ನಾನೂ ಫೇಸ್‌ಬುಕ್‌ ಎಕೌಂಟ್‌ ತೆರೆದೆ !


Team Udayavani, Jun 15, 2018, 6:00 AM IST

bb-24.jpg

ಹಾಗಾದ್ರೆ ನೀವು ಫೇಸ್‌ಬುಕ್‌ನಲ್ಲಿಲ್ವಾ”- ಇದು ನನ್ನ ಎಳೆಯ ಸಹೋದ್ಯೋಗಿ ಐದು ವರ್ಷಗಳ ಹಿಂದೆ ಕೇಳಿದ ಪಶ್ನೆ. ತನ್ನ ಅಗಲವಾದ ಕಣ್ಣುಗಳನ್ನು ಮತ್ತಷ್ಟು ಅರಳಿಸಿ ಆಕೆ ನನಗೊಂದು ಅಕೌಂಟ್‌ ಕೂಡ ಓಪನ್‌ ಮಾಡಿ ತನ್ನ ಫೇಸ್‌ಬುಕ್‌ ಬಳಗಕ್ಕೆ ಸೇರಿಸಿಕೊಂಡಳು. ಮೊದಮೊದಲು ಒಂದು ಫೋಟೊ ಅಪ್‌ಲೋಡ್‌ ಮಾಡಲೂ ಬರುತ್ತಿದ್ದಿಲ್ಲ; ಆದರೆ ಈಗ ದಿನಕ್ಕೊಮ್ಮೆಯಾದರೂ ಫೇಸ್‌ಬುಕ್‌ ನೋಡದಿದ್ದರೆ ಏನನ್ನೋ ಕಳೆದುಕೊಂಡಂತೆ. ತರಹೇವಾರಿ ಜನರು,  ಆಸಕ್ತಿಗಳು, ರಾಜಕೀಯದ  ಬೈದಾಟಗಳು, ಹೊಗಳಿಕೆ… ಹೀಗೆ ಅದೊಂದು ವಿಸ್ಮಯ ಪ್ರಪಂಚ. ಅದು ವರ್ಚುವಲ್‌ ಜಗತ್ತೇ  ಆದರೂ ಅದಕ್ಕೂ ಒಂದು ವಿಶಿಷ್ಟ   ಅಸ್ತಿತ್ವವಿದೆ; ಸಾಧ್ಯತೆಗಳಿವೆ. ಈ ಕುರಿತು ಒಂದಷ್ಟು ಮಾತು. 

2006ನೇ ಇಸವಿಯಲ್ಲಿ  ಭಾರತಕ್ಕೆ  ಬಂದ ಫೇಸ್‌ಬುಕ್‌ (ಜಾಗತಿಕವಾಗಿ 2004) ಅದೆಷ್ಟು  ಜನಜೀವನದ ಭಾಗವಾಗಿದೆ ಎಂದರೆ ಹೆಚ್ಚಿನ ಜನರ ಜೀವನ ಶೈಲಿಯ ಭಾಗವೇ ಆಗಿದೆ. ತೀರಾ ಫೇಸ್‌ ಬುಕ್‌ ಇಲ್ಲದೆ ಬದುಕಲಾರೆವು ಎನ್ನುವಂತಿಲ್ಲದಿದ್ದರೂ   ತಮ್ಮ ಪೋಟೊಗೆ ಎಷ್ಟು ಲೈಕ್‌ಗಳು ಬಂದಿವೆ,  ತಮ್ಮ ಅಭಿಪ್ರಾಯಗಳಿಗೆ  ಪರ-ವಿರೋಧ ಕಮೆಂಟ್‌ ಎಷ್ಟಿವೆ? ತನ್ನ ಪ್ರಿಯ ಮಿತ್ರ ಅಥವಾ ಗೆಳತಿ ತನ್ನ ಪೋಸ್ಟ್‌ಗಳನ್ನು ಯಾಕೆ ಈಗೀಗ ನೋಡುವುದೇ ಇಲ್ಲ- ಹೀಗೆ ಯೋಚನೆಗಳು.   

 ಫೇಸ್‌ಬುಕ್‌ನಿಂದಾಗಿ ತಮ್ಮ ನೆಮ್ಮದಿ ಕದಡುತ್ತಿದೆ, ಸಮಯ ವ್ಯರ್ಥವಾಗುತ್ತಿದೆ, ಸಂಬಂಧಗಳು ಹಳಸುತ್ತಿವೆ ಎಂಬ ವಾದವಿರುವಂ ತೆಯೇ ಅದನ್ನು ಅತಿ ಸಮರ್ಥವಾಗಿ ಬಳಸಿಕೊಂಡವರು ಹಲವರು.  ಉದಾಹರಣೆಗೆ “ಅಡುಗೆ ಅರಮನೆ’ ಎಂಬ ಗ್ರೂಪ್‌ಗೆ ಎರಡು ಲಕ್ಷಕ್ಕೂ ಮಿಗಿಲಾಗಿ  ನೋಡುಗರಿದ್ದಾರೆ. ಅದೇ ರೀತಿ ಕಸೂತಿ, ಟೆರೇಸ್‌ ಗಾರ್ಡನ್‌,  ಹಾಡುಗಳು ಹೀಗೆ ಪ್ರತಿಯೊಂದಕ್ಕೂ ಗ್ರೂಪ್‌ಗ್ಳು. ಇಷ್ಟವಿದ್ದಲ್ಲಿ ಪೋಸ್ಟ್‌ಗಳನ್ನು  ಹಾಕಬಹುದು, ಇಲ್ಲವಾದಲ್ಲಿ  ತೆಪ್ಪಗೆ ಇನ್ನೊಬ್ಬರ  ಚಟುವಟಿಕೆಗಳನ್ನು ನೋಡುತ್ತಿರಬಹುದು. (ಇದು ತುಂಬಾ ಸೇಫ್).

ಇನ್ನು ಸಾಹಿತ್ಯಾಸಕ್ತಿಯುಳ್ಳವರಿಗೂ ಫೇಸ್‌ಬುಕ್‌ ಒಳ್ಳೆಯದೇ. ಅನೇಕ ಸಂಘಸಂಸ್ಥೆಗಳು, ಸಾಹಿತ್ಯ ಸಮ್ಮೇಳನದ ಪದಾಧಿಕಾರಿಗಳು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುತ್ತಾರೆ. ಮನೆಯಿಂದ ಹೊರ ಹೋಗಲು ಹೆಚ್ಚು ಅವಕಾಶವಿಲ್ಲದ, ನಿರ್ಬಂಧಗಳಿರುವ ಹೆಣ್ಣು ಮಕ್ಕಳಿಗೆ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ಸುರಕ್ಷಿತ ಅಂತರದಲ್ಲಿ ತಿಳಿದುಕೊಳ್ಳಲೂ ಇದು ಸಹಕಾರಿ. (ಸೈಬರ್‌ ಜಗತ್ತಿನ ಅನಾಹುತಕಾರಿ ಕ್ರೈಮ್‌ಗಳನ್ನು ಇಲ್ಲಿ ಉಲ್ಲೇಖೀಸಿಲ್ಲ) ಫೇಸ್‌ಬುಕ್‌ ಭಾರತದಲ್ಲಿ ಯಾಕೆ ಇಷ್ಟೊಂದು ಜನಪ್ರಿಯವಾಗಿದೆ? ನನ್ನ ಪ್ರಕಾರ ಇದೊಂದು ಶ್ರೇಣೀಕರಣವನ್ನು ಸೈಬರ್‌ ಜಗತ್ತಿನಲ್ಲಿಯಾದರೂ ಮೀರುವ ಪ್ರಯತ್ನ. ನಿಜಜೀವನದಲ್ಲಿ ಅಧಿಕಾರ, ಆಸ್ತಿ, ಅಂತಸ್ತು, ಮರ್ಜಿಗಳನ್ನು ನೋಡುತ್ತೇವೆ. ಜಾತಿ, ಧರ್ಮ, ಲಿಂಗಾಧಾರಿತ ತಾರತಮ್ಯಗಳಿವೆ.  ಸೈಬರ್‌ ಜಗತ್ತಿನಲ್ಲಿ ಅದು ಕಡಿಮೆ. ಮೋಸ,  ವಂಚನೆ, ದಗಾ ಇಲ್ಲವೆಂದಲ್ಲ. ಆದರೆ, ಒಂದು ರೀತಿಯ ಸಮಾನ ಸ್ತರದಲ್ಲಿ ಚಿಂತಿಸುವ, ಕನಸು ಕಾಣುವ  ವರ್ಗ ಫೇಸ್‌ಬುಕ್‌ನಲ್ಲಿ ನಿಧಾನವಾಗಿ ಬೆಳೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ತೀರಾ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿಯೇ ತಮ್ಮ ಕೃತಿ ಬಿಡುಗಡೆ ಮಾಡಿದವರೂ ಇದ್ದಾರೆ.

ಫೇಸ್‌ಬುಕ್‌ನ ಜನಪ್ರಿಯತೆಗೂ ಗ್ಲೋಬಲೈಸೇಶನ್‌ಗೂ ಸಾಮ್ಯವಿದೆ. ಜಾಗತೀಕರಣದ ಜನಪ್ರಿಯತೆಯಂತೆಯೇ ಸಾಮಾನ್ಯ ಜನರ ಭಾವನೆಗಳಿಗೆ ಅಭಿವ್ಯಕ್ತಿ ಕೊಡುವುದರಿಂದಲೇ ಫೇಸ್‌ಬುಕ್‌ ಜನಪ್ರಿಯವಾಗಿರಬೇಕು. ಕತೆ, ಕವಿತೆ, ಹಾಡು ಹೀಗೆ  ಬಿಡುಗಡೆಗೊಳ್ಳಲು ಹೆಚ್ಚು ವೆಚ್ಚ , ಕಾಂಟಾಕ್ಟ್ ಅಲ್ಲಿ ಅಗತ್ಯ ಇಲ್ಲ, ನಿಜಜೀವನದಲ್ಲಿ ಕೈಗೆ ಸಿಗದವರೂ ಅಲ್ಲಿ ಒಂದೆರಡು ಒಳ್ಳೆ ಮಾತು ಹೇಳುವುದಿದೆ. (ಅದೇ ರೀತಿ ಸುಖಾ ಸುಮ್ಮನೆ ಅವಮಾನಿಸಿ ಕಾಲೆಳೆಯುವವರೂ ಇದ್ದಾರೆನ್ನಿ).  

ಯಾವುದೇ ಟೆಕ್ನಾಲಜಿಯಂತೆ ಫೇಸ್‌ಬುಕ್‌ ಕೂಡ ನಾವು ಬಳಸಿಕೊಳ್ಳುವುದರ ಮೇಲೆ ನಿಂತಿದೆ. ಉದಾಹರಣೆಗೆ ತೀರಾ ಮೂಡ್‌ಆಫ್ ಆದಾಗ ನಮ್ಮ ಪ್ರೊಫೈಲ್‌ಗೆ ಬಂದ ತರಹೇವಾರಿ ಕಮೆಂಟ್‌ ನೋಡಿ, “ಐ ಆಮ್‌ ಓಕೆ, ಯು ಆರ್‌ ಓಕೆ’ ಎಂದುಕೊಳ್ಳಬಹುದು. ಇನ್ನು ಫೇಸ್‌ಬುಕ್‌ನಲ್ಲಿಯ ತಮಾಷೆಗಳೂ ಹಲವು. ಅದರಲ್ಲಿ ಅದ್ಭುತವಾಗಿ ಕಾಣಿಸುವ ಸೀರೆಯನ್ನು ಆನ್‌ಲೈನ್‌ನಲ್ಲಿ  ತರಿಸಿ ಕೊಂಡಾಗ ಒಂದು ಪ್ಯಾಲಿ ಅವತಾರದ, ಅದೇ ಬಣ್ಣದ ಸೀರೆ ನಿಮಗೆ ಸಪ್ರೈìಸ್‌ ಕೊಡ ಬಹುದು. ಜನುಮದ ಫ್ರೆಂಡ್‌ ಎನ್ನುವ ರೀತಿ ಇದ್ದವರು ಸಡನ್‌ ಆಗಿ ಅನ್‌ಫ‚ೆಂಡ್‌ ಮಾಡಬಹುದು. ಜೀವನದಲ್ಲಿ ಒಮ್ಮೆಯೂ ನೋಡಿಯೇ ಇರದವರು, “ಊಟ ಆಯ್ತಾ, ತಿಂಡಿ ಆಯ್ತಾ?’ ಎಂದೆಲ್ಲ ನಿಮ್ಮನ್ನು ವಿಚಾರಿಸಿ ಕಿರಿಕಿರಿ ಮಾಡಬಹುದು. ಇನ್ನೂ ಆತಂಕಕಾರಿಯಾಗಿ ಅಶ್ಲೀಲ  ಗ್ರೂಪ್‌ಗ್ಳಿಗೆ, ಅನಾಹುತಕಾರಿ ಸಂಘಟನೆಗಳಿಗೆ ನಮ್ಮನ್ನು ಸೇರಿಸಿಕೊಳ್ಳಬಹುದು. (ಪುಣ್ಯಕ್ಕೆ ಅವನ್ನು ಬ್ಲಾಕ್‌ ಮಾಡುವ ಅವಕಾಶವೂ ನಮಗಿದೆ).

ಇನ್ನೊಂದು ತಮಾಷೆ ಎಂದರೆ  ಮಧ್ಯವಯಸ್ಕರೇ ಫೇಸ್‌ಬುಕ್‌ನಲ್ಲಿ ಜಾಸ್ತಿ ಸಕ್ರಿಯರಾಗಿ ಇರುವುದು. ಇದಕ್ಕೆ ಬಹುಶಃ ಕಾರಣ, ಅಂದು ನಮಗಿರದ ಟೆಕ್ನಾಲಜಿ, ಅಭಿವ್ಯಕ್ತಿ ಸ್ವಾತಂತ್ರ್ಯ ಈಗ ಲಭಿಸಿರುವುದು. ಕಾಲದ ಪ್ರವಾಹದಲ್ಲಿ  ಕಳೆದೇ ಹೋದ ಅದೆಷ್ಟೋ ಗೆಳೆಯ ಗೆಳತಿಯರು (ಅವರು ಫೇಸ್‌ಬುಕ್‌ನಲ್ಲಿ ಇದ್ದರೆ) ಮರಳಿ ಸಿಗಬಹುದು; ಹೊಸ ಕನಸುಗಳು, ಸಾಧ್ಯತೆಗಳನ್ನು ವಿಸ್ತರಿಸ್ಕೊಳ್ಳಬಹುದು. ಈಗಿನಂತೆ ಸಂಪರ್ಕ ಮಾಧ್ಯಮಗಳಿರದೆ ಮುರುಟಿ ಹೋದ  ಗೆಳೆತನಗಳೆಷ್ಟೋ, ಪ್ರಣಯಗಳೆಷ್ಟೋ.  ಹೀಗಾಗಿಯೇ ಮಧ್ಯವಯಸ್ಸಿನವರು ಖರ್ಚಿಲ್ಲದ, ಹೆಚ್ಚು ನಿರೀಕ್ಷೆಗಳೂ ಇಲ್ಲದ  ಈ ಸಾಮಾಜಿಕ ಜಾಲತಾಣವನ್ನು ಒಪ್ಪಿಕೊಂಡಿರುವುದು. ಇದರಲ್ಲಿನ ಮಜಾವೆಂದರೆ ನಮ್ಮ ಮಕ್ಕಳನ್ನೊಳಗೊಂಡು ಯುವಜನತೆ ಫೇಸ್‌ಬುಕ್‌ ಅನ್ನು  ಎಚ್ಚರಿಕೆಯಿಂದ ಬಳಸುವುದು. ತಮ್ಮ ಚಲನವಲನಗಳ ಮೇಲೆ ಅಪ್ಪ-ಅಮ್ಮ ಮೊದಲುಗೊಂಡು  ಟೀಚರುಗಳು ಒಂದು ಕಣ್ಣಿಟ್ಟಿರುತ್ತಾರೆ ಎನ್ನುವ ಕಾರಣಕ್ಕೇ ಅವರು  ಬಹುಶಃ ಫೇಸ್‌ಬುಕ್‌ನಲ್ಲಿ ಹೆಚ್ಚು ಆ್ಯಕ್ಟಿವ್‌ ಇರುವುದಿಲ್ಲ. 

ಇನ್ನು  ಫೇಸ್‌ಬುಕ್‌ ಕಾರಣಕ್ಕಾಗಿಯೇ ನಾವು ಸಣ್ಣಗೆ ನೊಂದುಕೊಳ್ಳಲಾರಂಭಿಸುತ್ತೇವೆ. ಜನರು ಹೆಚ್ಚಾಗಿ ತಮ್ಮ ಸಾಧನೆಗಳನ್ನು, ಲವಲವಿಕೆಯ ವಿಷಯಗಳನ್ನೇ ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡುವುದರಿಂದ “”ಅಯ್ಯೋ ನನ್ನ ಜೀವನದಲ್ಲಿ ಹೇಳಿಕೊಳ್ಳುವ ವಿಷಯವೇನೂ ಇಲ್ವೇ” ಎಂದು  ಚಡಪಡಿಸುವಂತಾಗುತ್ತದೆ. ಇನ್ನೊಬ್ಬರ ಬದುಕೇ ಅತಿ ಸುಂದರವಾಗಿ ಕಂಡು ಒಂಥರ ಕೀಳರಿಮೆ ಬೆಳೆದರೂ ಆಶ್ಚರ್ಯವಿಲ್ಲ. ಇವೆಲ್ಲವನ್ನು ಮೀರಿ ಕೂಡ ಫೇಸ್‌ಬುಕ್‌ಗೆ  ತನ್ನದೇ ಆದ ಅಸ್ತಿತ್ವ ಇದೆ ಹಾಗೂ ಸಾಮಾಜಿಕ ಸಂವಹನದ  ಮಾಧ್ಯಮವಾಗಿ ಬಹುಕಾಲ ಉಳಿಯಬಲ್ಲುದು. 

ಜಯಶ್ರೀ ಬಿ. ಕದ್ರಿ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.