ಮಕ್ಕಳೊಂದಿಗೆ ಮಕ್ಕಳಂತೆ ಆಡಿ…


Team Udayavani, Aug 3, 2018, 6:00 AM IST

s-5.jpg

ಗಂಡ ಇನ್ನೂ ಆಫೀಸಿನಿಂದ ಬಂದಿಲ್ಲ. ಸೋಫಾದ ಮೇಲೆ ಟಿವಿ ನೋಡುತ್ತಲೋ, ಮೊಬೈಲ್‌ನ ಸ್ಕ್ರೀನ್‌ ಅನ್ನು ಮೇಲಿಂದ ಕೆಳಕ್ಕೆ ಜಾರಿಸುತ್ತಲೋ ಕೂತಿರುತ್ತೀರಿ. ತಲೆಯೆಲ್ಲ ಆ ಡಿಜಿಟಲ್‌ ಪ್ರಪಂಚದೊಳಗೇ ಕಳೆದುಹೋಗಿದೆ. ಅಷ್ಟೊತ್ತಿಗೆ ಮಗಳು ಕರೀತಾಳೆ: “”ಅಮ್ಮಾ , ಬಾ ಚೆಸ್‌ ಆಡೋಣ”. ಆ ಪುಟಾಣಿ ಕರೆಯುವುದನ್ನು ನೋಡಿ, ನಿಮಗೆ ಥ್ರಿಲ್‌ ಅನ್ನಿಸುವುದೇ ಇಲ್ಲ. ಮಗಳು ಚದುರಂಗದಾಟ ಕಲಿತಿದ್ದೇ ಮೊನ್ನೆ ಮೊನ್ನೆ. ಕುದುರೆ ಯಾವುದು, ಆನೆ ಯಾವುದು, ಸೈನಿಕ ಯಾವುದೆನ್ನುವ ಅವಳ ಗೊಂದಲ ಬಗೆಹರಿದೇ ಇಲ್ಲ. ಆಟದುದ್ದಕ್ಕೂ ತಲೆ ತಿನ್ತಾಳೆ. ಹತ್ತಾರು ಕಾಯಿನ್‌ ದಾಟಿಸುವ ಹೊತ್ತಿಗೆ ಸೋಲುತ್ತಾಳೆ. ಆಟದಲ್ಲಿ ಒಂದು ಪೈಪೋಟಿ ಇರೋಲ್ಲ. ಮನರಂಜನೆ ದಕ್ಕುವುದೇ ಇಲ್ಲ. ಇವೆಲ್ಲವನ್ನೂ ಅಂದಾಜಿಸಿ ನೀವು ಹೇಳುತ್ತೀರಿ; “”ಇಲ್ಲಾ ಪುಟ್ಟಾ… ಇವತ್ತು ನನಗೆ ಯಾಕೋ ಮೂಡ್‌ ಇಲ್ಲ. ನೀನೇ ಏನಾದ್ರೂ  ಆಡು ಹೋಗು”. ಈ ಮಾತು ಕೇಳುತ್ತಿದ್ದಂತೆಯೇ ಪುಟಾಣಿ ಸಪ್ಪಗಾಗುತ್ತಾಳೆ.

ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ! ಈಗ ನಿಮ್ಮ ಮಗಳು ಆಡುವ ಆಟವನ್ನು ನೀವು  ಬಾಲ್ಯದಲ್ಲೇ ಆಡಿರುತ್ತೀರಿ. ಅದೇ ಆಟವನ್ನೇ ಪುಟಾಣಿಯೊಂದಿಗೆ ಆಡುವುದು ನಿಮಗೆ ಬೋರ್‌ ವಿಚಾರವೇ ಇದ್ದಿರಬಹುದು. ಆದರೆ, ಮಗಳ ಆಲೋಚನಾ ಶಕ್ತಿಯನ್ನು ವಿಸ್ತರಿಸಲು, ಒಳನೋಟಗಳನ್ನು ಬೆಳೆಸಲು ಆಕೆಯೊಂದಿಗೆ ನೀವು ಕೆಲ ಹೊತ್ತಾದರೂ ಕಳೆಯಲೇಬೇಕು. ಮಗಳಿಗೋಸ್ಕರ ಎಂಥ ಕೆಲಸವಿದ್ದರೂ ಸ್ವಲ್ಪ ಸಮಯವನ್ನು ಅವಳಿಗೆ ಮೀಸಲಿಡಬೇಕು. ಅರ್ಥಮಾಡಿಕೊಳ್ಳಿ. ಮಗಳೊಂದಿಗೆ ಮುಖಾಮುಖೀಯಾಗಿ ಇಂಥ ಆಟಗಳನ್ನು ಆಡುವುದರಿಂದ ಆಕೆಯ ಬೌದ್ಧಿಕ ಪ್ರಪಂಚ ವಿಕಾಸವಾಗುತ್ತೆ. ಜತೆಗೆ ನಿಮ್ಮ ಮನೆ-ಮನಸ್ಸು ಎರಡೂ  ಲವಲವಿಕೆಯಿಂದಿರುತ್ತದೆ.

ನೀವು ಸೋಲೊಪ್ಪಿಕೊಳ್ಳಿ…
ಮಕ್ಕಳ ಜತೆ ಆಟಕ್ಕೆ ಕುಳಿತಾಗ ನೀವೇ ಪಂಟರ್‌. ಮಕ್ಕಳೊಂದಿಗೆ ಮಕ್ಕಳಂತೆ ಆಡಿ. ನಿಮ್ಮನ್ನು ಮಣಿಸುವಷ್ಟು ಬೌದ್ಧಿಕವಾಗಿ ಅವರು ಸರಿಸಮಾನರಲ್ಲ. ಆದರೆ, ನೀವು ಗೆಲ್ಲುತ್ತಾ ಹೋದಂತೆ, ಅವುಗಳಿಗೆ ಆ ಆಟದ ಮೇಲೆ ಆಸಕ್ತಿ ಕಳೆದುಹೋಗುವ ಅಪಾಯವೂ ಇದ್ದೀತು. ಈ ಕಾರಣದಿಂದ, ನೀವು ಬೇಕು ಬೇಕಂತಲೇ ತಪ್ಪು ಮಾಡುತ್ತಾ, ಸೋಲುತ್ತಾ ಹೋಗಿ. ನಿಮ್ಮ ಮೇಲಿನ ಒಂದು ಪುಟ್ಟ ಗೆಲುವೂ ಅವುಗಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ನಡುವೆ ಒಂದೊಂದು ಸಲ ಸೋಲುವುದನ್ನೂ ಕಲಿಸಿ. ಆಗ ಅವರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುತ್ತಾರೆ.

ನೀವೇ ಅವರಿಗೆ ಪಾಠ!
ಮಕ್ಕಳು ಬಿಳಿ ಹಾಳೆ ಇದ್ದಂತೆ. ನೀವು ಚುಕ್ಕಿ ಇಟ್ಟ ಹಾಗೆ, ಅವರು ಚಿತ್ತಾರವಾಗುತ್ತಾರೆ. ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ಚುರುಕಾಗುತ್ತವೆ ಎನ್ನುವುದು ಎಲ್ಲ ಮನಃಶಾಸ್ತ್ರಜ್ಞರು ಹೇಳುವಂಥ ಮಾತು. ನಿಮ್ಮ ಪ್ರತಿ ಹೆಜ್ಜೆ , ನಡತೆಗಳನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅವರ ಪಾಲಿಗೆ ನೀವೇ ದೊಡ್ಡ ಸಿಲೆಬಸ್‌. ಹಾಗಿದ್ದೂ , ನೀವು ಸುಮ್ಮನೆ ಕುಳಿತರೆ, ಅವುಗಳ ಕಲಿಕೆಯೇ ನಿಂತುಹೋಗುತ್ತದೆ. ಅವುಗಳೊಂದಿಗೆ ಆಡುವಾಗ, ಪುಟ್ಟ ಪುಟ್ಟ ಸಂಗತಿಗಳ ಬಗ್ಗೆ ವಿಚಾರಗಳನ್ನು ಹೇಳುತ್ತಾ ಇರಿ. ಮಕ್ಕಳು ಅದನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತವೆ. 

ಮಕ್ಕಳೊಂದಿಗೆ ನೀವೇಕೆ ಆಡಬೇಕು?
.ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ನಿಮ್ಮಿಂದ ಹೊಸ ವಿಚಾರಗಳನ್ನು ಕಲಿಯುತ್ತವೆ.

.ಆಟದಲ್ಲಿ ಮಕ್ಕಳೆದುರು ಸೋಲೊಪ್ಪಿಕೊಳ್ಳಿ. ಆ ಒಂದೇ ಒಂದು ಗೆಲುವಿನಿಂದ ಅವುಗಳ ಕಲಿಯುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ.

.ಮಕ್ಕಳು ಬಿಳಿ ಹಾಳೆ ಇದ್ದ ಹಾಗೆ. ನೀವು ಚುಕ್ಕಿ ಇಟ್ಟಂತೆ, ಅವರು ಚೆಂದದ ಚಿತ್ತಾರವಾಗುತ್ತಾರೆ ಎಂಬುದು ತಿಳಿದಿರಲಿ.

.ಹೊಸ ಪದ, ಹೊಸ ವಿಚಾರ, ವಿಭಿನ್ನ ಒಳನೋಟಗಳನ್ನು ಮಕ್ಕಳು ಕಲಿಯುತ್ತವೆ.

.ದೊಡ್ಡವರನ್ನು ಹೇಗಾದರೂ ಮಣಿಸಬೇಕೆಂಬ ಅವುಗಳ ಛಲವೇ, ಬದುಕಿನ ಹೋರಾಟವನ್ನು ಕಲಿಸುತ್ತದೆ.

.ಮಕ್ಕಳೊಂದಿಗೆ ನೀವು ಕಳೆದುಹೋದಷ್ಟು , ನಿಮ್ಮ ಒತ್ತಡವೂ ಕರಗಿಹೋಗುತ್ತದೆ.

ಸ್ಮಿತಾ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.