ಮಳೆಗಾಲದ ಗರಿಗರಿ ತಿಂಡಿಗಳು


Team Udayavani, Aug 17, 2018, 6:00 AM IST

c-24.jpg

ಮಳೆಗಾಲದ ಅಬ್ಬರ ಈ ವರ್ಷ ಬಿರುಸಾಗಿದೆ. ಹೊರಗೆ ಹೊಟೇಲುಗಳಿಗೆ ಹೋಗಿ ಕರಿದ ತಿಂಡಿ ತಿನ್ನುವ ಬದಲು ಮನೆಯಲ್ಲಿಯೇ ಮಾಡಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಮಿತವ್ಯಯವೂ ಹೌದು.

ಅಲಸಂಡೆಕಾಳು ವಡೆ
ಬೇಕಾಗುವ ಸಾಮಗ್ರಿ:
1 ಕಪ್‌ ಅಲಸಂಡೆಕಾಳು, 1/2 ಕಪ್‌ ಈರುಳ್ಳಿ ಚೂರು, 2 ಚಮಚ ಕೊತ್ತಂಬರಿಸೊಪ್ಪು , 1 ಎಸಳು ಕರಿಬೇವು, 1/2 ಚಮಚ ಜೀರಿಗೆ, 2-3 ಹಸಿಮೆಣಸು, ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಲಸಂಡೆ ಕಾಳನ್ನು ರಾತ್ರಿಯಿಡಿ ನೆನೆಸಿ. ನಂತರ ಮಾರನೆ ದಿನ ಮಿಕ್ಸಿಗೆ ಹಾಕಿ ತೊಳೆದ ಅಲಸಂಡೆ ಕಾಳು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ. ನಂತರ ಈರುಳ್ಳಿ ಚೂರು, ಕೊತ್ತಂಬರಿ ಸೊಪ್ಪು , ಜೀರಿಗೆ, ಕರಿಬೇವಿನೆಲೆ, ಹಸಿಮೆಣಸು ಸàರಿಸಿ ತರಿಯಾಗಿ ಪುಡಿ ಮಾಡಿ. ಮೇಲಿನ ಮಿಶ್ರಣಕ್ಕೆ ಹಾಕಿ. ಉಪ್ಪು ಹಾಕಿ ಸರಿಯಾಗಿ ಬೆರೆಸಿ. ನಂತರ ಉಂಡೆ ಮಾಡಿ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಹುರಿದು ತೆಗೆಯಿರಿ. ಈಗ ಗರಿ ಗರಿ ವಡೆ ಸವಿಯಲು ಸಿದ್ಧ.

ಗರಿ ಗರಿ ರವೆ ಬೋಂಡ 
ಬೇಕಾಗುವ ಸಾಮಗ್ರಿ:
1 ಕಪ್‌ ಚಿರೋಟಿ ರವೆ, 1 ಕಪ್‌ ಮೊಸರು, 1/4 ಕಪ್‌ ಈರುಳ್ಳಿ ಚೂರು, 1 ಎಸಳು ಕರಿಬೇವು, 2-3 ಹಸಿಮೆಣಸು, 2 ಚಮಚ ಕೊತ್ತಂಬರಿ ಸೊಪ್ಪು , ಚಿಟಿಕೆ ಇಂಗು, 1/4 ಚಮಚ ಶುಂಠಿ ಚೂರು, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಚಿರೋಟಿ ರವೆ, ಮೊಸರು, ಈರುಳ್ಳಿ ಚೂರು, ಕೊತ್ತಂಬರಿ ಸೊಪ್ಪು, ಇಂಗು ಹಾಕಿ 1/2 ಗಂಟೆ ನೆನೆಸಿ. ನಂತರ ಕರಿಬೇವು, ಹಸಿಮೆಣಸು, ಶುಂಠಿ ತರಿಯಾಗಿ ರುಬ್ಬಿ ಮೇಲಿನ ಮಿಶ್ರಣಕ್ಕೆ ಹಾಕಿ. ಉಪ್ಪು ಹಾಕಿ ಬೆರೆಸಿ ಇಡ್ಲಿಗಿಂತ ಸ್ವಲ್ಪ ಹಿಟ್ಟು ದಪ್ಪವಿರಲಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಈಗ ಗರಿಗರಿ ಬೋಂಡ ತಿನ್ನಲು ಸಿದ್ಧ.

ಗೆಣಸು ಪೋಡಿ
ಬೇಕಾಗುವ ಸಾಮಗ್ರಿ: 1 ಕಪ್‌ ಉರುಟಾಗಿ ಹೆಚ್ಚಿದ ಗೆಣಸು, ಚಿಟಿಕೆ ಇಂಗು, 1/2 ಕಪ್‌ ಖಾರದ ಪುಡಿ, 1 ಕಪ್‌ ಕಪ್‌ ಅಕ್ಕಿಹಿಟ್ಟು , ಕರಿಯಲು ಬೇಕಾದಷ್ಟು ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಹಿಟ್ಟು, ಖಾರದ ಪುಡಿ, ಇಂಗು, ಉಪ್ಪು , ಸ್ವಲ್ಪ ನೀರು ಹಾಕಿ ಪೋಡಿ ಹಿಟ್ಟಿನ ಹದಕ್ಕೆ ಕಲಸಿ. ಗೆಣಸನ್ನು ತೊಳೆದು ತೆಳ್ಳಗೆ ಉರುಟಾಗಿ ತುಂಡು ಮಾಡಿ. ನಂತರ ಮಾಡಿಟ್ಟ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. ಈಗ ರುಚಿಯಾದ ಪೋಡಿಯನ್ನು ಸವಿದು ನೋಡಿ.

ಸ್ವೀಟ್‌ಕಾರ್ನ್ ಅಂಬೊಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಸಿಹಿ ಜೋಳ, 1-2 ಹಸಿಮೆಣಸು, 1 ಕಪ್‌ ಕಡಲೆಹಿಟ್ಟು , 2 ಚಮಚ ಅಕ್ಕಿಹಿಟ್ಟು , 1/4 ಕಪ್‌ ತೆಂಗಿನತುರಿ, 1 ಚಮಚ ಕೊತ್ತಂಬರಿಸೊಪ್ಪು , 1/4 ಚಮಚ ಶುಂಠಿ ಪೇಸ್ಟ್‌ , ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಸಿಹಿ ಜೋಳ, ಹಸಿಮೆಣಸು ಮಿಕ್ಸಿಗೆ ಹಾಕಿ ತರಿಯಾಗಿ ರುಬ್ಬಿ. ನಂತರ ಕಡಲೆಹಿಟ್ಟು , ಅಕ್ಕಿಹಿಟ್ಟು, ತೆಂಗಿನತುರಿ, ಕೊತ್ತಂಬರಿ ಸೊಪ್ಪು , ಶುಂಠಿ ಪೇಸ್ಟ್‌ , ಉಪ್ಪು ಸೇರಿಸಿ ಸರಿಯಾಗಿ ಬೆರೆಸಿ. ನಂತರ ಉಂಡೆ ಮಾಡಿ. ನಂತರ ಅಂಬೊಡೆಯಂತೆ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಗರಿ ಗರಿಯಾದ ಅಂಬೊಡೆ ನಮ್ಮ ಬಾಯಿ ರುಚಿ ಹೆಚ್ಚಿಸಲು ಸಿದ್ಧ.

ಮದ್ದೂರು ವಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಅಕ್ಕಿಹಿಟ್ಟು , 1/4 ಕಪ್‌ ಚಿರೋಟಿ ರವೆ, ತರಿಯಾಗಿ ಪುಡಿಮಾಡಿದ 2 ಚಮಚ ನೆಲಗಡಲೆ ಬೀಜ, 1/4 ಚಮಚ ಓಮ, ಚಿಟಿಕೆ ಇಂಗು, 1-2 ಹಸಿಮೆಣಸು, 1/4 ಕಪ್‌ ಈರುಳ್ಳಿ ಚೂರು, 1 ಚಮಚ ಕೊತ್ತಂಬರಿಸೊಪ್ಪು , ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬೌಲ್‌ಗೆ ಅಕ್ಕಿಹಿಟ್ಟು, ಚಿರೋಟಿ ರವೆ, ಹುರಿದು ತರಿಯಾಗಿ ಮಾಡಿದ ನೆಲಗಡಲೆ ಬೀಜ, ಉಪ್ಪು , ಓಮ, ಹಸಿಮೆಣಸು, ಇಂಗು, ನೀರುಳ್ಳಿ ಚೂರು, ಕೊತ್ತಂಬರಿ ಸೊಪ್ಪು , ಸ್ವಲ್ಪ ಬಿಸಿ ಮಾಡಿದ 3-4 ಚಮಚ ಎಣ್ಣೆ , ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿ. ನಂತರ ಉಂಡೆ ಮಾಡಿ ವಡೆಯಂತೆ ತಟ್ಟಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ರುಚಿಯಾದ ಮದ್ದೂರು ವಡೆಯನ್ನು ಸವಿಯಿರಿ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.