ಪ್ಲೇಹೋಮ್‌ಗೆ ಸೇರಿಸುವ ಮುನ್ನ 


Team Udayavani, Nov 9, 2018, 6:00 AM IST

19.jpg

ಬೆಳಗ್ಗಿನ ಸಮಯ. ಮನೆಯಲ್ಲಿ ಒಂದೇ ಸಮನೇ ಗಲಾಟೆ. ನನ್ನ ಮಗಳು ನಾನು ಪ್ಲೇ ಹೋಮ್‌ಗೆ ಹೋಗುದಿಲ್ಲ ಅಂತ ಹಠಮಾಡಿ ಕೂತಿದ್ದಳು. ನಾನು ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು ಏನೂ ಪ್ರಯೋಜನ ಆಗಲಿಲ್ಲ. ಅವಳಿಷ್ಟದ ಚಾಕಲೇಟು, ಕೇಕ್‌ ತಂದು ಕೊಡುತ್ತೇನೆ, ಮುದ್ದಾದ ಬಾರ್ಬಿ ಗೊಂಬೆ ತಗೆದುಕೊಡುತ್ತೇನೆ ಎಂದು ಪ್ರೀತಿಯಿಂದ ಬ್ಲ್ಯಾಕ್‌ಮೇಲ್‌ ಮಾಡಿದರೂ ಒಪ್ಪಲಿಲ್ಲ. ಇವತ್ತು ಅಂತೂ ಹೋಗೋದೆ ಇಲ್ಲ ಅಂತಾ ಕೂತೇ ಬಿಟ್ಟಳು. ನಾಳೆ ಕೂಡ ಹೋಗದಿದ್ದರೆ ಏನೂ ಮಾಡೋದಪ್ಪಾ ಅಂತ ಚಿಂತಿಸುತ್ತ ಕೂತೆ. ಮಾರನೆಯ ದಿನ ಹೇಗಾದರೂ ಮಾಡಿ ಅವಳಿಗೆ ತಿಳಿ ಹೇಳಿದೆ. ಸ್ಕೂಲ್‌ನಲ್ಲಿ ನಿನಗೆ ತುಂಬಾ ಫ್ರೆಂಡ್ಸ್‌ ಸಿಗ್ತಾರೆ, ಮಿಸ್‌ ಡಾನ್ಸ್‌, ಸಾಂಗ್ಸ್‌, ರೈಮ್ಸ್‌. ಗೇಮ್ಸ್‌ ಎಲ್ಲಾನೂ ಹೇಳಿ ಕೊಡ್ತಾರೆ ಎಂದೆಲ್ಲ ಹೇಳಿ ಕೊನೆಗೂ ಪ್ಲೇಹೋಮ್‌ ಹೋಗಲು ಖುಷಿಯಿಂದ ಒಪ್ಪಿಕೊಂಡಳು.

    ಮೂರು ವರ್ಷದ ಮಗು ಮನೆಯಲ್ಲೇ ತನಗೆ ಬೇಕಾದ ಹಾಗೆ ಆಡಿಕೊಂಡು, ಬೋರ್‌ ಆದಾಗ  ತನಗೆ ಬೇಕಾದ ಕಾರ್ಟೂನ್‌ ನೋಡಿಕೊಂಡು, ಹಸಿವಾದಾಗ ತಿಂದುಕೊಂಡು, ಅಮ್ಮನ ಮಡಲಲ್ಲಿ ಸುಸ್ತಾದಾಗ ಮಲಗಿಕೊಂಡು ಸಮಯ ಕಳೆಯುತ್ತದೆ. ಆದರೆ, ಸಡನ್‌ ಆಗಿ ಅವರನ್ನು ಪ್ಲೇಹೋಮ್‌ ಹೋಗಬೇಕು ಅಂದರೆ ಮನಸ್ಸು ಒಪ್ಪಿಕೊಳ್ಳುದಿಲ್ಲ. ಇನ್ನು ಆ ಮುದ್ದು ಮಗುವಿನ ಮನವೊಲಿಸಿ ಅವರನ್ನು ಪ್ಲೇಹೋಮ್‌ಗೆ ಕಳಿಸುವುದು ಕಷ್ಟದ ಕೆಲಸ.

    ಒಂದು ವೇಳೆ ನಿಮ್ಮ ಮಗುವನ್ನು ಪ್ಲೇಹೋಮ್‌ ಸೇರಿಸಿದ್ದೀರಿ ಎಂದಾದಲ್ಲಿ ಅನೇಕ ವಿಷಯಗಳನ್ನು ಗಮನದಲ್ಲಿಡುವುದು ಅತೀ ಅಗತ್ಯವಾಗಿರುತ್ತದೆ. ಮಗು ತನ್ನ ಮನೆಯನ್ನು ಬಿಟ್ಟರೆ ಹೊರಗೆ ತುಂಬಾ ಹೊತ್ತು ಕಳೆಯುವ ಜಾಗ ಎಂದರೆ ಪ್ಲೇಸ್ಕೂಲ್‌. ಮೊದಲನೇ ಸಲ ಮಗು ಹೆತ್ತವರನ್ನ, ಹೆಚ್ಚಾಗಿ ಸದಾಕಾಲ ಜೊತೆಗಿರುವ ಅಮ್ಮನ್ನು ಬಿಟ್ಟು ಹಗಲು ಪೂರ್ತಿ ಕಳೆಯುವ ಜಾಗ ಪ್ಲೇಹೋಮ್‌. ಆದುದರಿಂದ ಪ್ಲೇಹೋಮ್‌ ಆರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕಾದುದು ಅಗತ್ಯ. ಮಗು ಮನೆಯಲ್ಲಿ ಗಲಾಟೆ ಮಾಡುತ್ತದೆ, ತನ್ನ ಕೆಲಸ ಮಾಡಲು ಬಿಡುವುದಿಲ್ಲ ಮಗುವಿನ ತುಂಟಾಟ ಸಹಿಸಲು ಆಗದು ಎಂದು ಮಗುವನ್ನು ಸಿಕ್ಕಸಿಕ್ಕಿದ ಪ್ಲೇಹೋಮ್‌ಗೆ ಸೇರಿಸಿದರೆ ಮಗುವಿನ ಭವಿಷ್ಯ ಹಾಳಾದಂತೆ.

    ಪ್ಲೇಹೋಮ್‌ ಸೇರಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅಂದರೆ ಅಲ್ಲಿನ ವಾತಾವರಣ, ಕಲಿಕೆಯ ರೀತಿ, ಅಲ್ಲಿನ ರೀತಿ-ನೀತಿಗಳನ್ನು ಅರಿತುಕೊಳ್ಳುವುದು ಉತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮುದ್ದು ಕಂದ ಹೋಗುವ ಪ್ಲೇಹೋಮ್‌ಗೆ ಭದ್ರತೆ ಇದೆಯಾ ಎಂದು ಗಮನಿಸುವುದು ತುಂಬಾ ಮುಖ್ಯ. ಅಲ್ಲದೆ ಅಲ್ಲಿನ ಚಟುವಟಿಕೆಗಳು ಮಗುವಿನ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಗಮನಿಸಬೇಕು. ಅಲ್ಲಿ ಶಿಕ್ಷಕರು ಮಗುವಿಗೆ ಕಲಿಸುವ ರೀತಿ, ಅವರೊಂದಿಗೆ ಮಗು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದಿರಬೇಕು.

ಬೆಳೆಯುವ ಮನಸ್ಸಿಗೆ ಘಾಸಿಯಾದರೆ ಅದು ವಾಸಿಯಾಗುವುದು ಕಷ್ಟ. ಪ್ಲೇಹೋಮ್‌ ಕೂಡ ಹಾಗೆಯೇ ಮಗುವಿಗೆ ತಾನು ಹೋಗುವ ಪ್ಲೇಹೋಮ್‌ ಇಷ್ಟವಾದರೆ ಸರಿ. ಒಂದು ವೇಳೆ ಪ್ಲೇಹೋಮ್‌ ಬಗ್ಗೆ ತಿರಸ್ಕಾರ ಭಾವನೆ ಒಂದು ಸಲ ಮೂಡಿದರೆ ಅದನ್ನು ಬೇಗ ಅಳಿಸಲು ಸಾಧ್ಯವಿಲ್ಲ. ನಮ್ಮ ಮಗುವಿನ ಭವಿಷ್ಯ ನಮ್ಮ ಕೈಯಲ್ಲಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. 

ಸುಲಭಾ ಆರ್‌. ಭಟ್‌

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.