ಬಾಲಿವುಡ್‌ ವರೀನಾ ಹುಸೈನ್‌?


Team Udayavani, Oct 26, 2018, 6:00 AM IST

bollywood-warina-hussain.jpg

ಸಲ್ಮಾನ್‌ ಖಾನ್‌ ಬ್ಯಾನರ್‌ನಡಿಯಲ್ಲಿ ಬಂದ ಲವ್‌ ರಾತ್ರಿ ಚಿತ್ರದ ಮೂಲಕ ಇಬ್ಬರು ಬಾಲಿವುಡ್‌ಗೆ ಆರಂಗೇಟ್ರಂ ಮಾಡಿದ್ದಾರೆ. ಒಬ್ಬ ಸಲ್ಮಾನ್‌ ಭಾವನೇ ಆಗಿರುವ ಆಯುಶ್‌ ಶರ್ಮ. 

ಇನ್ನೊಬ್ಬಳು ಚಿತ್ರದ ನಾಯಕಿ ವರೀನಾ ಹುಸೈನ್‌. ಸಲ್ಮಾನ್‌ ಪರಿಚಯಿಸಿದ ಹುಡುಗಿ ಎಂದ ಮೇಲೆ ಇವಳಲ್ಲೇನೋ ವಿಶೇಷ ಇರಲೇಬೇಕಲ್ಲ. ವರೀನಾ ಒಂದಲ್ಲ ಹಲವು ವೈಶಿಷ್ಟéಗಳ ಆಗರ. ಮೊದಲಾಗಿ ಈಕೆ ಭಾರತೀಯಳೇ ಅಲ್ಲ. ಆದರೆ, ಯಾವುದೇ ಬಾಲಿವುಡ್‌ ನಟಿಗೆ ಕಡಿಮೆಯಿಲ್ಲದಂತೆ ಸೊಗಸಾಗಿ ಹಿಂದಿ ಮಾತನಾಡುತ್ತಾಳೆ. ಇಷ್ಟು ಮಾತ್ರವಲ್ಲ ಹರುಕುಮುರುಕು ಮರಾಠಿಯೂ ಗೊತ್ತು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದೀರಾ? ಅದನ್ನು ತಿಳಿಯಬೇಕಾದರೆ ವರೀನಾಳ ಹಿನ್ನೆಲೆಯನ್ನೊಮ್ಮೆ ನೋಡಬೇಕು.

ವರೀನಾಳ ತಾಯಿ ಅಫ್ಘಾನಿಸ್ಥಾನದವರು, ತಂದೆ ಇರಾಕ್‌ನವರು. ಹುಟ್ಟಿದ್ದು ಅಫ್ಘಾನಿಸ್ಥಾನದಲ್ಲೇ ಆದರೂ ಆಕೆಗೊಂದು ನಿಶ್ಚಿತ ನೆಲೆ ಎಂದು ಇರಲಿಲ್ಲ. ದೇಶದಿಂದ ದೇಶಕ್ಕೆ ಅಲೆಯುತ್ತಿದ್ದ ವರೀನಾ ಕೊನೆಗೆ ನೆಲೆಯಾದದ್ದು ಮಾತ್ರ ಭಾರತದಲ್ಲಿ. ನಟಿಯಾಗ ಬೇಕೆಂದು ಬಾಲ್ಯದಲ್ಲೇ ನಿರ್ಧರಿಸಿದ್ದ ವರೀನಾ ಅದಕ್ಕಾಗಿ ನ್ಯೂಯಾರ್ಕ್‌ ಫಿಲ್ಮ್ ಅಕಾಡೆಮಿಯಲ್ಲಿ ಅಭಿನಯ ತರಬೇತಿ ಪಡೆದುಕೊಂಡಿದ್ದಳು. ಮೊದಲು ದಿಲ್ಲಿಗೆ ಬಂದು ಚಿಕ್ಕಪುಟ್ಟ ಜಾಹೀರಾತುಗಳಲ್ಲಿ ನಟಿಸುತ್ತಿದ್ದ ವರೀನಾ ಬಾಲಿವುಡ್‌ಗೆ ಬಂದು ಅದೃಷ್ಟ ಪರೀಕ್ಷೆ ಮಾಡಲು ತೀರ್ಮಾನಿಸಿದಳು. ಆದರೆ, ಬಾಲಿವುಡ್‌ ಎಂಟ್ರಿ ಅವಳು ಎಣಿಸಿದಷ್ಟು ಸುಲಭವಾಗಿರಲಿಲ್ಲ. ಇಲ್ಲಿಯೂ ಹಲವು ವರ್ಷ ಅವಳಿಗೆ ದಕ್ಕಿದ್ದು ಜಾಹೀರಾತುಗಳೇ.

ಈ ನಡುವೆ  ಸಿನೆಮಾಗಳಿಗೆ ಆಡಿಷನ್‌ ನೀಡುವುದು, ಅಲ್ಲಿಂದ ತಿರಸ್ಕೃತವಾಗಿ ಹೊರಬರುವುದು ನಡೆದೇ ಇತ್ತು. ಕೊನೆಗೂ ಸಲ್ಮಾನ್‌ ಖಾನ್‌ ಕಣ್ಣಿಗೆ ಬಿದ್ದ ಬಳಿಕ ವರೀನಾಳ ಬಾಲಿವುಡ್‌ ಕನಸು ನನಸಾಗಿದೆ. ಚಿತ್ರ ಹಿಟ್‌ ಆಗುತ್ತದೋ ಇಲ್ಲವೋ ಎನ್ನುವುದು ಬೇರೆ ವಿಷಯ. ಆದರೆ ಮೊದಲ ಚಿತ್ರದಲ್ಲಿ ಸಖತ್‌ ಪ್ರಚಾರ ಪಡೆಯುವಲ್ಲಿ ವರೀನಾ ಯಶಸ್ವಿಯಾಗಿದ್ದಾಳೆ. ಚಿತ್ರದ ನಾಯಕ ಅಯುಶ್‌ ಶರ್ಮನಿಗಿಂತಲೂ ಒಂದು ತೂಕ ಹೆಚ್ಚೇ ವರೀನಾ ಜನಪ್ರಿಯಳಾಗಿದ್ದಾಳೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.