CONNECT WITH US  

ಪ್ರಿಯಾಂಕಾ ಕಲ್ಯಾಣಂ

ಕೊನೆಗೂ ಪ್ರಿಯಾಂಕಾ ಚೋಪ್ರಾ ಸಾಂಸಾರಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದಾಳೆ. ಅಮೆರಿಕದ ಗಾಯಕ, ಗೀತ ರಚನೆಕಾರ, ನಿರ್ಮಾಪಕ ಹೀಗೆ ಬಹುಮುಖೀ ಪ್ರತಿಭಾವಂತ ನಿಕ್‌ ಜೋನಾಸ್‌ ಜತೆಗೆ ಪ್ರಿಯಾಂಕಾ ನಿಶ್ಚಿತಾರ್ಥ ಕಳೆದ ವಾರ ನೆರವೇರಿದ್ದು, ಇದರೊಂದಿಗೆ ಪ್ರಿಯಾಂಕಾ ಬಾಲಿವುಡ್‌ನ‌ ಮ್ಯಾರೀಡ್‌ ಆ್ಯಕೆಸ್‌ ಕ್ಲಬ್‌ಗ ಸೇರ್ಪಡೆಯಾಗಲು ದಿನಗಣನೆ ಪ್ರಾರಂಭವಾಗಿದೆ.

ಪ್ರಿಯಾಂಕಾಳ ಮದುವೆಯಷ್ಟು ಕುತೂಹಲ ಕೆರಳಿಸಿದ ಮದುವೆ ಬಾಲಿವುಡ್‌ನ‌ಲ್ಲಿ ಈ ಹಿಂದೆ ನಡೆದಿರಲಿಲ್ಲ. ಸುಮಾರು 10 ವರ್ಷಗಳಿಂದ ಪ್ರಿಯಾಂಕಾಳ ಮದುವೆ ಸುದ್ದಿ ಬಾಲಿವುಡ್‌ನ‌ ಗಾಸಿಪ್‌ಪ್ರಿಯರಿಗೆ ರಸಗವಳವಾಗಿತ್ತು. ಅದರಲ್ಲೂ ಪ್ರಿಯಾಂಕಾ ಅಂತರಾಷ್ಟ್ರೀಯ ಖ್ಯಾತಿಗೇರಿದ ಬಳಿಕ ದಿನಕ್ಕೊಬ್ಬರ ಜತೆಗೆ ಅವಳ ಹೆಸರು ತಳಕು ಹಾಕಿತ್ತು. ಆದರೆ, ತನ್ನ ಮನಗೆದ್ದವನ ವಿಚಾರದಲ್ಲಿ ಮಾತ್ರ ಪ್ರಿಯಾಂಕಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ನಿಕ್‌ ಜೋನಾಸ್‌ ಜತೆಗೆ ಪ್ರಿಯಾಂಕಾ ಡೇಟಿಂಗ್‌ ಮಾಡುತ್ತಿರುವ ವಿಚಾರ ಬಹಿರಂಗವಾದದ್ದು ಕೆಲವು ತಿಂಗಳ ಹಿಂದೆಯಷ್ಟೆ. ಆದರೆ ಅವರು ಪರಸ್ಪರ ಆಕರ್ಷಿತರಾಗಿ ವರ್ಷಗಳೇ ಕಳೆದಿವೆ. ಪ್ರಿಯಾಂಕಾ ಹಾಲಿವುಡ್‌ಗೆ ಹಾರಿದ ಬೆನ್ನಿಗೆ ಈ ಅನುರಾಗ ಅರಳಿತ್ತು. ಹಾಲಿವುಡ್‌ ಚಿತ್ರ, ಕ್ವಾಂಟಿಕೊ ಸೀರಿಯಲ್‌, ಬಾಲಿವುಡ್‌ನ‌ ಕಮಿಟ್‌ಮೆಂಟ್‌ಗಳನ್ನೆಲ್ಲ ಮುಗಿಸಿದ ಬಳಿಕ ಪ್ರಿಯಾಂಕಾ ಮದುವೆಗೆ ತಯಾರಾಗಿದ್ದಾಳೆ. 

ವಿದೇಶಿ ವರನಾದರೂ ನಿಶ್ಚಿತಾರ್ಥ ಭಾರತೀಯ ಶೈಲಿಯಲ್ಲೇ ನೆರವೇರಿದೆ. ಮನೆಯಲ್ಲಿ ಸಾಂಪ್ರದಾಯಿಕ ನಿಶ್ಚಿತಾರ್ಥ ನಡೆಸಿದ ಬಳಿಕ ಪಂಚತಾರಾ ಹೊಟೇಲ್‌ನಲ್ಲಿ ಪಾರ್ಟಿ ಇತ್ತು. ಈ ಸಂದರ್ಭದಲ್ಲಿ ಪ್ರಿಯಾಂಕಾ ಧರಿಸಿದ ನಿಶ್ಚಿತಾರ್ಥ ಉಂಗುರ ಗಮನ ಸೆಳೆದಿದೆ. ಇದು ಅಂತಿಂಥ ಉಂಗುರವಲ್ಲ, ಬರೋಬ್ಬರಿ 3 ಕೋ. ರೂ. ಬೆಲೆಬಾಳುವ ವಜ್ರದುಂಗುರವಂತೆ. ಈ ವರ್ಷವೇ ಮದುವೆಯಾಗುವ ಸನ್ನಾಹದಲ್ಲಿದ್ದಾಳೆ ಪ್ರಿಯಾಂಕಾ.

ಅಂದ ಹಾಗೆ ಪ್ರಿಯಾಂಕಾ ನಿಕ್‌ ಜೋನಾಸ್‌ಗಿಂತ 11 ವರ್ಷ ದೊಡ್ಡವಳಂತೆ.

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top