ಬಗೆಬಗೆ ಕೇಶತೈಲಗಳು


Team Udayavani, Dec 28, 2018, 6:05 AM IST

belluli-thaila.jpg

ಮನೆಯಲ್ಲಿಯೇ ದೊರೆಯುವ ಮೂಲಿಕೆಗಳಿಂದ, ಅಡುಗೆ ಮನೆಯಲ್ಲಿಯೇ ವಿಧ ವಿಧದ ಕೇಶತೈಲಗಳನ್ನು  ತಯಾರಿಸುವುದರಿಂದ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಎರಡೂ ವೃದ್ಧಿಯಾಗುತ್ತದೆ. ಇವುಗಳನ್ನು ತಯಾರಿಸುವುದೂ ಸುಲಭ. ವೆಚ್ಚವೂ ಕಡಿಮೆ. ಪರಿಣಾಮಕಾರಿಯೂ ಹೌದು.

ದಾಸವಾಳದ ತೈಲ
20 ದಾಸವಾಳದ ಹೂಗಳು (ಬಿಳಿ ದಾಸವಾಳವಾದರೆ ಶ್ರೇಷ್ಠ), 15 ದಾಸವಾಳದ ಎಲೆಗಳು, 150 ಗ್ರಾಂ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ.

ವಿಧಾನ: ದಾಸವಾಳದ ಹೂವು ಹಾಗೂ ಎಲೆಗಳನ್ನು ಮಿಕ್ಸರ್‌ನಲ್ಲಿ ತಿರುವಿ ಪೇಸ್ಟ್‌ ತಯಾರಿಸಬೇಕು. ಒಂದು ಅಗಲ ಬಾಯಿಯ ಕಾವಲಿಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಬೇಕು. ಬಿಸಿಯಾಗುತ್ತ ಬಂದಾಗ ದಾಸವಾಳದ ಪೇಸ್ಟ್‌ ಬೆರೆಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಕಬೇಕು. ಚೆನ್ನಾಗಿ ಕುದಿದ ಬಳಿಕ ಆರಿಸಿ, ತಣಿಯಲು ಬಿಡಬೇಕು. ತದನಂತರ ಎಣ್ಣೆಯನ್ನು ಸೋಸಿ ಗಾಜಿನ ಬಾಟಲಲ್ಲಿ ಸಂಗ್ರಹಿಸಬೇಕು. ನಿತ್ಯವೂ ಈ ಎಣ್ಣೆಯನ್ನು ಕೂದಲಿಗೆ ಬಳಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಯಲು ಈ ಎಣ್ಣೆ ಪರಿಣಾಮಕಾರಿ. ದಾಸವಾಳದಲ್ಲಿ ಹೇರಳವಾಗಿರುವ ಅಮೈನೋ ಆಮ್ಲ, ವಿಟಮಿನ್‌ “ಸಿ’ ಮೊದಲಾದ ಪೋಷಕಾಂಶಗಳಿಂದ ಕೂದಲಿಗೆ ಪೋಷಣೆ ದೊರೆತು ಕೂದಲು ಉದ್ದವಾಗಿ ಬೆಳೆಯುತ್ತದೆ.
ತಲೆಹೊಟ್ಟಿನ ನಿವಾರಣೆಗೆ ಕಿತ್ತಳೆ ಸಿಪ್ಪೆಯ ತೈಲ

ಕಿತ್ತಳೆಯ ಸಿಪ್ಪೆಯನ್ನು ತೆಗೆದುಕೊಂಡು ಚೆನ್ನಾಗಿ ಗಟ್ಟಿಯಾಗುವವರೆಗೆ ಬಿಸಿಲಲ್ಲಿ ಒಣಗಿಸಬೇಕು. ತದನಂತರ ನಯವಾಗಿ ಪುಡಿ ಮಾಡಬೇಕು. 5 ಚಮಚದಷ್ಟು ಈ ಕಿತ್ತಳೆಯ ಸಿಪ್ಪೆಯ ಹುಡಿಯನ್ನು 1 ಕಪ್‌ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬೆರೆಸಿ, ಒಂದು ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿಟ್ಟು ಬಿಸಿಮಾಡಬೇಕು. ಎಣ್ಣೆ ಹೊಗೆಯಾಡಿದ ಬಳಿಕ, ಒಲೆಯಿಂದ ಕೆಳಗಿಳಿಸಿ ಆರಿದ ಬಳಿಕ ಸೋಸಿ, ಗಾಳಿಯಾಡದ ಬಾಟಲಲ್ಲಿ ಸಂಗ್ರಹಿಸಬೇಕು. 2-3 ಚಮಚದಷ್ಟು ಈ ಎಣ್ಣೆಯನ್ನು ತೆಗೆದುಕೊಂಡು ಕೂದಲಿಗೆ ಲೇಪಿಸಿ ತುದಿ ಬೆರಳಿನಿಂದ ಚೆನ್ನಾಗಿ ಮಾಲೀಶು ಮಾಡಬೇಕು. ಒಂದು ಗಂಟೆಯ ಬಳಿಕ ತಲೆಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗಿ ಕೂದಲು ಕಾಂತಿಯುತವಾಗುತ್ತದೆ. ಕಿತ್ತಳೆಯಲ್ಲಿರುವ ಸಿಟ್ರಸ್‌ ಆಮ್ಲದ ಅಂಶ ಹಾಗೂ “ಸಿ’ ಜೀವ ಸಣ್ತೀವು ಕೂದಲಿನ ತುರಿಕೆ, ಹೊಟ್ಟು ನಿವಾರಣೆಗೆ ಹಿತಕಾರಿಯಾಗಿದೆ. ವಾರಕ್ಕೆ 2-3 ಸಾರಿ ಈ ತೈಲ ಬಳಸಿದರೆ ಶೀಘ್ರ ಪರಿಣಾಮಕಾರಿ.

ಬಿಳಿಕೂದಲ ನಿವಾರಣೆಗೆ ಮದರಂಗಿ ತೈಲ
1 ಕಪ್‌ ಮದರಂಗಿ ಅಥವಾ ಹೆನ್ನಾ ಎಲೆಗಳನ್ನು ತೆಗೆದುಕೊಂಡು, 3 ಕಪ್‌ ಎಳ್ಳೆಣ್ಣೆಗೆ ಬೆರೆಸಿ, ಅಗಲಬಾಯಿಯ ಕಾವಲಿಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಹೀಗೆ ಬಿಸಿ ಮಾಡುವಾಗ ಮದರಂಗಿ ಎಲೆಗಳು ಸಿಡಿಯುವುದುಂಟು. ಆದ್ದರಿಂದ ಸ್ವಲ್ಪ ಹೊತ್ತು ಕಾವಲಿ ಮೇಲೆ ಮುಚ್ಚಳವಿಡಬೇಕು. ಮದರಂಗಿ ಎಲೆಗಳು ಕಂದು ಬಣ್ಣಕ್ಕೆ ತಿರುಗಿದಾಗ, ಬಿಸಿಯಾದ ಈ ಎಣ್ಣೆಯನ್ನು ಆರಿಸಬೇಕು. ಆರಿದ ಬಳಿಕ ಸೋಸಿ, ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಬೇಕು. ಈ ಎಣ್ಣೆಯನ್ನು ನಿತ್ಯವೂ ಕೂದಲಿಗೆ ಲೇಪಿಸಿದರೆ ಬಿಳಿಕೂದಲು ಕ್ರಮೇಣ ಕಪ್ಪಾಗುತ್ತದೆ. ಮದರಂಗಿ ಎಲೆಗಳೊಂದಿಗೆ ಕರಿಬೇವಿನ ಎಣ್ಣೆಯನ್ನು ತಯಾರಿಸಿದರೂ ಪರಿಣಾಮಕಾರಿ. ಕರಿಬೇವು ಮತ್ತು ನೆಲ್ಲಿಚೆಟ್ಟು ಬಳಸಿ ಎಣ್ಣೆ ತಯಾರಿಸಿದರೂ ಬೆಳ್ಳಿ ಕೂದಲನ್ನು ಕಪ್ಪಾಗಿಸಲು ಹಿತಕಾರಿ ಎಣ್ಣೆಯಾಗಿದೆ.

ತುಳಸೀ-ಮೆಂತ್ಯಕಾಳಿನ ತೈಲ
1/4 ಕಪ್‌ ತುಳಸೀ ಎಲೆಗಳು, 2 ಚಮಚ ಮೆಂತ್ಯೆ ಕಾಳು, 2 ಕಪ್‌ ಕೊಬ್ಬರಿ ಎಣ್ಣೆ.
ತುಳಸೀ ಎಲೆಗಳನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಮೆಂತ್ಯಕಾಳುಗಳನ್ನು ಹುರಿದು ಹುಡಿಮಾಡಬೇಕು. ಅಗಲಬಾಯಿಯ ಕಾವಲಿಯಲ್ಲಿ ಎಣ್ಣೆ ತೆಗೆದುಕೊಂಡು ಅದಕ್ಕೆ ತುಳಸೀ ಎಲೆಯ ಪೇಸ್ಟ್‌ ಹಾಗೂ ಮೆಂತ್ಯೆ ಹುಡಿ ಬೆರೆಸಬೇಕು. ಸಣ್ಣ ಉರಿಯಲ್ಲಿ ಚೆನ್ನಾಗಿ ಬಿಸಿ ಮಾಡಬೇಕು. ಆರಿದ ಬಳಿಕ ಸೋಸಿ ಎಣ್ಣೆಯನ್ನು ಸಂಗ್ರಹಿಸಬೇಕು.ಈ ತೈಲ ನಿತ್ಯ ಲೇಪಿಸುವುದರಿಂದ ತಲೆಹೊಟ್ಟು , ತುರಿಕೆ, ಕಜ್ಜಿ ನಿವಾರಣೆಯಾಗುತ್ತದೆ.

ಕರಿಬೇವು-ಈರುಳ್ಳಿ-ಕೊಬ್ಬರಿ ಎಣ್ಣೆ
ಬೇಕಾಗುವ ಸಾಮಗ್ರಿ
: 1/4 ಕಪ್‌ ಕರಿಬೇವಿನ ಎಲೆ, 1/4 ಕಪ್‌ ಹೆಚ್ಚಿದ ಈರುಳ್ಳಿ ಹಾಗೂ ಒಂದೂವರೆ ಕಪ್‌ ಕೊಬ್ಬರಿ ಎಣ್ಣೆ.
ವಿಧಾನ: ಒಂದು ದುಂಡಗಿನ ತಳದ ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬೆಚ್ಚಗಾಗುತ್ತಾ ಬಂದಂತೆ, ಹೆಚ್ಚಿದ ಈರುಳ್ಳಿ ಹಾಗೂ ಕರಿಬೇವಿನ ಎಲೆಗಳನ್ನು ಬೆರೆಸಬೇಕು. ಚೆನ್ನಾಗಿ ಬಿಸಿಮಾಡಿ ಆರಲು ಬಿಡಬೇಕು. ಆರಿದ ಬಳಿಕ ಸೋಸಿ, ಎಣ್ಣೆಯನ್ನು ಸಂಗ್ರಹಿಸಬೇಕು. ಕೂದಲು ಬೆಳೆಯಲು ಈ ತೈಲ ಉತ್ತಮ. ನಮ್ಮ ಕೂದಲು ಕೆರ್ಯಾಟಿನ್‌ ಅಂಶದಿಂದ ಉತ್ಪತ್ತಿಯಾಗಿದ್ದು, ಕೆರ್ಯಾಟಿನ್‌ನಲ್ಲಿ ಗಂಧಕವು ಹೆಚ್ಚಾಗಿರುತ್ತದೆ. ಈರುಳ್ಳಿಯಲ್ಲಿ ಗಂಧಕದ ಅಂಶವು ಹೆಚ್ಚಾಗಿ ಇರುವುದರಿಂದ, ತನ್ಮೂಲಕ ಕೆರ್ಯಾಟಿನ್‌ ಉತ್ಪತ್ತಿಯನ್ನು ಹೆಚ್ಚಿಸಿ ಕೂದಲ ಬುಡ ಗಟ್ಟಿಯಾಗಿ, ಕೂದಲು ಬೆಳೆಯಲು ಸಹಕರಿಸುತ್ತದೆ. ಅಂತೆಯೇ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿರುವುದರಿಂದ ತಲೆಹೊಟ್ಟು, ಹೊಟ್ಟಿನಿಂದ ಉಂಟಾಗುವ ತುರಿಕೆ ಕಜ್ಜಿ ಮೊದಲಾದವುಗಳನ್ನು ನಿವಾರಣೆ ಮಾಡಲು ಹಿತಕಾರಿಯಾಗಿದೆ.

ಬೆಳ್ಳುಳ್ಳಿ ತೈಲ
3-4 ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ 1 ಕಪ್‌ ಎಣ್ಣೆ ಬಿಸಿಮಾಡಿ ಅದರಲ್ಲಿ ಹಾಕಬೇಕು. ಸಣ್ಣ ಉರಿಯಲ್ಲಿ ಈ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಬೇಕು. ಆರಿದ ನಂತರ ಸೋಸಿ ಎಣ್ಣೆಯನ್ನು ಸಂಗ್ರಹಿಸಬೇಕು. ಪುಟ್ಟದಾದರೂ ಬೆಳ್ಳುಳ್ಳಿಯಲ್ಲಿ ಕೂದಲು ಉದುರುವುದನ್ನು ತಡೆಗಟ್ಟುವ, ಕೂದಲು ಉದ್ದವಾಗಿಸುವ ಕ್ಯಾಲಿÏಯಂ, ಗಂಧಕ, ಸತು ಮುಂತಾದ ಅಂಶಗಳಿವೆ. ಇದು ಜೀವಾಣು ನಿರೋಧಕ ಗುಣವನ್ನೂ ಹೊಂದಿರುವುದರಿಂದ ಕೂದಲು ಉದ್ದವಾಗಿಸುವುದರ ಜೊತೆಗೆ ತಲೆಹೊಟ್ಟು, ತುರಿಕೆ ನಿವಾರಕವೂ ಹೌದು. ಇದರಲ್ಲಿ ಸೆಲೆನಿಯಂ ಅಂಶ ಅಧಿಕವಾಗಿರುವುದರಿಂದ ರಕ್ತ ಪರಿಚಲನೆ ವರ್ಧಿಸುತ್ತದೆ ಮತ್ತು ಕೂದಲಿಗೆ ಪೋಷಕಾಂಶ‌ ಒದಗಿಸುತ್ತದೆ.
ಹೀಗೆ ಮನೆಯಲ್ಲಿಯೇ ತಯಾರಿಸಬಹುದಾದ ವೈವಿಧ್ಯಮಯ ಸುಲಭರೂಪೀ ಕೇಶತೈಲಗಳಿಂದ ಕೂದಲಿನ ಆರೋಗ್ಯ ಹಾಗೂ ಸೌಂದರ್ಯವನ್ನು ವರ್ಧಿಸಬಹುದು.

– ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.