿಂದಿನ ದಿನಗಳ  ಹಿಂಜರಿಕೆ, ಭೀತಿ, ಕೀಳರಿಮೆ ಇಂದಿನ ಯುವತಿಯರಲಿಲ್ಲ. ಅದು ಉತ್ತಮ ಡೆವಲಪ್‌ಮೆಂಟ್ ವಿದ್ಯೆ ವ್ಯಕ್ತಿತ್ವವನ್ನು ಎತ್ತಿ ಹಿಡಿದು ಬೆಳೆಸಿದೆ”

“”ನಮ್ಮ  ದಾಂಪತ್ಯದಲ್ಲಿ ನಾವು ಚೆನ್ನಾಗಿದ್ದೇವೆ. ಸಹಜವಾಗಿರೋಣ,   ಕೃತಕತೆ, ಮೇಲು, ಕೀಳು, ಬಹುವಚನದ ಗೌರವ ಬೇಕಿಲ್ಲ; ನೀನು ನನಗೆ ನೀವು ಎಂದು ಕರೆದರೆ ನಾನೂ ನಿನ್ನ  ಬಹುವಚನದಲ್ಲೇ ಕರೀತೇನೆ ಅಂದಿದ್ದಾನೆ ನನ್ನ ಪತಿ. ಅವನ ತಾಯ್ತಂದೆಗೂ ಅದೇ ಹಿತ. ನೀವು  ಪ್ರೀತಿಯಿಂದ ಹೊಂದಿಕೊಂಡಿರುವುದು ಮುಖ್ಯವೇ ಹೊರತು ಏಕವಚನ, ಬಹುವಚನ ಅದೆಲ್ಲ ಪುರಾತನ ಕಾಲದಲ್ಲಿ ಮಾಡಿಟ್ಟ ಅಲಿಖೀತ ಕಾನೂನುಗಳು. ಬದಲಾವಣೆ ಬದುಕಿನ ಧರ್ಮ ಅಂದಿದ್ದಾರೆ ಬಲ್ಲವರು” 

“”ಸೋ, ಅಮ್ಮಾ, ಅಪ್ಪನಿಗೂ ಹೇಳು ಇದಕ್ಕೆಲ್ಲ  ತಲೆ ಕೆಡಿಸಿಕೊಳ್ಳಬಾರದು. ಹೇಗೆ ಕರೀತಾಳೆ ಪತ್ನಿ ಎನ್ನುವುದಕ್ಕಿಂತ ಮುಖ್ಯ ಅವರು ಹೇಗೆ ದಾಂಪತ್ಯದಲ್ಲಿ  ಹೊಂದಿಕೊಳ್ತಾರೆ ಎನ್ನುವುದು” “”ಅಂದಿನ ಕಾಲದ ಹಾಗೆ ಹತ್ತು, ಹದಿನೈದು ವರ್ಷದ ವಯಸ್ಸಿನ ಅಂತರವಿರುವ  ಪತಿ, ಪತ್ನಿಗೆ ಹೊಂದಾಣಿಕೆಗೆ ಸುದೀರ್ಘ‌ ಸಮಯ ಬೇಕಾಗಬಹುದು. ಆದರೆ ಸಮವಯಸ್ಕ ಪತಿ, ಪತ್ನಿಗೆ ಸ್ನೇಹಿತರ ಹಾಗಿನ  ಬದುಕು ಒಂದಾಗಿ ನಿಲ್ಲಲು ಕಲಿಸುತ್ತದೆ. ಸಹಜೀವನದ  ಅಮೋದ, ಪ್ರಮೋದ ಬೊಗಸೆ ತುಂಬ ಸವಿಯುತ್ತೇವೆ. ನೀವು, ನಿಮಗೆ, ನಿಮ್ಮನ್ನು ಎಂದು ಕರೆದರೆ ನಮಗಿಬ್ಬರಿಗೂ ಅದು ಒಪ್ಪಿಗೆಯಿಲ್ಲ. ಏಕವಚನದಿಂದ ಪ್ರೀತಿ, ಆತ್ಮೀಯತೆ, ಸಾಮರಸ್ಯ ಹೆಚ್ಚುತ್ತದೆ ಹೊರತು ಆ ಕಾರಣಕ್ಕೆ ತಗ್ಗುವುದಿಲ್ಲ”

ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.