ಮಳೆಗಾಲದ ಪ್ರಸಿದ್ಧ ಪ್ರವಾಸಿ ತಾಣಗಳು


Team Udayavani, Jul 13, 2018, 6:00 AM IST

b-20.jpg

ಮಳೆಗಾಲದಲ್ಲಿ ಹರಿವ ಧೋ ಧೋ ಮಳೆ, ಶೀತಲ ಗಾಳಿಯೊಂದಿಗೆ ಬೆಚ್ಚನೆ ಹೊದ್ದು ಪ್ರವಾಸಿ ತಾಣಗಳನ್ನು ವೀಕ್ಷಿಸುವುದು ಮುದ ತರುವುದಷ್ಟೇ!
ಮೈತುಂಬ ನಳನಳಿಸುವ ಪ್ರಕೃತಿಯೊಂದಿಗೆ ಒಂದಾಗಲು ಈ ಪ್ರವಾಸಿ ತಾಣಗಳಲ್ಲಿ ಭಾರತದಲ್ಲಿ ಮುಖ್ಯವಾದದ್ದು ಇಲ್ಲಿವೆ.

ಉದಯಪುರ
ರಾಜಸ್ಥಾನದಲ್ಲಿರುವ ಉದಯಪುರಕ್ಕೆ “ವೆನ್ಸಿಸ್‌ ಆಫ್ ದ ಈಸ್ಟ್‌’ ಎಂಬ ಹೆಸರಿಗೆ ಜುಲೈಯಿಂದ ಆಗಸ್ಟ್‌ವರೆಗೆ ಈ ತಾಣಕ್ಕೆ ಭೇಟಿ ನೀಡುವುದು ಬಲು ಸೂಕ್ತ. ಅರಾವಳಿ ಬೆಟ್ಟಗಳ ಸೌಂದರ್ಯದೊಂದಿಗೆ, ಮಹಾರಾಜಾ ಸಜ್ಜನ ಸಿಂಗ್‌ ಕಟ್ಟಿದ ಮಳೆಗಾಲದ ಅರಮನೆಯೂ ನೋಡಲು ಬಲು ಅಂದ. ಈ ಅರಮನೆಯಿಂದ ಸಾಲು ಸಾಲು ಸಾಗುವ  ಮೋಡಗಳನ್ನು ನೋಡುವುದೇ ಅಂದ. ಇದರ ಸುತ್ತಲೂ ಹಲವು ಸರೋವರಗಳಿದ್ದು ಅವು ನೋಡಲು ಚಂದ.

ಲಡಾಖ್‌, ಜಮ್ಮು ಕಾಶ್ಮೀರ
ಇಲ್ಲಿ ಮಳೆಗಾಲದಲ್ಲಿ ಇತರ ಭಾಗಗಳಂತೆ ಅಧಿಕ ಮಳೆಯಿರುವುದಿಲ್ಲ. ಆದ್ದರಿಂದಲೇ ಈ ಸಮಯದಲ್ಲಿ ಇಲ್ಲಿನ ಬೌದ್ಧ ಸ್ತೂಪಗಳನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ನೋಡುವುದು ಸೂಕ್ತ. 17ನೇ ಶತಮಾನದ ಟಿಬೇಟ್‌ ಶೈಲಿಯಲ್ಲಿ ಕಟ್ಟಿರುವ ಲೇನ್‌ಪ್ಯಾಲೇಸ್‌ ಅದ್ಭುತವಾಗಿರುವಂಥದ್ದು. 800 ವರ್ಷ ಪುರಾತನವಾದ ಕಾಳೀ ಮಂದಿರ ಸಹ ಸುಂದರ. ಹೈಕಿಂಗ್‌, ಪ್ಯಾರಾಗ್ಲೆ„ಂಡಿಂಗ್‌ ಮೊದಲಾದ ಸಾಹಸ ಕ್ರೀಡೆಗಳಿಗೆ ಇದು ಉತ್ತಮ ಪ್ರದೇಶ. ಇಲ್ಲಿನ ಸುಬ್ರಾ ಕಣಿವೆ ಹಾಗೂ ಇಂಡಸ್‌ ನದಿಯು ಮಳೆಗಾಲದಲ್ಲಿ ವಿಶಿಷ್ಟ ಸೊಬಗಿನಿಂದ  ತುಂಬಿರುತ್ತವೆ. ಸೆಪ್ಟಂಬರ್‌ನಲ್ಲಿ ಮೊದಲ ಎರಡು ವಾರ ಇಲ್ಲಿ “ಲಡಾಖ್‌ ಫೆಸ್ಟಿವಲ್‌’ ಎಂಬ ಮೇಳ ನಡೆಯುತ್ತದೆ. ಈ ಸಮಯದಲ್ಲಿ ಜಾನಪದೀಯ ನೃತ್ಯ, ಗೀತೆ, ಗಾಯನ ಹಾಗೂ ವಸ್ತುಪ್ರದರ್ಶನ ಇತ್ಯಾದಿಗಳು ಇರುತ್ತದೆ. ಈ ಸಮಯದಲ್ಲಿ ಭೇಟಿಕೊಡುವ ಜನರು ಹೆಚ್ಚು.

ಮನ್ನಾರ್‌ ಕೇರಳ
ಕೇರಳದ ಹಸಿರಿನಿಂದ ಸಮೃದ್ಧವಾದ ಕಣಿವೆ, ನದಿ, ಬೆಟ್ಟ-ತೊರೆ-ತರುಗಳ ಶ್ರೀಮಂತ ಸೌಂದರ್ಯದ ಮನ್ನಾರ್‌ ಮಳೆಗಾಲದ ಉತ್ತಮ ಪ್ರವಾಸಿ ತಾಣ. ಇಲ್ಲಿನ ಚಹಾ ತೋಟಗಳ ಸೌಂದರ್ಯ ಅದ್ಭುತವಾಗಿದೆ. ಆಗಸ್ಟ್‌ ತಿಂಗಳಲ್ಲಿ ಈ ತಾಣಗಳ ಸೌಂದರ್ಯ ನಯನ ಮನೋಹರವಾದುದರಿಂದ ಈ ಸಮಯದಲ್ಲಿ ಟೂರ್‌ ಉತ್ತಮ.

ಚಿರಾಪುಂಜಿ
ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ “ಟ್ರೆಕ್ಕಿಂಗ್‌ ಟ್ರಿಪ್‌’ ಸಾಹಸವಂತರಿಗೆ ಉತ್ತಮ. ಬಯಲು ಬೆಟ್ಟಗಳ ಸೌಂದರ್ಯದೊಂದಿಗೆ ಮೇಘಾಲಯ ಚಹಾ ಹೀರುತ್ತಾ ಆನಂದಿಸುವುದು, ಡಬಲ್‌ ಡೆಕ್ಕರ್‌ ಮರದ ಬ್ರಿಜ್‌ನ ಮೇಲೆ ನಡೆಯುತ್ತಾ ಸಾಗುವುದು- ಮಳೆಗಾಲಕ್ಕೆ ಮುದ ನೀಡುತ್ತದೆ.

ಕೊಡೈಕನಾಲ್‌, ತಮಿಳುನಾಡು
ಈ ಪರ್ವತದ ತಪ್ಪಲು ಪ್ರದೇಶ, ಮಧ್ಯಮ ಪ್ರಮಾಣದಲ್ಲಿ ಮಳೆ ಹೊಂದಿದ್ದರೂ ಮೋಡ ಹಾಗೂ ಬೆಟ್ಟಗಳ ನಡುವೆ ಆಗಾಗ್ಗೆ ಇಣುಕುವ ಸೂರ್ಯ, ಬೆಳ್ಳಂಬೆಳಗಿನ ಇಬ್ಬನಿ, ಶೀತಲ ಕುಳಿರ್ಗಾಳಿ ಕಣ್ತಂಪು ನೀಡುವ ಕಣಿವೆಗಳು, ಝರಿಗಳು, ಸರೋವರ ಇವೆಲ್ಲವುಗಳಿಂದ ಕೂಡಿದ ಕೊಡೈಕನಾಲ್‌ ಆಗಸ್ಟ್‌ ತಿಂಗಳಲ್ಲಿ ಪ್ರವಾಸಕ್ಕೆ ಬಲು ಯೋಗ್ಯ.

ಮಸ್ಸೂರಿ ಉತ್ತರಾಖಂಡ‌
ಹಿಮಾಲಯದ ತಳದ ಗಢವಾಲ್‌ ಭಾಗದ ಮಸ್ಸೂರಿ ಆಗಸ್ಟ್‌ನಲ್ಲಿ ವಿಹರಿಸಲು ಯೋಗ್ಯ. ಡೆಹ್ರಾಡೂನ್‌ನಿಂದ ಮಸ್ಸೂರಿಗೆ ಸಂಚಾರ ಮಾಡಿದರೆ ಹಿಮಾಲಯದ ವಿಹಂಗಮ ನೋಟ ಕಣ್‌ ತುಂಬುತ್ತದೆ. 

ನೀರಿನ ಜಲಪಾತಗಳು ಹಾಗೂ ನಾಗದೇವತಾ ದೇವಾಲಯ, ಚಂದದ ಚರ್ಚ್‌ಗಳು ದರ್ಶಿಸಲು ಯೋಗ್ಯವಾಗಿವೆ.

ಪಾಂಡಿಚೇರಿ
ಮಳೆಗಾಲದಲ್ಲಿ ಪಾಂಡಿಚೇರಿಯಲ್ಲಿ ಉಷ್ಣತೆ ಕಡಿಮೆಯಾಗುವುದರಿಂದ ಮಳೆಗಾಲದ ರಜೆಯ ಮಜಾ ಸವಿಯಲು ಇದು ಯೋಗ್ಯ. ಎಲ್ಲೆಡೆಯೂ ಪಸರಿಸಿರುವ ಕಾಫಿ ತೋಟಗಳು ಮುಖ್ಯ ಆಕರ್ಷಣೆ. ಮ್ಯೂಸಿಯಂ, ಫ್ರೆಂಚ್‌ ವಾರ್‌ ಮೆಮೋರಿಯಲ್‌, ಬೀಚ್‌ಗಳು ಬೊಟಾನಿಕಲ್‌ ಗಾರ್ಡನ್‌ ಇಲ್ಲಿನ ಮುಖ್ಯ ಆಕರ್ಷಣೆ.

ಕೊಡಗು ಕರ್ನಾಟಕ
ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಕೊಡಗಿನಲ್ಲಿ ಹಸಿರಿನಿಂದ ಆವೃತವಾದ ಬೆಟ್ಟಗಳು ಇಲ್ಲಿನ ತೋಟಗಳು, ಕಾವೇರಿ ನದಿಯ ವೈಭವ, ನೀರಿನ ಜಲಪಾತ ಪರಮಾನಂದಕರ. ಸಾಹಸ ಕ್ರೀಡೆ ಟ್ರೆಕ್ಕಿಂಗ್‌, ರಿವರ್‌ ರ್ಯಾಫ್ಟಿಂಗ್‌ನಂತಹ ಕ್ರೀಡೆಗಳಿಗೆ ಆಗಸ್ಟ್‌ ತಿಂಗಳು ಉತ್ತಮ.

ಮಹಾಬಲೇಶ್ವರ, ಮಹಾರಾಷ್ಟ್ರ
ಸತಾರಾ ಜಿಲ್ಲೆಯು ಮಹಾರಾಷ್ಟ್ರದ ಮಹಾಬಲೇಶ್ವರ ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ದೊಡ್ಡದಾದ ಹಿಲ್‌ಸ್ಟೇಷನ್‌ ಆಗಿದೆ. ಆಗಸ್ಟ್‌ ಇಲ್ಲಿ ಪ್ರವಾಸಯೋಗ್ಯ ಕಾಲ.

ಹೂಗಳ ಕಣಿವೆ (ವ್ಯಾಲಿ ಆಫ್ ಫ್ಲವರ್)
ಉತ್ತರಾಖಂಡದಲ್ಲಿನ ಈ ಸುಂದರ ಕಣಿವೆ, ಮಳೆಗಾಲದಲ್ಲಿ ಅರಳಿ ಮುಗುಳ್ನಗುವ ಹೂಗಳ ಸಾಲುಗಳಿಂದಾಗಿ ವೈವಿಧ್ಯಮಯ ಪ್ರಾಣಿ, ಪಶು-ಪಕ್ಷಿಗಳಿಂದಲೂ ಕೂಡಿದ್ದು ಆಗಸ್ಟ್‌ನಲ್ಲಿ ಪ್ರವಾಸಯೋಗ್ಯ.

ಗೋವಾ
ಆಗಸ್ಟ್‌ನಲ್ಲಿ ಮಳೆಯ ನಡುವೆಯೂ ಪ್ರಕೃತಿ ವೀಕ್ಷಣೆಗೆ ಗೋವಾ ಪ್ರವಾಸಗೈದರೆ ಉತ್ತಮ. ಈ ಸಮಯದಲ್ಲಿ ಮಳೆಯೂ ಇದ್ದು, ಬಿಸಿಲೂ ಟಿಸಿಲೊಡೆದು ಉಲ್ಲಾಸಕರ ಹವಾಮಾನವಿರುತ್ತದೆ. ಬೀಚ್‌ಗಳು, ದೇವಾಲಯಗಳು, ಟ್ರೆಕ್ಕಿಂಗ್‌ ಪ್ರದೇಶಗಳು ಇಲ್ಲಿನ ಆಕರ್ಷಣೆ.

ಹೀಗೆ ಮಳೆಗಾಲಕ್ಕೆ ಮುದ ತರಲು ಪ್ರವಾಸವೂ ಜೊತೆಗಿದ್ದರೆ ಚೆನ್ನ .

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.