ಗುಲಾಬಿಯ ಮಾಯಕ ಲೋಕ


Team Udayavani, Sep 28, 2018, 6:00 AM IST

d-13.jpg

ಗುಲಾಬಿ ಹೂವಿಗೆ ಮನಸೋಲದವರಾರು? ಕೆಂಗುಲಾಬಿ, ಚೆಂಗುಲಾಬಿ ಇಂತು 300ಕ್ಕೂ ಮಿಕ್ಕಿ ಗುಲಾಬಿ ಹೂವುಗಳಿವೆ. ಮಹಿಳೆಯರಿಗಂತೂ ಗುಲಾಬಿ ಹೂವೆಂದರೆ ಆಕರ್ಷಣೆ ಎಲ್ಲಿಲ್ಲದ್ದು. ರೋಸ್‌ ಆಯಿಲ್‌ ಅಥವಾ ಗುಲಾಬಿಯ ಪರಿಮಳ ದ್ರವ್ಯವನ್ನು ಸಂಗ್ರಹಿಸುವ, ಜೊತೆಗೆ ಗುಲಾಬಿ ಜಲ (ರೋಸ್‌ ವಾಟರ್‌) ಪಡೆಯುವ ವಿಧಾನ ಪ್ರಾಚೀನ ಪರ್ಶಿಯಾದಲ್ಲಿ ಜನಪ್ರಿಯವಾಗಿತ್ತು. ಪರ್ಶಿಯಾ, ಅರೇಬಿಯಾದಿಂದ ಭಾರತಕ್ಕೆ ಬಂದ ಗುಲಾಬಿಯ ಕಂಪು, ತಂಪು ಇಂದು ವಿಶ್ವಾದ್ಯಂತ ಪಸರಿಸಿದೆ.

ಆರೋಗ್ಯಕ್ಕೆ ಗುಲಾಬಿ!
ಸೌಂದರ್ಯಕ್ಕೆ ಗುಲಾಬಿ!
ಅಡುಗೆಯಲ್ಲಿ ಗುಲಾಬಿ!
ಮನೆಯ ಅಂದಕ್ಕೆ ಗುಲಾಬಿ!

ಗುಲಾಬಿ, ಗುಲಾಬಿದಳ, ಗುಲಾಬಿ ಜಲ, ಗುಲಾಬಿ ತೈಲ ಇವುಗಳ ವೈವಿಧ್ಯಮಯ ಬಳಕೆ, ವಿಶಿಷ್ಟ ಉಪಯೋಗ ಅರಿಯೋಣ: ಸ್ವಾಸ್ಥ್ಯ ವರ್ಧನೆಗೆ, ಸೌಂದರ್ಯ ವರ್ಧನೆಗೆ ರುಚಿಕರ ಆಹಾರ ರೂಪದಲ್ಲಿ ಹಾಗೂ ಮನೆಯ ಅಂದ, ಆನಂದ ಹೆಚ್ಚಿಸುವ ಪರಿಯನ್ನು ಅರಿಯೋಣ!
ಗುಲಾಬಿ ಜಲದ ಮ್ಯಾಜಿಕ್‌ ಈಜಿಪ್ತಿನ ಖ್ಯಾತ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ಗುಲಾಬಿ ಜಲದಲ್ಲಿ ಅಡಗಿತ್ತು!

ಹಾಂ! ಮೈಕೆಲೆಂಜೆಲೋ ದೇಹ ಮತ್ತು ಮನಸ್ಸಿನ ಆಹ್ಲಾದ ಆರೋಗ್ಯಕ್ಕಾಗಿ ಗುಲಾಬಿ ಜಲದ ಚಹಾ ಸವಿಯುತ್ತಿದ್ದುದು ಚರಿತ್ರೆ! ಮೊಘಲರ ರಾಣಿಯರು ಗುಲಾಬಿ ಜಲವನ್ನು ಹಾಲು, ಜೇನು ಅಥವಾ ಸಮುದ್ರ ಉಪ್ಪು ಇತ್ಯಾದಿಗಳು ಜೊತೆ ಬಳಸಿ ಸೌಂದರ್ಯವರ್ಧಕ ಹಾಗೂ ಸೌಂದರ್ಯ ರಕ್ಷಕಗಳನ್ನು ಬಳಸುತ್ತಿದ್ದುದು ಇಂದು ಐತಿಹ್ಯ.

ಗುಲಾಬಿ ಜಲವನ್ನು ಮನೆಯಲ್ಲಿಯೇ ತಯಾರಿಸುವ ವಿಧಾನ ಅರಿಯೋಣವೆ?!
ಸಾಮಗಿ: 8-10 ತಾಜಾ ಗುಲಾಬಿ ಹೂಗಳು, 1ರಿಂದ ಒಂದೂವರೆ ಲೀಟರ್‌ನಷ್ಟು ಡಿಸ್ಟಿಲ್‌ ವಾಟರ್‌ (ಭಟ್ಟಿ ಇಳಿಸಿದ ಶುದ್ಧ ನೀರು)

ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಎಲ್ಲಾ ಗುಲಾಬಿ ಹೂವುಗಳ ಪಕಳೆಗಳನ್ನು ತೆಗೆದುಕೊಂಡು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ತದನಂತರ ಒಂದು ಮಣ್ಣಿನ ಗಡಿಗೆಯಲ್ಲಿ (ಪಾತ್ರೆ) ಈ ಗುಲಾಬಿದಳಗಳನ್ನು ತೆಗೆದುಕೊಂಡು, ಅದರಲ್ಲಿ ನೀರನ್ನು ಹಾಕಬೇಕು. ತದನಂತರ ಪಾತ್ರೆ ಮುಚ್ಚಿ ಸಣ್ಣ ಉರಿಯಲ್ಲಿ ಬಿಸಿಮಾಡಬೇಕು. ಹೀಗೆ ಬಿಸಿಯಾದ ಗುಲಾಬಿಯ ಪಕಳೆಗಳು ಬಣ್ಣ ಕಳೆದುಕೊಳ್ಳುವವರೆಗೆ ಬಿಸಿ ಮಾಡಬೇಕು. ನಂತರ ಸೋಸಿ, ಗುಲಾಬಿ ಜಲವನ್ನು ಗಾಜಿನ ಬಾಟಲಲ್ಲಿ ಸಂಗ್ರಹಿಸಬೇಕು. ಹೀಗೆ ಮನೆಯಲ್ಲಿಯೇ ಬಹೂಪಯೋಗಿ ಗುಲಾಬಿ ಜಲವನ್ನು ತಯಾರಿಸಬಹುದು.

ಸೌಂದರ್ಯವರ್ಧಕವಾಗಿ ಗುಲಾಬಿ ಜಲ
ಗುಲಾಬಿ ಜಲದ ಟೋನರ್‌
ಬೇಕಾಗುವ ಸಾಮಗ್ರಿ: 100 ಎಂಎಲ್‌ ರೋಸ್‌ವಾಟರ್‌, 1 ಸ್ಪ್ರೆ ಬಾಟಲ್‌, 10-15 ಹನಿಯಷ್ಟು ರೋಸ್‌ ಆಯಿಲ್‌ (ಗುಲಾಬಿ ತೈಲ). 
ಇವೆಲ್ಲವನ್ನು ಸ್ಪ್ರೆ ಬಾಟಲಿಯಲ್ಲಿ ಹಾಕಬೇಕು. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಮುಖಕ್ಕೆ ಹಾಗೂ ಕತ್ತಿಗೆ ಸ್ಪ್ರೆà ಮಾಡಿ ಮಾಲೀಶು ಮಾಡಿದರೆ ಉತ್ತಮ ಸ್ಕಿನ್‌ ಟೋನರ್‌ ಆಗಿದೆ!

ಮೇಕಪ್‌ ರಿಮೂವರ್‌
2 ಚಮಚ ಗುಲಾಬಿ ಜಲಕ್ಕೆ 1 ಚಮಚ ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಹತ್ತಿಯ ಉಂಡೆಯಲ್ಲಿ ಅದ್ದಿ, ಮುಖದ ಮೇಕಪ್‌ ತೆಗೆಯಲು ಉಪಯೋಗಿಸಿದರೆ ಹಿತಕರ.

ಬಾಡಿ ಮಾಯಿಶ್ಚರೈಸರ್‌
20 ಚಮಚ ಬಾದಾಮಿ ತೈಲಕ್ಕೆ 15 ಚಮಚ ಶುದ್ಧ ಗುಲಾಬಿ ಜಲವನ್ನು ಬೆರೆಸಬೇಕು. ಇದನ್ನು ಮೈಗೆ ಲೇಪಿಸಿ ಮಾಲೀಶು ಮಾಡಿದರೆ ತೇವಾಂಶ ಹಿಡಿದಿಟ್ಟುಕೊಂಡು ಚರ್ಮದ ಹೊಳಪು ಮತ್ತು ಸ್ನಿಗ್ಧತೆಯನ್ನು ವರ್ಧಿಸುತ್ತದೆ.

ಮೊಡವೆ ನಿವಾರಕ ರೋಸ್‌ವಾಟರ್‌ ಫೇಸ್‌ಪ್ಯಾಕ್‌
ಬೇಕಾಗುವ ಸಾಮಗ್ರಿ: 10 ಚಮಚ ಗುಲಾಬಿಜಲ, 10 ಚಮಚ ಕಡಲೆಹಿಟ್ಟು , 2 ಚಮಚ ಕಿತ್ತಳೆ ರಸ, 1/2 ಚಮಚ ಗ್ಲಿಸರಿನ್‌ ಹಾಗೂ 2 ಚಿಟಿಕೆ ಅರಸಿನ.

ವಿಧಾನ: ಇವೆಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿದಾಗ ಕ್ರೀಮ್‌ನಂತೆ ತಯಾರಾಗುತ್ತದೆ. ದಪ್ಪವಾಗಿದ್ದರೆ ಸ್ವಲ್ಪ ಗುಲಾಬಿ ಜಲ ಬೆರೆಸಿ ತೆಳ್ಳಗೆ ಮಾಡಬೇಕು. ಇದನ್ನು ಮೊಡವೆ ಇರುವ ಭಾಗದಲ್ಲಿ ಲೇಪಿಸಿ 15 ನಿಮಿಷದ ಬಳಿಕ ತೊಳೆಯಬೇಕು. ಅದರ ನಂತರ ಸ್ಕಿನ್‌ ಟೋನರ್‌ ಆಗಿ ಗುಲಾಬಿ ಜಲ ಲೇಪಿಸಬೇಕು. ಇದರಿಂದ ಮೊಡವೆ, ಕಲೆ ನಿವಾರಣೆಯಾಗುತ್ತದೆ.

ಕಪ್ಪು ವರ್ತುಲ ನಿವಾರಣೆಗೆ
ಗುಲಾಬಿ ಜಲ 3 ಚಮಚದ ಜೊತೆಗೆ 2 ಚಮಚ ಸೌತೇಕಾಯಿ ರಸ, 2 ಚಮಚ ಜೇನು ಬೆರೆಸಿ ಹತ್ತಿಯ ಉಂಡೆಯಲ್ಲಿ ಅದ್ದಿ ಲೇಪಿಸಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.