ಹೆಸರುಕಾಳು ವೈವಿಧ್ಯ


Team Udayavani, Dec 14, 2018, 6:00 AM IST

19.jpg

ಹೆಸರುಕಾಳು ಪ್ರೊಟೀನ್‌ಯುಕ್ತ ಧಾನ್ಯ. ಇದು ರೋಗನಿರೋಧಕ ಶಕ್ತಿ ಹೊಂದಿದೆ. ಆರೋಗ್ಯಕರವಾದ ಈ ಕಾಳಿನಿಂದ ರುಚಿಕರ ಸಾರು, ಪಂಚರತ್ನ, ಪತ್ರೊಡೆ, ಪೊಂಗಲ್‌ ಮುಂತಾದ ರೆಸಿಪಿಗಳನ್ನು ತಯಾರಿಸಬಹುದು.

ಹೆಸರುಕಾಳಿನ ಕೊಟ್ಟೆ ಕಡುಬು
ಬೇಕಾಗುವ ಸಾಮಗ್ರಿ:
5-6 ಗಂಟೆ ನೆನೆಸಿದ ಹೆಸರುಕಾಳು 1 ಕಪ್‌,  ತೆಂಗಿನ ತುರಿ- 1 ಕಪ್‌, ಒಣಮೆಣಸಿನ ಕಾಯಿ 6-7, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ, ಹಲಸಿನ ಎಲೆಯ ದೊನ್ನೆ/ಇಡ್ಲಿ ಬಟ್ಟಲು.

ತಯಾರಿಸುವ ವಿಧಾನ: ತೆಂಗಿನತುರಿ, ಒಣ ಮೆಣಸಿನಕಾಯಿ, ಹುಣಸೆ, ಉಪ್ಪು ಹಾಕಿ ಒಟ್ಟಿಗೆ ನಯವಾಗಿ ರುಬ್ಬಿ. ನಂತರ ಇದಕ್ಕೆ ಹೆಸರುಕಾಳು ತೊಳೆದು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿರಿ. ಹಲಸಿನ ಎಲೆಯ ಕೊಟ್ಟೆಯಲ್ಲಿ ಇಲ್ಲವೆ ಇಡ್ಲಿ ತಟ್ಟೆಯಲ್ಲಿ ಹಾಕಿ ಹಬೆಯ ಪಾತ್ರೆಯಲ್ಲಿಟ್ಟು ಇಪ್ಪತ್ತು ನಿಮಿಷ ಬೇಯಿಸಿರಿ. ಇದಕ್ಕೆ ಎಣ್ಣೆ ಹಾಕಿ ಸವಿದರೆ ಬಲು ರುಚಿ. ಬೇಯಿಸುವ ಮೊದಲು ನೀರುಳ್ಳಿ ಇಲ್ಲವೆ ಇಂಗಿನ ನೀರು ಹಾಕಿದರೆ ಇನ್ನೂ ಸ್ವಾದಿಷ್ಟವಾಗುವುದು.

ಹೆಸರುಕಾಳಿನ ವರ್ನ (ಸಾರು)
ಬೇಕಾಗುವ ಸಾಮಗ್ರಿ: ಹೆಸರುಕಾಳು- 1/4 ಕಪ್‌, ತೆಂಗಿನತುರಿ- 1/4 ಕಪ್‌, ಹಸಿ ಮೆಣಸಿನಕಾಯಿ- 1, ಒಣಮೆಣಸಿನಕಾಯಿ- 2, ಅರಸಿನ ಹುಡಿ- 1/2 ಚಮಚ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವು, ಜೀರಿಗೆ, ಹುಣಸೆಹಣ್ಣು ಸ್ವಲ್ಪ .

ತಯಾರಿಸುವ ವಿಧಾನ: ಮೊದಲು ಹೆಸರುಕಾಳು ಬೇಯಿಸಿಡಿ. ನಂತರ ಒಣಮೆಣಸಿನಕಾಯಿ ಹುರಿದು ಹುಣಸೆಹಣ್ಣು, ತೆಂಗಿನ ತುರಿ ಸೇರಿಸಿ ನಯವಾಗಿ ರುಬ್ಬಿ. ಕೊನೆಗೆ ಹೆಸರುಕಾಳು ಹಾಕಿ ರುಬ್ಬಿದ ನಂತರ ಪಾತ್ರೆಗೆ ಹಾಕಿ. ಉದ್ದಕ್ಕೆ ಸೀಳಿದ ಮೆಣಸಿನಕಾಯಿ, ಅರಸಿನ, ಉಪ್ಪು ಹಾಕಿ ಕುದಿಸಿರಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಜೀರಿಗೆ ಒಗ್ಗರಣೆ ಮಾಡಿ ಹಾಕಿದರೆ ಹೆಸರುಕಾಳಿನ ವರ್ನ ತಯಾರಿ. ಅನ್ನದೊಂದಿಗೆ ಕಲಸಿ ಊಟ ಮಾಡಬಹುದು.

ಹೆಸರುಕಾಳಿನ ಪತ್ರೋಡೆ 
ಬೇಕಾಗುವ ಸಾಮಗ್ರಿ:
ಪತ್ರೋಡೆ ಎಲೆ (ಕೆಸುವಿನ ಎಲೆ) 8-12, ನೆನೆಸಿದ ಹೆಸರುಕಾಳು, ತೆಂಗಿನತುರಿ- ಒಂದೂವರೆ ಕಪ್‌, ಹುರಿದ ಒಣಮೆಣಸಿನ ಕಾಯಿ 8-10, ರುಚಿಗೆ ಉಪ್ಪು , ಹುಣಸೆಹಣ್ಣು- 2 ಗೋಲಿ ಗಾತ್ರ, ಇಂಗು ನೀರು- 1 ಚಮಚ.

ತಯಾರಿಸುವ ವಿಧಾನ: ತೆಂಗಿನತುರಿ, ಹುಣಸೆ, ಒಣಮೆಣಸಿನಕಾಯಿ, ಉಪ್ಪು , ತೊಳೆದ ಹೆಸರುಕಾಳು ಎಲ್ಲವನ್ನು ಒಟ್ಟಿಗೆ ನಯವಾಗಿ ರುಬ್ಬಿ ಇಂಗು ನೀರು ಬೆರೆಸಿ ದಪ್ಪ  ಮಸಾಲೆ ತೆಗೆದಿಡಿ.

ಶುಚಿಗೊಳಿಸಿದ ಕೆಸುವಿನೆಲೆಯ ಹಿಂಭಾಗದಲ್ಲಿ ಮಸಾಲೆ ಸವರಿ ಒಂದರ ಮೇಲೆ ಒಂದರಂತೆ ಮೂರು ಮೂರು ಎಲೆ ಇಟ್ಟು ಸುರುಳಿ ಸುತ್ತಿ. ಹಬೆಯ ಪಾತ್ರೆಯಲ್ಲಿ ನೀರು ಕಾದ ಮೇಲೆ ಅದರ ಜಾಲರಿ ಮೇಲೆ ಪತ್ರೋಡೆಗೆ ಸ್ವಲ್ಪ ಗಾಯಮಾಡಿ 25 ನಿಮಿಷ ಬೇಯಿಸಿ ತೆಗೆಯಿರಿ. ಊಟಕ್ಕೆ, ತಿಂಡಿಗೆ ಬಲು ರುಚಿ. (ಬೆಲ್ಲ, ಕೊತ್ತಂಬರಿ, ಸ್ವಲ್ಪ ಅಕ್ಕಿ ಹಾಕಿಯೂ ಪತ್ರೋಡೆ ಮಾಡಬಹುದು)
ಪತ್ರೋಡೆ ಸ್ಲೆ„ಸ್‌ ಮಾಡಿ ರವಾದಲ್ಲಿ ಮುಳುಗಿಸಿ ತವಾದ ಮೇಲೆ ಕಾಯಿಸಿ ಸೇವಿಸಬಹುದು.

ಹೆಸರುಕಾಳಿನ ಪಂಚರತ್ನ
ಬೇಕಾಗುವ ಸಾಮಗ್ರಿ:
ಹೆಸರುಕಾಳು- 1/2 ಕಪ್‌, ಹಸಿಮೆಣಸಿನಕಾಯಿ- 1, ಟೊಮೆಟೊ- 1, ನೀರುಳ್ಳಿ- 1, ರುಚಿಗೆ ಉಪ್ಪು , ಒಗ್ಗರಣೆಗೆ ಒಣಮೆಣಸಿನಕಾಯಿ- 2, ಬೆಳ್ಳುಳ್ಳಿ ಎಸಳು 4-5, ಎಣ್ಣೆ.

ತಯಾರಿಸುವ ವಿಧಾನ: ಹೆಸರುಕಾಳು ಬೇಯಿಸಿ ಪಾತ್ರೆಗೆ ಹಾಕಿ. ನೀರುಳ್ಳಿ ಟೊಮೆಟೊ ಎಣ್ಣೆಯಲ್ಲಿ ಬಾಡಿಸಿ ಹೆಸರುಕಾಳಿಗೆ ಹಾಕಿ ಮೆಣಸಿನಕಾಯಿ ಉದ್ದಕ್ಕೆ ಸೀಳಿ ಹಾಕಿ ಉಪ್ಪು ಸೇರಿಸಿ ಕುದಿಸಿರಿ. ಬೆಳ್ಳುಳ್ಳಿ , ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಹಾಕಿ ಮುಚ್ಚಿಡಿ. ಅನ್ನ, ಚಪಾತಿಯೊಂದಿಗೆ ಸ್ವಾದಿಷ್ಟಕರ ಪಂಚರತ್ನ ತಯಾರು.

ಹೆಸರುಕಾಳು ಹುಗ್ಗಿ (ಪೊಂಗಲ್‌)
ಬೇಕಾಗುವ ಸಾಮಗ್ರಿ:
ಹೆಸರುಕಾಳು- 1 ಕಪ್‌, ಅಕ್ಕಿ- 1/2 ಕಪ್‌, ಬೆಲ್ಲ- 1 ಕಪ್‌ (ಚೂರು ಮಾಡಿದ್ದು), ತೆಂಗಿನಕಾಯಿ ತುರಿ- ಒಂದೂವರೆ ಕಪ್‌, ಏಲಕ್ಕಿ ಸ್ವಲ್ಪ , ಒಣದ್ರಾಕ್ಷಿ 8-10, ಗೇರು ಬೀಜ ಚೂರು ಸ್ವಲ್ಪ , ತುಪ್ಪ – 2 ಚಮಚ.

ತಯಾರಿಸುವ ವಿಧಾನ: ಹೆಸರುಕಾಳು ಬಾಣಲೆಯಲ್ಲಿ  ಹುರಿದು ತಣಿದ ಮೇಲೆ ಮಿಕ್ಸಿ ಜಾರ್‌ನಲ್ಲಿ ಹಾಕಿ ಒಂದು ಸುತ್ತು ತೆಗೆದು ಸಿಪ್ಪೆ ಬೇರ್ಪಡಿಸಿಡಿ. ಕುಕ್ಕರ್‌ನಲ್ಲಿ ಹೆಸರುಕಾಳು, ಅಕ್ಕಿ , ಬೆಲ್ಲ ಹಾಕಿ ಬೇಯಿಸಿ. ತೆಂಗಿನತುರಿ, ಏಲಕ್ಕಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ , ಗೇರುಬೀಜ ಚೂರು ಹಾಕಿ ಕುದಿಸಿ ಒಲೆ ಆರಿಸಿರಿ. ಬಿಸಿ ಇರುವಾಗ ತಿನ್ನಬಹುದು. ದೋಸೆ, ಚಪಾತಿಯೊಂದಿಗೆ ಸೇವಿಸಿದರೆ ಬಲು ಸೊಗಸು. ಬೇಕಿದ್ದರೆ ಬಾಳೆಹಣ್ಣಿನ ಚೂರು ಬೆರೆಸಬಹುದು. ಹೆಸರುಕಾಳಿನ ಬದಲು ಹೆಸರುಬೇಳೆಯನ್ನೂ ಉಪಯೋಗಿಸಬಹುದು.

ಎಸ್‌. ಜಯಶ್ರೀ  ಶೆಣೈ

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.