ಮನೆಯಲ್ಲಿಯೇ ತೈಲತಯಾರಿ

Team Udayavani, Sep 21, 2018, 6:00 AM IST

z-19.jpg

ಗ್ರಾಮೀಣ ಭಾಗದಲ್ಲಿ ಹಿಂದೆ ಹಲವಾರು ಕಾಯಿಗಳನ್ನು ಉಪಯೋಗಿಸಿ ಎಣ್ಣೆಯನ್ನು ತಯಾರಿಸುತ್ತಿದ್ದರು, ಮುಖ್ಯವಾಗಿ, ಧೂಪದ ಕಾಯಿ, ಹೆಬ್ಬಲಸಿನ ಬೀಜ, ಹರಳು ಗಿಡದ ಕಾಯಿ ಇತ್ಯಾದಿ.

ಕ್ರಮೇಣ ಆಧುನಿಕ ಜೀವನ ಪದ್ಧತಿ, ವೇಗದ ಜೀವನಕ್ರಮಗಳಿಂದ ಇವೆಲ್ಲ ಕಣ್ಮರೆಯಾದವು. ಆದರೂ, ಗ್ರಾಮೀಣ ಭಾಗದಲ್ಲಿ ಈಗಲೂ ಒಂದಿಷ್ಟು ಜನ ಅಂತಹ ಪದ್ಧತಿಯನ್ನು ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಚಾರ. ಅಂಗಡಿಯಲ್ಲಿ ದುಡ್ಡು ಕೊಟ್ಟು ಕಲಬೆರಕೆಯ ಎಣ್ಣೆಯನ್ನು ತಂದು, ತಿಂದು, ಹಣದ ಜೊತೆಗೆ ಆರೋಗ್ಯವನ್ನು  ಕಳೆದುಕೊಳ್ಳುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಹಳೆಯ ಜೀವನ ಪದ್ಧತಿಯೇ ಉತ್ತಮ ಎನಿಸುವುದು ಸುಳ್ಳಲ್ಲ.

ಎಣ್ಣೆ ಎಂದರೆ ಏನು? ದ್ವಂದ್ವಾರ್ಥ ಮಾಡಿಕೊಳ್ಳುವ ಈ ಕಾಲದಲ್ಲಿ, ತೆಂಗಿನೆಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ತಾಳೆಎಣ್ಣೆ, ಬೇವಿನ ಎಣ್ಣೆ, ಬಿರ್ತಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಶೇಂಗಾ ಎಣ್ಣೆ- ಇತ್ಯಾದಿ ಪ್ಯಾಕೆಟ್‌ಗಳಲ್ಲಿ, ಬಾಟಲ…ಗಳಲ್ಲಿ, ಟಿನ್‌ಗಳಲ್ಲಿ, ಕ್ಯಾನ್‌ಗಳಲ್ಲಿ ಬರುವ ಎಣ್ಣೆಗಳ ಹೆಸರು ಹೇಳಿದರೆ ಗುರುತಿಸುವ ಮಟ್ಟದಲ್ಲಿ ಗ್ರಾಹಕರಿದ್ದಾರೆ. ಮೊದಲೆಲ್ಲ ದಿನಸಿ ಅಂಗಡಿಗಳಲ್ಲಿ ಐವತ್ತು ಮಿಲಿ ಲೀಟರ್‌, ನೂರು ಮಿಲಿಲೀಟರ್‌, ಇನ್ನೂರು ಮಿಲಿಲೀಟರ್‌, ಐನೂರು, ಸಾವಿರ ಮಿಲಿಲೀಟರ್‌ನ ಅಳತೆ ಪಾತ್ರೆಗಳಲ್ಲಿ ಎಣ್ಣೆಯನ್ನು ಅಳೆದು, ನಾವು ಮನೆಯಿಂದ ತೆಗೆದುಕೊಂಡು ಹೋಗುವ ಡಬ್ಬಗಳಿಗೆ, ಬಾಟಲ…ಗಳಿಗೆ, ರೈಲು ಚೊಂಬುಗಳಿಗೆ ತುಂಬಿಸಿ ಕೊಡುತ್ತಿದ್ದರು. ಆದರೀಗ ಇಂತಹ ವ್ಯವಸ್ಥೆ ಇತ್ತೆಂದರೆ ಮಕ್ಕಳು ನಂಬಲಾರರು. ಯಾಕೆಂದರೆ, ಪ್ಲಾಸ್ಟಿಕ್‌ ಪ್ಯಾಕೆಟ…ಗಳಲ್ಲಿ, ಬಾಟಲ…ಗಳಲ್ಲಿ, ಕ್ಯಾನ್‌ಗಳಲ್ಲಿ, ತಗಡಿನ ಡಬ್ಬಿಗಳಲ್ಲಿ ಈ ವಿವಿಧ ಬಗೆಯ ಎಣ್ಣೆಗಳು ಸಿಗುತ್ತವೆ.

ಈ ನಾನಾ ವಿಧದ ಎಣ್ಣೆಗಳನ್ನು ಮೊದಲೆಲ್ಲ ಪ್ರತಿ ಮನೆಗಳಲ್ಲೂ ಸ್ವಂತಕ್ಕಾಗುವಷ್ಟು ತಯಾರಿಸಿಕೊಳ್ಳುತ್ತಿದ್ದರು. ತೆಂಗಿನೆಣ್ಣೆ, ಹರಳೆಣ್ಣೆ, ಹೊಂಗೆ ಎಣ್ಣೆ, ಬೇವಿನೆಣ್ಣೆ, ಧೂಪದ ಕಾಯಿ ಎಣ್ಣೆ, ಹೆಬ್ಬಲಸಿನ ಬೀಜದ ಎಣ್ಣೆ, ಎಳ್ಳೆಣ್ಣೆ, ಶೇàಂಗಾ ಎಣ್ಣೆ ಹೀಗೆ ಹಲವು ಬಗೆಯ ಎಣ್ಣೆಗಳನ್ನು ಮನೆಯಲ್ಲಿ, ಆಯಾ  ಬೆಳೆಗಳ ಸಮಯದಲ್ಲಿ , ಶ್ರಮವಹಿಸಿ ಮುತುವರ್ಜಿಯಿಂದ ಮಾಡುತ್ತಿದ್ದರು. ಎಲ್ಲ ಬಗೆಯ ತೈಲಗಳು ಔಷಧೀಯ ಗುಣವುಳ್ಳದ್ದಾಗಿ, ಆರೋಗ್ಯದಾಯಕವಾಗಿರುತ್ತಿದ್ದವು. ಮತ್ತು ಬಹೂಪಯೋಗಿಯಾಗಿದ್ದವು.

ಹರಳೆಣ್ಣೆ ತಲೆಕೂದಲ ಪೋಷಣೆಗೆ, ದನದ ಕೆಚ್ಚಲು ಒಡೆದರೆ ಹಚ್ಚಲು, ಹೋರಿಗಳ ಕೋಡಿಗೆ ಉಜ್ಜಲು, ಕಾಲು ಒಡಕಿನಿಂದ ಪಾರಾಗಲು, ಹೊಂಗೆ ಎಣ್ಣೆ ಕಾಡಿಗೆ ತಯಾರಿಸಲು, ಹೆಬ್ಬಲಸಿನ ಎಣ್ಣೆ ಹಲಸಿನ ಹಣ್ಣಿನ ಮುಳ್ಕ ಮಾಡಲು ಬಹು ಉತ್ತಮ. ಜೊತೆಗೆ ಯಾವುದೇ ಖಾದ್ಯ ಕರಿಯಲು ಇದನ್ನು ಬಳಸುತ್ತಿದ್ದರು. ಧೂಪದ ಎಣ್ಣೆಯನ್ನೂ  ಖಾದ್ಯ ತಯಾರಿ, ಒಗ್ಗರಣೆಗೆ, ಮತ್ತು ವಾತದ ನೋವಿಗೆ ಉಪಯೋಗಿಸುತ್ತಿದ್ದರು. ಬಿರ್ತಿ ಎಣ್ಣೆಯನ್ನು ಪಶುಗಳ ಮೂಳೆ ತೊಂದರೆಗೆ ಉಪಯೋಗಿಸುತ್ತಿದ್ದರು.

ಈಗ ಮಳೆಗಾಲ ಕಾಡುಗಳಲ್ಲಿ  ಹೆಚ್ಚಾಗಿ ಸಿಗುವ ಧೂಪದ ಕಾಯಿಯಿಂದ ಎಣ್ಣೆ ತಯಾರಿಸುವ ಸಾಂಪ್ರದಾಯಿಕ ವಿಧಾನವೊಂದನ್ನು ಪರಿಚಯಿಸುತ್ತೇನೆ. ಈ ಎಣ್ಣೆಯನ್ನು ಯಾವುದೇ ಖರ್ಚಿಲ್ಲದೆ ತಯಾರಿಸ ಬಹುದು. ಎಲ್ಲಾ ಎಣ್ಣೆಗಳನ್ನು ಇದೇ ವಿಧಾನದಲ್ಲಿಯೇ  ಮಾಡುವರು ಎನ್ನಬಹುದು.

ಧೂಪದಕಾಯಿ ಎಣ್ಣೆ
ಬೆಳೆದು ಉದುರಿದ ಕೆಂಪಗಿನ ಧೂಪದ ಕಾಯಿಯನ್ನು ಸಂಗ್ರಹಿಸಿ, ಕಲ್ಲು ಅಥವಾ ಮರದ ಕೊರಡು (ಚಿಕ್ಕ ತುಂಡು)ನಿಂದ ಜಜ್ಜಿ ಸಿಪ್ಪೆಯನ್ನು ತೆಗೆಯಬೇಕು. ಅದರ ಒಳಗಿರುವ ಕಾಯಿಯನ್ನು  ಚಿಕ್ಕ ಮರದ ಚೂರಿಯಿಂದ ಕೆರೆದು ಶುಚಿ ಮಾಡಿ ಹೋಳುಗಳಾಗಿಸಿ, ಅದರ ಒಳಗಿರುವ ಸೊಂಡಿಲನ್ನು ಮತ್ತು ಅದರ ಸುತ್ತಲಿರುವ ಲೋಳೆಯ ಅಂಶವನ್ನು ಚೆನ್ನಾಗಿ ತೆಗೆದು ಶುಚಿಮಾಡಬೇಕು.

ದಪ್ಪ ತಳದ ಅಲ್ಯೂಮಿನಿಯಂ ಪಾತ್ರೆಯಲ್ಲಿ ಈ ಎಲ್ಲಾ ಹೋಳುಗಳನ್ನು ತುಂಬಿಸಿ, ಈ ಹೋಳುಗಳು ಸಂಪೂರ್ಣ ಮುಳುಗುವಷ್ಟು ನೀರನ್ನು ಹಾಕಬೇಕು, 15 ರಿಂದ 20 ನಿಮಿಷಗಳಲ್ಲಿ ಈ ಹೋಳುಗಳು ಬೇಯುತ್ತವೆ. ಬೇಯಿಸಿದ ಕಾಯಿಯನ್ನು  ತೆಗೆದು ಕಲ್ಲಿನ ಒರಳು ಅಥವಾ ಕಡೆಯುವ (ರುಬ್ಬುವ) ಕಲ್ಲಿನಲ್ಲಿ ಹಾಕಿ ಕುಟ್ಟಬೇಕು (ಕಡೆಯುವ ಕಲ್ಲನ್ನು ಶುಚಿಯಿಟ್ಟಿರಬೇಕು ಮಸಾಲೆ ಅಂಶ ಇರಬಾರದು) ಕುಟ್ಟಲು ಮರದ ಒನಕೆಯನ್ನೆ ಒಳಸಬೇಕು. 

ಕುಟ್ಟಿದ ನಂತರ ಅದನ್ನು ಪುನಃ ಮೊದಲು ಬೇಯಿಸಿದ ಅಲ್ಯುಮಿನಿಯಂ ಪಾತ್ರೆಯಲ್ಲಿ ಹಾಕಿ, ಸಾಕಷ್ಟು ನೀರನ್ನು ಬೆರೆಸಬೇಕು. ಈ ಮಿಶ್ರಣವನ್ನು ಎರಡು-ಮೂರು ಗಂಟೆಗಳ ಕಾಲ ಮರದ ಸೌಟನ್ನು ಉಪಯೋಗಿಸಿ ತಿರುವುತ್ತ ಕುದಿಸಬೇಕು. ಲೋಹದ ಸೌಟನ್ನು ಉಪಯೋಗಿಸಬಹುದು. ಆದರೆ ಅದು ಕೈ ಸುಡುತ್ತದೆ. ಮರದ ಸೌಟಾದರೆ ಕೈಗೆ ಶಾಖ ತಾಗದು. ಇದು ಹಾಲು ಉಕ್ಕಿದಂತೆ ಉಕ್ಕುತ್ತದೆ. ಹೀಗೆ ಉಕ್ಕಲು ಬಿಡಬಾರದು. ಬೆಂಕಿಯು ಒಂದೇ ಹದದಲ್ಲಿ ಇರುವಂತೆ ನೋಡಿಕೊಳ್ಳುವುದು ಮುಖ್ಯ. 

ಕುದಿಯುವಾಗಲೇ ಮೇಲ್ಭಾಗದಲ್ಲಿ ಎಣ್ಣೆಯ ಅಂಶ ತೇಲುತ್ತದೆ. ಇದನ್ನು ಜಾಗ್ರತೆಯಲ್ಲಿ ತೆಗೆದು ಇನ್ನೊಂದು ದಪ್ಪತಳದ  ಪಾತ್ರೆಯಲ್ಲಿ ಶೇಖರಿಸಿ. ನಂತರ  ನೀರಿನ ಪಸೆ ಆರುವ ತನಕ ಕುದಿಸಬೇಕು. ಈಗ ಧೂಪದಯೆಣ್ಣೆ ರೆಡಿ. ಈ ರೀತಿ ತಯಾರಿಸಿದ ಎಣ್ಣೆಯನ್ನು ಭದ್ರ ಮುಚ್ಚಳವಿರುವ ಅಗಲಬಾಯಿಯ  ಬಾಟಲ್‌ಗ‌ಳಲ್ಲಿ ಶೇಖರಣೆ ಮಾಡಬೇಕು. ಯಾಕೆಂದರೆ, ಈ ಎಣ್ಣೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. ಅದನ್ನು ತೆಗೆಯಲು ಚಮಚ, ಸೌಟು ಒಳಹಾಕಲು ಅನುಕೂಲವಿರುವಂಥ ಡಬ್ಬಗಳನ್ನೇ ಉಪಯೋಗಿಸಬೇಕು. ಉಪಯೋಗಿಸುವಾಗ ನೀರಿನ ಪಸೆ ಈ ಶೇಖರಿಸಿದ ಬಾಟಲಿಯಲ್ಲಿ ಸೇರದಂತೆ ಮುಂಜಾಗ್ರತೆ ಅನುಸರಿಸಬೇಕು. ಇದು ಮನೆಯಲ್ಲೇ ತಯಾರಿಸುವ ಆರೋಗ್ಯಕರ ಧೂಪದೆಣ್ಣೆ ತಯಾರಿಯ ವಿಧಾನ.

ನಿತ್ಯದ ಅಡುಗೆಯ ಒಗ್ಗರಣೆಗೆ ಈ ಎಣ್ಣೆ ಹಾಕುವುದರಿಂದ ವಿಶೇಷ ರುಚಿ. ಹಾಗೆಯೇ ವಿವಿಧ ರೀತಿಯ ಖಾದ್ಯ ಹುರಿಯಲು ಈ ಎಣ್ಣೆ ಬಳಸಬಹುದು. ಹಪ್ಪಳ, ಸಂಡಿಗೆ ಕರಿಯಲೂ ಬಹುದು. ದೋಸೆ ಹುಯ್ಯಲು ಈ ಎಣ್ಣೆ ಉಪಯೋಗಿಸಬಹುದು. ಈ ಎಣ್ಣೆ ವಾತದ ನೋವಿರುವ ಜಾಗಕ್ಕೆ ಲೇಪಿಸಿ ಮಸಾಜ… ಮಾಡಿದರೆ  ರಾಮಬಾಣವಾಗಿ ಕೆಲಸಮಾಡುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್‌ ತೊಂದರೆ ಇರುವವರು ಇದೇ ಎಣ್ಣೆಯನ್ನು ಆಹಾರ ತಯಾರಿಯಲ್ಲಿ ಉಪಯೋಗಿಸಿದರೆ, ಆ ಸಮಸ್ಯೆ ಯಿಂದ ಮುಕ್ತಿ ಪಡೆಯಬಹುದು. ಧೂಪದ ಕಾಯಿ ಬೇಯಿಸಿದ ನೀರನ್ನು  ಚರ್ಮವ್ಯಾಧಿ ಇರುವವರು ಸ್ನಾನ ಮಾಡಿದರೆ, ಕೆಲವು ಚರ್ಮ ರೋಗ ಗುಣವಾಗುತ್ತದೆ. ಕೆಲವು ಉಲ್ಬಣಿಸಲೂಬಹುದು. ಅನುಭವಿಗಳ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ.  ಧೂಪದಕಾಯಿ ಚಚ್ಚಲು/ಕೆರೆಯಲು/ಬೇಯಿಸಿದ್ದನ್ನು ಕುಟ್ಟಲು ಯಾವುದಕ್ಕೂ ಲೋಹದ ವಸ್ತುಗಳನ್ನು ಉಪಯೋಗಿಸಬಾರದು.

ಧೂಪದ ಕಾಯಿಯ ಸಿಪ್ಪೆಯು ಉರುವಲಾಗಿ  ಉಪಯೋಗವಾಗುತ್ತದೆ. ಅಲ್ಲದೇ ಧೂಪದ ಮೇಣ, ಅಗ್ಗಿಷ್ಟಿಕೆಗೆ ಹಾಕಿದರೆ ಮನೆಯೆಲ್ಲ ಸುವಾಸನಾಭರಿತ ಹೊಗೆ ತುಂಬುತ್ತದೆ. ಸೊಳ್ಳೆ ಕಾಟ ಇರುವುದಿಲ್ಲ. ಚಿಕ್ಕಮಕ್ಕಳಿಗೆ ಧೂಪದ ಹೊಗೆ ಆರೋಗ್ಯಕರ. ಹೀಗೆ, ಮನೆಯಲ್ಲಿ ತಯಾರಿಸುವ ಎಣ್ಣೆಗಳಲ್ಲಿ ಕಲಬೆರಕೆ, ಜಿಡ್ಡು, ಕೊಲೆಸ್ಟ್ರಾಲ…ನ ಅಂಶ ಇರುವುದಿಲ್ಲ. ಆರೋಗ್ಯಕರ ಬದುಕಿಗೆ ಸಾಂಪ್ರದಾಯಿಕ ಎಣ್ಣೆಗಳ ಸಾಥ್‌ ಅತೀ ಅಗತ್ಯ.
ಸಾಂಪ್ರದಾಯಿಕ ಎಣ್ಣೆ ತಯಾರಿಯಲ್ಲಿ ಎಲ್ಲ ವಸ್ತುಗಳು ಉಪಯುಕ್ತವಾಗುತ್ತವೆ. ಆದರೆ, ಈಗ ಈ ದೀರ್ಘ‌ ಪರಿಶ್ರಮದಿಂದ ಆರೋಗ್ಯವಂತರಾಗಿರಲು ಯಾರೂ ಮನ ಮಾಡುತ್ತಿಲ್ಲ ಎನ್ನುತ್ತಾರೆ, ಸಾಂಪ್ರದಾಯಿಕವಾಗಿ ಧೂಪದೆಣ್ಣೆ ತಯಾರಿಸುವ ಉತ್ಸಾಹಿ ಯುವಕ ಮೌನೇಶ್‌ ಹೈಕಾಡಿ ಇವರು.

ಪೂರ್ಣಿಮಾ ಎನ್‌. ಭಟ್ಟ 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.