ಮಹಿಳಾ ಸ್ವಸಹಾಯ ಸಂಘಗಳು


Team Udayavani, Nov 9, 2018, 6:00 AM IST

26.jpg

ಕುಟುಂಬವನ್ನು ಪಾಲಿಸುವ, ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಆ ಸಮಾಜ, ಕುಟುಂಬದ ಮಹಿಳೆಯೇ ಆಗಿರುತ್ತಾಳೆ. ಒಂದು ಕುಟುಂಬದ ಪ್ರತಿಬಿಂಬವೂ ಸಮಾಜವೆಂಬ ಕನ್ನಡಿಯಲ್ಲಿ ಸುಂದರವಾಗಿ ಗೋಚರವಾಗಬೇಕಾದರೆ, ಆ ಕುಟುಂಬದ ಮಹಿಳೆಯರು ಸ್ಫೂರ್ತಿಯ ಖನಿಯಾಗಿರಬೇಕು. ತಾಳ್ಮೆಯ ನೆಲೆಯಾಗಬೇಕು, ಮನೆಯ ಸದಸ್ಯರ ಬದುಕಿನ ಪುಟಗಳನ್ನು ಬರೆಯುವ ಲೇಖನಿ ಆಗಬೇಕು. ಜಗತ್ತಿನ ಆದಿಶಕ್ತಿ ಸ್ತ್ರೀ. ಸ್ತ್ರೀ-ಶಕ್ತಿಯ ಮಹಣ್ತೀವನ್ನು ಮನಗಂಡೇ ಭರತಖಂಡದಲ್ಲಿ ಅನಾದಿ ಕಾಲದಿಂದಲೂ ಸ್ತ್ರೀಯನ್ನು ಪೂಜನೀಯ ಸ್ಥಾನದಿಂದ  ಗೌರವಿಸುತ್ತ ಬಂದಿರುತ್ತಾರೆ. ಭಾರತಾಂಬೆಯ ಹೆಮ್ಮೆಯ ಮಗನಾದ, ತನ್ನ ವಾಗ್ಝರಿಯಿಂದ ಜಗತ್ತನ್ನೇ ಗೆದ್ದುಕೊಂಡ ಸ್ವಾಮಿ ವಿವೇಕಾನಂದರು ಭಾರತೀಯ ಸ್ತ್ರೀಯರ ಕುರಿತು ಹೆಮ್ಮೆಯ ಮಾತನ್ನು ಹೇಳುತ್ತ, ಭಾರತೀಯ ಸ್ತ್ರೀಯರ ಮಾತೃತ್ವಕ್ಕೆ, ತ್ಯಾಗಕ್ಕೆ ನಾನು ಸದಾ ತಲೆಬಾಗುತ್ತೇನೆ  ಎಂದಿದ್ದಾರೆ.

ವೇದಗಳ ಕಾಲದಲ್ಲಿ ಪೂಜನೀಯ ಸ್ಥಾನ ಹೊಂದಿದ್ದ ಮಹಿಳೆ ನಂತರದಲ್ಲಿ ಆಡಳಿತ ವರ್ಗದ, ಸಮಾಜದ ಏಕಸ್ವಾಮ್ಯದ ಮೇಲೆ ಹಿಡಿತ ಸಾಧಿಸಬಯಸಿದ್ದ  ಪುರುಷರ ತುಷ್ಟೀಕರಣಕ್ಕೆ ಒಳಗಾಗುವಂತಾಯಿತು. ಹಿಂದಿನ ಕಾಲದ ಅಜ್ಜಿಯರೆಲ್ಲ ಈ ಕುರಿತು ಇಂದು ತಮ್ಮ ಮೊಮ್ಮಕ್ಕಳಿಗೆ ಕಥೆಯನ್ನು ಹೇಳುವುದಿದೆ. ತಮ್ಮ ಜೀವನದ ಸಾರವನ್ನು, ಅನುಭವಿಸಿದ ಸಂಕಷ್ಟವನ್ನು ಬಿಡಿಸಿ ಬಿಡಿಸಿ ಹೇಳಿದುದನ್ನು ನಾವೆಲ್ಲ ಕೇಳಿರುತ್ತೇವೆ. ಒಪ್ಪೊತ್ತಿನ ಕೂಳಿಗೆ ಪರದಾಡುತ್ತ, ಮನೆಯ ಸಂಸಾರದ ನೊಗವನ್ನು  ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು ಅಂದು ಮಹಿಳೆ ವಹಿಸಿಕೊಂಡಿ ದ್ದಳು. ಮನೆಮಂದಿಯ ಹಸಿವನ್ನು ನೀಗಿಸುವ ಬೇಯಿಸುವ ಯಂತ್ರ ವಾಗಿ ಹೋಗಿದ್ದಳು. ಮಕ್ಕಳ ಲಾಲನೆ-ಪಾಲನೆಯಲ್ಲಿ ತನ್ನತನವನ್ನು ಮರೆತು, ಇತರರು ಹೇಳಿದ್ದನ್ನೇ ಸತ್ಯವೆಂದು ಪರಿಭಾವಿಸುತ್ತ, ಜೀವನ ಸಾಗಿಸುತ್ತಿದ್ದಳು. ಬಾಹ್ಯ ಪ್ರಪಂಚದ ಅರಿವಿಲ್ಲದೆ, ಶಿಕ್ಷಣದಿಂದಲೂ ವಂಚಿತರಾಗಿ ಸಮಯ ಕಳೆಯುತ್ತಿದ್ದಳು. ಇವೆಲ್ಲದಕ್ಕೂ ಅಪವಾದವೆಂ ಬಂತೆ ಮಾನವೀಯ ಗುಣಗಳನ್ನು ಹೊಂದಿದ್ದ ಪತಿಯರಿದ್ದರೆ, ಅವರ ಸಹಕಾರದಿಂದ ಕೆಲವು ಮಹಿಳೆಯರೇನಾದರೂ ಸಮಾಜಮುಖೀಯಾಗಿ  ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ಅಂತಹವರನ್ನು ಮಾತಿನಿಂದಲೂ, ಕೃತಿಯಿಂದಲೂ ಹಿಂಸಿಸಿ ಅವರು ಮತ್ತೆ ತಲೆ ಎತ್ತದಂತೆ ಮಾಡುತ್ತಿದ್ದರು.

ಮಂಕಾಗಿದ್ದ ಮಹಿಳೆಯ ಸ್ಥಿತಿ ಇಂದು ಬದಲಾಗಿದೆ, ಸುಧಾರಿಸಿದೆ.ಆಕೆಯೂ ವಿದ್ಯಾವಂತಳಾಗಿದ್ದಾಳೆ, ತನ್ನ ಮನೆಯನ್ನು ಆರ್ಥಿಕವಾಗಿ ಮುನ್ನಡೆಸುತ್ತಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಕಾರಣ ಮಹಿಳಾ ಸಬಲೀಕರಣ. ಇಂದು ಶಿಕ್ಷಣವೆಂಬುದು ಪ್ರತಿಯೊಬ್ಬರ ಹಕ್ಕಾಗಿದ್ದು ಅದರಲ್ಲಿಯೂ ಹೆಣ್ಣು ಮಕ್ಕಳು ಈ ಶಿಕ್ಷಣವನ್ನು ಪಡೆಯುವಲ್ಲಿ ಅತ್ಯಂತ ಸಾಧನೆಯ ಪ್ರಗತಿಯಲ್ಲಿ ಸಾಗುತ್ತಿ¨ªಾರೆ. ಇದಕ್ಕೆ ಪೂರಕವೆಂಬಂತೆ ಭಾರತದ ಸಂವಿಧಾನ ಮಹಿಳೆಯರೆಲ್ಲರಿಗೂ ಪುರುಷರಂತೆ ಸಮಾನ  ಅವಕಾಶ ಹಾಗೂ ಸಮಾನತೆಗಳನ್ನು ಖಾತ್ರಿ ಪಡಿಸಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರ ಎರಡು ಸಾವಿರದ ಒಂದನೇ ಇಸವಿಯನ್ನು ಮಹಿಳಾ ಸಬಲೀಕರಣ ವರ್ಷ ಎಂಬುದಾಗಿ ಪರಿಗಣಿಸಿತ್ತು. ಇದರಂತೆ ಮಹಿಳೆಯು ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ಧಿಕವಾಗಿ, ರಾಜಕೀಯವಾಗಿ ಹೀಗೆ ಎಲ್ಲ  ಕ್ಷೇತ್ರಗಳಲ್ಲಿಯೂ ಶಕ್ತಿಯನ್ನು ಹೊಂದಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನಮಾನವನ್ನು  ಹೊಂದುತ್ತ ಬರುತ್ತಿದ್ದಾಳೆ.  

ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು
ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ಧಿಕವಾಗಿ, ರಾಜಕೀಯವಾಗಿ  ಮಹಿಳಾ ಸಬಲೀಕರಣದಲ್ಲಿ  ಸರ್ಕಾರಿ ಯೋಜನೆಗಳು, ಮೀಸಲಾತಿಗಳು  ಪ್ರಮುಖ ಪಾತ್ರ ವಹಿಸಿರುವಂತೆ, ಗ್ರಾಮೀಣರ ಬದುಕಿನ ದಿಕ್ಕನ್ನು ಬದಲಾಯಿಸುವಲ್ಲಿ  ಸರ್ಕಾರಿ ಹಾಗೂ ಸರ್ಕಾರೇತರ ಸ್ವಸಹಾಯ ಸಂಘಗಳ ಪಾತ್ರ ಮನನೀಯವಾದುದು. ಸ್ವಾವಲಂಬನೆಯ ಜೀವನಕ್ಕೆ ಅಡಿಪಾಯ ಹಾಕುತ್ತ, ಹಳ್ಳಿಯ ಜನರಲ್ಲಿ ನಾಯಕತ್ವ ಬೆಳೆಸುವ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶವನ್ನಿರಿಸಿಕೊಂಡಿರುವ ಸ್ವಸಹಾಯಸಂಘಗಳು ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಗಾಂಧೀಜಿಯವರ ಕನಸನ್ನು ನನಸು ಮಾಡುವಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಹತ್ತು, ಇಪ್ಪತ್ತು ರೂಪಾಯಿಗಳ ಲೆಕ್ಕಾಚಾರ ಬಾರದಿದ್ದ ಮನೆ ಮಹಿಳೆ ಇಂದು ಬ್ಯಾಂಕಿಗೆ ಹೋಗಿ ವಾರದ ಉಳಿತಾಯದ ಹಣವನ್ನು ಪಾವತಿಸುವುದು, ಸಾಲ ಪಡೆಯುವುದು, ತಾನು ಪಾವತಿಸಬೇಕಾದ ಬಡ್ಡಿಯ ಕುರಿತು ಲೆಕ್ಕಾಚಾರ ಹಾಕುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಕಾರಣ ಇಂದು ಮನೆ ಮನೆಗಳನ್ನು ತಲುಪಿರುವ ಸ್ವ ಸಹಾಯ ಗುಂಪುಗಳು. ಅಡುಗೆ ಮನೆಗಷ್ಟೇ ತನ್ನ ವ್ಯಾಪ್ತಿಯನ್ನು ಹೊಂದಿದ್ದ ನಾರಿ ಇಂದು ಮನೆ ಹೊಸ್ತಿಲು ದಾಟಿ ಮನೆಯಂಗಳಕ್ಕೆ ಕಾಲಿರಿಸಿದ್ದಾಳೆ. ತನ್ನ ಮನೋಬಲ, ಆತ್ಮಬಲ, ಧೈರ್ಯ, ಸ್ಥೈರ್ಯ ಗಳನ್ನು ವಿಸ್ತರಿಸಿಕೊಂಡು, ಸಾಂವಿಧಾನಿಕ ಸಮಾನತೆಯನ್ನು  ಸಾಧಿಸುವೆಡೆಗೆ ಮುನ್ನುಡಿ ಬರೆದಿದ್ದಾಳೆ.

ಸ್ವಸಹಾಯ ಸಂಘಗಳ ಧ್ಯೇಯ-ಉದ್ದೇಶಗಳು
.ಬಡತನ ನಿರ್ಮೂಲನೆಗೊಳಿಸಿ, ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
.ಗ್ರಾಮೀಣ ಜನರಲ್ಲಿ  ನಾಯಕತ್ವ ಗುಣವನ್ನು ಬೆಳೆಸುವುದು.
.ಪರಸ್ಪರ ಸಹಕಾರ ಹಸ್ತವನ್ನು ಚಾಚುತ್ತ, ಒಬ್ಬರ ಬಾಳಿಗೆ ಇನ್ನೊಬ್ಬರು ನೆರವಾಗುವುದು.
.ವ್ಯಕ್ತಿಯ ವ್ಯಕ್ತಿತ್ವವನ್ನು  ಅರಳಿಸಿ, ಸೃಜನಶೀಲತೆಯನ್ನು ಬೆಳೆಸುವುದು.

ಸಮೂಹದ ಸಬಲೀಕರಣ
ಹಸಿವು ಎಂದು ಬಡಬಡಿಸುವ  ಒಬ್ಬ ವ್ಯಕ್ತಿಗೆ ಮೀನನ್ನು ನೀಡಿದರೆ ಆತನ ಒಂದು ಹೊತ್ತಿನ ಹಸಿವೆ  ನೀಗಬಹುದು. ಆದರೆ, ಅದೇ ವ್ಯಕ್ತಿಗೆ ಮೀನು ಹಿಡಿಯುವ ಕಾಯಕವನ್ನು ಕಲಿಸಿಕೊಟ್ಟರೆ, ಆತ ತನ್ನ ಜೀವನಪರ್ಯಂತ ಹಸಿವೆಯಿಲ್ಲದೆ  ಹೊಟ್ಟೆ ತುಂಬಾ ದುಡಿದು ತಿನ್ನಬಹುದು. ಸ್ವಸಹಾಯ ಸಂಘಗಳೂ ಅದೆಷ್ಟೋ ಜನರಿಗೆ  ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡಿದೆ. ಮಾನವೀಯ ಸಂಬಂಧಗಳಿಗೆ ಅರ್ಥವನ್ನು ನೀಡಿದ್ದ ಅವಿಭಕ್ತ ಕುಟುಂಬಗಳ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಪರಸ್ಪರ ಭೌತಿಕ, ಬೌದ್ಧಿಕ ಬೆಂಬಲವನ್ನು ನೀಡುತ್ತಿದ್ದ ಮನೆ ಸದಸ್ಯರ ಸಂಖ್ಯೆ ವಿರಳವಾಗುತ್ತಿದೆ. ಆದರೆ, ಇಂತಹ ಸಂಘಟನೆಗಳಿಂದಾಗಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳು ಸಮಾಜದಲ್ಲಿ ಜೀವಂತವಾಗಿವೆ. ಇದರಿಂದಾಗಿ ಸಾಮರಸ್ಯದ ಮರ್ಮ ಉಳಿದಿದೆ. ಜಾತಿ, ಧರ್ಮಗಳ ನಡುವೆ ಸ್ನೇಹ-ಸೌಹಾರ್ದ ಮನೆ ಮಾಡಿದೆ. ಮನುಷ್ಯರ ನಡುವೆ ಉಪಕಾರ ಸ್ಮರಣೆಯ ಭಾವವಡಗಿದೆ.ಸ್ವಾವಲಂಬನೆಯ ಬದುಕಿನೊಂದಿಗೆ ನಮ್ಮ ಕೈ ಜಾರಿ ಹೋಗುತ್ತಿರುವ ಸಂಸ್ಕೃತಿಯನ್ನು ಮರು ಸ್ಥಾಪಿಸಿ ಅದರ ಸುಗಂಧ ಎಲ್ಲೆಡೆ ಪಸರಿಸುವಂತೆ  ಮಾಡುವ ಕಾರ್ಯ ಇದರಿಂದ ಸಾಧ್ಯವಾಗುತ್ತಿದೆ. ಕುಟುಂಬದ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಬದಲಾದರೆ ಸಾಕು. ಆತನನ್ನು ಅನುಸರಿಸಿ ಕುಟುಂಬ ಬದಲಾಗುತ್ತೆ. ಕುಟುಂಬವನ್ನು ಅನುಸರಿಸಿ ಸಮಾಜ ಬದಲಾಗುತ್ತದೆ. ಉತ್ತಮ ಸಮಾಜದಿಂದ ಉತ್ತಮ ದೇಶ ನಿರ್ಮಾಣ ವಾಗುತ್ತದೆ. ಹಿಂದೆ ಅಕ್ಷರಾಭ್ಯಾಸವೂ ಇಲ್ಲದೆ, ಹೊರಪ್ರಪಂಚದ ಅರಿವೂ  ಇಲ್ಲದ ಕಾಲದಲ್ಲಿ  ಅದೆಷ್ಟೋ ಬಡವರ ಬದುಕು, ಮಹಿಳೆಯರ ಜೀವನ ಚಿಂತಾಜನಕವಾಗಿತ್ತು. ತಲೆಯ ಮೇಲೊಂದು ಸೂರು, ಹೊಟ್ಟೆಗೆ ಹಿಟ್ಟು ಇಲ್ಲದೆ ಶ್ರೀಮಂತರ ಜೀತದಾಳುಗಳಾಗಿ ದುಡಿಯುತ್ತ, ಅವರು ನೀಡೋ ಕೂಲಿಗೆ ಕೈಚಾಚುತ್ತ, ಬಡವನೊಬ್ಬ ಬಡವನಾಗಿಯೇ ತನ್ನ ಜೀವನ ಸವೆಸಿ, ಮರಣವನ್ನಪ್ಪುವ ಕಾಲವಿತ್ತು. ಆದರೆ ಐದು ಬೆರಳು ಸೇರಿ ಒಂದು ಮುಷ್ಟಿ ಯಾಗುತ್ತೆ, ಹಲವು ಕೈಗಳು ಸೇರಿ ಚಪ್ಪಾಳೆಯ ಮಳೆಯೇ ಸುರಿಯುತ್ತೆ  ಎಂಬ ಮಾತಿನಂತೆ ಸಹಕಾರ ತತ್ವದಡಿ ಕಾರ್ಯನಿರ್ವಹಿಸುವ ಸ್ವ ಸಹಾಯ ಸಂಘಗಳು ಸದಸ್ಯರಲ್ಲಿ ಬ್ಯಾಂಕ್‌ ವ್ಯವಹಾರದ ಅರಿವನ್ನು ಮೂಡಿಸಿ ಅವರನ್ನು ಸಶಕ್ತರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿವೆ. ಇದರ ಜೊತೆಗೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ  ನಡೆಯೋ ಸಭೆಯಲ್ಲಿ   ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಿ ಸಂಸ್ಕೃತಿಯ ಬೇರು ಕುಟುಂಬಗಳಲ್ಲಿ ತನ್ನ ವಿಸ್ತಾರವಾದ ಹರಡುವಿಕೆಗೆ ಸ್ಥಳಾವಕಾಶವನ್ನು ಕಂಡುಕೊಳ್ಳುವಂತೆ ಮಾಡುತ್ತಿದೆ. ಸಂಘದ ಸದಸ್ಯರಿಂದ ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳು, ರಂಗೋಲಿ ಕಲೆ ಅರಳಿಸುವುದು, ಭಜನಾ ಕಮ್ಮಟಗಳಲ್ಲಿ ಭಾಗವಹಿಸುವಂತೆ ತರಬೇತಿಯನ್ನು ನೀಡುವುದು, ವಿವಿಧ ಸ್ಪರ್ಧೆಗಳ ಆಯೋಜನೆ, ಕಾರ್ಯಕ್ರಮಗಳ ನಿರ್ವಹಣೆಯ ಜವಾಬ್ದಾರಿ ನೀಡುವ ಮೂಲಕ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರೊಂದಿಗೆ ಸದಸ್ಯರು ತಮ್ಮತನವನ್ನು  ಕಂಡುಕೊಳ್ಳುವಂತೆ ಮಾಡುತ್ತಿರುವುದು ಶ್ಲಾಘನೀಯ.

ಆರ್ಥಿಕ ಬದುಕಿನ ಚೇತನ ಸ್ವಸಹಾಯ ಸಂಘ
ಸ್ವಸಹಾಯ ಸಂಘಗಳಿಂದ ನಮ್ಮ ಆದಾಯ ಉಳಿತಾಯದ ರೂಪ ಪಡೆಯುವುದು ಮಾತ್ರವಲ್ಲದೆ ವಿಪರೀತವೆನಿಸುವಷ್ಟು ದಾಖಲೆಗಳನ್ನು ಸಿದ್ಧಪಡಿಸಿ, ತಿಂಗಳಾನುಗಟ್ಟಲೆ, ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆಯುವ ಪ್ರಕ್ರಿಯೆಯಿಂದ ಮುಕ್ತಿ ದೊರೆತು, ಗುಂಪಿನ ಸದಸ್ಯರ ಒಪ್ಪಿಗೆಯೊಂದಿಗೆ ಒಂದೆರಡು ದಿನಗಳಲ್ಲಿ ಸಾಲದ ರೂಪದಲ್ಲಿ ಹಣವನ್ನು ಪಡೆಯಲು ಅನುಕೂಲವಾಗಿದೆ. ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರೀಕನಾಗಿ ರೂಪಿಸುವ ನಿಟ್ಟಿನಲ್ಲಿ  ವ್ಯಕ್ತಿ ಸಾಲ ಪಡೆದ ನಂತರ  ಅದನ್ನು ಸದುಪಯೋಗ ಮಾಡಿದ ಕುರಿತು ಮುಂದಿನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ.ಸಾಮಾನ್ಯವಾಗಿ ಗುಂಪಿನಲ್ಲಿರುವ ಸದಸ್ಯರು ನೆರೆಮನೆಯವರೇ, ಸುತ್ತಮುತ್ತಲಿನವರೇ ಆಗಿರುವುದರಿಂದ, ಒಂದು ಕುಟುಂಬದ ಕುರಿತು ಇನ್ನೊಂದು ಕುಟುಂಬಕ್ಕೆ  ಪರಿಚಯವಿರುವುದರಿಂದ ಸಾಲ ಪಡೆದ ಹಣವನ್ನು ಉಪಯುಕ್ತ ರೀತಿಯಲ್ಲಿ ವಿನಿಯೋಗಿಸಬೇಕಾದ ಅಗತ್ಯತೆ ಇದ್ದೇ ಇರುತ್ತದೆ.

ಮಹಿಳೆ ನಿರ್ವಹಿಸಬೇಕಾದ ಪಾತ್ರ
ಒಂದು ಸಂಸ್ಥೆಯೇ ಆಗಲಿ, ಸಂಘವೇ ಆಗಲಿ ತನ್ನ ಕಾರ್ಯ ಚಟುವಟಿಕೆಗಳಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಅದರ ಸದಸ್ಯರು ಕ್ರಿಯಾಶೀಲರಾಗಿರಬೇಕು. ತಮ್ಮನ್ನು ತಾವು ಸಂಘಗಳ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರೂ ಒಂದಲ್ಲ ಒಂದು ಸಂಘಟನೆಯಲ್ಲಿ¨ªಾರೆ.ಹಾಗಾಗಿ ನಾನೂ ಸಂಘಕ್ಕೆ ಸೇರುತ್ತೇನೆ ಎಂಬ ಮನಸ್ಥಿತಿಯೊಂದಿಗೆ ಯಾರೂ ಸಂಘದ ಸದಸ್ಯರಾಗಬಾರದು. ಸಂಘದಲ್ಲಿ ನೀಡಲ್ಪಡುವ ವಿವಿಧ ಜವಾಬ್ದಾರಿಯುತ ಸ್ಥಾನಮಾನಗಳನ್ನು ತನ್ನ ಕರ್ತವ್ಯವೆಂದರಿತು ನಿರ್ವಹಿಸಬೇಕು. ಪ್ರತಿಯೊಬ್ಬ  ಸದಸ್ಯನಿಗೂ ಸಮಾಜ ಕಟ್ಟುವ ಶಕ್ತಿಯಿದೆ. ತನ್ನ ಮನೆಯನ್ನು ಸಮಾಜದ ಆದರ್ಶ ಗೃಹವಾಗಿ ನಿರ್ಮಾಣ ಮಾಡಬೇಕಿದೆ. ಸಂಘಗಳಲ್ಲಿ ಕ್ರಿಯಾಶೀಲರಾಗಿದ್ದು ಸಮಾಜ ಮುಖೀಯಾಗಿ ಮುನ್ನಡೆದು, ದೇಶಸೇವೆಯನ್ನು ನಿರ್ವಹಿಸುವ ನಾಗರೀಕನಾಗಬೇಕಿದೆ.ಸಮಾಜದಲ್ಲಿ ಶಾಂತಿ ನೆಲೆಯೂರುವಂತೆ ಮಾಡುವುದು  ಅದರ ಅಂಗಸಂಸ್ಥೆಯಾದ ಸಂಘಟನೆಗಳ ಕರ್ತವ್ಯವಾಗಿರುವುದರಿಂದ ಪ್ರತಿಯೊಬ್ಬರೂ ಇತರರಿಗೆ ಮಾದರಿಯಾಗಿ ನಿಲ್ಲಬೇಕು.ದುಶ್ಚಟಮುಕ್ತ ಕಾರ್ಯಾಗಾರಗಳಲ್ಲಿ ಭಾಗವಹಿಸಲು ತನ್ನ ಮನೆಯ ಸದಸ್ಯರನ್ನು ಪ್ರೇರೇಪಿಸುತ್ತ, ಸಮಾಜದ ಆರೋಗ್ಯಯುತ ಪ್ರಜೆಯೆನಿಸಿಕೊಳ್ಳಬೇಕಿದೆ. ಪರಸ್ಪರ ಮತ್ಸರ, ದ್ವೇಷದ ವಿಷ ಕಾರುತ್ತ ಅನ್ಯರಿಗೆ ಕೆಡುಕನ್ನು ಬಯಸುವ ಮಂದಿಗಳಂತಾಗದೆ ಸಮರಸದ ಕುಟುಂಬದಂತೆ ಸಂಘದೊಳಗೆ ಸಮಭಾವದಲಿ ವರ್ತಿಸುತ್ತ ಸಜ್ಜನನೆನಿಸಿಕೊಳ್ಳಬೇಕು.

ಮಾನವನಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ,ವ್ಯಕ್ತಿ ಪ್ರಯತ್ನದ ಸಾಗರಕ್ಕಿಳಿಯುವಂತೆ ಮಾಡುವ ಸ್ವಸಹಾಯ ಸಂಘಗಳ ಮೂಲ ಉದ್ದೇಶವಾದ ಮಾನವ ಸಂಪನ್ಮೂಲ ಬಳಕೆ ಹಾಗೂ ಮಹಿಳಾ ವಿಕಾಸದ ಧ್ಯೇಯ ಸಂಪೂರ್ಣ ಸಾಧಿತವಾದರೆ  ಸ್ವಸ್ಥ ಸಮಾಜ ನಿರ್ಮಾಣವಾದೀತು.

ಹರಿಣಾಕ್ಷಿ ಕೆ.

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.