ಸರ್‌, ನಿಮಗೆ ಅಡುಗೆ ಗೊತ್ತಿದೆಯೆ?


Team Udayavani, Jan 11, 2019, 12:30 AM IST

q-19.jpg

ಪುರುಷನಿಗೆ ಅಡುಗೆ ಮಾಡಿ ಗೊತ್ತೇ? ಪಾತ್ರೆ ತೊಳೆಯುವ ಸಂಕಷ್ಟ ತಿಳಿದಿದೆಯೇ? ಋತುಚಕ್ರದ ಆ ದೈಹಿಕ-ಮನೋವೇದನೆಗೆ ಆತ ಯಾವತ್ತಾದರೂ ಕಿವಿ ಆಗಿದ್ದಾನೆಯೇ? “ಅಂಥ ಪುರುಷರು ಇದ್ದಾರೆ’ ಎಂದರೆ, ಅದು ಅಪರೂಪದ ಉತ್ತರವೇ. ಪುರುಷನಿಗೆ, ಹೆಣ್ಣಿನ ಈ ಸಂಕಷ್ಟವನ್ನೆಲ್ಲ ಮನವರಿಕೆ ಮಾಡುವ ಕೆಲಸವನ್ನು ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜು ಮಾಡುತ್ತಿದೆ. “ರಿಸರ್ವ್ಡ್ ಫಾರ್‌ ಮೆನ್‌’ ಎಂಬ ತರಗತಿಯಲ್ಲಿ ಪುರುಷರೂ ತರಕಾರಿ ಕತ್ತರಿಸುತ್ತಾರೆ, ಅಡುಗೆ ಮಾಡುತ್ತಾರೆ. ಆ ಮೂಲಕ, ಹೆಣ್ಣು ಮಾಡುವ ಕೆಲಸವನ್ನು ಸ್ವತಃ ಅನುಭವಿಸುತ್ತಾರೆ…

ಒಂದೂರಿನಲ್ಲಿ ಒಬ್ಬ ಬಲಾಡ್ಯನಿದ್ದ. ಯಾವತ್ತೂ ಎದೆಗುಂದಿದ ಆಸಾಮಿಯೇ ಅಲ್ಲ. ಸಣ್ಣ ಸೋಲನ್ನೂ ಹತ್ತಿರ ಬಿಟ್ಟುಕೊಂಡವನಲ್ಲ. ಊರಿಗೂರನ್ನೇ ನಡುಗಿಸಿಟ್ಟ ಆ ಮಹಾಪುರುಷನಿಗೆ ಅದೊಂದು ರಾತ್ರಿ ಕನಸು ಬಿತ್ತು. ಮೈತಾಪ ಒಂದೇ ಸಮನೆ ಏರುತ್ತಿತ್ತು. ತಲೆಯನ್ನೆಲ್ಲ ಕೆದರಿಕೊಂಡ. “ಅಯ್ಯೋ ನನ್ನಿಂದಾಗದು’ ಎಂದು ಒಂದೇ ಸಮನೆ ಕೂಗುವಾಗಲೂ ಅವನ ಕಂಗಳು ಮುಚ್ಚಿಯೇ ಇದ್ದವು. ದೇಹದಲ್ಲಿ ಬೆವರು ಕವಲೊಡೆದು, ನದಿಯಾಯಿತು. ಬೆಚ್ಚಿ ಕುಳಿತ. ಬೆಂಕಿಯಾದ. ಒಂದೇ ಸಮನೆ ಕಾಲನ್ನು ಒದರಿಕೊಳ್ಳುತ್ತ, ವಿಚಿತ್ರ ಸಂಕಟದಲ್ಲಿ ಮುಳುಗಿದ. “ಅಯ್ಯೋ, ನನಗೇಕೆ ಈ ಸಂಕಷ್ಟ?’ ಎಂದವನು ಕೂಗಿದಾಗ, ಊರಿಗೆ ಊರೇ ಆತಂಕದಲ್ಲಿ ಮುಳುಗಿತ್ತು. ಅವನನ್ನು ಎಬ್ಬಿಸಲು ಯಾರಿಗೂ ಧೈರ್ಯವೇ ಬರಲಿಲ್ಲ.

ಅಲ್ಲೇ ಇದ್ದ ಗುರುವನ್ನು ಊರಿನವರೆಲ್ಲ ಕೇಳಿದರು: “ಆತನ್ಯಾಕೆ ಹಾಗೆ ಚಡಪಡಿಸುತ್ತಿದ್ದಾನೆ?’. “ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಒಮ್ಮೆ ನೀನು ನಿನ್ನ ಹೆಂಡತಿ ಮಾಡುವ ಕೆಲಸವನ್ನು ಕನಸಿನಲ್ಲಿ ಅನುಭವಿಸು ಎಂದಿದ್ದೆ ಅಷ್ಟೇ. ಅದೇ ಕನಸು ಅವನಿಗೆ ಬಿದ್ದಿದೆ. ಹೆಂಡತಿಯಂತೆ ನಿತ್ಯದ ಕೆಲಸ ಮಾಡುವಂತೆ ಕಲ್ಪಿಸಿಕೊಳ್ಳುತ್ತಿದ್ದಾನೆ’ ಎಂದ ಗುರು ನಗುತ್ತ.
.
ರಾತ್ರಿ ಊಟದ ಸಮಯ. ಗಂಡ ಊಟ ಮುಗಿಸಿ ಟಿ.ವಿ. ಮುಂದೆ ಕೂತ್ಕೊತಾನೆ. ಮಗಳು ಅದ್ಯಾವುದೋ ಪರೀಕ್ಷೆಗೆ ತಯಾರಿಯಲ್ಲಿದ್ದಾಳೆ. ಮಗ ಪ್ರಾಜೆಕ್ಟ್ ವರ್ಕ್‌ ಅಂತ ಬ್ಯುಸಿ. ಆದರೆ, ಆಕೆ? ಇಡೀ ದಿನ ಕೆಲಸ ಮಾಡಿ ಸುಸ್ತು ಕಾಡುತ್ತಿದ್ದರೂ ಕೂರುವ ಹಾಗಿಲ್ಲ. ರಾತ್ರಿ ಊಟವಾದ ಬಳಿಕ ಗಂಡ, ಅತ್ತೆ- ಮಾವ, ಮಕ್ಕಳಿಗೆ ವಿರಾಮದ ಸಮಯ. ನಿದ್ರಿಸುವ ವೇಳೆ. ಆದರೆ, ಆಕೆಗೆಲ್ಲಿದೆ ಪುರುಸೊತ್ತು? ಊಟದ ಟೇಬಲ್‌ ಸ್ವತ್ಛಗೊಳಿಸಬೇಕು, ಮರುದಿನದ ಅಡುಗೆಗೆ ಅಣಿಗೊಳಿಸಬೇಕು, ಅತ್ತೆ, ಮಾವನಿಗೆ ಮಾತ್ರೆ ಕೊಡಬೇಕು. ಹೀಗೇ ಮುಗಿಯದ ಕೆಲಸಗಳ ಸರಮಾಲೆ. ನಿದ್ದೆ ಎಳೆಯುತ್ತಿದ್ದರೂ ದುಡಿಮೆ ಮಾತ್ರ ನಿಲ್ಲದು.

ಇದು ಪ್ರತಿ ಮನೆಯ ಕಥೆ. ವರ್ಷದ ಮುನ್ನೂರೈವತ್ತೈದು ದಿನವೂ ಮನೆಯ ಹೊರಗೆ-ಒಳಗೆ ದುಡಿಯುತ್ತಲೇ ಇರುವ ಮಹಿಳೆಯರ ಕಷ್ಟ, ಹೆಚ್ಚಿನ ಪುರುಷರಿಗೆ ಅರ್ಥವಾಗುವುದೇ ಇಲ್ಲ. ನನ್ನ ಹೆಂಡತಿ ಕೆಲಸಕ್ಕೆ ಹೋಗೋದಿಲ್ಲ, ಅವಳು ಹೌಸ್‌ವೈಫ್ “ಅಷ್ಟೇ’ ಎಂದು ಆಕೆಯನ್ನು ಕಡೆಗಣಿಸುವವರೇ ಹೆಚ್ಚು. ಕೆಲವರು ಅರ್ಥಮಾಡಿಕೊಂಡರೂ, ನೋಡಿದವರು “ಅಮ್ಮಾವ್ರ ಗಂಡ’ ಅಂತಾರೆ ಎಂದು ಮನೆಗೆಲಸದಿಂದ ದೂರವೇ ಉಳಿಯುತ್ತಾರೆ. ಅಂಥ ಪುರುಷ ಸಮಾಜದ ಕಣ್ತೆರೆಸಲೆಂದೇ, ಬೆಂಗಳೂರಿನ ಸಂವಾದ ಸಂಸ್ಥೆಯ “ಬದುಕು’ ಕಮ್ಯುನಿಟಿ ಕಾಲೇಜು ರಿಸರ್ವ್‌ಡ್‌ ಫಾರ್‌ ಮೆನ್‌ ಎನ್ನುವ ಕೋರ್ಸ್‌ ಏರ್ಪಡಿಸಿತ್ತು.

“ಬದುಕು’ ಕಲಿಸಿದ ಪಾಠ
ಇದು, ನಾಲ್ಕು ವಾರಾಂತ್ಯಗಳಂದು ನಡೆದ ಲಿಂಗಸಮಾನತೆಯ ಜಾಗೃತಿ ಕೋರ್ಸ್‌. 21- 40 ವರ್ಷದೊಳಗಿನ ಪುರುಷರಿಗಷ್ಟೇ ಸೀಮಿತವಾಗಿತ್ತು. ಇಲ್ಲಿ ಪ್ರೀತಿ, ಸಂಬಂಧ, ಮದುವೆ, ಪಿತೃತ್ವ, ಅನ್ಯೋನ್ಯತೆ, ಗಂಡನಾದವನ ಕರ್ತವ್ಯ, ಹೆಣ್ಣಿನ ಕಷ್ಟ , ಆಕೆಯ ಭಾವನೆಗಳು. ಹೀಗೆ ಯಾವ ವಿಶ್ವವಿದ್ಯಾಲಯವೂ ಹೇಳಿಕೊಡದ ವಿಷಯಗಳನ್ನು ಅಚ್ಚುಕಟ್ಟಾಗಿ ಅರ್ಥೈಸಲಾಯಿತು. ಮದುವೆಯ ಬಗೆಗಿನ ಗೊಂದಲ, ತಂದೆಯಾಗುವಾಗಿನ ಭಯ, ಕಾತರಗಳ ಬಗ್ಗೆಯೂ ಚರ್ಚೆ ನಡೆಯಿತು. ಪುರುಷ-ಸ್ತ್ರೀಯರ ಅಂಗಾಂಗಗಳ ರಚನೆ, ಗರ್ಭಿಣಿಯರ ಆರೈಕೆ, ಲೈಂಗಿಕ ಶಿಕ್ಷಣ, ಮನೆಕೆಲಸ- ಇವುಗಳ ಜೊತೆಜೊತೆಗೇ ಆಫೀಸು, ಹಣಕಾಸು ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ತಜ್ಞರು ವಿವರಿಸಿದರು.

ಇಬ್ಬರೂ ಸಮಾನರು
ಈಗ ಎಲ್ಲ  ಕ್ಷೇತ್ರಗಳಲ್ಲೂ ಸ್ತ್ರೀ-ಪುರುಷರು ಸರಿಸಮಾನರು, ಎಲ್ಲ ರಂಗಗಳಲ್ಲೂ ಸರಿಸಮಾನವಾಗಿ ಹೆಜ್ಜೆ ಹಾಕುವವರು. ಇದು ಕೇವಲ ಉದ್ಯೋಗ ಕ್ಷೇತ್ರಕ್ಕಷ್ಟೇ ಅಲ್ಲ, ಸಂಸಾರಕ್ಕೂ ಅನ್ವಯವಾಗುವ ಮಾತು. ಅಡುಗೆ ತಯಾರಿಯೇ ಇರಲಿ, ಮಗುವಿನ ಆರೈಕೆಯೇ ಇರಲಿ, ಹಿರಿಯರನ್ನು ನೋಡಿಕೊಳ್ಳುವುದೇ ಇರಲಿ, ಪತಿ-ಪತ್ನಿ ಇಬ್ಬರಿಗೂ ಹೊಣೆಗಾರಿಕೆ ಇದೆ. ಅಷ್ಟೇ ಅಲ್ಲ, ಸ್ತ್ರೀಯರ ಋತುಚಕ್ರದ ಸಮಯದಲ್ಲಿ ಅವರ ಮಾನಸಿಕ, ದೈಹಿಕ ಸ್ಥಿತಿ ಹೇಗಿರುತ್ತದೆ, ಅವರ ಸಮಸ್ಯೆಗಳು, ಅವರ ಭಾವನೆಗಳಿಗೆ ಹೇಗೆ ಭಾವನಾತ್ಮಕವಾಗಿ ಸ್ಪಂದಿಸಬೇಕು ಮುಂತಾದ ಸೂಕ್ಷ್ಮ ವಿಚಾರಗಳನ್ನೂ, ಕೋರ್ಸ್‌ನಲ್ಲಿ ಗಂಡಸರಿಗೆ ಮನವರಿಕೆ ಮಾಡಿಕೊಡಲಾಯಿತು.

ಸಂಸಾರಕ್ಕೆ ಮೂರು ಸೂತ್ರ
ಶೇರಿಂಗ್‌, ಕೇರಿಂಗ್‌, ಕುಕಿಂಗ್‌- ಎಂಬುದು ಈ ತರಬೇತಿಯ ಮೂಲಮಂತ್ರ. ಶೇರಿಂಗ್‌ ಅಂದರೆ ಭಾವನೆಗಳನ್ನು, ಜವಾಬ್ದಾರಿಗಳನ್ನು, ಕೆಲಸಗಳನ್ನು, ಕೌಶಲಗಳನ್ನು ಹಂಚಿಕೊಳ್ಳುವುದು. ಕೇರಿಂಗ್‌ ಅಂದರೆ ಪರಸ್ಪರ ಅರ್ಥಮಾಡಿಕೊಳ್ಳುವುದು, ಪರಸ್ಪರರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಪರಸ್ಪರರ ಭಾವನೆಗಳನ್ನು, ಇಷ್ಟಾನಿಷ್ಟಗಳನ್ನು ಗೌರವಿಸುವುದು. ಕೊನೆಯದು, ಸ್ವತ್ಛ , ಪೋಷಕಾಂಶಯುಕ್ತ ಆಹಾರದ ಬಗ್ಗೆ ತಿಳಿವಳಿಕೆ ಪಡೆದು ಪರಸ್ಪರರು ಸಹಕರಿಸಿಕೊಂಡು ಅಡುಗೆ ಮಾಡುವುದು.

ಈ ತರಬೇತಿಯಲ್ಲಿ ಮನಃಶಾಸ್ತ್ರಜ್ಞರು, ಆಹಾರತಜ್ಞರು, ಮಹಿಳಾ ಹಕ್ಕುಗಳ ಕಾರ್ಯಕರ್ತರು ಭಾಗವಹಿಸಿದ್ದರು. ಇತ್ತೀಚೆಗೆ ನಡೆದ ಕೋರ್ಸ್‌ ನಲ್ಲಿ 15 ಜನ ಪಾಲ್ಗೊಂಡಿದ್ದರು. ಕೆಲವರು ಅಡುಗೆ ಕಲಿಯಲು, ಇನ್ನು ಕೆಲವರು ಪುರುಷ ಪ್ರಾಬಲ್ಯವನ್ನು ಮುರಿಯಲು ಇಷ್ಟಪಟ್ಟರು. ಋತುಬಂಧದ ಸಮಯದಲ್ಲಿ ತಾಯಂದಿರು ಅನುಭವಿಸುವ ನೋವನ್ನು ಅರ್ಥಮಾಡಿಕೊಳ್ಳಲು ಕೆಲವರು ಪ್ರಯತ್ನಿಸಿದರು, ಆ ದಿನಗಳಲ್ಲಿ ಆಗುವ ರಕ್ತಸ್ರಾವದ ಬಗ್ಗೆ, ಬಳಲಿಕೆಯ ಬಗ್ಗೆ ತಿಳಿದುಕೊಳ್ಳಲು ಅಪೇಕ್ಷಿಸಿದರು. ಹಲವರು ಮಗುವಿನ ಲಾಲನೆ- ಪಾಲನೆ, ಹಿರಿಯರ ಆರೈಕೆ ಬಗ್ಗೆ ಕಲಿಯಲು ಆಸಕ್ತಿ ತೋರಿದರು.

ಬದುಕಿನ ಬಂಡಿಯಲ್ಲಿನ ಗಾಲಿ ಜೊತೆಜೊತೆಗೆ ಸಾಗಿದರೆ ಬಾಳಪಥದಲ್ಲಿ ಸುಗಮವಾಗಿ ಮುನ್ನಡೆಯಲು ಸಾಧ್ಯ. ಸ್ತ್ರೀ-ಪುರುಷರು ಪರಸ್ಪರ ಅರಿತು, ಸಹಕರಿಸಿ ಬಾಳಿದರೆ ಚೆಂದ! ಈ ದಿಶೆಯಲ್ಲಿ ಶ್ರಮಿಸುತ್ತಿರುವ “ಬದುಕು’, ಸುಲಲಿತ ಬದುಕನ್ನು ಕಟ್ಟಿಕೊಡುವಲ್ಲಿ ನೆರವಾಗಲಿ ಎಂದು ಆಶಿಸೋಣ.

ಓಹ್‌, ಇವ್ಳು ಚೆಲುವೆ ಅಷ್ಟೇ ಅಲ್ಲ…
“ನಾನು ಬಾಗಲಕೋಟೆಯ ಒಂದು ಸಣ್ಣ ಹಳ್ಳಿಯಿಂದ ಬಂದವನು. ನಾಲ್ವರು ಸಹೋದರಿಯರೊಂದಿಗೆ ಒಬ್ಬನೇ ಮಗನಾಗಿ ಬೆಳೆದವನು. ನನಗೆ ಸಿಗೋ ಪ್ರಾತಿನಿಧ್ಯ, ಪ್ರಾಮುಖ್ಯ ನನ್ನ ಸಹೋದರಿಯರಿಗೆ ಸಿಗ್ತಾ ಇರಲಿಲ್ಲ. ಇದು ನನ್ನನ್ನು ಬಹಳವಾಗಿ ಕಾಡುತ್ತಿತ್ತು. ಈ ಕೋರ್ಸಿಗೆ ಸೇರಿಕೊಂಡ ಮೇಲೆ ಅದಕ್ಕೊಂದು ಸ್ಪಷ್ಟ ಉತ್ತರವನ್ನು ಕಂಡುಕೊಂಡೆ. ಕುಟುಂಬದಲ್ಲಿ ಸ್ತ್ರೀ-ಪುರುಷರು ಸರಿಸಮಾನರು, ಎಲ್ಲರಿಗೂ ಸರಿಸಮಾನ ಪ್ರೀತಿ, ಪ್ರಾತಿನಿಧ್ಯ ಸಿಗಬೇಕು, ಅದು ಸಿಗುವಂತೆ ಮಾಡುವುದು ಹೇಗೆ ಎಂಬುದನ್ನು ಈ ಕೋರ್ಸಿನಿಂದ ಕಲಿತುಕೊಂಡೆ’ ಎನ್ನುತ್ತಾರೆ ಪುನರ್ವಸತಿ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿರುವ ಡಿ. ಮಹದೇವ್‌.

ಒಂದು ಹುಡುಗೀನ ಕಂಡಾಗ “ಓಹ್‌, ಇವ್ಳು ಚೆಲುವೆ!’ ಎಂಬುದಷ್ಟೇ ನನ್ನ ಮನಸ್ಸಿಗೆ ಬರ್ತಿತ್ತು. ಈ ಚೆಲುವೆಯ ಮನದಲ್ಲಿಯೂ ಭಾವನೆಗಳಿವೆ, ಬುದ್ಧಿವಂತಿಕೆ ಇದೆ, ಆಕೆಯೂ ನಮ್ಮಂತೆಯೇ, ಆಕೆಯನ್ನು ಗೌರವಿಸ್ಬೇಕು ಅನ್ನೋ ಭಾವನೆ ಈಗ ಬರಲಾರಂಭಿಸಿದೆ. ಈ ಕೋರ್ಸ್‌ ನನ್ನ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಬದಲಿಸಿದೆ ಎನ್ನುತ್ತಾರವರು.

ಏನಿದು ಬದುಕು?
ಇಪ್ಪತ್ತೈದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂವಾದ ಎಂಬ ಸಂಸ್ಥೆಯ ಅಂಗಸಂಸ್ಥೆಯೇ ಬದುಕು ಕಮ್ಯುನಿಟಿ ಕಾಲೇಜು. ಇವುಗಳ ರೂವಾರಿ ಅನಿತಾ ರತ್ನಂ. ಶಾಲೆ ಬಿಟ್ಟವರು, ಸೌಕರ್ಯವಂಚಿತ ಯುವಜನರು, ಸಮಾಜದ ಕೆಳಸ್ತರದಲ್ಲಿರುವವರಿಗೆ ಉಚಿತ ಶಿಕ್ಷಣ ನೀಡುವ ಕನಸು ಕಂಡವರು ಅನಿತಾ. ಅದಕ್ಕಾಗಿ ಇಶ್ರತ್‌ ನಿಸಾರ್‌, ಮುರಳಿ ಮೋಹನ್‌ ರೌಟಿ ಮೊದಲಾದವರ ಜತೆಗೂಡಿ ಕಾಲೇಜು ಸ್ಥಾಪಿಸಿದವರು. ಆಗಾಗ್ಗೆ ಸದಭಿರುಚಿಯ ತರಗತಿ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಅದರ ಒಂದು ಭಾಗವೇ, “ರಿಸರ್ವ್‌ಡ್‌ ಫಾರ್‌ ಮೆನ್‌’ ಎನ್ನುವ ಕೋರ್ಸ್‌.

ರಾಜೇಶ್ವರಿ ಜಯಕೃಷ್ಣ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.